ಕೋಟಕ್ ಮಹೀಂದ್ರಾ ಬ್ಯಾಂಕ್ ಸೋಮವಾರ ಹಿರಿಯ ನಾಗರಿಕರಿಗೆ 2 ಕೋಟಿ ರೂಪಾಯಿಗಿಂತ ಕಡಿಮೆ ಇರುವ ಫಿಕ್ಸಿಡ್ ಡೆಪಾಸಿಟ್‌ಗಳ (ಎಫ್‌ಡಿ) ಮೇಲಿನ ಬಡ್ಡಿದರವನ್ನು ಶೇಕಡ 7.80 ರವರೆಗೆ ಹೆಚ್ಚಿಸಿದೆ. ವಿವಿಧ ಅವಧಿಗಳಲ್ಲಿ ಎಫ್‌ಡಿ ದರಗಳನ್ನು 85 ಬೇಸಿಸ್ ಪಾಯಿಂಟ್‌ಗಳವರೆಗೆ (ಬಿಪಿಎಸ್) ಹೆಚ್ಚಿಸಲಾಗಿದೆ.
23 ತಿಂಗಳಿಂದ 2 ವರ್ಷಗಳವರೆಗಿನ ಅವಧಿಗೆ, ಹಿರಿಯ ನಾಗರಿಕರು ಶೇಕಡ 7.80 ವರೆಗೆ ಗಳಿಸಬಹುದು. 2 ರಿಂದ 3 ವರ್ಷಗಳ ಅವಧಿಯ ಬಡ್ಡಿದರವನ್ನು ವಿಸ್ತರಣೆ ಮಾಡಲಾಗಿದೆ. ಖಾಸಗಿ ವಲಯದ ಬ್ಯಾಂಕ್ ಈ ಅವಧಿಯ ಎಫ್‌ಡಿ ಮೇಲೆ ಶೇಕಡ 7.65 ರಷ್ಟು ಬಡ್ಡಿದರವನ್ನು ನೀಡುತ್ತದೆ.

2 ಕೋಟಿ ರೂಪಾಯಿಗಿಂತ ಕಡಿಮೆ ಹೂಡಿಕೆ ಮಾಡುವ ನಿಯಮಿತ ಗ್ರಾಹಕರು 3 ರಿಂದ 4 ವರ್ಷಗಳ ಅವಧಿಯ ಎಫ್‌ಡಿಗಳಿಗೆ 50 ಬಿಪಿಎಸ್ ಬಡ್ಡಿದರ ಹೆಚ್ಚಳದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ ಶೇಕಡ 7 ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ಹೆಚ್ಚುವರಿಯಾಗಿ, 4-5 ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 6.25 ರಿಂದ ಶೇಕಡ 7 ರಷ್ಟು ಬಡ್ಡಿಯನ್ನು ಪಡೆಯಬಹುದಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಗುಂಪಿನ ಅಧ್ಯಕ್ಷ ಮತ್ತು ಮುಖ್ಯಸ್ಥ (ಗ್ರಾಹಕ ಬ್ಯಾಂಕ್) ವಿರಾಟ್ ದಿವಾಂಜಿ, "ಫಿಕ್ಸಿಡ್ ಡೆಪಾಸಿಟ್‌ಗಳನ್ನು ಸುರಕ್ಷಿತ ಮತ್ತು ಕಡಿಮೆ ಅಪಾಯದ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಹಿರಿಯ ನಾಗರಿಕರು ಇದು ಸುರಕ್ಷಿತವಾಗಿದೆ. ಇದು ಆದಾಯದ ಮೂಲವಾಗಿರುತ್ತದೆ," ಎಂದು ತಿಳಿಸಿದರು.
ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಪರಿಷ್ಕೃತ ಬಡ್ಡಿದರ
* 23 ತಿಂಗಳುಗಳು: ಸಾಮಾನ್ಯ ಜನರಿಗೆ ಶೇಕಡ 7.25, ಹಿರಿಯ ನಾಗರಿಕರಿಗೆ ಶೇಕಡ 7.80 ಬಡ್ಡಿದರ
* 23 ತಿಂಗಳು 1 ದಿನದಿಂದ 2 ವರ್ಷಕ್ಕಿಂತ ಕಡಿಮೆ: ಸಾಮಾನ್ಯ ಜನರಿಗೆ ಶೇಕಡ 7.25, ಹಿರಿಯ ನಾಗರಿಕರಿಗೆ ಶೇಕಡ 7.80 ಬಡ್ಡಿದರ
* 2 ವರ್ಷ ಮತ್ತು ಮೇಲ್ಪಟ್ಟ 3 ವರ್ಷಗಳಿಗಿಂತ ಕಡಿಮೆ: ಸಾಮಾನ್ಯ ಜನರಿಗೆ ಶೇಕಡ 7.10, ಹಿರಿಯ ನಾಗರಿಕರಿಗೆ ಶೇಕಡ 7.65 ಬಡ್ಡಿದರ
* 3 ವರ್ಷಗಳು ಮತ್ತು ಮೇಲ್ಪಟ್ಟ 4 ವರ್ಷಗಳಿಗಿಂತ ಕಡಿಮೆ: ಸಾಮಾನ್ಯ ಜನರಿಗೆ ಶೇಕಡ 7.00, ಹಿರಿಯ ನಾಗರಿಕರಿಗೆ ಶೇಕಡ 7.60 ಬಡ್ಡಿದರ
* 4 ವರ್ಷಗಳು ಮತ್ತು ಮೇಲ್ಪಟ್ಟ 5 ವರ್ಷಗಳಿಗಿಂತ ಕಡಿಮೆ: ಸಾಮಾನ್ಯ ಜನರಿಗೆ ಶೇಕಡ 7.00, ಹಿರಿಯ ನಾಗರಿಕರಿಗೆ ಶೇಕಡ 7.60 ಬಡ್ಡಿದರ


Click it and Unblock the Notifications