ಕೋವಿಡ್ ಸಂದರ್ಭದಲ್ಲಿ ಎಲ್ಲ ಬಹುತೇಕ ಎಲ್ಲ ಸಂಸ್ಥೆಗಳ ಕಚೇರಿಗಳನ್ನು ಮುಚ್ಚಲಾಗಿದ್ದು, ಆ ಸಂದರ್ಭದಲ್ಲಿ ಯಾವುದೇ ಸಭೆಯನ್ನು ನಡೆಸಬೇಕಾದರೂ ಆನ್‌ಲೈನ್ ಅನ್ನು ಅವಲಂಭಿಸಲಾಗಿತ್ತು. ಜೂಮ್ ಆಪ್ ಅತೀ ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ನಿರ್ಬಂಧಗಳು ಸಡಿಲಿಕೆ ಮಾಡಿದ ಬಳಿಕ ಜೂಮ್ ಬಳಕೆದಾರರ ಸಂಖ್ಯೆಯು ಕಡಿಮೆಯಾಗಿದೆ.
ಈ ನಡುವೆ ಜೂಮ್ ತನ್ನ ಸಂಸ್ಥೆಯಲ್ಲಿ ಉದ್ಯೋಗ ಕಡಿತವನ್ನು ಆರಂಭಿಸಲಾಗಿದೆ. ಜೂಮ್ ತನ್ನ ಸಂಸ್ಥೆಯಲ್ಲಿ 1300 ಮಂದಿಯನ್ನು ಕೆಲಸದಿಂದ ವಜಾಗೊಳಿಸಲಿದೆ. ಈ ನಿರ್ಧಾರವು ಜೂಮ್‌ನಲ್ಲಿನ ಸುಮಾರು ಶೇಕಡ 15ರಷ್ಟು ಉದ್ಯೋಗಿಗಳಿಗೆ ಪರಿಣಾಮ ಉಂಟು ಮಾಡಲಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಿಇಒ ಎರಿಕ್ ಯುಆನ್, "ಸಂಸ್ಥೆಯಲ್ಲಿ ಶೇಕಡ 15ರಷ್ಟು ಉದ್ಯೋಗ ಕಡಿತವನ್ನು ಮಾಡಲಾಗುತ್ತದೆ. ಅಂದರೆ ಸುಮಾರು 1300 ಮಂದಿ ತನ್ನ ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ. ನನ್ನ ವೇತನದಲ್ಲಿ ಶೇಕಡ 98ರಷ್ಟು ಕಡಿತ ಉಂಟಾಗಲಿದೆ," ಎಂದು ಹೇಳಿದ್ದಾರೆ. "ನಾವು ದಣಿವರಿಯದೆ ಕೆಲಸ ಮಾಡಿದ್ದೇವೆ. ಆದರೆ ನಮ್ಮಿಂದಲೂ ತಪ್ಪಾಗಿದೆ. ನಾವು ಪರಿಸ್ಥಿತಿಯನ್ನು ವಿಮರ್ಶೆ ಮಾಡಲು ಎಷ್ಟು ಸಮಯವನ್ನು ತೆಗೆದುಕೊಳ್ಳಬೇಕೋ, ಅಷ್ಟು ಸಮಯವನ್ನು ನಾವು ತೆಗೆದುಕೊಂಡಿಲ್ಲ," ಎಂದು ಕೂಡಾ ಉಲ್ಲೇಖಿಸಿದ್ದಾರೆ.

ಈ ಮೂಲಕ ಜೂಮ್ ಇತರೆ ಸಂಸ್ಥೆಗಳೊಂದಿಗೆ ಸೇರ್ಪಡೆಯಾಗಿದೆ. ಈ ಹಿಂದೆ ಸೋಮವಾರ ಡೆಲ್ ತನ್ನ 6500 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಅಂದರೆ ಶೇಕಡ 5ರಷ್ಟು ಉದ್ಯೋಗ ಕಡಿತ ಮಾಡಿದೆ. ಇನ್ನು ಈ ಹಿಂದೆ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. 2023ರಲ್ಲಿ ಮಾಡಲಾದ ಉದ್ಯೋಗ ಕಡಿತದ ಬಗ್ಗೆ ಇಲ್ಲಿದೆ ಮಾಹಿತಿ
2023ರಲ್ಲಿ ಮಾಡಲಾದ ಉದ್ಯೋಗ ಕಡಿತದ ಬಗ್ಗೆ ಮಾಹಿತಿ
ಅಮೆಜಾನ್‌ನಲ್ಲಿ 18000 ಸ್ಥಾನವನ್ನು ಕಡಿತಗೊಳಿಸಲಾಗಿದೆ. ಸೇಲ್‌ಫೋರ್ಸ್‌ನಲ್ಲಿ ಶೇಕಡ 10ರಷ್ಟು ಅಂದರೆ 8000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದೆ. ಕಾಯಿನ್‌ಬೇಸ್ ಎಂಬ ಕ್ರಿಪ್ಟೋಕರೆನ್ಸಿ ಸಂಸ್ಥೆಯು ಶೇಕಡ 20ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಂದರೆ 950 ಮಂದಿಯನ್ನು ವಜಾಗೊಳಿಸಿದೆ. ಮೈಕ್ರೋಸಾಫ್ಟ್ 10000 ಮಂದಿಯನ್ನು ವಜಾಗೊಳಿಸಿದೆ. ಅಂದರೆ ಶೇಕಡ 5ರಷ್ಟು ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.
ಇನ್ನು ಗೂಗಲ್ ಸಂಸ್ಥೆಯು ಶೇಕಡ 6ರಷ್ಟು ಅಂದರೆ 12000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದೆ. ಸ್ಪಾಟಿಫೈ ಕೂಡಾ ಶೇಕಡ 6ರಷ್ಟು ಉದ್ಯೋಗ ಕಡಿತ ಮಾಡಿದ್ದು, 6600 ಮಂದಿಯನ್ನು ವಜಾಗೊಳಿಸಿದೆ. ಎಸ್‌ಎಪಿ ಶೇಕಡ 2.5ರಷ್ಟು ಉದ್ಯೋಗ ಕಡಿತಗೊಳಿಸಿ, 3000 ಮಂದಿಯನ್ನು ವಜಾಗೊಳಿಸಿದೆ. ಪೇ ಪಲ್ ಕೂಡಾ ಶೇಕಡ 7ರಷ್ಟು ಮಂದಿಯನ್ನು ಅಂದರೆ 2000 ಮಂದಿಯನ್ನು ವಜಾಗೊಳಿಸಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications