ರಾಜ್ಯದಲ್ಲಿ ಈ ಹಿಂದೆ ಇದ್ದ ಸರ್ಕಾರವು ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಮೊದಲಾದವುಗಳನ್ನು ರಚನೆ ಮಾಡಲು ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿದೆ. ಈ ಹಿಂದೆ ಕರ್ನಾಟಕದಲ್ಲಿ 6ನೇ ರಾಜ್ಯ ವೇತನ ಆಯೋಗ ಮಾತ್ರವಿತ್ತು. ಈ ನೂತನ ಆಯೋಗವು ಸರ್ಕಾರಕ್ಕೆ ನವೆಂಬರ್‌ನಲ್ಲಿ ವರದಿಯನ್ನು ನೀಡುವ ಸಾಧ್ಯತೆಯಿದೆ.
ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ (KSGEA) ರಾಜ್ಯ 7ನೇ ವೇತನ ಆಯೋಗಕ್ಕೆ ಸೆಪ್ಟೆಂಬರ್ 30 ರಂದು ವರದಿ ಸಲ್ಲಿಸಿದೆ. ನೌಕರರ ವೇತನ, ಭತ್ಯೆಗಳ ಪರಿಷ್ಕರಣೆ ಬಗ್ಗೆ ಬೇಡಿಕೆಯನ್ನು ಮುಂದಿಟ್ಟಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಏನಿದು ಸರ್ಕಾರದ ಸಚಿವಾಲಯ?
ಸರ್ಕಾರದ ಸಚಿವಾಲಯ ಎಂಬುವುದು ಒಂದು ಸಂಸ್ಥೆಯಾಗಿದ್ದು, ಸರ್ಕಾರದ ಮೂಲ ಪ್ರತಿಬಿಂಬವಾಗಿರುತ್ತದೆ. ಸಂವಿಧಾನದ 166ನೇ ಅನುಚ್ಛೇದದ ಪ್ರಕಾರ ಪ್ರತಿಯೊಂದು ರಾಜ್ಯದಲ್ಲಿ ರಾಜ್ಯ ಸರ್ಕಾರದ ಕಾರ್ಯಾಂಗದ ಎಲ್ಲ ಕಾರ್ಯವು ರಾಜ್ಯಪಾಲರ ಹೆಸರಿನಲ್ಲಿ ಮತ್ತು ಅವರ ಆದೇಶಕ್ಕೆ ಅನುಗುಣವಾಗಿ ನಡೆಯುತ್ತದೆ. ಅದನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿಯನ್ನು ಕಾರ್ಯ ಸಚಿವಾಲಯ ಸಂಸ್ಥೆಗೆ ನೀಡುತ್ತದೆ. ಈ ಇಲಾಖೆಗಳು ಮುಖ್ಯ ಕಾರ್ಯದರ್ಶಿಗಳ ನೇರ ಅಧೀನದಲ್ಲಿರುತ್ತದೆ.
ಭತ್ಯೆ ಎಷ್ಟು ಹೆಚ್ಚಳಕ್ಕೆ ಆಗ್ರಹ
ಸಚಿವಾಲಯದಲ್ಲಿ ಪ್ರಸ್ತುತ 500 ರೂಪಾಯಿ ಅಧಿವೇಶನ ಭತ್ಯೆಯನ್ನು ನೀಡಲಾಗುತ್ತದೆ. ಆದರೆ ಈ ಭತ್ಯೆಯನ್ನು ಒಂದು ಸಾವಿರ ರೂಪಾಯಿಗೆ ಏರಿಕೆ ಮಾಡುವುದು ಸಚಿವಾಲಯ ನೌಕರರ ಸಂಘದ ಪ್ರಮುಖ ಬೇಡಿಕೆಯಾಗಿದೆ. ಇನ್ನು ಪ್ರಸ್ತುತ ರಾಜ್ಯ ಸರ್ಕಾರದ ಸಚಿವಾಲಯದ ಗ್ರೂಪ್-ಡಿ ವೃಂದದ ನೌಕರರಿಗೆ ಸಮವಸ್ತ್ರ ಹಾಗೂ ವಾಷಿಂಗ್ ಭತ್ಯೆಯಾಗಿ 400 ರೂಪಾಯಿ ನೀಡಲಾಗುತ್ತದೆ. ಆದರೆ ಅದನ್ನು 1,000 ರೂಪಾಯಿಗೆ ಏರಿಸುವ ಬೇಡಿಕೆಯಿದೆ.
