Education Loan: ಶಿಕ್ಷಣ ಸಾಲ ಪಡೆಯುವುದಕ್ಕೂ ಮುನ್ನ ಈ 5 ಶುಲ್ಕಗಳ ಬಗ್ಗೆ ತಿಳಿದಿರಲಿ

ಇಂದಿನ ಕಾಲದಲ್ಲಿ ಶಿಕ್ಷಣ ಅತೀ ಮುಖ್ಯವಾಗಿದೆ. ನಾವು ಪದವಿ, ಸ್ನಾತಕೋತ್ತರ ಮಾಡಿದರೂ ಅದಕ್ಕೆ ಅಧಿಕ ಮೌಲ್ಯವಿಲ್ಲದಂತಾಗಿದೆ. ಉನ್ನತ ಶಿಕ್ಷಣ ಪಡೆದಷ್ಟು ಉತ್ತಮ ಎಂಬ ಕಾಲ ಇದಾಗಿದೆ. ಆದರೆ ಈ ನಡುವೆ ಶಿಕ್ಷಣ ಶುಲ್ಕ ಕೂಡಾ ಗಗನಕ್ಕೆ ಏರಿದೆ. ಶಿಕ್ಷಣದ ವ್ಯಾಪಾರೀಕರಣದ ನಡುವೆ ನಾವು ಶೈಕ್ಷಣಿಕವಾಗಿ ಬಲಗೊಳ್ಳಲು ಸಾಲ ಮಾಡುವುದು ಅನಿವಾರ್ಯವಾಗಿದೆ. ಎಲ್‌ಕೆಜಿ, ಯುಕೆಜಿ ಶಿಕ್ಷಣಕ್ಕೂ ಸಾಲ ಮಾಡಬೇಕಾದ ಸ್ಥಿತಿ ಇದೆ. ಈ ಸಂದರ್ಭದಲ್ಲಿ ನಾವು ಹಲವಾರು ಅಂಶಗಳನ್ನು ತಿಳಿದಿರುವುದು ಮುಖ್ಯವಾಗುತ್ತದೆ. ಇಲ್ಲವಾದರೆ ಶಿಕ್ಷಣ ಸಾಲದ ಹೊರೆಯು ಎಷ್ಟು ಪಾವತಿಸಿದರೂ ತಗ್ಗದು.

ಪ್ರಸ್ತುತ ಯಾವುದೇ ಶಿಕ್ಷಣ ಪಡೆಯಬೇಕಾದರೂ ಅಧಿಕ ಶುಲ್ಕ ಪಾವತಿಬಸೇಕಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬರುವುದು ಶಿಕ್ಷಣ ಸಾಲವಾಗಿದೆ. ನರ್ಸಿಂಗ್ ಸ್ಕೂಲ್‌ನಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ನಾವು ಶಿಕ್ಷಣ ಸಾಲ ಪಡೆಯುವ ಅವಕಾಶವಿದೆ. ಆದರೆ ನಾವು ಶಿಕ್ಷಣ ಸಾಲವನ್ನು ಪಡೆಯುವಾಗ ಹಲವಾರು ವಿಚಾರ, ಶುಲ್ಕಗಳ ಬಗ್ಗೆ ತಿಳಿದಿರಬೇಕಾಗುತ್ತದೆ. ಶಿಕ್ಷಣ ಸಾಲದ ಮೇಲೆಯೂ ಹಲವಾರು ಶುಲ್ಕವನ್ನು ವಿಧಿಸಲಾಗುತ್ತದೆ. ಈ ಶುಲ್ಕಗಳು ಗುಪ್ತ ಶುಲ್ಕಗಳು ಎಂದರೂ ತಪ್ಪಾಗಲಾರದು. ಈ ಗುಪ್ತ ಶುಲ್ಕಗಳು ಯಾವುದು, ಶಿಕ್ಷಣ ಸಾಲ ಪಡೆಯುವಾಗ ನೀವು ತಿಳಿದಿರಬೇಕಾದ ಅಂಶಗಳು ಯಾವುದೆಂದು ವಿವರಿಸಿದ್ದೇವೆ ಮುಂದೆ ಓದಿ...

