ಕಳೆದ ವರ್ಷದ ಮೇ ತಿಂಗಳಿನಿಂದ ಈವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಆರು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಈ ಬೆನ್ನಲ್ಲೇ ಬ್ಯಾಂಕ್‌ಗಳಲ್ಲಿ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ), ಸಾಲದ ಬಡ್ಡಿದರವನ್ನು ಕೂಡಾ ಏರಿಕೆ ಮಾಡಲಾಗಿದೆ. 2023 ರಲ್ಲಿ ಬ್ಯಾಂಕ್ ಎಫ್‌ಡಿ ದರಗಳು ಆಕರ್ಷಕವಾಗಿದೆ.
ಹಲವಾರು ಬ್ಯಾಂಕುಗಳು ಈಗ ಸಾಮಾನ್ಯ ಗ್ರಾಹಕರಿಗೆ ಶೇಕಡ 7 ಕ್ಕಿಂತ ಅಧಿಕ ಬಡ್ಡಿದರವನ್ನು ನೀಡುತ್ತದೆ. ಆರ್‌ಬಿಐ ರೆಪೋ ದರ ಏರಿಕೆಯನ್ನು ನಿಲ್ಲಿಸಿದ ಬಳಿಕ ಬ್ಯಾಂಕುಗಳು ಕೂಡಾ ಎಫ್‌ಡಿ ಬಡ್ಡಿದರ ಏರಿಕೆಯನ್ನು ಮಾಡುವುದನ್ನು ನಿಲ್ಲಿಸಿದೆ. ಮೇ 2022 ರಿಂದ ಈವರೆಗೆ ಒಟ್ಟಾಗಿ ಆರು ಬಾರಿ 250 ಬೇಸಿಸ್ ಪಾಯಿಂಟ್‌ಗಳಷ್ಟು (ಬಿಪಿಎಸ್) ರೆಪೋ ದರವನ್ನು ಹೆಚ್ಚಿಸಲಾಗಿದೆ.

ಇತ್ತೀಚೆಗೆ ಕೆಲವು ಬ್ಯಾಂಕುಗಳು ಫಿಕ್ಸಿಡ್ ಡೆಪಾಸಿಟ್ ಅಥವಾ ಎಫ್‌ಡಿ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಡಿಬಿಐ ಬ್ಯಾಂಕ್ ಬಡ್ಡಿದರ ಎಷ್ಟಿದೆ ಎಂಬ ವಿವರ ನಾವಿಲ್ಲಿ ನೀಡಿದ್ದೇವೆ ಮುಂದೆ ಓದಿ...
ಕೋಟಕ್ ಮಹೀಂದ್ರಾ ಬ್ಯಾಂಕ್ ಎಫ್‌ಡಿ ದರ ಪರಿಷ್ಕರಣೆ
ಕೋಟಕ್ ಮಹೀಂದ್ರಾ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್‌ಗಳ (ಎಫ್‌ಡಿ) ಬಡ್ಡಿ ದರವನ್ನು ಪರಿಷ್ಕರಿಸಿದೆ. ಇತ್ತೀಚಿನ ಪರಿಷ್ಕರಣೆಯ ನಂತರ, ಕೋಟಕ್ ಬ್ಯಾಂಕ್ ಏಳು ದಿನಗಳಿಂದ ಹತ್ತು ವರ್ಷಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಸಾಮಾನ್ಯ ಗ್ರಾಹಕರಿಗೆ ಶೇಕಡ 2.75 ರಿಂದ ಶೇಕಡ 7.25 ವರೆಗೆ ಬಡ್ಡಿದರವನ್ನು ನೀಡುತ್ತಿದೆ. ಹಿರಿಯ ನಾಗರಿಕರು ಈ ಎಫ್‌ಡಿಗಳಲ್ಲಿ ಶೇಕಡ 3.25 ರಿಂದ ಶೇಕಡ 7.75 ವರೆಗೆ ಬಡ್ಡಿದರ ಪಡೆಯಬಹುದು. ಈ ದರಗಳು 13ನೇ ಸೆಪ್ಟೆಂಬರ್ 2023 ರಿಂದ ಜಾರಿಗೆ ಬರುತ್ತವೆ.
ಆಕ್ಸಿಸ್ ಬ್ಯಾಂಕ್ ಎಫ್‌ಡಿ ದರ ಪರಿಷ್ಕರಣೆ
ಆಕ್ಸಿಸ್ ಬ್ಯಾಂಕ್ ತನ್ನ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಬ್ಯಾಂಕ್‌ನ ವೆಬ್‌ಸೈಟ್‌ನ ಪ್ರಕಾರ, ಈ ದರಗಳು ಸೆಪ್ಟೆಂಬರ್ 18, 2023 ರಿಂದ ಜಾರಿಗೆ ಬರುತ್ತವೆ. ಆಕ್ಸಿಸ್ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಶೇಕಡ 3 ರಿಂದ ಶೇಕಡ 7.10 ವರೆಗೆ, ಹಿರಿಯ ನಾಗರಿಕರಿಗೆ ಶೇಕಡ 3 ರಿಂದ ಶೇಕಡ 7.75 ವರೆಗೆ ಬಡ್ಡಿದರವನ್ನು ನೀಡುತ್ತದೆ. ಈ ದರಗಳು ಸೆಪ್ಟೆಂಬರ್ 18 ರಿಂದ ಜಾರಿಗೆ ಬರುತ್ತವೆ.
ಐಡಿಬಿಐ ಬ್ಯಾಂಕ್ ಎಫ್‌ಡಿ ದರ ಪರಿಷ್ಕರಣೆ
ಐಡಿಬಿಐ ಬ್ಯಾಂಕ್ ತನ್ನ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಬ್ಯಾಂಕಿನ ವೆಬ್‌ಸೈಟ್‌ನ ಪ್ರಕಾರ, ಈ ದರಗಳು ಸೆಪ್ಟೆಂಬರ್ 15, 2023 ರಿಂದ ಜಾರಿಗೆ ಬರುತ್ತವೆ. ಐಡಿಬಿಐ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಏಳು ದಿನಗಳಿಂದ ಐದು ವರ್ಷಗಳಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಮೇಲೆ ಶೇಕಡ 3 ರಿಂದ ಶೇಕಡ 6.8 ವರೆಗೆ, ಹಿರಿಯ ನಾಗರಿಕರಿಗೆ ಶೇಕಡ 3.5 ರಿಂದ ಶೇಕಡ 7.3 ವರೆಗೆ ಬಡ್ಡಿದರವನ್ನು ನೀಡುತ್ತದೆ.
ವಿವಿಧ ಡೆಪಾಸಿಟ್ ಯೋಜನೆಗಳ ಪ್ರಕಾರ ಬ್ಯಾಂಕ್ ಡೆಪಾಸಿಟ್‌ಗಳ ಮೇಲೆ ಬಡ್ಡಿಯನ್ನು ಪಾವತಿಸುತ್ತದೆ. ಬಡ್ಡಿದರಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ. ಪರಿಷ್ಕೃತ ಬಡ್ಡಿದರಗಳನ್ನು ಡೆಪಾಸಿಟ್‌ಗಳ ಅಪ್‌ಡೇಟ್, ಹೊಸ ಡೆಪಾಸಿಟ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ.


Click it and Unblock the Notifications