ಬೆಂಗಳೂರು, ಜುಲೈ 25: Kisan Vikas Patra ಖಚಿತ ಆದಾಯದೊಂದಿಗೆ ದೀರ್ಘಾವಧಿಯ ಹೂಡಿಕೆ ಯೋಜನೆಯನ್ನು ಹುಡುಕುತ್ತಿರುವವರಿಗೆ ಅತ್ಯುತ್ತಮ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಒಂದಾಗಿದೆ ಕಿಸಾನ್ ವಿಕಾಸ್ ಪತ್ರ (ಕೆವಿಪಿ). ಇದು ದೀರ್ಘಾವಧಿಯ ಸುರಕ್ಷಿತ ಉಳಿತಾಯವನ್ನು ಉತ್ತೇಜಿಸುವ ಉದ್ದೇಶದಿಂದ ಭಾರತೀಯ ಅಂಚೆ ಕಚೇರಿ 1988 ರಲ್ಲಿ ಪ್ರಾರಂಭಿಸಿದ ಯೋಜನೆಯಾಗಿದೆ. ದೀರ್ಘಕಾಲೀನ ಆರ್ಥಿಕ ಶಿಸ್ತನ್ನು ಉತ್ತೇಜಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿತ್ತು. ಆರಂಭದಲ್ಲಿ ರೈತರಿಗೆ ಮಾತ್ರ ಉದ್ದೇಶಿಸಲಾಗಿದ್ದರೂ, ಯಾವುದೇ ಭಾರತೀಯ ನಾಗರಿಕರು ಈಗ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಸಾಮಾನ್ಯವಾಗಿ KVP ಎಂದು ಕರೆಯಲ್ಪಡುವ ಕಿಸಾನ್ ವಿಕಾಸ್ ಪತ್ರವು ಪೋಸ್ಟ್ ಆಫೀಸ್ ನೀಡುವ ಅತ್ಯುತ್ತಮ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದ್ದು ಪ್ರಸ್ತುತ, KVP ಗಳು ವಾರ್ಷಿಕವಾಗಿ 7.5% ಬಡ್ಡಿದರವನ್ನು ನೀಡುತ್ತಿವೆ. ಇದು ಕೇಂದ್ರ ಸರ್ಕಾರದ ಬೆಂಬಲಿತ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದ್ದು, ಹಿಂದಿನಿಂದಲೂ ಕೇಂದ್ರ ಸರಕಾರ ಈ ರೀತಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಬದಲಾಯಿಸುತ್ತಿಲ್ಲ.

ಗರಿಷ್ಠ ಮಿತಿಯಿಲ್ಲದೆ ಕೆವಿಪಿ ಯೋಜನೆಯಲ್ಲಿ ಕನಿಷ್ಟ ರೂ.1000 ದಿಂದ ಹೂಡಿಕೆಯನ್ನು ಪ್ರಾರಂಭಿಸಬಹುದು. ಈ ಯೋಜನೆಯಲ್ಲಿ ಹೂಡಿಕೆಗೆ ಯಾವುದೇ ಗರಿಷ್ಟ ಮಿತಿ ಇಲ್ಲ. ಹೀಗಾಗಿ 2014 ರಲ್ಲಿ, ಸರ್ಕಾರವು ರೂ 50,000 ಕ್ಕಿಂತ ಹೆಚ್ಚಿನ ನಗದು ಠೇವಣಿಗಳಿಗೆ ಪ್ಯಾನ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿತು. ಆದ್ದರಿಂದ, ಸ್ಯಾಲರಿ ಸ್ಲಿಪ್, ಐಟಿಆರ್, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಆಧಾರ್ ಸಂಖ್ಯೆ ಮುಂತಾದ ಕೆಲವು ದಾಖಲೆಗಳನ್ನು ಅಂಚೆ ಕಚೇರಿಯಲ್ಲಿ ನೀಡಬೇಕಾಗುತ್ತದೆ.
