ಹಲವಾರು ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ, "ವಿಶೇಷ ನಿಶ್ಚಿತ ಠೇವಣಿ" ಯೋಜನೆಗಳನ್ನು ಪ್ರಾರಂಭಿಸಿವೆ. ಮಾತ್ರವಲ್ಲದೇ ಈ ಬ್ಯಾಂಕ್ ಗಳು ಹಿರಿಯ ನಾಗರಿಕರಿಗೆ ಇರುವ ಆಕರ್ಷಕ ಬಡ್ಡಿ ದರಗಳ ಉಳಿತಾಯ ಯೋಜನೆಗಳ ಕುರಿತು ಪ್ರಚಾರ ಮಾಡುತ್ತಿವೆ.
ಗಮನಿಸಿಬೇಕಾದ ಅಂಶವೆಂದರೆ ಇಂತಹ ವಿಶೇಷ ನಿಶ್ಚಿತ ಠೇವಣಿ ಯೋಜನೆಯಡಿಯಲ್ಲಿ 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಫಿಕ್ಸೆಡ್ ಡೆಪಾಸಿಟ್ ಗಳು ತೆರೆಯುವ ಹಿರಿಯ ನಾಗರಿಕರಿಗೆ ಬಂಪರ್ ಬಡ್ಡಿ ದರಗಳನ್ನು ನೀಡುತ್ತದೆ. ಇದಲ್ಲದೆ, ಈ ಯೋಜನೆಗಳು ಪ್ರಾರಂಭವಾದಾಗಿನಿಂದ ಇದರ ಅಂತಿಮ ಗಡುವುಗಳನ್ನು ಬ್ಯಾಂಕ್‌ಗಳು ಹಲವಾರು ಬಾರಿ ಪರಿಷ್ಕರಿಸಿವೆ.

ಅಂತಹ ವಿಶೇಷ ಎಫ್‌ಡಿಗಳನ್ನು ಪ್ರಾರಂಭಿಸಿದ ಬ್ಯಾಂಕ್‌ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಸೇರಿವೆ.
ಎಸ್‌ಬಿಐ ವಿಕೇರ್ ಫಿಕ್ಸಿಡ್ ಡೆಪಾಸಿಟ್ ಸ್ಕೀಮ್:
ಇತ್ತೀಚೆಗೆ, ಎಸ್‌ಬಿಐ ಹಿರಿಯ ನಾಗರಿಕರಿಗಾಗಿ 'ಎಸ್‌ಬಿಐ ವೀಕೇರ್' ಫಿಕ್ಸಿಡ್ ಡೆಪಾಸಿಟ್ ಯೋಜನೆಯನ್ನು ಪ್ರಾರಂಭಿಸಿದ್ದು, ಇದರಲ್ಲಿ 5 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿಯಲ್ಲಿ 50 ಬಿಪಿಎಸ್ ಹೆಚ್ಚುವರಿ ಪ್ರೀಮಿಯಂ (ಸಾಮಾನ್ಯ ಎಫ್.ಡಿ ದರಗಳಲ್ಲಿ ಅಸ್ತಿತ್ವದಲ್ಲಿರುವ 50 ಬೇಸಿಸ್ ಪಾಯಿಂಟ್‌ಗಿಂತ ಹೆಚ್ಚು) ಪಾವತಿಸಲಾಗುತ್ತದೆ. ಎಸ್‌ಬಿಐ ವೀಕೇರ್ ಗಡುವನ್ನು 2023 ರ ಸೆ. 30ರವರೆಗೆ ವಿಸ್ತರಿಸಿದೆ. ಇಂತಹ ಠೇವಣಿಗಳ ಮೇಲೆ ಶೇಕಡ 7.50 ಬಡ್ಡಿಯನ್ನು ನೀಡುತ್ತದೆ.
ಎಚ್‌ಡಿಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆ:
ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ 5 ವರ್ಷ 1 ದಿನದಿಂದ 10 ವರ್ಷಗಳ ಅವಧಿಗೆ 25 ಬಿಪಿಎಸ್ ಹೆಚ್ಚುವರಿ ಪ್ರೀಮಿಯಂನೊಂದಿಗೆ ವಿಶೇಷ ಎಫ್‌ಡಿ ಯೋಜನೆಯನ್ನು ಪ್ರಾರಂಭಿಸಿದೆ. 5 ವರ್ಷಗಳು ಮತ್ತು 1 ದಿನದಿಂದ 10 ವರ್ಷಗಳ ನಡುವಿನ ಅವಧಿಯಲ್ಲಿ ಹಿರಿಯ ನಾಗರಿಕರಿಗೆ ಶೇಕಡ 7.75 ಬಡ್ಡಿದರವನ್ನು ನೀಡುತ್ತದೆ ಎಂದು ಬ್ಯಾಂಕ್ ಹೇಳಿದೆ.
ಈ ನಿರ್ದಿಷ್ಟ ಎಫ್‌ಡಿ ಯೋಜನೆಯು 7 ನವೆಂಬರ್ 2023 ರವರೆಗೆ ಮಾನ್ಯವಾಗಿರುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ 5 ವರ್ಷ 1 ದಿನದಿಂದ 10 ವರ್ಷಗಳ ಅವಧಿಗೆ 25 ಬಿಪಿಎಸ್ ಹೆಚ್ಚುವರಿ ಪ್ರೀಮಿಯಂನೊಂದಿಗೆವಿಶೇಷ ಎಫ್‌ಡಿ ಯೋಜನೆಯನ್ನು ಪ್ರಾರಂಭಿಸಿದೆ. 5 ವರ್ಷಗಳು ಮತ್ತು 1 ದಿನದಿಂದ 10 ವರ್ಷಗಳ ನಡುವಿನ ಅವಧಿಯಲ್ಲಿ ವಯಸ್ಸಾದವರಿಗೆ ಶೇಕಡ 7.75 ಬಡ್ಡಿದರವನ್ನು ನೀಡುತ್ತದೆ ಎಂದು ಬ್ಯಾಂಕ್ ಹೇಳಿದೆ. ಈ ನಿರ್ದಿಷ್ಟ ಎಫ್‌ಡಿ ಯೋಜನೆಯು 2023 ರ ನವೆಂಬರ್ 7ರವರೆಗೆ ಮಾನ್ಯವಾಗಿರುತ್ತದೆ.
ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ ಎಫ್‌ಡಿ ಯೋಜನೆ:
ಈ ಯೋಜನೆಯ ಮೂಲಕ, ಹಿರಿಯ ನಾಗರಿಕರು ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ ಎಫ್‌ಡಿಯಲ್ಲಿ ಹೂಡಿಕೆ ಮಾಡಿದರೆ ಶೇಕಡ 7.5 ರ ಬಡ್ಡಿದರವನ್ನು ಪಡೆಯಬಹುದು.
ಐಡಿಬಿಐ ಅಮೃತ್ ಮಹೋತ್ಸವ ಎಫ್‌ಡಿ ಯೋಜನೆ:
ಇನ್ನು ಐಡಿಬಿಐ ಬ್ಯಾಂಕ್ ಕೂಡಾ ಹಿರಿಯ ನಾಗರಿಕರಿಗಾಗಿ ಸೀಮಿತ ಅವಧಿಗೆ ವಿಶೇಷ ಎಫ್‌ಡಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು 'ಅಮೃತ್ ಮಹೋತ್ಸವ ಎಫ್‌ಡಿ' ಎಂದು ಕರೆಯಲಾಗುತ್ತದೆ. ಈ ಯೋಜನೆಯನ್ನು 375 ದಿನಗಳವರೆಗೆ ಪ್ರಾರಂಭಿಸಲಾಗಿದೆ. ಅಮೃತ್ ಮಹೋತ್ಸವ ಎಫ್‌ಡಿ ಯೋಜನೆಯ ಭಾಗವಾಗಿ, ಹಿರಿಯ ನಾಗರಿಕರು 375 ದಿನ ಶೇಕಡ 7.60 ಬಡ್ಡಿದರ ಮತ್ತು 444 ದಿನಗಳವರೆಗೆ ಶೇಕಡ 7.65 ಬಡ್ಡಿದರ ಪಡೆಯುತ್ತಾರೆ.
ಆಸಕ್ತಿದಾಯಕ ವಿಚಾರವೆಂದರೆ ಬ್ಯಾಂಕ್‌ನ ನಿಶ್ಚಿತ ಠೇವಣಿ (ಎಫ್‌ಡಿ)ಯ ಬಡ್ಡಿದರಗಳು ಗರಿಷ್ಠ ಮಟ್ಟದಲ್ಲಿದ್ದು ಈ ದರಗಳು ಮತ್ತಷ್ಟು ಹೆಚ್ಚಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೂ ಆರ್‌ಬಿಐ ಸತತ ಮೂರನೇ ಬಾರಿಗೆ ದರದದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಕಾರಣ ಬ್ಯಾಂಕ್‌ಗಳು ಈ ಡೆಪಾಸಿಟ್‌ಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.


Click it and Unblock the Notifications