 ಶಿಕ್ಷಣ ಸಾಲ ಪಡೆಯುವುದಕ್ಕೂ ಮುನ್ನ ಈ 5 ಶುಲ್ಕಗಳ ಬಗ್ಗೆ ತಿಳಿದಿರಲಿ

ಶಿಕ್ಷಣ ಸಾಲ ಪಡೆಯುವಾಗ ಗಮನಿಸಬೇಕಾದ ಶುಲ್ಕಗಳು

ಪ್ರೋಸೆಸಿಂಗ್ ಫೀಸ್ ಅಥವಾ ಪ್ರಕ್ರಿಯಾ ಶುಲ್ಕ: ಸಾಮಾನ್ಯವಾಗಿ ಯಾವುದೇ ಸಾಲಗಳಿಗೆ ಪ್ರೋಸೆಸಿಂಗ್ ಫೀಸ್ ಅಥವಾ ಪ್ರಕ್ರಿಯಾ ಶುಲ್ಕವನ್ನು ವಿಧಿಸಲಾಗುತ್ತದೆ. ಕೆಲವೊಂದು ಬ್ಯಾಂಕುಗಳು ಆಫರ್ ಮೂಲಕ ಈ ಪ್ರಕ್ರಿಯಾ ಶುಲ್ಕ ಕಡಿತ ಮಾಡುತ್ತದೆ. ಶಿಕ್ಷಣ ಸಾಲಕ್ಕೂ ಕೂಡಾ ಬ್ಯಾಂಕುಗಳು ನಿರ್ದಿಷ್ಟ ಶುಲ್ಕವನ್ನು ವಿಧಿಸುತ್ತದೆ. ಈ ಶುಲ್ಕವು ಸಾಮಾನ್ಯವಾಗಿ ಶೇಕಡ 1ರಿಂದ ಶೇಕಡ 2ರಷ್ಟು ಇರುತ್ತದೆ.

ಮರುಪಾವತಿ ಶುಲ್ಕ: ಶಿಕ್ಷಣ ಸಾಲ ಮರುಪಾವತಿಗೆ ಒಂದು ನಿರ್ದಿಷ್ಟ ಅವಧಿ ಇರುತ್ತದೆ. ಸಾಮಾನ್ಯವಾಗಿ ವಿದ್ಯಾರ್ಥಿಯ ಶಿಕ್ಷಣ ಮುಗಿದ ಬಳಿಕವೇ ಈ ಶಿಕ್ಷಣ ಸಾಲದ ಮರುಪಾವತಿಗೆ ಅವಧಿಯು ಆರಂಭವಾಗುತ್ತದೆ. ಆದರೂ ನಾವು ಈ ಅವಧಿಗೂ ಮುನ್ನ ಇದ್ದ ಮೊತ್ತವನ್ನು ಪೂರ್ವ ಪಾವತಿ ಮಾಡಬಹುದು. ಆದರೆ ಆ ಸಂದರ್ಭದಲ್ಲಿ ನಾವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೌದು, ಸಾಲವನ್ನು ಶೀಘ್ರ ಪಾವತಿಸುವುದಾದರೂ ನಾವು ಶುಲ್ಕ ಪಾವತಿಸಿ ಸಾಲ ಮರುಪಾವತಿ ಮಾಡಬೇಕಾಗುತ್ತದೆ. ಆದರೆ ಆರ್‌ಬಿಐನ ನೋಟಿಫಿಕೇಷನ್ ಪ್ರಕಾರ ಯಾವುದೇ ಬ್ಯಾಂಕುಗಳು ಪೂರ್ವ ಪಾವತಿ ಶುಲ್ಕವನ್ನು ವಿಧಿಸುವಂತಿಲ್ಲ.

