ಕೋವಿಡ್ ನಂತರ ಉಂಟಾದ ಆರ್ಥಿಕ ಬಿಕ್ಕಟ್ಟು, ಹಣದುಬ್ಬರ, ಯುದ್ಧ, ಬೆಲೆ ಏರಿಕೆ ಇವೆಲ್ಲವನ್ನು ಎದುರಿಸುವ ಪ್ರಯತ್ನದಲ್ಲಿ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನೇ ತನ್ನ ಅಸ್ತ್ರವನ್ನಾಗಿಸಿದೆ. ಆರ್ಥಿಕ ಹಿಂಜರಿತದ ಆತಂಕದ ನಡುವೆ ವೆಚ್ಚ ಕಡಿತ ಮಾಡಲು ಹಲವಾರು ಟೆಕ್ ಸಂಸ್ಥೆಗಳು, ಇತರೆ ಸಂಸ್ಥೆಗಳು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.
ಕಳೆದ ಕೆಲವು ತಿಂಗಳುಗಳಿಂದ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಬೆರಳೆಣಿಕೆಯ ಮಂದಿ, ಸಾವಿರಾರು ಮಂದಿಯನ್ನು ವಜಾಗೊಳಿಸುವುದರಿಂದ ಹಿಡಿದು ಒಂದು ತಂಡವನ್ನೇ ವಜಾಗೊಳಿಸುವವರೆಗೂ ಉದ್ಯೋಗ ಕಡಿತ ನಡೆದಿದೆ. layoffs.fyi ನೂತನ ಡೇಟಾ ಪ್ರಕಾರ 2023ರಲ್ಲಿ 332 ಟೆಕ್ ಸಂಸ್ಥೆಗಳು 1,00,746 ಉದ್ಯೋಗಿಗಳನ್ನು ಉದ್ಯೋಗದಿಂದ ತೆಗೆದುಹಾಕಿದೆ.
ಹೊಸ ವರ್ಷದಲ್ಲಿ ಹಲವಾರು ಐಟಿ ಸಂಸ್ಥೆಗಳಾದ ಗೂಗಲ್, ಮೈಕ್ರೋಸಾಫ್ಟ್, ಸೇಲ್ಸ್‌ಫೋರ್ಸ್, ಅಮೆಜಾನ್, ಇತರೆ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಗೂಗಲ್ ಈವರೆಗೆ ಶೇಕಡ 6ರಷ್ಟು ಅಂದರೆ 12,000 ಮಂದಿಯನ್ನು ವಜಾಗೊಳಿಸಿದೆ. ಇತರೆ ಸಂಸ್ಥೆಗಳಿಗಿಂತ ಅಧಿಕ ಉದ್ಯೋಗ ಕಡಿತ ಗೂಗಲ್ ಮಾಡಿದೆ. ಮೈಕ್ರೋಸಾಫ್ಟ್ 10,000 ಮಂದಿಯನ್ನು, ಅಮೆಜಾನ್ 8,000, ಸೇಲ್ಸ್ ಫೋರ್ಸ್ 8,000, ಡೆಲ್ 6,650, ಜೂಮ್ 1,300 ಹೀಗೆ ಉದ್ಯೋಗ ಕಡಿತ ಮುಂದುವರಿದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ....
ಉದ್ಯೋಗ ಕಡಿತ ಸೀಸನ್‌ಗೆ ಯಾಹೂ ಕೊಡುಗೆ!
ಗಮನಾರ್ಹವಾಗಿ ಯಾಹೂ ಕೂಡಾ ಉದ್ಯೋಗ ಕಡಿತ ಸೀಸನ್‌ಗೆ ತನ್ನ ಕೊಡುಗೆಯನ್ನು ನೀಡಿದೆ. ಇತ್ತೀಚೆಗೆ ಯಾಹೂ ಶೇಕಡ 20ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ನಿರ್ಧಾರ ಸುಮಾರು 1600 ಮಂದಿಯ ಮೇಲೆ ಪ್ರಭಾವ ಉಂಟು ಮಾಡಿದೆ. ಈ ಘೋಷಣೆಯನ್ನು ಮಾಡಿದ ದಿನದ ಅಂತ್ಯದಲ್ಲೇ ಶೇಕಡ 12ರಷ್ಟು ಅಂದರೆ 1000 ಮಂದಿಯನ್ನು ವಜಾಗೊಳಿಸಲಾಗಿದೆ. ಉಳಿದಂತೆ ಮುಂದಿನ 6 ತಿಂಗಳಿನಲ್ಲಿ ಶೇಕಡ 8ರಷ್ಟು ಅಂದರೆ 600 ಮಂದಿಯನ್ನು ವಜಾಗೊಳಿಸಲಾಗುತ್ತದೆ. ಇದರಿಂದಾಗಿ ಅರ್ಧದಷ್ಟು ಯಾಹೂ ಜಾಹೀರಾತು ಟೆಕ್ ವಹಿವಾಟಿಗೆ ಪ್ರಭಾವ ಉಂಟಾಗಿದೆ.
