ಜಾಗತಿಕ ವೆಬ್ ಹೋಸ್ಟಿಂಗ್ ಪ್ಲಾಟ್‌ಫಾರ್ಮ್ ಗೋ ಡ್ಯಾಡಿ ಸುಮಾರು ಶೇಕಡ 8ರಷ್ಟು ಉದ್ಯೋಗ ಕಡಿತವನ್ನು ಮಾಡಲಾಗುತ್ತಿದೆ. ಈ ಸಂಸ್ಥೆಯು ಕೂಡ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಈ ಉದ್ಯೋಗ ಕಡಿತವನ್ನು ಮಾಡಿದೆ. ತನ್ನ ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಗೋ ಡ್ಯಾಡಿ ಸಿಇಒ ಅಮನ್ ಬೂತಾನಿ, "ಯುಎಸ್‌ನಲ್ಲಿ ಹೆಚ್ಚಿನ ಜನರಿಗೆ ಈ ಉದ್ಯೋಗ ಕಡಿತದ ಪ್ರಭಾವ ಉಂಟಾಗಿದೆ," ಎಂದು ತಿಳಿಸಿದ್ದಾರೆ.
"ಇದು ನಮ್ಮ ಸಂಸ್ಥೆಯ ಮೂರು ಬ್ರಾಂಡ್‌ಗಳ ಮೇಲೆಯೂ ಪ್ರಭಾವ ಬೀರುತ್ತದೆ. ಮಿಡಿಯಾ ಟೆಂಪಲ್, ಮೇನ್ ಸ್ಟ್ರೀಟ್ ಹಬ್ ಮತ್ತು 123 ರೆಜ್‌ನಲ್ಲಿಯೂ ಈ ಉದ್ಯೋಗ ಕಡಿತ ನಡೆಯಲಿದೆ," ಎಂದು ಕೂಡಾ ಗೋ ಡ್ಯಾಡಿ ಸಿಇಒ ಅಮನ್ ಬೂತಾನಿ ಹೇಳಿದ್ದಾರೆ. ಉದ್ಯೋಗ ಕಳೆದುಕೊಂಡಿರುವವರಿಗೆ ಸಭೆಗೆ ಕರೆಯಲಾಗುತ್ತದೆ ಎಂದು ವರದಿಯಾಗಿದೆ.
"ಮಿಡಿಯಾ ಟೆಂಪಲ್ ಗ್ರಾಹಕರು ಮತ್ತು ಸದಸ್ಯರು ಈಗಾಗಲೇ ಈ ಬಗ್ಗೆ ಮಾಹಿತಿಯನ್ನು ಹೊಂದಿದ್ದಾರೆ. ಗುಂಪಿನ ಸದಸ್ಯರು ಸಭೆಯ ಆಹ್ವಾನವನ್ನು ಪಡೆಯಲಿದ್ದಾರೆ. ಉದ್ಯೋಗ ಕಡಿತದ ಬಗ್ಗೆ ವಿವರಣೆಯನ್ನು ಆ ಉದ್ಯೋಗಿಗಳಿಗೆ ನೀಡಲಾಗುತ್ತದೆ," ಎಂದು ಕೂಡಾ ಅಮನ್ ಬೂತಾನಿ ಮಾಹಿತಿ ನೀಡಿದ್ದಾರೆ. ಸಂಸ್ಥೆಯಲ್ಲಿ ಶೇಕಡ 8ರಷ್ಟು ಉದ್ಯೋಗ ಕಡಿತ ನಡೆಸಲಾಗುತ್ತಿದೆ.

ಇಂದು ಯಾವೆಲ್ಲ ಸಂಸ್ಥೆಯಲ್ಲಿ ಉದ್ಯೋಗ ಕಡಿತ
ಗೋ ಡ್ಯಾಡಿ ಅಥವಾ GoDaddy ಹೊರತುಪಡಿಸಿ ಇನ್ನು ಕೆಲವು ಸಂಸ್ಥೆಗಳು ಫೆಬ್ರವರಿ 11, 2023ರಂದು ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಕಡಿತವನ್ನು ಮಾಡಿದೆ. ಯುಎಸ್ ಮೂಲದ ಆರೋಗ್ಯ ಸೇವೆ ಸಂಸ್ಥೆಯಾದ ನೋಮದ್ ಹೆಲ್ತ್ ಸಂಸ್ಥೆಯಲ್ಲಿ ಶೇಕಡ 17ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ.
ಈ ಬಗ್ಗೆ ಸಂಸ್ಥೆ ಸಹ ಸಂಸ್ಥಾಪಕ, ಸಿಇಒ ಅಲೆಕ್ಸಿ ನಜೇಮ್ ಮಾಹಿತಿ ನೀಡಿದ್ದಾರೆ. ಸಂಸ್ಥೆಯ ಒಟ್ಟು ಉದ್ಯೋಗಿಗಳ ಸಂಖ್ಯೆಯು 691ರಿಂದ 572ಕ್ಕೆ ಇಳಿಯಲಿದೆ. ಅಂದರೆ ಸುಮಾರು ಶೇಕಡ 17ರಷ್ಟು ಉದ್ಯೋಗಿಗಳನ್ನು ವಜಾ ಮಾಡಲಾಗುತ್ತದೆ. ಎಂದಿದ್ದಾರೆ. "ವಿಶ್ವದಲ್ಲಿರುವ ಇತರೆ ಸಂಸ್ಥೆಗಳಂತೆಯೇ ನೋಮದ್ ಕೂಡಾ ಆಗಿದೆ. ಕೋವಿಡ್ ಬಳಿಕ, ಹಣದುಬ್ಬರ, ಬೇಡಿಕೆ ಇಳಿಕೆಯಿಂದಾಗಿ ಭಾರೀ ನಷ್ಟವನ್ನು ಕಂಡಿದೆ. ಈಗ ಉದ್ಯೋಗ ಕಡಿತ ಅನಿವಾರ್ಯವಾಗಿದೆ," ಎಂದು ಕೂಡಾ ಅಲೆಕ್ಸಿ ನಜೇಮ್ ಹೇಳಿದ್ದಾರೆ.
ಉದ್ಯೋಗ ಕಳೆದುಕೊಂಡವರಿಗೆ ಎಷ್ಟು ಪರಿಹಾರ?
ಯುಎಸ್ ಮೂಲದ ಆರೋಗ್ಯ ಸೇವೆ ಸಂಸ್ಥೆಯಾದ ನೋಮದ್ ಹೆಲ್ತ್ ಉದ್ಯೋಗ ಕಳೆದುಕೊಂಡವರಿಗೆ ಆರು ವಾರಗಳ ಮೂಲ ವೇತನವನ್ನು ನೀಡುತ್ತದೆ. ಹಾಗೆಯೇ ಒಂದು ತಿಂಗಳ ಆರೋಗ್ಯ ವಿಮೆಯನ್ನು ಪಾವತಿಸಲಿದೆ. ಸಂಸ್ಥೆಯು ನೀಡಿದ ಲ್ಯಾಪ್‌ಟಾಪ್ ಅನ್ನು ಉದ್ಯೋಗಿಗಳಿಗೆಯೇ ನೀಡುತ್ತಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications