ಜಾಗತಿಕವಾಗಿ ಉದ್ಯೋಗ ಕಡಿತ ಮುಂದುವರಿದಿದೆ. ಈಗಾಗಲೇ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಘೋಷಣೆ ಮಾಡಿದೆ. ಯಾಹೂ ಸಂಸ್ಥೆಯು 1600 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸುವುದಾಗಿ ಶುಕ್ರವಾರ ತಿಳಿಸಿದೆ. ಅಂದರೆ ಸುಮಾರು ಶೇಕಡ 20ರಷ್ಟು ಮಂದಿಯನ್ನು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದಾಗಿ ತಿಳಿಸಿದೆ.
ಇಂದೇ ಅಂದರೆ ಶುಕ್ರವಾರ (ಫೆಬ್ರವರಿ 10) ಶೇಕಡ 12ರಷ್ಟು ಅಂದರೆ 1000 ಮಂದಿಯನ್ನು ಕೆಲಸದಿಂದ ವಜಾಗೊಳಿಸುವುದಾಗಿ ಹೇಳಿದೆ. ಇನ್ನು ಮುಂದಿನ ಆರು ತಿಂಗಳಿನಲ್ಲಿ ಶೇಕಡ 8ರಷ್ಟು ಅಂದರೆ 600 ಮಂದಿಯನ್ನು ಕೆಲಸದಿಂದ ತೆಗೆದುಹಾಕುವುದಾಗಿ ಹೇಳಿದೆ. ಈ ನಿರ್ಧಾರವು ಟೆಕ್ ವಹಿವಾಟಿನ ಅರ್ಧ ಭಾಗದಷ್ಟು ಸಂಸ್ಥೆಗಳ ಮೇಲೆ ಪ್ರಭಾವ ಬೀರಲಿದೆ ಎಂದು ವರದಿಯಾಗಿದೆ.
ಇನ್ನು ಸಂಸ್ಥೆಯು ತನ್ನ ಜಾಹೀರಾತು ಪ್ಲಾಟ್‌ಫಾರ್ಮ್ ಜೆಮಿನಿಯನ್ನು ಶಟ್‌ಡೌನ್ ಅಂದರೆ ಸ್ಥಗಿತಗೊಳಿಸುವುದಾಗಿ ಹೇಳಿದೆ. ಇದು ಸ್ಥಳೀಯ ಜಾಹೀರಾತನ್ನು ಮಾರಾಟ ಮಾಡಲು ಜಾಹೀರಾತು ಸಂಸ್ಥೆಯಾದ ತಾಬೂಲಾ ಜೊತೆಗೆ ಹೊಸದಾಗಿ ಪಾಲುದಾರಿಕೆಯನ್ನು ಮಾಡಿಕೊಳ್ಳುವುದಾಗಿ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಯಾಹೂ ಸಿಇಒ ಜಿಮ್ ಲಾನ್ಸ್‌ಜೋನ್, "ಯಾಹೂ ಸಂಸ್ಥೆಗೆ ಲಾಭವನ್ನು ಉಂಟು ಮಾಡುವ ನಿಟ್ಟಿನಲ್ಲಿ ಕೆಲವು ಬದಲಾವಣೆ ಮಾಡಲಾಗುತ್ತದೆ. ಕೆಲಸದಿಂದ ವಜಾಗೊಳಿಸುವುದರಿಂದ ನಮಗೆ ಲಾಭದಾಯಕ ವ್ಯವಹಾರಗಳಲ್ಲಿ ಹೆಚ್ಚು ಹೂಡಿಕೆ ಮಾಡಲು ಸಹಾಯಕವಾಗುತ್ತದೆ. Lanzone ಒಟ್ಟು ಉದ್ಯೋಗ ಕಡಿತವು ಶೇಕಡ 50 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಯಾಹೂನಲ್ಲಿ ಶೇಕಡ 20ರಷ್ಟು ಉದ್ಯೋಗ ಕಡಿತ ಮಾಡಲಾಗುತ್ತದೆ ಎಂದು ವರದಿ ಉಲ್ಲೇಖಿಸಿದೆ. ಜಾಹೀರಾತು ಸಂಸ್ಥೆಯಾದ ಎಸ್‌ಎಸ್‌ಪಿಯನ್ನು ಸ್ಥಗಿತಗೊಳಿಸಲಾಗುತ್ತದೆ.
ಡಿಸ್ನಿಯಲ್ಲಿ 7,000 ಮಂದಿ ವಜಾ
ಇನ್ನು ಡಿಸ್ನಿ ಸಂಸ್ಥೆಯಲ್ಲಿ 7,000 ಮಂದಿಯನ್ನು ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಸಂಸ್ಥೆಯು ಈ ಹಿಂದೆ ಘೋಷಣೆ ಮಾಡಿದೆ. ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಸಂಸ್ಥೆಯು ಈ ನಿರ್ಧಾರವನ್ನು ಕೈಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಿದ ಸಿಇಒ ಬಾಬ್ ಈಗರ್, "ನಾವು ಈಗ ಎದುರಿಸುತ್ತಿರುವ ಸವಾಲನ್ನು ನಿರ್ವಹಣೆ ಮಾಡುವುದು ಮುಖ್ಯವಾಗುತ್ತದೆ. ನಾನು ಈ ನಿರ್ಧಾರವನ್ನು ಅತೀ ಸರಳವೆಂದು ಪರಿಗಣಿಸುವುದಿಲ್ಲ," ಎಂದು ತಿಳಿಸಿದ್ದಾರೆ.
ಈ ಹಿಂದೆ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಟ್ವಿಟ್ಟರ್‌ನಿಂದ ಹಿಡಿದು, ಗೂಗಲ್‌ವರೆಗೆ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತ ಮಾಡಿದೆ. ಜೂಮ್ ಸಂಸ್ಥೆ 1,300 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದೆ. ಸೇಲ್‌ಫೋರ್ಸ್‌ನಲ್ಲಿ ಶೇಕಡ 10ರಷ್ಟು ಅಂದರೆ 8000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದೆ. ಕಾಯಿನ್‌ಬೇಸ್ ಎಂಬ ಕ್ರಿಪ್ಟೋಕರೆನ್ಸಿ ಸಂಸ್ಥೆಯು ಶೇಕಡ 20ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಂದರೆ 950 ಮಂದಿಯನ್ನು ವಜಾಗೊಳಿಸಿದೆ. ಮೈಕ್ರೋಸಾಫ್ಟ್ 10000 ಮಂದಿಯನ್ನು ವಜಾಗೊಳಿಸಿದೆ. ಅಂದರೆ ಶೇಕಡ 5ರಷ್ಟು ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.
ಗೂಗಲ್ ಸಂಸ್ಥೆಯು ಶೇಕಡ 6ರಷ್ಟು ಅಂದರೆ 1200yhh0 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದೆ. ಸ್ಪಾಟಿಫೈ ಕೂಡಾ ಶೇಕಡ 6ರಷ್ಟು ಉದ್ಯೋಗ ಕಡಿತ ಮಾಡಿದ್ದು, 6600 ಮಂದಿಯನ್ನು ವಜಾಗೊಳಿಸಿದೆ. ಎಸ್‌ಎಪಿ ಶೇಕಡ 2.5ರಷ್ಟು ಉದ್ಯೋಗ ಕಡಿತಗೊಳಿಸಿ, 3000 ಮಂದಿಯನ್ನು ವಜಾಗೊಳಿಸಿದೆ. ಪೇ ಪಲ್ ಕೂಡಾ ಶೇಕಡ 7ರಷ್ಟು ಮಂದಿಯನ್ನು ಅಂದರೆ 2000 ಮಂದಿಯನ್ನು ವಜಾಗೊಳಿಸಿದೆ.


Click it and Unblock the Notifications