ಇನ್ನು ವಾಹನ ಚಾಲಕರು ಅವಧಿಗೂ ಅಧಿಕ ಕೆಲಸ ಮಾಡಿದರೆ, (ಓವರ್‌ಟೈಮ್) ಮಾಸಿಕವಾಗಿ 1500 ರೂಪಾಯಿ ವಿಶೇಷ ಭತ್ಯೆಯನ್ನು ನೀಡಬೇಕು ಎಂದು ಬೇಡಿಕೆ ಇಡಲಾಗಿದೆ. ಶೀಘ್ರಲಿಪಿಗಾರರು, ಹಿರಿಯ ಶೀಘ್ರಲಿಪಿಗಾರರು, ಪತ್ರಾಂಕಿತ ಆಪ್ತ ಸಹಾಯಕರುಗಳಿಗೆ ವಿಶೇಷ ಭತ್ಯೆಯನ್ನು ನೀಡಲಾಗುತ್ತದೆ. ಆದರೆ ಅದೆ ರೀತಿಯ ಕಾರ್ಯವನ್ನು ಮಾಡುವ ಆಪ್ತ ಕಾರ್ಯದರ್ಶಿ ವೃಂದದವರಿಗೆ ವಿಶೇಷ ಭತ್ಯೆಯನ್ನು ನಿಗದಿಪಡಿಸಿಲ್ಲ. ಇದನ್ನು ನಿಗದಿ ಮಾಡುವುದು ಬೇಡಿಕೆಯಾಗಿದೆ.
ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಆಪ್ತ ಕಾರ್ಯದರ್ಶಿ (ಗ್ರೇಡ್-2), ಆ.ಕಾ (ಗ್ರೇಡ್-1), ಹಿರಿಯ ಆಪ್ತ ಕಾರ್ಯದರ್ಶಿ, ಆಪ್ತ ಕಾರ್ಯದರ್ಶಿ (ಆಯ್ಕೆ ಶ್ರೇಣಿ) ವೃಂದಗಳನ್ನು ಪ್ರತ್ಯೇಕವಾಗಿ ಮಂಜೂರು ಮಾಡಲಾಗಿರುತ್ತದೆ ಹಾಗೂ ವಿಶೇಷ ಕರ್ತವ್ಯ ಸ್ವರೂಪ, ಹೆಚ್ಚಿನ ಜವಾಬ್ದಾರಿ, ಹೆಚ್ಚಿನ ಕಾರ್ಯ ನಿರ್ವಹಣಾವಧಿ ಮುಂತಾದ ಅಂಶಗಳನ್ನು ಒಳಗೊಂಡಿರುತ್ತದೆ. ಆದುದರಿಂದ, ಅಪ್ತ ಕಾರ್ಯದರ್ಶಿ ಹುದ್ದೆಗಳಿಗೂ ವಿಶೇಷ ಭತ್ಯೆ ನಿಗದಿಪಡಿಸಲು ಮನವಿ ಮಾಡಲಾಗಿದೆ.
ಸಚಿವರು ಸರ್ಕಾರದ ಕಾರ್ಯದರ್ಶಿಗಳ ಆಪ್ತ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಶೀಘ್ರಲಿಪಿಗಾರರು, ಪತ್ರಾಂಕಿತ ಆಪ್ತ ಸಹಾಯಕರುಗಳಿಗೆ ಆಪ್ತ ಶಾಖೆಗೆ ಲಭ್ಯವಿರುವ ವಿಶೇಷ ಭತ್ಯೆಯ ಜೊತೆಗೆ ಅವರು ಹೊಂದಿರುವ ಹುದ್ದೆಗಳಿಗೆ ಲಭ್ಯವಿರುವ ವಿಶೇಷ ಭತ್ಯೆಯನ್ನು ಪಡೆಯಬಹುದಾಗಿರುತ್ತದೆ. ಅದರಂತೆ ಆಪ್ತ ಕಾರ್ಯದರ್ಶಿಗಳಿಗೂ ಹುದ್ದೆಯ ವಿಶೇಷ ಭತ್ಯೆಯನ್ನು ನಿಗದಿಪಡಿಸಿ, ಆಪ್ತ ಶಾಖೆಯ ಭತ್ಯೆಯನ್ನೂ ಪಡೆಯಲು ಶಿಫಾರಸು ಮಾಡಲು ಈ ಮನವಿಯಲ್ಲಿ ಕೋರಲಾಗಿದೆ.
ಲಿಪಿಗಾರರಿಗೆ ಎಷ್ಟು ಭತ್ಯೆ ಏರಿಕೆಗೆ ಆಗ್ರಹ
ಹಿರಿಯ ಶೀಘ್ರಲಿಪಿಗಾರ ಪ್ರಸ್ತುತ 300 ರೂಪಾಯಿ ವಿಶೇಷ ಭತ್ಯೆಯನ್ನು ನೀಡಲಾಗುತ್ತದೆ. ಆದರೆ ಈ ಭತ್ಯೆಯನ್ನು 1000 ರೂಪಾಯಿಗೆ ಏರಿಕೆ ಮಾಡಲು ಮನವಿ ಮಾಡಲಾಗಿದೆ. ಪತ್ರಾಂಕಿತ ಆಪ್ತ ಸಹಾಯಕರಿಗೆ ಪ್ರಸ್ತುತ 400 ರೂಪಾಯಿ ವಿಶೇಷ ಭತ್ಯೆಯನ್ನು ನೀಡಲಾಗುತ್ತದೆ. ಆದರೆ ಇದನ್ನು 1500 ರೂಪಾಯಿಗೆ ಏರಿಸಲು ಮನವಿ ಮಾಡಲಾಗಿದೆ. ಆಪ್ತ ಕಾರ್ಯದರ್ಶಿ ಹುದ್ದೆಗೆ (ಗ್ರೇಡ್-2) ಪ್ರಸ್ತುತ 600 ರೂಪಾಯಿ ಭತ್ಯೆ ನೀಡಲಾಗುತ್ತಿದ್ದು, ಭತ್ಯೆಯನ್ನು 2000 ರೂಪಾಯಿಗೆ ಏರಿಕೆ ಮಾಡುವ ಆಗ್ರಹ ಮಾಡಲಾಗಿದೆ.
ಆಪ್ತ ಶಾಖೆಯ ವಿಶೇಷ ಭತ್ಯೆ; ಹಿರಿಯ ಶೀಘ್ರಲಿಪಿಗಾರ ಪ್ರಸ್ತುತ ನೀಡುತ್ತಿರುವ ವಿಶೇಷ ಭತ್ಯೆ ಮೊತ್ತ 300 ರೂಪಾಯಿ ಆಗಿದ್ದು, ಇದನ್ನು 1000 ರೂಪಾಯಿಗೆ ಏರಿಸುವ ಆಗ್ರ ಮಾಡಲಾಗಿದೆ. ಪತ್ರಾಂಕಿತ ಆಪ್ತ ಸಹಾಯಕರಿಗೆ ಪ್ರಸ್ತುತ ನೀಡುತ್ತಿರುವ ವಿಶೇಷ ಭತ್ಯೆಯು 400 ರೂಪಾಯಿ ಆಗಿದ್ದು, ಈ ಮೊತ್ತವನ್ನು 1500 ರೂಪಾಯಿಗೆ ಏರಿಸುವುದು ಬೇಡಿಕೆಯಾಗಿದೆ. ಆಪ್ತ ಕಾರ್ಯದರ್ಶಿ (ಗ್ರೇಡ್-2) ಪ್ರಸ್ತುತ ವಿಶೇಷ ಭತ್ಯೆ 500 ರೂಪಾಯಿ ಆಗಿದ್ದು, 2000 ರೂಪಾಯಿಗೆ ಏರಿಸುವುದು ಬೇಡಿಕೆಯಾಗಿದೆ.
More From GoodReturns

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Highway: ರಾಜ್ಯದ ಈ ಭಾಗಕ್ಕೆ ಹೈವೇ ಡಿಮ್ಯಾಂಡ್…ಕೇಂದ್ರಕ್ಕೆ ಮನವಿ ಮಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್!

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications