ಆರ್‌ಬಿಐ ರೆಪೋ ದರವನ್ನು ಶೇಕಡ 4.90ಕ್ಕೆ ಏರಿಕೆ ಮಾಡಿದೆ. ಇದರಿಂದಾಗಿ ಸಾಲದ ಬಡ್ಡಿದರವು ಹೆಚ್ಚಳವಾಗಿದೆ. ಆದರೆ ಈ ಸಂದರ್ಭದಲ್ಲಿ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವು ಹೆಚ್ಚಳವಾಗಲಿದೆ. ಆದ್ದರಿಂದಾಗಿ ಹೂಡಿಕೆದಾರರಿಗೆ ಇದು ಉತ್ತಮ ಸಮಯವಾಗಿದೆ. ಸ್ಥಿರ, ಸುರಕ್ಷಿತ ಆದಾಯವನ್ನು ಮಾಡಲು ಬಯಸುವವರಿಗೆ ಇದು ಉತ್ತಮ ಸಮಯವಾಗಿದೆ.
ಆದರೆ ಈ ಸಂದರ್ಭದಲ್ಲಿ ನಾವು ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನೀವು ಹೂಡಿಕೆ ಮಾಡುವಾಗ ಅಲ್ಪಾವಧಿಯ ಹೂಡಿಕೆ ಮಾಡುವುದು ಉತ್ತಮವಾಗಿದೆ. ಸಾಮಾನ್ಯವಾಗಿ ರೆಪೋ ದರ ಏರಿಕೆಯಾದಾಗ ಬ್ಯಾಂಕುಗಳು ಮೊದಲು ಅಲ್ಪಾವಧಿಯ ಠೇವಣಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡುತ್ತದೆ. ಬಳಿಕ ದೀರ್ಘಾವಧಿ ಠೇವಣಿಯ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡುತ್ತದೆ. ಅದಕ್ಕಾಗಿ ಅಲ್ಪಾವಧಿಯ ಠೇವಣಿಗೆ ಹೂಡಿಕೆ ಮಾಡುವುದು ಉತ್ತಮವಾಗಿದೆ.
ಈ ನಡುವೆ ಪ್ರಮುಖ ಏಳು ಬ್ಯಾಂಕ್‌ಗಳು ಫಿಕ್ಸಿಡ್ ಡೆಪಾಸಿಟ್ ಮೇಲೆ ಅಧಿಕ ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ಅಲ್ಪಾವಧಿಯ ಸ್ಥಿರ ಠೇವಣಿಗಳ ಮೇಲೆ ಶೇಕಡಾ 6 ರಿಂದ 7 ರಷ್ಟು ಬಡ್ಡಿದರವನ್ನು ನೀಡುವ ಬ್ಯಾಂಕ್‌ಗಳ ಬಗ್ಗೆ ಮಾಹಿತಿ ನಾವು ಇಲ್ಲಿ ನೀಡಿದ್ದೇವೆ ಮುಂದೆ ಓದಿ...
ಬಂಧನ್ ಬ್ಯಾಂಕ್ ಬಡ್ಡಿದರ
ಕಳೆದ ತಿಂಗಳು, ಬಂಧನ್ ಬ್ಯಾಂಕ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಹಿರಿಯ ನಾಗರಿಕರು ಈಗ ಒಂದರಿಂದ ಎರಡು ವರ್ಷಗಳ ಠೇವಣಿಗಳ ಮೇಲೆ ಶೇಕಡಾ 6.50 ಬಡ್ಡಿದರವನ್ನು ಗಳಿಸಲು ಸಾಧ್ಯವಾಗಲಿದೆ. ಇನ್ನು ಹಿರಿಯ ನಾಗರಿಕರಿಗೆ 1 ವರ್ಷದಿಂದ 18 ತಿಂಗಳವರೆಗೆ ಮತ್ತು 18 ತಿಂಗಳಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ ಮೇಲೆ ಶೇಕಡ 6.50 ರ ಬಡ್ಡಿ ದರವನ್ನು ನೀಡುತ್ತದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ ಬಡ್ಡಿದರವೆಷ್ಟು?
ಕಳೆದ ತಿಂಗಳು, ಕೊಟಕ್ ಮಹೀಂದ್ರಾ ಬ್ಯಾಂಕ್ ತನ್ನ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಈಗ ಬ್ಯಾಂಕ್ ಹಿರಿಯ ನಾಗರಿಕರಿಗೆ ಒಂದರಿಂದ ಎರಡು ವರ್ಷಗಳ ಠೇವಣಿಗಳ ಮೇಲೆ ಶೇಕಡಾ 5.90 ರಿಂದ 6.10 ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಾಗೆಯೇ 365 ದಿನಗಳಿಂದ 389 ದಿನಗಳವರೆಗಿನ ಎಫ್‌ಡಿ ಮೇಲೆ ಶೇಕಡಾ 5.90 ಬಡ್ಡಿದರವನ್ನು ನೀಡುತ್ತದೆ. 390 ದಿನಗಳು (12 ತಿಂಗಳುಗಳು 25 ದಿನಗಳು) 23 ತಿಂಗಳಿಗಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ 6.00 ಶೇಕಡಾ ಬಡ್ಡಿದರ ಲಭ್ಯವಾಗಲಿದೆ. 23 ತಿಂಗಳಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ ಹಿರಿಯ ನಾಗರಿಕರಿಗೆ 6.10 ಶೇಕಡಾ ಬಡ್ಡಿ ದರವಿದೆ.
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಬಡ್ಡಿದರ ನೋಡಿ
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಇತ್ತೀಚೆಗೆ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಹಿರಿಯ ನಾಗರಿಕರು ಈಗ ಒಂದರಿಂದ ಎರಡು ವರ್ಷಗಳ ಠೇವಣಿಗಳ ಮೇಲೆ ಶೇಕಡಾ 6 ಕ್ಕಿಂತ ಹೆಚ್ಚು ಬಡ್ಡಿದರವನ್ನು ಪಡೆಯಬಹುದು. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಟರ್ಮ್ ಡೆಪಾಸಿಟ್ ಮೇಲೆ ಶೇಕಡಾ 6.50ರಷ್ಟು ಬಡ್ಡಿದರವನ್ನು ನೀಡುತ್ತದೆ. 1 ರಿಂದ 2 ವರ್ಷಗಳಲ್ಲಿ ಮೆಚ್ಯೂರ್ ಆಗುವ 2 ಕೋಟಿಗಿಂತ ಕಡಿಮೆ ಠೇವಣಿಯ ಮೇಲೆ ಕೂಡಾ ಶೇಕಡ 6.50ರಷ್ಟು ಬಡ್ಡಿದರವನ್ನು ನೀಡುತ್ತದೆ.
ಡಿಸಿಬಿ ಬ್ಯಾಂಕ್
ಕಳೆದ ತಿಂಗಳು, ಡಿಸಿಬಿ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಈಗ ಹಿರಿಯ ನಾಗರಿಕರಿಗೆ 1 ರಿಂದ 2 ವರ್ಷಗಳ ಠೇವಣಿಗಳ ಮೇಲೆ ಶೇಕಡಾ 6.50 ರಿಂದ 7 ರವರೆಗೆ ಬಡ್ಡಿದರವನ್ನು ನೀಡುತ್ತದೆ. ಇದಲ್ಲದೆ, ಬ್ಯಾಂಕ್ 12 ತಿಂಗಳ ಠೇವಣಿಗಳ ಮೇಲೆ ಶೇಕಡಾ 6.50ರಷ್ಟು ಬಡ್ಡಿದರವನ್ನು ನೀಡುತ್ತದೆ. 12 ತಿಂಗಳಿಂದ 15 ತಿಂಗಳಿಗಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ ಶೇಕಡಾ 6.25, 15 ತಿಂಗಳಿಂದ 18 ತಿಂಗಳೊಳಗಿನ ಠೇವಣಿಗಳ ಮೇಲೆ ಶೇಕಡಾ 6.60 ರ ಬಡ್ಡಿದರವನ್ನು ನೀಡುತ್ತದೆ. 18 ತಿಂಗಳಿಂದ 700 ದಿನಗಳಿಗಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ ಶೇ.7.00 ಮತ್ತು 2 ಕೋಟಿಗಿಂತ ಕಡಿಮೆ ಮೊತ್ತದ ಫಿಕ್ಸಿಡ್ ಡೆಪಾಸಿಟ್ ಮೇಲೆ 700 ದಿನಗಳಿಗಿಂತ ಹೆಚ್ಚಿನ ಠೇವಣಿಗಳ ಮೇಲೆ ಶೇ 7.00 ಬಡ್ಡಿದರವನ್ನು ನೀಡುತ್ತದೆ.
