ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬ್ಯಾಂಕ್‌ಗಳಲ್ಲಿ 2000 ರೂಪಾಯಿ ಕರೆನ್ಸಿ ನೋಟುಗಳನ್ನು ಬದಲಾವಣೆ ಮಾಡುವ ಅಥವಾ ಡೆಪಾಸಿಟ್ ಮಾಡಲು ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಿದೆ. ನೋಟನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳುವ ಕೊನೆಯ ದಿನಾಂಕವನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಗಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
2,000 ರೂಪಾಯಿ ನೋಟು ವಿನಿಮಯದ ಗಡುವು ಮುಗಿದ ನಂತರವೂ ಮಾನ್ಯವಾಗಿರುತ್ತದೆ ಎಂದು ಆರ್‌ಬಿಐ ಹೇಳಿದೆ. ಈ ಹಿಂದಿನ ಗಡುವು ಇಂದು (ಸೆಪ್ಟೆಂಬರ್ 30) ಆಗಿದೆ. ಅಕ್ಟೋಬರ್ 8 ರಿಂದ ಬ್ಯಾಂಕ್‌ಗಳಲ್ಲಿ 2000 ರೂಪಾಯಿ ನೋಟುಗಳನ್ನು ಬದಲಾವಣೆಗೆ ಸ್ವೀಕಾರ ಮಾಡಲಾಗುವುದಿಲ್ಲ.

"ನೂತನ ಗಡುವು ಮುಗಿದ ಬಳಿಕ 2000 ರೂಪಾಯಿ ನೋಟುಗಳನ್ನು ಬ್ಯಾಂಕುಗಳಲ್ಲಿ ಬದಲಾವಣೆ ಮಾಡಲು ಅವಕಾಶವಿಲ್ಲ. ಆದರೆ ಆರ್‌ಬಿಐನ 19 ಕಚೇರಿಗಳಲ್ಲಿ ಜನರು 2000 ರೂಪಾಯಿ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು. ನೋಟುಗಳನ್ನು ಭಾರತೀಯ ಅಂಚೆ ಮೂಲಕ ಆರ್‌ಬಿಐನ "ವಿಷಯ ಕಚೇರಿಗಳಿಗೆ" ಅಂಚೆ ಮೂಲಕ ಕಳುಹಿಸಬಹುದು.
ನೋಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂದಿರುಗಿಸಲು ಸೆಂಟ್ರಲ್ ಬ್ಯಾಂಕ್ ಅಕ್ಟೋಬರ್ ಅಂತ್ಯದವರೆಗೆ ಸಮಯವನ್ನು ನೀಡುವ ನಿರೀಕ್ಷೆಯಿದೆ ಎಂದು ಈ ಹಿಂದೆ ಅಕ್ಟೋಬರ್‌ನಲ್ಲಿ ವರದಿಯಾಗಿದೆ. ಶೇಕಡ 100 ರಷ್ಟು 2000 ರೂಪಾಯಿ ನೋಟುಗಳನ್ನು ಹಿಂಪಡೆಯುವ ನಿಟ್ಟಿನಲ್ಲಿ ಕೇಂದ್ರ ಬ್ಯಾಂಕ್ ಈಗ ಈ ನೋಟುಗಳ ಬದಲಾವಣೆಗೆ ಇನ್ನಷ್ಟು ಸಮಯವನ್ನು ನೀಡಲು ಮುಂದಾಗುತ್ತಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
"ಯಾರು 2000 ರೂಪಾಯಿ ನೋಟನ್ನು ಬದಲಾವಣೆ ಮಾಡಲು ಈವರೆಗೂ ಸಾಧ್ಯವಾಗಿಲ್ಲವೋ, ಅವರಿಗೆ ಆರ್‌ಬಿಐ ಈ ಅವಕಾಶವನ್ನು ನೀಡಲು ಮುಂದಾಗಿದೆ. ನೋಟು ಬದಲಾವಣೆಗೆ ಅವಕಾಶ ನೀಡದ ಸಂದರ್ಭದಲ್ಲಿ ಕೆಲವರು ವಿದೇಶದಲ್ಲಿದ್ದರು, ಇನ್ನು ಕೆಲವರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ, ಮೊದಲಾದ ತೊಂದರೆ ಉಂಟಾಗಿದೆ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ವಿಶೇಷ ಅವಕಾಶ ನೀಡಬಹುದು," ಎಂದು ಸೌತ್ ಇಂಡಿಯನ್ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.


Click it and Unblock the Notifications