ತಡವಾಗಿ ಸಾಲ ಪಾವತಿಸಿಗೆ ಶುಲ್ಕ: ಕ್ರೆಡಿಟ್ ಕಾರ್ಡ್ ಆಗಲಿ ಅಥವಾ ಯಾವುದೇ ಸಾಲವಾಗಲಿ ನಾವು ನಿಗದಿತ ದಿನಕ್ಕಿಂತ ತಡವಾಗಿ ಮರುಪಾವತಿ ಮಾಡಿದರೆ, ಶುಲ್ಕವನ್ನು ವಿಧಿಸಲಾಗುತ್ತದೆ. ನೀವು ಪದೆ ಪದೇ ತಡವಾಗಿ ಕಂತನ್ನು ಪಾವತಿಸಿದರೆ, ಅದು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಉಂಟು ಮಾಡಲಿದೆ ಎಂಬುವುದು ನಿಮಗೆ ತಿಳಿದಿರಲಿ. ಅದರಿಂದಾಗಿ ಭವಿಷ್ಯದಲ್ಲಿ ನಿಮಗೆ ಸಾಲ ಲಭ್ಯವಾಗದೆಯೂ ಇರಬಹುದು. ಆದ್ದರಿಂದಾಗಿ ಎಂದಿಗೂ ಕೂಡಾ ಸರಿಯಾದ ಸಮಯಕ್ಕೆ ಸಾಲ ಮರುಪಾವತಿಯನ್ನು ಮಾಡಿ.

ಬಡ್ಡಿದರ ವಿಧ ಬದಲಾವಣೆ: ನೀವು ಸಾಲವನ್ನು ಪಡೆದಾಗ ಅದು ಸ್ಥಿರ ಬಡ್ಡಿದರವನ್ನು ಹೊಂದಿದ್ದರೆ ಅದನ್ನು ಫ್ಲೋಟಿಂಗ್ ಬಡ್ಡಿದರವನ್ನಾಗಿ ಬದಲಾಯಿಸಬೇಕಾದರೆ ಅಥವಾ ಫ್ಲೋಟಿಂಗ್ ಬಡ್ಡಿದರವನ್ನು ಸ್ಥಿರ ಬಡ್ಡಿದರವನ್ನಾಗಿ ಬದಲಾವಣೆ ಮಾಡಬೇಕಾದರೆ ನೀವು ಸಣ್ಣ ಮೊತ್ತವನ್ನು ಶುಲ್ಕವಾಗಿ ಪಾವತಿ ಮಾಡಬೇಕಾಗುತ್ತದೆ. ನೀವು ಈ ಬಡ್ಡಿದರ ವಿಧವನ್ನು ಬದಲಾವಣೆ ಮಾಡುವುದರಿಂದ ನಿಮಗೆ ಲಾಭ ಉಂಟಾಗುವುದಾದರೂ ಬ್ಯಾಂಕ್‌ಗೆ ಇದರಿಂದಾಗಿ ಕೊಂಚ ನಷ್ಟ ಉಂಟಾಗಲಿದೆ. ಆದ್ದರಿಂದ ಶುಲ್ಕವನ್ನು ವಿಧಿಸಲಾಗುತ್ತದೆ.

ಸಾಲ ರದ್ದು: ನೀವು ಯಾವುದೇ ಕಾರಣದಿಂದಾಗಿ ನಿಮ್ಮ ಶಿಕ್ಷಣ ಸಾಲವನ್ನು ರದ್ದು ಮಾಡಬೇಕಾದರೆ ಸಣ್ಣ ಮೊತ್ತವನ್ನು ಸಾಲ ರದ್ದು ಮಾಡಲು ವಿಧಿಸಲಾಗುವ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಈ ಶುಲ್ಕವು ಸಾಮಾನ್ಯವಾಗಿ ಶೇಕಡ 2ಕ್ಕಿಂತ ಕಡಿಮೆಯಾಗಿರುತ್ತದೆ. ಆದರೆ ಯಾವುದೇ ಹೆಚ್ಚುವರಿ ತೆರಿಗೆಯು ಕೊಂಚ ನಿಮಗೆ ಹೊರೆಯಾಗಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+