ಹಬ್ಬ ಎಂದಾಗ ಎಲ್ಲ ಕಡೆಗಳಲ್ಲಿ ಜನಜಂಗುಳಿ ತಪ್ಪಿದ್ದಲ್ಲ. ಈ ವೇಳೆ ರಜೆಯು ಇರುತ್ತದೆ. ಕುಟುಂಬಸ್ಥರು ಸೇರಿ ಪ್ರವಾಸ ಹೋಗಬೇಕು ಎಂದು ಚಿಂತನೆ ನಡೆಸಿದರೆ, ನಿಮಗೆ ಇಲ್ಲಿದೆ ದಸರಾ ಪ್ಯಾಕೇಜ್ ವಿವರ. ಈ ಪ್ಯಾಕೇಜ್‌ನ ದರ, ಇತರೆ ಮಾಹಿತಿ ಇಲ್ಲಿ ನಾವು ನೀಡಿದ್ದೇವೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಮಂಗಳೂರು ವಿಭಾಗವು ಅಕ್ಟೋಬರ್ 15 ರಿಂದ 24 ರವರೆಗೆ ಸಾರ್ವಜನಿಕರ ಬೇಡಿಕೆಯ ಮೇರೆಗೆ ದಸರಾ ವಿಶೇಷ ಪ್ಯಾಕೇಜ್ ಪ್ರವಾಸಗಳನ್ನು ಆಯೋಜಿಸುತ್ತದೆ. ಮಂಗಳೂರು ದರ್ಶನ ಪ್ಯಾಕೇಜ್‌ಗಾಗಿ ಜೆಎನ್‌ಎನ್‌ಯುಆರ್‌ಎಂ ಬಸ್‌ಗಳು ಮತ್ತು ಸಿಟಿ ವೋಲ್ವೊ ಬಸ್‌ಗಳು ಕಾರ್ಯನಿರ್ವಹಿಸುತ್ತದೆ.

ಮಂಗಳೂರು- ಮಡಿಕೇರಿ ಮತ್ತು ಮಂಗಳೂರು- ಕೊಲ್ಲೂರು ಪ್ಯಾಕೇಜ್ ಟೂರ್‌ಗಳಿಗೆ ಕರ್ನಾಟಕ ಸರಿಗೆ ಬಸ್‌ಗಳು ಮತ್ತು ಪಂಚದುರ್ಗ ದರ್ಶನ ಪ್ಯಾಕೇಜ್‌ಗಾಗಿ ಜೆಎನ್‌ಎನ್‌ಯುಆರ್‌ಎಂ ಬಸ್‌ಗಳನ್ನು ನಿಯೋಜಿಸಲಾಗುವುದು. ನೀವು ಮಂಗಳೂರು ದಸರಾ ನೋಡಲು ಬಯಸಿದರೆ, ಈ ಪ್ಯಾಕೇಜ್ ನಿಮಗೆ ಉತ್ತಮ...
ಯಾವೆಲ್ಲ ಪ್ರದೇಶ, ದೇವಾಲಯಕ್ಕೆ ಭೇಟಿ
ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಸಸಿಹಿತ್ಲು ಭಗವತಿ, ಸಸಿಹಿತ್ಲು ಭಗವತಿ ಮತ್ತು ಬೀಚ್, ಚಿತ್ರಾಪುರ ದುರ್ಗಾಪರಮೇಶ್ವರಿ, ಉರ್ವ ಮಾರಿಯಮ್ಮ ಮತ್ತು ಕುದ್ರೋಳಿ ಗೋಕರ್ಣನಾಥ (ನವ ದುರ್ಗೆಯರು) ದೇವಾಲಯಕ್ಕೆ ನೀವು ಈ ಪ್ಯಾಕೇಜ್‌ನಲ್ಲಿ ಭೇಟಿ ನೀಡಬಹುದಾಗಿದೆ.
ಪ್ಯಾಕೇಜ್ ದರ ಎಷ್ಟಿದೆ ನೋಡಿ
ಜೆಎನ್‌ಎನ್‌ಯುಆರ್‌ಎಂ ಬಸ್‌ಗಳಲ್ಲಿ ದರಗಳು ವಯಸ್ಕರಿಗೆ 400 ರೂಪಾಯಿ ಆಗಿದೆ. 6-12 ವರ್ಷ ವಯಸ್ಸಿನ ಮಕ್ಕಳಿಗೆ 300 ರೂಪಾಯಿ ಪ್ಯಾಕೇಜ್ ದರವಾಗಿದೆ. ಆದರೆ ವೋಲ್ವೋ ದರಗಳನ್ನು ಆಹಾರ ಹೊರತುಪಡಿಸಿ ಆಯಾ ವರ್ಗಗಳಿಗೆ 500 ಮತ್ತು 400 ರೂಪಾಯಿ ಇರಿಸಲಾಗುತ್ತದೆ.
