ಕೋಟಕ್ ಮಹೀಂದ್ರಾ ಬ್ಯಾಂಕ್ ನೂತನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಏಪ್ರಿಲ್ 10, 2023ರಿಂದ ಜಾರಿಗೆ ಬರುವಂತೆ ಕೋಟಕ್ ಮಹೀಂದ್ರಾ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದೆ ಎಂದು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. 7 ದಿನದಿಂದ 10 ದಿನಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲೆ ಕೋಟಕ್ ಮಹಿಂದ್ರಾ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಶೇಕಡ 2.75ರಿಂದ ಶೇಕಡ 7.20ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಶೇಕಡ 3.25ರಿಂದ ಶೇಕಡ 7.70ರಷ್ಟು ಬಡ್ಡಿದರವನ್ನು ನೀಡುತ್ತದೆ.
ಇನ್ನು 390 ದಿನದಿಂದ 2 ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ (12 ತಿಂಗಳು 25 ದಿನ) ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 7.20ರಷ್ಟು ಬಡ್ಡಿದರ ನೀಡುತ್ತದೆ. ಸಾಮಾನ್ಯ ನಾಗರಿಕರಿಗೆ ಶೇಕಡ 7.20ರಷ್ಟು ಬಡ್ಡಿದರ ನೀಡಲಾಗುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಗರಿಷ್ಠ ಶೇಕಡ 7.70ರಷ್ಟು ಬಡ್ಡಿದರವಿದೆ. ಇನ್ನು ಫಿಕ್ಸಿಡ್ ಡೆಪಾಸಿಟ್ ಅನ್ನು ಅಕಾಲಿಕವಾಗಿ ವಿತ್‌ಡ್ರಾ ಮಾಡುವ ಸೌಲಭ್ಯವನ್ನು ಹೊಂದಿದೆ. ಹಾಗೆಯೇ ಕೊನೆಯ ದಿನಾಂಕಕ್ಕೂ ಮುನ್ನ ಎಫ್‌ಡಿ ಅನ್ನು ಮುಚ್ಚುವ ಅವಕಾಶವಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಪ್ರಕಾರ, "1 ವರ್ಷಕ್ಕಿಂತ ಕಡಿಮೆ ಇರುವ ಎನ್‌ಆರ್‌ಇ ಟಿಡಿಗಳಿಗೆ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. 181 ದಿನಗಳ ಕೆಳಗಿನ ಅವಧಿಯ ಎಫ್‌ಡಿ ಮೇಲೆ ಬಡ್ಡಿಯನ್ನು ಮುಕ್ತಾಯದ ಸಮಯದಲ್ಲಿ ಸರಳ ಬಡ್ಡಿಯಾಗಿ ಲೆಕ್ಕಹಾಕಲಾಗುತ್ತದೆ. ಉಳಿತಾಯ / ಚಾಲ್ತಿ ಖಾತೆಗೆ ಲಿಂಕ್ ಮಾಡಲಾದ 181 ದಿನಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿಗಳನ್ನು ಅಕಾಲಿಕವಾಗಿ ಹಿಂಪಡೆಯಲು ದಂಡವನ್ನು ವಿಧಿಸಲಾಗುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ಕೋಟಕ್ ಮಹೀಂದ್ರಾ ಬ್ಯಾಂಕ್ ಎಫ್‌ಡಿ
7-14 ದಿನ: ಶೇ. 2.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.25 ಬಡ್ಡಿದರ
15-30 ದಿನ: ಶೇ. 3.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.50 ಬಡ್ಡಿದರ
31-45 ದಿನ: ಶೇ. 3.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.75 ಬಡ್ಡಿದರ
46-90 ದಿನ: ಶೇ. 3.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.00 ಬಡ್ಡಿದರ
91-120 ದಿನ: ಶೇ. 4.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.50 ಬಡ್ಡಿದರ
121-179 ದಿನ: ಶೇ. 4.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.75 ಬಡ್ಡಿದರ
180 ದಿನ: ಶೇ. 6.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.00 ಬಡ್ಡಿದರ
181-269 ದಿನ: ಶೇ.6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.50 ಬಡ್ಡಿದರ
270 ದಿನ: ಶೇ. 6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.50 ಬಡ್ಡಿದರ
271-363 ದಿನ: ಶೇ.6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.50 ಬಡ್ಡಿದರ
364 ದಿನ: ಶೇ.6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.75 ಬಡ್ಡಿದರ
365-389 ದಿನ: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
390 ದಿನ (12 ತಿಂಗಳು 25 ದಿನಗಳು): ಶೇ. 7.20 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.70 ಬಡ್ಡಿದರ
391 ದಿನ-23 ತಿಂಗಳಿಗಿಂತ ಕಡಿಮೆ ಅವಧಿ: ಶೇ. 7.20 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.70 ಬಡ್ಡಿದರ
23 ತಿಂಗಳು: ಶೇ. 7.20 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.70 ಬಡ್ಡಿದರ
23 ತಿಂಗಳು 1 ದಿನ-2 ವರ್ಷಕ್ಕಿಂತ ಕಡಿಮೆ ಅವಧಿ: ಶೇ. 7.20 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.70 ಬಡ್ಡಿದರ
2 ವರ್ಷದಿಂದ- 3 ವರ್ಷಕ್ಕಿಂತ ಕಡಿಮೆ ಅವಧಿ: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
3 ವರ್ಷಕ್ಕಿಂತ ಅಧಿಕ 4 ವರ್ಷಕ್ಕಿಂತ ಕಡಿಮೆ ಅವಧಿ: ಶೇ. 6.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.00 ಬಡ್ಡಿದರ
4 ವರ್ಷಕ್ಕಿಂತ ಅಧಿಕ 5 ವರ್ಷಕ್ಕಿಂತ ಕಡಿಮೆ ಅವಧಿ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.75 ಬಡ್ಡಿದರ
5 ವರ್ಷಕ್ಕಿಂತ ಅಧಿಕ 10 ವರ್ಷದವರೆಗಿನ ಅವಧಿ: ಶೇ. 6.20 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.70 ಬಡ್ಡಿದರ


Click it and Unblock the Notifications