ಸುರಕ್ಷಿತ ಹೂಡಿಕೆ ಯೋಜನೆಯನ್ನು ಬಯಸುವ ಕಿಸಾನ್ ವಿಕಾಸ್ ಪತ್ರವು ಅತ್ಯುತ್ತಮ ಯೋಜನೆಯಾಗಿದೆ. 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಒಂದೇ ಖಾತೆ ಅಥವಾ ಜಂಟಿ ಖಾತೆಯನ್ನು ತೆರೆಯಬಹುದು. ಇದಲ್ಲದೆ, ಪೋಷಕರು ತಮ್ಮ ಅಪ್ರಾಪ್ತ ವಯಸ್ಕ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು.ಒಬ್ಬ ವ್ಯಕ್ತಿ ಹಲವಾರು ಕಿಸಾನ್ ವಿಕಾಸ್ ಪತ್ರಗಳನ್ನು ಕೊಳ್ಳಬಹುದು. ಈ ಪತ್ರವನ್ನು ಸಂಬಂಧಿಸಿದ ಅಂಚೆ ಕಚೇರಿಯಲ್ಲಿ ಸ್ವೀಕೃತಿ ಪತ್ರವಾಗಿ ಪಡೆದು ಭದ್ರತೆಯಾಗಿ ಅಡಮಾನವನ್ನೂ ಇಡಬಹುದು. ಒಂದು ಅಂಚೆ ಕಚೇರಿಯಿಂದ ಮತ್ತೊಂದು ಕಚೇರಿಗೆ ವರ್ಗಾಯಿಸಬಹುದು. ಟ್ರಸ್ಟ್‌ಗಳು ಕೂಡ ಹಣ ಹೂಡಿಕೆ ಮಾಡಬಹುದು. ಆದರೆ, ಅನಿವಾಸಿ ಭಾರತೀಯರು ಇದರಲ್ಲಿ ಹಣ ಹೂಡಿಕೆ ಮಾಡುವಂತಿಲ್ಲ.
ಒಂದು ವೇಳೆ ಕಿಸಾನ್ ವಿಕಾಸ್ ಪತ್ರದಲ್ಲಿ ಖಾತೆದಾರರು ಆಕಸ್ಮಿಕವಾಗಿ ಮೃತಪಟ್ಟರೆ ಅವಧಿಗೆ ಮುನ್ನ ಹೂಡಿಕೆ ಹಿಂತೆಗೆದುಕೊಂಡು ಖಾತೆಯನ್ನು ಸ್ಥಗಿತಗೊಳಿಸಬಹುದು. ಇಲ್ಲದಿದ್ದರೆ ಹೂಡಿಕೆ ಮಾಡಿದ ಎರಡೂವರೆ ವರ್ಷಗಳ ನಂತರ ಹಿಂತೆಗೆದುಕೊಳ್ಳುವ ಅವಕಾಶವೂ ಇದೆ. ಖಾತೆ ತೆರೆಯಲು ಆಧಾರ್ ಕಾರ್ಡ್, ವಯಸ್ಸಿನ ಪುರಾವೆ ಪ್ರಮಾಣಪತ್ರ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಕೆವಿಪಿ ಅರ್ಜಿ ನಮೂನೆ ಅಗತ್ಯವಿದೆ.
7.5% ಬಡ್ಡಿದರವನ್ನು ನೀಡುವ ಮೂಲಕ, ಕಿಸಾನ್ ವಿಕಾಸ್ ಪತ್ರ ಯೋಜನೆಯು ನಿಮ್ಮ ಹೂಡಿಕೆಯನ್ನು 115 ತಿಂಗಳುಗಳಲ್ಲಿ ಅಂದರೆ 9 ವರ್ಷಗಳು ಮತ್ತು 7 ತಿಂಗಳುಗಳಲ್ಲಿ ದ್ವಿಗುಣಗೊಳಿಸಲು ಖಾತರಿ ನೀಡುತ್ತದೆ. ಅಂದರೆ, ನೀವು ಈ ಯೋಜನೆಯಲ್ಲಿ 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, 115 ತಿಂಗಳ ನಂತರ ಮೆಚ್ಯೂರಿಟಿ ಆದಾಗ 10 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದಾಗಿದೆ.
KVP ಪ್ರಮಾಣಪತ್ರದ ಆಧಾರದಲ್ಲಿ ಸಾಲ
ಸುರಕ್ಷಿತ ಸಾಲಗಳನ್ನು ಪಡೆಯಲು ನೀವು ನಿಮ್ಮ KVP ಪ್ರಮಾಣಪತ್ರವನ್ನು ಆಧಾರ ಅಥವಾ ಭದ್ರತೆಯಾಗಿ ಬಳಸಬಹುದು. ಅಂತಹ ಸಾಲಗಳಿಗೆ ಬಡ್ಡಿ ದರ ತುಲನಾತ್ಮಕವಾಗಿ ಕಡಿಮೆ ಇರುತ್ತದೆ.
KVP ಯೋಜನೆ ಆರಂಭಿಸಲು ಅಗತ್ಯವಿರುವ ದಾಖಲೆಗಳು
1.ವಿಳಾಸ ಪುರಾವೆ
2.ಜನನ ಪ್ರಮಾಣಪತ್ರ
3.ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್, ಚಾಲಕರ ಪರವಾನಗಿ, ಪಾಸ್‌ಪೋರ್ಟ್‌ನಂತಹ ಗುರುತಿನ ಪುರಾವೆ.
4. KVP ಗಾಗಿ ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆ


Click it and Unblock the Notifications