ಇತರೆ ಸಂಸ್ಥೆಗಳಲ್ಲಿಯೂ ಉದ್ಯೋಗ ಕಡಿತ
ಮೈಕ್ರೋಸಾಫ್ಟ್ ಮಾಲೀಕತ್ವದ ಗಿಟ್‌ಹಬ್ ಶೇಕಡ 10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಂದರೆ ತನ್ನ ಉದ್ಯೋಗಿಗಳಲ್ಲಿ 300ರಷ್ಟು ಮಂದಿಯನ್ನು ಮುಂದಿನ ತ್ರೈಮಾಸಿಕದಲ್ಲಿ ಉದ್ಯೋಗದಿಂದ ತೆಗೆದುಹಾಕಲಾಗುವುದು ಎಂದು ಹೇಳಿದೆ. ಸಂಸ್ಥೆಯು ತನ್ನ ಕಚೇರಿಯನ್ನು ಖಾಲಿ ಮಾಡಲಿದೆ. ಲೀಸ್ ಕೊನೆಯಾದ ಬಳಿಕ ಕಚೇರಿಯನ್ನು ತೊರೆಯುತ್ತದೆ ಎಂದು ಕೂಡಾ ಘೋಷಣೆ ಮಾಡಿದೆ. ಡೆಲ್ ಟೆಕ್ನಾಲಜೀಸ್ ಶೇಕಡ 5ರಷ್ಟು, 6,650 ಉದ್ಯೋಗಿಗಳನ್ನು ವಜಾಗೊಳಿಸಿದೆ. ಟ್ವಿಟ್ಟರ್‌ನಿಂದ ಹಿಡಿದು ಹಲವಾರು ಸಂಸ್ಥೆಗಳು ಉದ್ಯೋಗ ಕಡಿತ ಮಾಡಿದೆ. ಜೊಮ್ಯಾಟೊ, ಸ್ವಿಗ್ಗಿಯಂತಹ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಗಳು ಕೂಡಾ ಉದ್ಯೋಗಿಗಳನ್ನು ವಜಾಗೊಳಿಸಿದೆ.
ಯಾವ ಸಂಸ್ಥೆಯಲ್ಲಿ ಎಷ್ಟು ಉದ್ಯೋಗ ಕಡಿತ?
ಮೈಕ್ರೋಸಾಫ್ಟ್: ಶೇಕಡ 5ರಷ್ಟು ಅಥವಾ 10,000 ಉದ್ಯೋಗ ಕಡಿತ
ಅಮೆಜಾನ್: ಶೇಕಡ 3ರಷ್ಟು ಅಥವಾ 8,000 ಉದ್ಯೋಗ ಕಡಿತ
ಸೇಲ್ಸ್‌ಫೋರ್ಸ್: ಶೇಕಡ 10ರಷ್ಟು ಅಥವಾ 8,000 ಉದ್ಯೋಗ ಕಡಿತ
ಡೆಲ್: ಶೇಕಡ 5ರಷ್ಟು ಅಥವಾ 6,650 ಉದ್ಯೋಗ ಕಡಿತ
ಐಬಿಎಂ: ಶೇಕಡ 2ರಷ್ಟು ಅಥವಾ 3,900 ಉದ್ಯೋಗ ಕಡಿತ
ಎಸ್‌ಎಪಿ: ಶೇಕಡ 3ರಷ್ಟು ಅಥವಾ 3,000 ಉದ್ಯೋಗ ಕಡಿತ
ಜೂಮ್: ಶೇಕಡ 15ರಷ್ಟು ಅಥವಾ 1,300 ಉದ್ಯೋಗ ಕಡಿತ
ಕಾಯಿನ್‌ಬೇಸ್: ಶೇಕಡ 20ರಷ್ಟು ಅಥವಾ 950 ಉದ್ಯೋಗ ಕಡಿತ
ಯಾಹೂ: ಶೇಕಡ 20ರಷ್ಟು ಅಥವಾ 1,600 ಉದ್ಯೋಗ ಕಡಿತ
ಗಿಟ್‌ಹಬ್: ಶೇಕಡ 10ರಷ್ಟು ಅಥವಾ 300 ಉದ್ಯೋಗ ಕಡಿತ
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications