ಭಾರತೀಯ ಜೀವ ವಿಮಾ ನಿಗಮ ಎಲ್‌ಐಸಿಯಿಂದ ಧನ್ ವರ್ಷ ಎಂಬ ಹೊಸ ಪ್ಲಾನ್ ಅನಾವರಣಗೊಂಡಿದೆ. ಎಲ್‌ಐಸಿಯ ಪ್ಲಾನ್ ನಂಬರ್ 866 ಆಗಿರುವ ಧನ್ ವರ್ಷ ಕ್ಲೋಸ್ ಎಂಡೆಡ್ ಪ್ಲಾನ್ ಆಗಿದೆ.
ಎಲ್‌ಐಸಿಯ ಧನ್ ವರ್ಷ ಪಾಲಿಸಿಯು ಷೇರುಪೇಟೆಗೆ ಜೋಡಿತವಾಗದ ಸಿಂಗಲ್ ಪ್ರೀಮಿಯಮ್ ಸೇವಿಂಗ್ ಸ್ಕೀಮ್ ಆಗಿದೆ. ಒಮ್ಮೆ ಪ್ರೀಮಿಯಂ ಕಟ್ಟಿದರೆ ಸಾಕು.
ಇದು ಓಪನ್ ಎಂಡೆಡ್ ಪ್ಲಾನ್ ಅಲ್ಲ. ಕ್ಲೋಸ್ ಎಂಡೆಡ್ ಎಂದರೆ ಇದು ಆಫರ್ ಬಿಡುಗಡೆಯಾದ ಸಮಯದಲ್ಲಿ ಮಾತ್ರ ಪ್ಲಾನ್ ಕೊಳ್ಳಲು ಸಾಧ್ಯ. ಸೀಮಿತ ಅವಧಿಯವರೆಗೆ ಮಾತ್ರ ಪ್ಲಾನ್ ಪಡೆಯುವ ಅವಕಾಶ ಇರುತ್ತದೆ. ಪ್ಲಾನ್ ಅವಧಿ ಮುಗಿದ ಬಳಿಕ, ಅಂದರೆ ಮೆಚ್ಯುರಿಟಿ ಆದ ನಂತರವಷ್ಟೇ ರಿಟರ್ನ್ ಹಣ ಮರಳಿಪಡೆಯಲು ಸಾಧ್ಯ. ಬೇರೆ ಹಲವು ಎಲ್‌ಐಸಿ ಪ್ಲಾನ್‌ಗಳಲ್ಲಿರುವಂತೆ ಕಾಲ ಕಾಲಕ್ಕೆ ಡಿವಿಡೆಂಡ್ ಇತ್ಯಾದಿ ಸಿಗುವುದಿಲ್ಲ.
ಆದರೆ, ಒಮ್ಮೆ ಹೂಡಿಕೆ ಮಾಡಿದರೆ ನಿಮ್ಮ ಹಣ ಎರಡು ಪಟ್ಟಿಗಿಂತ ಹೆಚ್ಚಾಗಿ ವಾಪಸ್ ಆಗಿ ಬರುತ್ತದೆ ಎಂಬುದು ಗೊತ್ತಿರಲಿ. ಹಾಗೆಯೇ, ಈ ಪ್ಲಾನ್ ಅವಧಿಯಲ್ಲಿ ನೀವು ಸಾಲ ಪಡೆದುಕೊಳ್ಳುವ ಅವಕಾಶವೂ ಉಂಟು.
ಎರಡು ಆಯ್ಕೆ
ಎಲ್‌ಐಸಿ ಧನ್ ವರ್ಷ ಯೋಜನೆಯಲ್ಲಿ ಆಯ್ಕೆಗಳಿವೆ. 10 ವರ್ಷ ಮತ್ತು 15 ವರ್ಷದ ಅವಧಿಯ ಪ್ಲಾನ್‌ಗಳನ್ನು ಆರಿಸಿಕೊಳ್ಳಬಹುದು. ಹಾಗೆಯೇ ಎರಡು ರೀತಿಯ ಪ್ಲಾನ್‌ಗಳೂ ಇವೆ. ಒಂದು ನಿಮಗೆ ಒಳ್ಳೆಯ ರಿಟರ್ನ್ ತಂದುಕೊಡುತ್ತದೆ. ಇನ್ನೊಂದು, ಅಕಾಲಿಕ ಸಾವಾದರೆ ನಿಮ್ಮ ಅವಲಂಬಿತರಿಗೆ ದೊಡ್ಡ ಮೊತ್ತದ ಪರಿಹಾರ ಕೊಡುತ್ತದೆ.
ಮೊದಲನೆಯ ಆಯ್ಕೆ
ಮೊದಲನೆಯ ಪ್ಲಾನ್‌ನಲ್ಲಿ ಪ್ರೀಮಿಯಂ ಹಣ 8,86,750 ರೂ ಇದೆ. ಜಿಎಸ್‌ಟಿ ಸೇರಿ 9,26,654 ರೂ ಕಟ್ಟಬೇಕಾಗುತ್ತದೆ. ಗ್ಯಾರಂಟಿ ರಿಟರ್ನ್ 11,08,438 ರೂ ಇದೆ. 15 ವರ್ಷದ ಬಳಿಕ ಪಾಲಿಸಿ ಮೆಚ್ಯೂರ್ ಆದಾಗ ನಿಮಗೆ 21,25,000 ರೂ ಸಿಗುತ್ತದೆ.
ಒಂದು ವೇಳೆ ಪಾಲಿಸಿ ಅವಧಿಯಲ್ಲಿ ಮೃತಪಟ್ಟರೆ ಕನಿಷ್ಠ 11,83,438 ರೂ ಹಣ ಲಭ್ಯವಾಗುತ್ತದೆ. ಪಾಲಿಸಿ ಆರಂಭವಾದ ಮೊದಲ ವರ್ಷದಿಂದಲೇ ಡೆತ್ ಬೆನಿಫಿಟ್ ಆರಂಭವಾಗುತ್ತದೆ.
ಎರಡನೆಯ ಆಯ್ಕೆ
ಎರಡನೇ ಪ್ಲಾನ್‌ನಲ್ಲಿ 7,98,700 ರೂಗಳ ಏಕಕಾಲದ ಪ್ರೀಮಿಯಮ್ ಅನ್ನು ಕಟ್ಟಬೇಕಾಗುತ್ತದೆ. ಜಿಎಸ್‌ಟಿ ಸೇರಿ ಇದು 8,34,642 ರೂ ಬೀಳುತ್ತದೆ. ಇದೂ ಕೂಡ 15 ವರ್ಷದವರೆಗೆ ಪ್ಲಾನ್ ಇರುತ್ತದೆ. ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರ ಸಾವಾದರೆ 80.27 ಲಕ್ಷ ರೂ ನಿಂದ 85.47 ಲಕ್ಷ ರೂವರೆಗೆ ಡೆತ್ ಬೆನಿಫಿಟ್ ಸಿಗುತ್ತದೆ.


Click it and Unblock the Notifications