ಇಂಡಸ್‌ಇಂಡ್ ಬ್ಯಾಂಕ್ ಬಡ್ಡಿದರ
ಇಂಡಸ್‌ಇಂಡ್ ಬ್ಯಾಂಕ್ 2022 ರ ಜೂನ್ 1 ರಂದು ರೂ 2 ಕೋಟಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಈ ಪರಿಷ್ಕರಣೆಯ ಬಳಿಕ ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರು 1 ವರ್ಷದಿಂದ 2 ವರ್ಷಗಳ ಕೆಳಗಿನ ರೆಸಿಡೆಂಟ್ ಟರ್ಮ್ ಡೆಪಾಸಿಟ್ ಮೇಲೆ ಶೇಕಡಾ 6.50 ಬಡ್ಡಿದರವನ್ನು ಪಡೆಯಬಹದು. 2 ವರ್ಷದಿಂದ 2 ವರ್ಷ 6 ತಿಂಗಳ ಕೆಳಗಿನ ಎಫ್‌ಡಿ ಮೇಲೆ ಶೇಕಡ 7ರಷ್ಟು ಬಡ್ಡಿದರವನ್ನು ಪಡೆಯಬಹುದು.
ಯೆಸ್ ಬ್ಯಾಂಕ್ ಬಡ್ಡಿದರ
ಯೆಸ್ ಬ್ಯಾಂಕ್ ಜೂನ್ 6, 2022 ರಂದು ರೂ 2 ಕೋಟಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಬಡ್ಡಿದರ ಪರಿಷ್ಕರಣೆಯ ನಂತರ, ಬ್ಯಾಂಕ್ ಈಗ ಹಿರಿಯ ನಾಗರಿಕರಿಗೆ ಒಂದು ವರ್ಷದ ಎಫ್‌ಡಿ ಮೇಲೆ ಶೇಕಡ 6.25ರಷ್ಟು ಬಡ್ಡಿದರವನ್ನು ನೀಡುತ್ತದೆ. ಒಂದು ದಿನ ಮತ್ತು ಮೂರು ವರ್ಷಗಳಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಶೇಕಡ 6.50ರಷ್ಟು ಬಡ್ಡಿದರವನ್ನು ನೀಡುತ್ತದೆ.
ಆರ್‌ಬಿಎಲ್ ಬ್ಯಾಂಕ್ ಬಡ್ಡಿದರ
ಆರ್‌ಬಿಎಲ್ ಬ್ಯಾಂಕ್ ಬುಧವಾರ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಈಗ ಹಿರಿಯ ನಾಗರಿಕರು 1 ವರ್ಷದಿಂದ 2 ವರ್ಷಗಳಲ್ಲಿ ಮೆಚ್ಯೂರ್ ಆಗುವ 2 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲೆ ಶೇಕಡ 6.7ರಷ್ಟು ಬಡ್ಡಿದರವನ್ನು ಪಡೆಯುತ್ತಾರೆ. ಬ್ಯಾಂಕ್ 12 ತಿಂಗಳಿಂದ 15 ತಿಂಗಳೊಳಗಿನ ಎಫ್‌ಡಿ ಮೇಲೆ ಶೇಕಡಾ 6.75 ರ ಬಡ್ಡಿದರವನ್ನು ನೀಡುತ್ತದೆ. 15 ತಿಂಗಳ ಠೇವಣಿಗಳ ಮೇಲೆ ಶೇಕಡಾ 7.15 ರ ದರವನ್ನು ಮತ್ತು 15 ತಿಂಗಳ 1 ದಿನದಿಂದ 24 ತಿಂಗಳಿಗಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ ಶೇಕಡಾ 6.75 ರಷ್ಟು ಬಡ್ಡಿದರವನ್ನು ನೀಡುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications