ಇಂಟ್ರಾಡೇ (ಅದೇ ದಿನವೇ ವ್ಯವಹಾರ ಚುಕ್ತಾ ಮಾಡುವುದು) ಷೇರು ವಹಿವಾಟು ನಡೆಸುವವರಿಗೆ ಯಾವುದೇ ಬ್ರೋಕರೇಜ್ ಹಾಕುವುದಿಲ್ಲ ಎಂದು ಕೊಟಕ್ ಸೆಕ್ಯೂರಿಟೀಸ್ ಗುರುವಾರ ಹೇಳಿದೆ. ಇತರ ಎಲ್ಲ ಫ್ಯೂಚರ್ಸ್ ಮತ್ತು ಆಪ್ಷನ್ ವಹಿವಾಟಿಗೆ ಪ್ರತಿ ಆರ್ಡರ್ ಗೆ ಇಪ್ಪತ್ತು ರುಪಾಯಿ ಶುಲ್ಕ ವಿಧಿಸಲಾಗುತ್ತದೆ. ಎಲ್ಲ ಡೆರಿವೇಟಿವ್ ಸೆಗ್ಮೆಂಟ್ ಈಕ್ವಿಟೀಸ್, ಕಮಾಡಿಟೀಸ್ ಮತ್ತು ಕರೆನ್ಸಿಗಳಿಗೆ ಇದು ಅನ್ವಯ ಆಗುತ್ತದೆ.
ಕೊಟಕ್ ಸೆಕ್ಯೂರಿಟೀಸ್ ಹೇಳಿರುವ ಪ್ರಕಾರ, ಎಂಐಎಸ್ ಹಾಗೂ ಸೂಪರ್ ಮಲ್ಟಿಪಲ್ (ಕವರ್ ಆರ್ಡರ್) ಅನ್ನು ಪ್ರತಿ ಆರ್ಡರ್ ಗೆ ಇಪ್ಪತ್ತು ರುಪಾಯಿಯಂತೆ ನೀಡಲಾಗುತ್ತದೆ. ಇನ್ನು ನಗದು ಮಾರ್ಜಿನ್ ಬದಲಿಗೆ ಸ್ಟಾಕ್ ಅನ್ನು ಮಾರ್ಜಿನ್ ಆಗಿ ಬಳಸಲು ಗ್ರಾಹಕರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.
ಇನ್ನು ಗ್ರಾಹಕರು ಖಾತೆ ತೆರೆದ ನಂತರ ಸೇವೆಗಳಿಂದ ತೃಪ್ತರಾಗದೇ ಇದ್ದಲ್ಲಿ ಒಂದು ತಿಂಗಳಿಗೆ ಶುಲ್ಕ ಮತ್ತು ಬ್ರೋಕರೇಜ್ ಮರುಪಾವತಿ ಕೇಳಬಹುದು. ಈ ಹೊಸ ಪ್ಲ್ಯಾನ್ ನೊಂದಿಗೆ ಗ್ರಾಹಕರು ಅರವತ್ತು ನಿಮಿಷದೊಳಗೆ ಬ್ರೋಕಿಂಗ್ ಖಾತೆ ತೆರೆಯಬಹುದು ಮತ್ತು ಅದೇ ದಿನ ಟ್ರೇಡಿಂಗ್ ಶುರು ಮಾಡಬಹುದು.

ಈ ಟ್ರೇಡ್ ಫ್ರೀ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ ಒಂದು ಸಲಕ್ಕೆ ಖಾತೆ ತೆರೆಯುವ ಶುಲ್ಕವಾಗಿ ಜಿಎಸ್ ಟಿ ಹೊರತುಪಡಿಸಿದಂತೆ 499 ರುಪಾಯಿಯನ್ನು ಪಡೆಯಲಾಗುತ್ತದೆ. ಈಗಾಗಲೇ ಕೊಟಕ್ ಸೆಕ್ಯೂರಿಟೀಸ್ ಗ್ರಾಹಕರಾಗಿರುವವರು ಸಹ ಇದೇ ಶುಲ್ಕ ಪಾವತಿಸಿ, ಪ್ಲ್ಯಾನ್ ಆರಿಸಿಕೊಳ್ಳಬಹುದು.
ಕೊಟಕ್ ಸೆಕ್ಯೂರಿಟೀಸ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಜೈದೀಪ್ ಹನ್ಸ್ ರಾಜ್ ಮಾತನಾಡಿ, ಟ್ರೇಡಿಂಗ್ ಹಾಗೂ ಹೂಡಿಕೆ ಹೀಗೆ ಗ್ರಾಹಕರ ಅಗತ್ಯ ಏನು ಎಂಬ ಆಧಾರದಲ್ಲಿ ವಿವಿಧ ಫೀಚರ್ ಗಳನ್ನು ಒಳಗೊಂಡ ಕಸ್ಟಮೈಸ್ಡ್ ಬ್ರೋಕರೇಜ್ ಪ್ಲ್ಯಾನ್ ನೀಡುತ್ತಿದ್ದೇವೆ ಎಂದಿದ್ದಾರೆ.
ಕ್ಯಾಶ್ ಬ್ಯಾಕ್ ಹಾಗೂ ಕೊಟಕ್ ಸೆಕ್ಯೂರಿಟೀಸ್ ನ ಇತರ ಪ್ಲ್ಯಾನ್ ಗಿಂತಲೂ ಟ್ರೇಡ್ ಫ್ರೀ ಪ್ಲ್ಯಾನ್ ಬೇರೆ. ಇನ್ನು ಮುಂದಿನ ದಿನಗಳಲ್ಲಿ ಗ್ರಾಹಕರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೆ ಅನುಕೂಲ ಆಗುವಂಥ ಸೇವೆಗಳನ್ನು ಒದಗಿಸುತ್ತದೆ. ಈ ಬಗ್ಗೆ ಮುಂದಿನ ಹತ್ತು ದಿನದಲ್ಲಿ ಕೊಟಕ್ ಸೆಕ್ಯೂರಿಟೀಸ್ ಘೋಷಣೆ ಮಾಡುತ್ತದೆ.
ಮತ್ತೊಂದು ಸಂಸ್ಥೆಯ ಜತೆಗೆ ಸಹಭಾಗಿತ್ವದಲ್ಲಿ ಈ ಸೇವೆಗಳನ್ನು ಒದಗಿಸಲಾಗುವುದು ಎಂದು ಕೊಟಕ್ ಸೆಕ್ಯೂರಿಟೀಸ್ ತಿಳಿಸಿದೆ.


Click it and Unblock the Notifications