Kotak Mahindra Bank: ಕೋಟಕ್ ಮಹೀಂದ್ರಾ ಬ್ಯಾಂಕ್ ಎಫ್‌ಡಿ ಬಡ್ಡಿದರ ಏರಿಕೆ, ನೂತನ ದರ ತಿಳಿಯಿರಿ

ಭಾರತದ ಅತೀ ದೊಡ್ಡ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಕೋಟಕ್ ಮಹೀಂದ್ರಾ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಈ ಹಿಂದೆ ಏಪ್ರಿಲ್‌ ತಿಂಗಳಿನಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಎಫ್‌ಡಿ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಬ್ಯಾಂಕ್ ನಿಗದಿತ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು 50 ಮೂಲಾಂಕ ಏರಿಕೆ ಮಾಡಿದೆ. ಈ ನೂತನ ಬಡ್ಡಿದರವು 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಅನ್ವಯವಾಗುತ್ತದೆ.

ಮೇ 11, 2023ರಿಂದ ಈ ನೂತನ ಬಡ್ಡಿದರವು ಜಾರಿಗೆ ಬರಲಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಸಾಮಾನ್ಯ ನಾಗರಿಕರಿಗೆ ಎಫ್‌ಡಿ ಮೇಲೆ ಶೇಕಡ 2.75ರಿಂದ ಶೇಕಡ 7.20ರವರೆಗೆ ಬಡ್ಡಿದರವನ್ನು ನೀಡುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಶೇಕಡ 3.25ರಿಂದ ಶೇಕಡ 7.70ರಷ್ಟು ಬಡ್ಡಿದರವನ್ನು ನೀಡುತ್ತದೆ. ಬಡ್ಡಿದರ ಪರಿಷ್ಕರಣೆ ಮಾಡಿದ ಬಳಿಕ 180 ದಿನಗಳ ಅವಧಿಯ ಬಡ್ಡಿದರವು 50 ಮೂಲಾಂಕ ಏರಿಕೆಯಾಗಿ ಶೇಕಡ 6.50ರಿಂದ ಶೇಕಡ 7ಕ್ಕೆ ತಲುಪಿದೆ.

 ಕೋಟಕ್ ಮಹೀಂದ್ರಾ ಬ್ಯಾಂಕ್ ಎಫ್‌ಡಿ ಬಡ್ಡಿದರ ಏರಿಕೆ, ನೂತನ ದರ

2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಬಡ್ಡಿದರ

7-14 ದಿನ: ಶೇ. 2.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.25 ಬಡ್ಡಿದರ
15-30 ದಿನ: ಶೇ. 3.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.50 ಬಡ್ಡಿದರ
31-45 ದಿನ: ಶೇ. 3.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.75 ಬಡ್ಡಿದರ
46-90 ದಿನ: ಶೇ. 3.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.00 ಬಡ್ಡಿದರ
91-120 ದಿನ: ಶೇ. 4.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.50 ಬಡ್ಡಿದರ
121-179 ದಿನ: ಶೇ. 4.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.75 ಬಡ್ಡಿದರ
180 ದಿನ: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
181-269 ದಿನ: ಶೇ.6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.50 ಬಡ್ಡಿದರ
270 ದಿನ: ಶೇ. 6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.50 ಬಡ್ಡಿದರ
271-363 ದಿನ: ಶೇ.6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.50 ಬಡ್ಡಿದರ
364 ದಿನ: ಶೇ.6.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.00 ಬಡ್ಡಿದರ
365-389 ದಿನ: ಶೇ. 7.10 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.60 ಬಡ್ಡಿದರ
390 ದಿನ (12 ತಿಂಗಳು 25 ದಿನಗಳು): ಶೇ. 7.20 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.70 ಬಡ್ಡಿದರ
391 ದಿನ-23 ತಿಂಗಳಿಗಿಂತ ಕಡಿಮೆ ಅವಧಿ: ಶೇ. 7.20 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.70 ಬಡ್ಡಿದರ
23 ತಿಂಗಳು: ಶೇ. 7.20 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.70 ಬಡ್ಡಿದರ
23 ತಿಂಗಳು 1 ದಿನ-2 ವರ್ಷಕ್ಕಿಂತ ಕಡಿಮೆ ಅವಧಿ: ಶೇ. 7.20 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.70 ಬಡ್ಡಿದರ
2 ವರ್ಷದಿಂದ- 3 ವರ್ಷಕ್ಕಿಂತ ಕಡಿಮೆ ಅವಧಿ: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
3 ವರ್ಷಕ್ಕಿಂತ ಅಧಿಕ 4 ವರ್ಷಕ್ಕಿಂತ ಕಡಿಮೆ ಅವಧಿ: ಶೇ. 6.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.00 ಬಡ್ಡಿದರ
4 ವರ್ಷಕ್ಕಿಂತ ಅಧಿಕ 5 ವರ್ಷಕ್ಕಿಂತ ಕಡಿಮೆ ಅವಧಿ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.75 ಬಡ್ಡಿದರ
5 ವರ್ಷಕ್ಕಿಂತ ಅಧಿಕ 10 ವರ್ಷದವರೆಗಿನ ಅವಧಿ: ಶೇ. 6.20 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.70 ಬಡ್ಡಿದರ


ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಆರ್‌ಡಿ ಮೇಲೆ ಬಡ್ಡಿದರ

6 ತಿಂಗಳು: ಶೇ. 6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.50 ಬಡ್ಡಿದರ
9 ತಿಂಗಳು: ಶೇ. 6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.50 ಬಡ್ಡಿದರ
12 ತಿಂಗಳು: ಶೇ. 7.10 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.60 ಬಡ್ಡಿದರ
15 ತಿಂಗಳು: ಶೇ. 7.10 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.60 ಬಡ್ಡಿದರ
18 ತಿಂಗಳು: ಶೇ. 7.20 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.70 ಬಡ್ಡಿದರ
21 ತಿಂಗಳು: ಶೇ. 7.20 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.70 ಬಡ್ಡಿದರ
24 ತಿಂಗಳು: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
27 ತಿಂಗಳು: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
30 ತಿಂಗಳು: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
33 ತಿಂಗಳು: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
3 ವರ್ಷದಿಂದ - 4 ವರ್ಷಕ್ಕೂ ಕಡಿಮೆ ಅವಧಿ: ಶೇ. 6.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.00 ಬಡ್ಡಿದರ
4 ವರ್ಷದಿಂದ - 5 ವರ್ಷಕ್ಕೂ ಕಡಿಮೆ ಅವಧಿ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.75 ಬಡ್ಡಿದರ
5 ವರ್ಷದಿಂದ - 10 ವರ್ಷ: ಶೇ. 6.20 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.70 ಬಡ್ಡಿದರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+