For Quick Alerts
ALLOW NOTIFICATIONS  
For Daily Alerts

ಎಲ್‌ಐಸಿ ಸೇವಿಂಗ್ ಸ್ಕೀಮ್; ತಿಂಗಳಿಗೆ 2 ಸಾವಿರ ಹೂಡಿಕೆ; 48 ಲಕ್ಷ ರೂ ರಿಟರ್ನ್

By ಒನ್‌ಇಂಡಿಯಾ ಡೆಸ್ಕ್
|

ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸಂಸ್ಥೆ ಈಗಲೂ ಇನ್ಷೂರೆನ್ಸ್ ಕ್ಷೇತ್ರದಲ್ಲಿ ಪ್ರಾಬಲ್ಯ ಸ್ಥಿತಿಯಲ್ಲಿದೆ. ವಿಮಾ ಪಾಲಿಸಿಗೆ ಜನರು ಈಗಲೂ ಎಲ್‌ಐಸಿಯನ್ನು ಹೆಚ್ಚು ವಿಶ್ವಾಸದಿಂದ ಕಾಣುತ್ತಾರೆ. ಅದಕ್ಕೆ ತಕ್ಕಂತೆ ಎಲ್‌ಐಸಿಯಲ್ಲಿ ಬಹಳಷ್ಟು ಸ್ಕೀಮ್‌ಗಳಿವೆ. ನಾನಾ ರೀತಿಯ ಜನರ ಅಗತ್ಯಕ್ಕೆ ತಕ್ಕಂತಹ ಪಾಲಿಸಿಗಳಿವೆ. ಹೂಡಿಕೆಗೂ ಪ್ರಶಸ್ತವಾದ ಸ್ಕೀಮ್‌ಗಳಿವೆ. ತಿಂಗಳಿಗೆ 500 ರೂ ಕಟ್ಟಬಹುದಾದಂತ ಯೋಜನೆಗಳಿವೆ.

 

ಎಲ್‌ಐಸಿಯಲ್ಲಿ ಹೂಡಿಕೆಗೆಂದು ಹಲವು ಎಂಡೋಮೆಂಟ್ ಪಾಲಿಸಿಗಳಿವೆ. ಆಗಾಗ್ಗೆ ಮಾರುಕಟ್ಟೆ ಅಗತ್ಯಗಳಿಗೆ ತಕ್ಕಂತೆ ಎಲ್‌ಐಸಿ ಹೊಸ ಪಾಲಿಸಿಗಳನ್ನು ತರುತ್ತದೆ ಅಥವಾ ಪರಿಷ್ಕರಣೆ ಮಾಡುತ್ತದೆ.

ಈಗ ಎಲ್‌ಐಸಿ ಹೊಸ ಎಂಡೋಮೆಂಟ್ ಪಾಲಿಸಿ ಹೊರತಂದಿದ್ದು ಅದರಲ್ಲಿ ದಿನಕ್ಕೆ 74 ರೂನಂತೆ ಹೂಡಿಕೆ ಮಾಡಿದರೂ ಒಳ್ಳೆಯ ರಿಟರ್ನ್ ಸಿಗುತ್ತದೆ. ಇದು ಡಿವಿಡೆಂಡ್ ನೀಡುವ ನಿಶ್ಚಿತ ಠೇವಣಿ ಮತ್ತು ರಿಟರ್ನ್ ಇರುವ ಲೈಫ್ ಅಸೂರೆನ್ಸ್ ಪ್ಲಾನ್ ಆಗಿದೆ. ಇದರಲ್ಲಿ ಪಾಲಿಸಿದಾರನಿಗೆ ಪಾಲಿಸಿ ಮೆಚ್ಯೂರ್ ಆದ ಬಳಿಕ ದೊಡ್ಡ ಮೊತ್ತದ ಲಂಪ್‌ಸಮ್ ಮೊತ್ತ ಸಿಗುತ್ತದೆ. ಒಂದು ವೇಳೆ ಪಾಲಿಸಿದಾರ ಈ ಅವಧಿಯಲ್ಲಿ ಮೃತಪಟ್ಟರೆ ಅವರ ಕುಟುಂಬದವರಿಗೆ (ನಾಮಿನಿ ಮಾಡಿದವರಿಗೆ) ಹಣ ಸೇರುತ್ತದೆ.

ಎಲ್‌ಐಸಿ ಸ್ಕೀಮ್; ತಿಂಗಳಿಗೆ 2 ಸಾವಿರ ಹೂಡಿಕೆ; 48 ಲಕ್ಷ ರೂ ರಿಟರ್ನ್

ಈ ಎಲ್‌ಐಸಿ ಪಾಲಿಸಿಗೆ ಕನಿಷ್ಠ ವಯಸ್ಸು 8 ವರ್ಷವಾದರೆ ಗರಿಷ್ಟ ವಯಸ್ಸು 75 ವರ್ಷವಾಗಿದೆ. ಪಾಲಿಸಿ ಅವಧಿ 12 ವರ್ಷದಿಂದ ಆರಂಭವಾಗಿ 35 ವರ್ಷಗಳವರೆಗೂ ಇರುತ್ತದೆ. ಕನಿಷ್ಠ ಮೂಲ ಮೊತ್ತ 1 ಲಕ್ಷ ರೂ ಇದೆ.

ವಾರ್ಷಿಕ ಪ್ರೀಮಿಯಮ್ ಕೂಡ ಪಾಲಿಸಿ ಅವಧಿಗೆ ತಕ್ಕಂತೆ ವ್ಯತ್ಯಾಸವಾಗುತ್ತದೆ. 15 ವರ್ಷದ ಪಾಲಿಸಿಯನ್ನು ನೀವು ಆಯ್ದುಕೊಂಡರೆ ಕನಿಷ್ಠ 6,978 ರೂಪಾಯಿ ವಾರ್ಷಿಕ ಪ್ರೀಮಿಯಂ ಇರುತ್ತದೆ. 25 ವರ್ಷದ ಪಾಲಿಸಿ ಅವಧಿ ಇದ್ದರೆ ವರ್ಷಕ್ಕೆ ಕನಿಷ್ಠ ಪ್ರೀಮಿಯಂ 3930 ರೂ ಇರುತ್ತದೆ. 35 ವರ್ಷದ ಪಾಲಿಸಿ ಅವಧಿಗೆ ಕನಿಷ್ಠ ವಾರ್ಷಿಕ ಪ್ರೀಮಿಯಂ 2,754 ರೂ ಇದೆ.

ನೀವು ಒಂದು ಲಕ್ಷದ ಬೇಸಿಕ್ ಮೊತ್ತದ ಪಾಲಿಸಿ ಮಾಡಿಸಿದ್ದರೆ, ಅದು ಮೆಚ್ಯೂರ್ ಆದ ಬಳಿಕ ಬೇಸಿಮ್ ಮೊತ್ತ (1 ಲಕ್ಷ ರೂ) ಜೊತೆಗೆ ರಿವರ್ಷನರಿ ಬೋನಸ್‌ಗಳು ಹಾಗೂ ಹೆಚ್ಚುವರಿ ಬೋನಸ್ ಇವೆಲ್ಲವೂ ಸೇರಿ ಸಂದಾಯ ಆಗುತ್ತದೆ.

 

ಪಾಲಿಸಿಯ ಕನಿಷ್ಠ ಮೊತ್ತ 1 ಲಕ್ಷ ರೂ ಆದರೂ ಗರಿಷ್ಠ ಮೊತ್ತ 48 ಲಕ್ಷದವರೆಗೂ ಮಾಡಿಸಬಬಹುದು. ಅದರ ವಾರ್ಷಿಕ ಪ್ರೀಮಿಯಂ ಕೂಡ ಅಷ್ಟೇ ಹೆಚ್ಚಿರುತ್ತದೆ.

ಇನ್ನು ಪಾಲಿಸಿ ಅವಧಿಯಲ್ಲಿ ಆಕಸ್ಮಿಕ ಸಾವಾದರೆ, ಪಾಲಿಸಿದಾರ ಅಲ್ಲಿಯವರೆಗೆ ಕಟ್ಟಿದ ಪ್ರೀಮಿಯಂ ಮೊತ್ತಕ್ಕಿಂತ ಶೇ. 105ರಷ್ಟು ಮೊತ್ತವನ್ನು ನಾಮಿನಿಗೆ ನೀಡಲಾಗುತ್ತದೆ.

ನೀವು ಮಕ್ಕಳಿಗೆ ಈ ಪಾಲಿಸಿ ಮಾಡಿಸುತ್ತೀರೆಂದರೆ, ಆ ಮಗು ಕನಿಷ್ಠ 8 ವರ್ಷದ ವಯಸ್ಸಾಗಿದ್ದರೆ ಅದರ ಹೆಸರಿನಲ್ಲೇ ನೀವು ಪಾಲಿಸಿ ಮಾಡಿಸಬಹುದು. 8 ವರ್ಷಕ್ಕಿಂತ ಕಡಿಮೆ ವಯಸ್ಸಾಗಿದ್ದರೆ ಪೋಷಕರ ಹೆಸರಿನಲ್ಲಿ ಪಾಲಿಸಿ ತೆಗೆದುಕೊಂಡು ಆ ಮಗುವನ್ನು ನಾಮಿನಿ ಮಾಡಬಹುದು.

English summary

LIC Super Saver Scheme; How To Get Rs 48 Lakh Return By Investing 2000 Per Month

LIC's non-linked and participating new endowment plan. Know more about the investment amount and the return we can get.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X