ಮಂಗಳೂರು- ಮಡಿಕೇರಿ ಪ್ಯಾಕೇಜ್ ಟೂರ್ (ಕರ್ನಾಟಕ ಸರಿಗೆ) ಬೆಳಿಗ್ಗೆ 7 ಗಂಟೆಗೆ ಬಿಜೈನಿಂದ ಪ್ರಾರಂಭವಾಗಿ ರಾಜಾ ಸೀಟ್, ಅಬ್ಬಿ ಫಾಲ್ಸ್, ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಅಣೆಕಟ್ಟುಗಳಿಗೆ ಪ್ರವಾಸ ಮಾಡಬಹುದಾಗಿದೆ. ರಾತ್ರಿ 10.30 ಕ್ಕೆ ಪ್ರವಾಸ ಕೊನೆಗೊಳ್ಳುತ್ತದೆ. ವಯಸ್ಕರಿಗೆ 500 ರೂಪಾಯಿ ಮಕ್ಕಳಿಗೆ 400 ರೂಪಾಯಿ ಪ್ರವಾಸ ಶುಲ್ಕವಾಗಿದೆ.
ಬೆಳಗ್ಗೆ 8 ಗಂಟೆಗೆ ಬಿಜೈಯಿಂದ ಆರಂಭವಾಗುವ ಕೊಲ್ಲೂರು ಪ್ಯಾಕೇಜ್ ಟೂರ್ (ಕರ್ನಾಟಕ ಸರಿಗೆ) ಮಾರನಕಟ್ಟೆ ಮಹಾಲಿಂಗೇಶ್ವರ, ಕೊಲ್ಲೂರು ಮೂಕಾಂಬಿಕಾ, ಕಮಲಶಿಲೆ ದುರ್ಗಾಪರಮೇಶ್ವರಿ, ಉಚ್ಚಿಲ ಮಹಾಲಕ್ಷ್ಮಿ ಮೂಲಕ ಸಂಜೆ 6.30ಕ್ಕೆ ಬಿಜೈನಲ್ಲಿ ಕೊನೆಗೊಳ್ಳುತ್ತದೆ. ವಯಸ್ಕರಿಗೆ ಮತ್ತು ಮಕ್ಕಳಿಗೆ ಕ್ರಮವಾಗಿ 500 ರೂಪಾಯಿ ಮತ್ತು 400 ರೂಪಾಯಿ ದರ ನಿಗದಿಪಡಿಸಲಾಗಿದೆ.
ಪಂಚದುರ್ಗಾ ದರ್ಶನ ಪ್ಯಾಕೇಜ್ ಟೂರ್ (ಜೆಎನ್‌ಎನ್‌ಯುಆರ್‌ಎಂ ಬಸ್‌ಗಳು) ಬೆಳಿಗ್ಗೆ 8 ಗಂಟೆಗೆ ಬಿಜೈನಿಂದ ಪ್ರಾರಂಭವಾಗಿ ತಲಪಾಡಿ ದುರ್ಗಾಪರಮೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಮುಂಡ್ಕೂರು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಚಿತ್ರಾಪುರ ದುರ್ಗಾಪರಮೇಶ್ವರಿ ತಲುಪಿ ಸಂಜೆ ಆರು ಗಂಟೆಗೆ ಕೊನೆಯಾಗುತ್ತದೆ. ವಯಸ್ಕರಿಗೆ ಮತ್ತು ಮಕ್ಕಳಿಗೆ ಕ್ರಮವಾಗಿ 400 ರೂಪಾಯಿ ಮತ್ತು 300 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ.
ವಿವರಗಳಿಗಾಗಿ, 7760990702, 776099071, ಮಂಗಳೂರು ಮುಂಗಡ ಕಾಯ್ದಿರಿಸುವಿಕೆ ಕೌಂಟರ್, 9663211553 ಅಥವಾ ಮಂಗಳೂರು ಬಸ್ ನಿಲ್ದಾಣ, 7760990720 ಗೆ ಕರೆ ಮಾಡಿ. ಮುಂಗಡ ಕಾಯ್ದಿರಿಸುವಿಕೆಯನ್ನು www.ksrtc.in ಕ್ಕೆ ಭೇಟಿ ನೀಡಬಹುದಾಗಿದೆ.


Click it and Unblock the Notifications