ಗೃಹ ಸಾಲ ಪಡೆಯುವವರಿಗೆ ಅಲ್ ಐಸಿ ಹೌಸಿಂಗ್ ಫೈನಾನ್ಸ್ ನಿಂದ ಭರ್ಜರಿ ಸುದ್ದಿ ಇದೆ. ಯಾರ CIBIL ಸ್ಕೋರ್ 800 ಅಥವಾ ಅದಕ್ಕಿಂತ ಹೆಚ್ಚಿರುತ್ತದೋ ಅಂಥ ಹೊಸ ಗ್ರಾಹಕರಿಗೆ 7.5 ಪರ್ಸೆಂಟ್ ಬಡ್ಡಿ ದರದಲ್ಲಿ ಗೃಹ ಸಾಲ ನೀಡಲಾಗುತ್ತದೆ. ಮತ್ತು ಸಾಲದ ಮೊತ್ತ ಎಷ್ಟೇ ಆದರೂ ಇದೇ ಬಡ್ಡಿ ದರ ಇರುತ್ತದೆ. ಈ ಹಿಂದೆ ಇದೇ ಕ್ರೆಡಿಟ್ ಸ್ಕೋರ್ ಇರುವವರಿಗೆ ವಾರ್ಷಿಕ 8.10 ಪರ್ಸೆಂಟ್ ಬಡ್ಡಿ ಹಾಕಲಾಗುತ್ತಿತ್ತು.
ಇನ್ನು ಈಗ ಪಡೆಯುತ್ತಿರುವ ಗೃಹ ಸಾಲದ ಮೊತ್ತ ಹಾಗೂ ಒಂದೇ ಸಲಕ್ಕೆ ಪಾವತಿಸಲಾದ ಎಲ್ ಐಸಿ ಟರ್ಮ್ ಇನ್ಷೂರೆನ್ಸ್ ಮೊತ್ತ ಒಂದೇ ಆಗಿದ್ದರೆ ಅಂಥವರಿಗೆ ಬಡ್ಡಿ ದರವು 7.40 ಪರ್ಸೆಂಟ್ ಆಗಲಿದೆ. CIBIL ಸ್ಕೋರ್ ಗಮನಿಸಿ ಬಡ್ಡಿ ದರ ನಿಗದಿ ಆಗಿರುತ್ತದೆ. ತಕ್ಷಣದಿಂದಲೇ ಈ ಬಡ್ಡಿ ದರವು ಜಾರಿಗೆ ಬರಲಿದೆ.

ಎಚ್ ಡಿಎಫ್ ಸಿ ಬ್ಯಾಂಕ್ ಕೂಡ ಕೆಲ ದಿನದ ಹಿಂದೆ ಗೃಹ ಸಾಲದ ಬಡ್ಡಿ ದರವನ್ನು 15 ಬೇಸಿಸ್ ಪಾಯಿಂಟ್ ಇಳಿಕೆ ಮಾಡಿತ್ತು. ಅದಕ್ಕೂ ಮುನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಇಂಥದ್ದೇ ಕ್ರಮ ಕೈಗೊಂಡಿತ್ತು. ಮಾರ್ಚ್ 27ನೇ ತಾರೀಕು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 75 ಬೇಸಿಸ್ ಪಾಯಿಂಟ್ ರೆಪೋ ದರ ಹಾಗೂ 90 ಬೇಸಿಸ್ ಪಾಯಿಂಟ್ ರಿವರ್ಸ್ ರೆಪೋ ದರ ಇಳಿಕೆ ಮಾಡಿದೆ. ಈ ಕಾರಣಕ್ಕೆ ಸಾಲದ ಮೇಲಿನ ಬಡ್ಡಿ ದರದಲ್ಲೂ ಇಳಿಕೆ ಆಗಲಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications