ಓಪನ್ ಸೋರ್ಸ್ ಡೆವಲಪರ್ ಪ್ಲಾಟ್‌ಫಾರ್ಮ್ ಆದ ಗಿಟ್‌ಹಬ್ ತನ್ನ ಸಂಸ್ಥೆಯಲ್ಲಿರುವ ಭಾರತದಲ್ಲಿ ಸಂಪೂರ್ಣ ಇಂಜಿನಿಯರಿಂಗ್ ತಂಡವನ್ನು ವಜಾಗೊಳಿಸಿದೆ. ಅತೀ ದೊಡ್ಡ ಡೆವಲಪರ್ ಸಂಸ್ಥೆಯಾದ ಗಿಟ್‌ಹಬ್ ಭಾರತದಲ್ಲಿ ಮಾಡಿದ ಈ ಉದ್ಯೋಗ ಕಡಿತವು ಸರಿಸುಮಾರು 100 ಮಂದಿಯ ಮೇಲೆ ಪ್ರಭಾವ ಉಂಟು ಮಾಡಿದೆ. ಸಂಸ್ಥೆಯ ರಚನಾತ್ಮಕ ವ್ಯವಸ್ಥೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಗಿಟ್‌ಹಬ್ ತನ್ನ ಸಂಸ್ಥೆಯಲ್ಲಿ ಉದ್ಯೋಗ ಕಡಿತವನ್ನು ಆರಂಭಿಸಿದೆ.
ವಿಶೇಷವಾಗಿ ಇಂಜಿನಿಯರಿಂಗ್/ಡೆವಲಪರ್ ತಂಡಗಳಲ್ಲಿ ಜಾಗತಿಕ ಟೆಕ್ ಸಂಸ್ಥೆಗಳು ವಜಾಗೊಳಿಸುತ್ತಿರುವ ಬಗ್ಗೆ ಹೆಚ್ಚು ಬರೆಯುತ್ತಿರುವ ಟೆಕ್ ಬರಹಗಾರ ಗೆರ್ಗೆಲಿ ಒರೊಸ್ಜ್ ಭಾರತದಲ್ಲಿನ ಗಿಟ್‌ಹಬ್ ತಂಡದ ಬಗ್ಗೆ ಮಾಹಿತಿ ನೀಡಿದ್ದಾರೆ. "ನಾವು 100 ಇಂಜಿಯರ್‌ಗಳ ಬಗ್ಗೆ ಮಾತನಾಡುತ್ತಿದ್ದೇವೆ. ತಂಡವು ಇತರ ಸ್ಥಳಗಳಿಗಿಂತ ಚಿಕ್ಕದಾಗಿದ್ದು, ಕಡಿಮೆ ಆದ್ಯತೆಯ ವಿಷಯವನ್ನು ಹೊಂದಿರುವುದರಿಂದ ತಂಡವನ್ನು ವಜಾ ಮಾಡಲಾಗಿದೆ," ಎಂದು ಬರಹಗಾರ ಗೆರ್ಗೆಲಿ ಒರೊಸ್ಜ್ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ತಾನು ಖಚಿತಪಡಿಸಿಕೊಂಡಿದ್ದೇನೆ ಎಂದು ಕೂಡಾ ಟೆಕ್ ಬರಹಗಾರ ಗೆರ್ಗೆಲಿ ಒರೊಸ್ಜ್ ಹೇಳಿದ್ದಾರೆ. "ಗಿಟ್‌ಹಬ್‌ನ ಭಾರತದ ಇಂಜಿನಿಯರ್‌ಗಳ (ಪ್ರಸ್ತುತ ಮಾಜಿ ಉದ್ಯೋಗಿಗಳು) ಜೊತೆ ನಾನು ಮಾತನಾಡಿ ಗಿಟ್‌ಹಬ್‌ನಲ್ಲಿ ಉದ್ಯೋಗ ಕಡಿತದ ಬಗ್ಗೆ ಖಚಿತಪಡಿಸಿಕೊಂಡಿದ್ದೇನೆ," ಎಂದು ಗೆರ್ಗೆಲಿ ಒರೊಸ್ಜ್ ತಿಳಿಸಿದ್ದಾರೆ. ಈ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡಿದ ಗಿಟ್‌ಹಬ್ ವಕ್ತಾರ ಸಂಸ್ಥೆಯಲ್ಲಿ ರಚನಾತ್ಮಕ ಬದಲಾವಣೆಯನ್ನು ತರುವ ಭಾಗವಾಗಿ ನಾವು ಉದ್ಯೋಗ ಕಡಿತವನ್ನು ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಉದ್ಯೋಗ ಕಡಿತದ ಬಗ್ಗೆ ಸಂಸ್ಥೆ ಹೇಳುವುದೇನು?
"ಇದು ಅತೀ ಕಷ್ಟಕರವಾದ ನಿರ್ಧಾರ. ಆದರೆ ಅತೀ ಅಗತ್ಯವಾದ ನಿರ್ಧಾರವಾಗಿದೆ. ನಮ್ಮ ಸಂಸ್ಥೆಯಲ್ಲಿ ವಹಿವಾಟು ಆರೋಗ್ಯವನ್ನು ಅಲ್ಪಾವಧಿಗೆ ಕಾಪಾಡಿಕೊಳ್ಳಲು ಮತ್ತು ದೀರ್ಘಾವಧಿ ಯೋಜನೆಗಳ ಮೇಲೆ ಹೂಡಿಕೆ ಮಾಡುವ ಸಾಮರ್ಥ್ಯವನ್ನು ಹೊಂದಲು ನಾವು ಈ ನಿರ್ಧಾರ ಕೈಗೊಳ್ಳಬೇಕಾಯಿತು," ಎಂದು ಗಿಟ್‌ಹಬ್ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಮೈಕ್ರೋಸಾಫ್ಟ್ ಮಾಲೀಕತ್ವದ ಈ ಸಂಸ್ಥೆಯು ಫೆಬ್ರವರಿಯಲ್ಲಿ ತನ್ನ ಸಂಸ್ಥೆಯಲ್ಲಿ ಸುಮಾರು ಶೇಕಡ 10ರಷ್ಟು ಉದ್ಯೋಗ ಕಡಿತ ಮಾಡಲಾಗುತ್ತದೆ ಎಂದು ತಿಳಿಸಿತ್ತು.
ಉದ್ಯೋಗ ಕಡಿತವನ್ನು ಘೋಷಣೆ ಮಾಡುವುದಕ್ಕೂ ಮುನ್ನ ಗಿಟ್‌ಹಬ್‌ನಲ್ಲಿ ಒಟ್ಟು 3,000 ಮಂದಿ ಉದ್ಯೋಗಿಗಳು ಇದ್ದರು. ಉದ್ಯೋಗಿಗಳಿಗೆ ನೀಡಿದ ಇಮೇಲ್‌ನಲ್ಲಿ ಗಿಟ್‌ಹಬ್ ಸಿಇಒ ಥಾಮಸ್ ದೊಹ್ಮ್ಕೆ, "ಎಲ್ಲ ಉದ್ಯಮಗಳಿಗೆ ನಿರಂತರ ಬೆಳವಣಿಗೆ ಅತೀ ಮುಖ್ಯವಾಗುತ್ತದೆ. ನಾವು ಈಗ 100 ಮಿಲಿಯನ್ ಡೆವಲಪ್‌ಗರ್‌ಗಳನ್ನು ಹೊಂದಿರುವ ಮನೆಯಿದ್ದಂತೆ, ವಿಶ್ವದ ನಾಳೆಗಾಗಿ ನಾವು ಡೆವಲಪರ್-ಫಸ್ಟ್ ಇಂಜಿನಿಯರಿಂಗ್ ವ್ಯವಸ್ಥೆಯಾಗಬೇಕು. ಸಂಸ್ಥೆಯ ಅಭಿವೃದ್ಧಿಯೊಂದಿಗೆ ನಮ್ಮ ಗ್ರಾಹಕರ ಬೆಳವಣಿಗೆಗೆ ನಾವು ಸಹಾಯಕವಾಗಬೇಕು," ಎಂದು ತಿಳಿಸಿದ್ದಾರೆ.
"ದುರದೃಷ್ಟವಶಾತ್ ಈ ಬೆಳವಣಿಗೆಗಾಗಿ ನಾವು ಕೆಲವು ಬದಲಾವಣೆಗಳನ್ನು ಮಾಡುವುದು ಅಗತ್ಯವಾಗುತ್ತದೆ. ನಾವು ಹಣಕಾಸು ವರ್ಷ 2023ರ ಅಂತ್ಯದ ವೇಳೆಗೆ ಗಿಟ್‌ಹಬ್‌ನಲ್ಲಿ ಶೇಕಡ 10ರಷ್ಟು ಉದ್ಯೋಗ ಕಡಿತವನ್ನು ಮಾಡುತ್ತೇವೆ. ಜನವರಿ 18ರಂದು ನಾನು ಘೋಷಣೆ ಮಾಡಿದಂತೆ ಸಂಸ್ಥೆಯಲ್ಲಿ ನೇಮಕಾತಿ ಪ್ರಕ್ರಿಯೆಯು ಪ್ರಸ್ತುತ ಕೊಂಚ ಸಮಯ ಸ್ಥಗಿತವಾಗಲಿದೆ," ಎಂದು ಕೂಡಾ ಗಿಟ್‌ಹಬ್ ಸಿಇಒ ಥಾಮಸ್ ದೊಹ್ಮ್ಕೆ ತನ್ನ ಉದ್ಯೋಗಿಗಳಿಗೆ ಇಮೇಲ್‌ನಲ್ಲಿ ಹೇಳಿದ್ದಾರೆ.
ಓಪನ್ ಸೋರ್ಸ್ ಡೆವಲಪರ್ ಪ್ಲಾಟ್‌ಫಾರ್ಮ್ ಜಾಗತಿಕವಾಗಿ 100 ಮಿಲಿಯನ್ ಸದಸ್ಯತ್ವನ್ನು ತಲುಪಿದೆ. ಪ್ಲಾಟ್‌ಫಾರ್ಮ್‌ನಲ್ಲಿ 10 ಮಿಲಿಯನ್ ಡೆವಲಪರ್‌ಗಳನ್ನು ದಾಟಿರುವ ಭಾರತದಲ್ಲಿಯೂ ವೇಗವಾಗಿ ಬೆಳೆಯುತ್ತಿದೆ. ಯುಎಸ್ ಬಳಿಕ ಭಾರತವು ಗಿಟ್‌ಹಬ್‌ನ ಎರಡನೇ ಅತಿ ದೊಡ್ಡ ಡೆವಲಪರ್ ಸಮುದಾಯ ಹೊಂದಿರುವ ದೇಶವಾಗಿದೆ. ಇನ್ನು ಈ ಸಂಸ್ಥೆ ಮಾತ್ರವಲ್ಲದೆ ಡಿಸ್ನಿ, ಯಾಹೂ, ಮೆಟಾ, ಟ್ವಿಟ್ಟರ್, ಅಮೆಜಾನ್, ಜೊಮ್ಯಾಟೊ ಸೇರಿದಂತೆ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತ ಮಾಡಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications