ಪ್ರಯಾಣದಲ್ಲಿ ಉತ್ಸಾಹವನ್ನು ಹೊಂದಿರುವವರು ಪ್ರತಿ ವರ್ಷವೂ ಕೂಡಾ ಡಿಸೆಂಬರ್‌ನಲ್ಲಿ ಪ್ರವಾಸವನ್ನು ಮಾಡುವುದು ಸಾಮಾನ್ಯವಾಗಿದೆ. ಇಲ್ಲವಾದರೆ ಹೊಸ ವರ್ಷದಲ್ಲಿ ಪ್ರವಾಸವನ್ನು ಮಾಡುತ್ತಾರೆ. ಆದರೆ ಈ ಸಂದರ್ಭದಲ್ಲಿಯೇ ಹೆಚ್ಚು ಲಾಭದಾಯಕ ಮತ್ತು ಕೈಗೆಟುಕುವ ಆಫರ್‌ಗಳನ್ನು ಪಡೆಯಲು ಬಯಸುತ್ತಾರೆ.
ಹಾಗಿದ್ದಾಗ ನಾವು ನಾವು ಟ್ರಾವೆಲ್ ಕ್ರೆಡಿಟ್ ಕಾರ್ಡ್‌ಗಳ ಕ್ಷೇತ್ರದ ಬಗ್ಗೆ ತಿಳಿಯಲೇ ಬೇಕಾಗುತ್ತದೆ. ವೆಲ್‌ಕಮ್ ಆಫರ್ ಮತ್ತು ರಿವಾರ್ಡ್ ಪಾಯಿಂಟ್‌ಗಳಿಂದ ವಿಶೇಷ ಲೌಂಜ್ ಪ್ರವೇಶ ಮತ್ತು ಪ್ರಯಾಣ ವಿಮೆಯವರೆಗೆ ಬಹು ಪ್ರಯೋಜನವನ್ನು ನೀವು ಪಡೆಯಬಹುದಾಗಿದೆ. ನಾವು 2024 ರ ಸಮೀಪಿಸುತ್ತಿರುವಂತೆ, ನಿಮ್ಮ ಪ್ರಯಾಣದ ಅನುಭವವನ್ನು ಹೆಚ್ಚಿಸುವ ಟಾಪ್ 10 ಟ್ರಾವೆಲ್ ಕ್ರೆಡಿಟ್ ಕಾರ್ಡ್‌ಗಳ ಪಟ್ಟಿಯನ್ನು ಕೆಳಗೆ ನೀಡಿದ್ದೇವೆ, ಮುಂದೆ ಓದಿ...

1. ಎಚ್‌ಡಿಎಫ್‌ಸಿ ಬ್ಯಾಂಕ್ ಸುಪರಿಯಾ ಕ್ರೆಡಿಟ್ ಕಾರ್ಡ್
ಎಚ್‌ಡಿಎಫ್‌ಸಿ ಬ್ಯಾಂಕ್ ಸುಪರಿಯಾ ಕಾರ್ಡ್ ಊಟ, ಪ್ರಯಾಣ ಮತ್ತು ಶಾಪಿಂಗ್‌ನಂತಹ ವೈವಿಧ್ಯಮಯ ಪ್ರಯೋಜನಗಳನ್ನು ಹೊಂದಿರುವ ಕಾರ್ಡ್ ಆಗಿದೆ. 1,000 ರಿವಾರ್ಡ್ ಪಾಯಿಂಟ್‌ಗಳ ಬೋನಸ್, ಊಟದ ಮೇಲೆ ಶೇಕಡ 50 ರಷ್ಟು ಹೆಚ್ಚುವರಿ ಪಾಯಿಂಟ್‌ಗಳು ಮತ್ತು ಅಂತರಾಷ್ಟ್ರೀಯ ಏರ್‌ಲೈನ್ ಟಿಕೆಟ್‌ಗಳಿಗೆ ಪಾಯಿಂಟ್‌ಗಳನ್ನು ರಿಡೀಮ್ ಮಾಡಬಹುದಾಗಿದೆ. ಇಂಧನ ಹೆಚ್ಚುವರಿ ಶುಲ್ಕವನ್ನು ಮನ್ನಾ ಪಡೆಯಬಹುದು. ವಾರ್ಷಿಕ ಶುಲ್ಕ ವಿನಾಯಿತಿಯೂ ಇದೆ.
2. ಆಕ್ಸಿಸ್ ಬ್ಯಾಂಕ್ ಮೈಲ್ಸ್ ಆಂಡ್ ಮೋರ್ ವರ್ಲ್ಡ್ ಕ್ರೆಡಿಟ್ ಕಾರ್ಡ್
ಆಕ್ಸಿಸ್ ಬ್ಯಾಂಕ್ ಮೈಲ್ಸ್ ಆಂಡ್ ಮೋರ್ ವರ್ಲ್ಡ್ ಕ್ರೆಡಿಟ್ ಕಾರ್ಡ್ ವಾರ್ಷಿಕ ಬೋನಸ್‌ಗಳು, ರಿಯಾಯಿತಿಯ ಊಟ ಮತ್ತು ಆದ್ಯತಾ ಪಾಸ್ ಲೌಂಜ್ ಅನ್ನು ನೀಡುತ್ತದೆ. ವೆಲ್‌ಕಮ್ ಬೋನಸ್‌ನಂತೆ 55,000 ಮೈಲುಗಳವರೆಗೆ ನೀಡುತ್ತದೆ. ಹಾಗೆಯೇ ನೀವು ಬಳಸಿದ್ದಂತೆ ಹಲವಾರು ಆಫರ್‌ಗಳು ಲಭ್ಯವಾಗಲಿದೆ.
3. ಆಕ್ಸಿಸ್ ಬ್ಯಾಂಕ್ ಟೈಟಾನಿಯಂ ಸ್ಮಾರ್ಟ್ ಟ್ರಾವೆಲರ್ ಕ್ರೆಡಿಟ್ ಕಾರ್ಡ್
ಆಕ್ಸಿಸ್ ಬ್ಯಾಂಕ್ ಟೈಟಾನಿಯಂ ಸ್ಮಾರ್ಟ್ ಟ್ರಾವೆಲರ್ ಕ್ರೆಡಿಟ್ ಕಾರ್ಡ್ ಎಡ್ಜ್ ಲಾಯಲ್ಟಿ ಪಾಯಿಂಟ್‌ಗಳು, ಹುಟ್ಟುಹಬ್ಬದ ವಹಿವಾಟಿನ ಮೇಲೆ 2x ರಿವಾರ್ಡ್‌ಗಳು ಮತ್ತು ಕಾಂಪ್ಲಿಮೆಂಟರಿ ಏರ್‌ಪೋರ್ಟ್ ಲಾಂಜ್ ಪ್ರವೇಶವನ್ನು ಒದಗಿಸುತ್ತದೆ.
4. ಯಾತ್ರಾ ಎಸ್‌ಬಿಐ ಕಾರ್ಡ್
ಯಾತ್ರಾ ಎಸ್‌ಬಿಐ ಕಾರ್ಡ್ ನಿರ್ದಿಷ್ಟವಾಗಿ ದೇಶೀಯ ಪ್ರಯಾಣಿಕರಿಗೆ ಉತ್ತಮವಾಗಿದೆ. ಇದರ ಮೂಲಕ ವಿಮಾನಗಳು ಮತ್ತು ಹೋಟೆಲ್‌ಗಳಲ್ಲಿ ಗಣನೀಯ ರಿಯಾಯಿತಿಗಳನ್ನು ಪಡೆಯಬಹುದು. ವೆಲ್‌ಕಮ್ ವೋಚರ್‌ಗಳು, ವಿವಿಧ ವೆಚ್ಚಗಳ ರಿವಾರ್ಡ್ ಪಾಯಿಂಟ್‌ಗಳು ಮತ್ತು ಆಕರ್ಷಕ ವಾರ್ಷಿಕ ಶುಲ್ಕ ವಿನಾಯಿತಿ ಪಡೆಯಬಹುದು.
5. ಐಆರ್‌ಸಿಟಿಸಿ ಎಸ್‌ಬಿಐ ಕಾರ್ಡ್ ಪ್ರೀಮಿಯರ್
ಐಆರ್‌ಸಿಟಿಸಿ ಸಹಯೋಗದೊಂದಿಗೆ, ಐಆರ್‌ಸಿಟಿಸಿ ಎಸ್‌ಬಿಐ ಕಾರ್ಡ್ ಪ್ರೀಮಿಯರ್ ರೈಲ್ವೆ ಬುಕಿಂಗ್‌ಗಳು, ರಿವಾರ್ಡ್ ಪಾಯಿಂಟ್‌ಗಳು ಮತ್ತು ವಿಮಾ ಪ್ರಯೋಜನಗಳ ಮೇಲೆ ಕ್ಯಾಶ್‌ಬ್ಯಾಕ್ ನೀಡುತ್ತದೆ. ಕಾಂಪ್ಲಿಮೆಂಟರಿಯಾಗಿ ರೈಲು ಅಪಘಾತ ಮತ್ತು ವಿಮಾನ ಪ್ರಯಾಣ ಅಪಘಾತ ವಿಮೆ ಇದೆ. ವಹಿವಾಟು ಶುಲ್ಕ ಮನ್ನಾ ಮಾಡಲಾಗುತ್ತದೆ. ಈ ಕಾರ್ಡ್ ರೈಲು ಮತ್ತು ವಿಮಾನ ಪ್ರಯಾಣಿಕರಿಗೆ ಉತ್ತಮವಾಗಿದೆ.
6. ಆಕ್ಸಿಸ್ ಬ್ಯಾಂಕ್ ವಿಸ್ತಾರಾ ಸಿಗ್ನೇಚರ್
ವಿಸ್ತಾರಾ ಸಿಗ್ನೇಚರ್ ಕ್ರೆಡಿಟ್ ಕಾರ್ಡ್ ಪ್ರೀಮಿಯಂ ಎಕಾನಮಿ ಏರ್ ಟಿಕೆಟ್‌ಗಳು ಮತ್ತು ಕ್ಲಬ್ ವಿಸ್ತಾರಾ ಸಿಲ್ವರ್ ಮೆಂಬರ್‌ಶಿಪ್ ಮೇಲೆ 3,000 ವಿಸ್ತಾರಾ ಪಾಯಿಂಟ್ ನೀಡುತ್ತದೆ. ಈ ಕಾರ್ಡ್ ಬಳಸಿ ಊಟ ಮಾಡಿದರೆ ರಿಯಾಯಿತಿ ಇದೆ. ವಿಮಾ ರಕ್ಷಣೆಯಂತಹ ಹೆಚ್ಚುವರಿ ಪ್ರಯೋಜನವಿದೆ.
7. ಏರ್ ಇಂಡಿಯಾ ಎಸ್‌ಬಿಐ ಸಿಗ್ನೇಚರ್
ಪದೇ ಪದೇ ಪ್ರಯಾಣಿಸುವವರಿಗೆ ಏರ್ ಇಂಡಿಯಾ ಎಸ್‌ಬಿಐ ಸಿಗ್ನೇಚರ್ ಕಾರ್ಡ್ ಉತ್ತಮವಾಗಿದೆ. ಏರ್ ಇಂಡಿಯಾ ಎಸ್‌ಬಿಐ ಸಿಗ್ನೇಚರ್ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳು, ಲಾಂಜ್ ಪ್ರವೇಶ ಮತ್ತು ಆದ್ಯತಾ ಪಾಸ್ ಮೆಂಬರ್‌ಶಿಪ್ ನೀಡುತ್ತದೆ. ವೆಲ್‌ಕಮ್ ಗಿಫ್ಟ್, ವಾರ್ಷಿಕ ಬೋನಸ್ ಪಾಯಿಂಟ್ ನೀಡುತ್ತದೆ.
8. ಎಚ್‌ಡಿಎಫ್‌ಸಿ ರೆಗಾಲಿಯಾ
ಎಚ್‌ಡಿಎಫ್‌ಸಿ ರೆಗಾಲಿಯಾ ಪ್ರಯಾಣಕ್ಕೆ ಉತ್ತಮ ಕ್ರೆಡಿಟ್ ಕಾರ್ಡ್ ಆಗಿದೆ. ಲೌಂಜ್ ಪ್ರವೇಶ, ಕನ್ಸೈರ್ಜ್ ಸೇವೆಗಳು ಮತ್ತು ಸಮಗ್ರ ವಿಮಾ ರಕ್ಷಣೆಯನ್ನು ನೀಡುತ್ತದೆ. ಲೌಂಜ್ ಪ್ರವೇಶ ಪ್ರೋಗ್ರಾಂ ಅನ್ನು ಅಪ್‌ಡೇಟ್ ಮಾಡಲಾಗಿದ್ದರೂ, ಆದ್ಯತಾ ಪಾಸ್ ಸದಸ್ಯತ್ವ ಮತ್ತು ಜೊಮಾಟೊ ಗೋಲ್ಡ್ ಸೇರಿದಂತೆ ಇನ್ನೂ ಹಲವಾರು ಪ್ರಯೋಜನವಿದೆ.
9. ಎಸ್‌ಬಿಐ ಕಾರ್ಡ್ ಎಲೈಟ್
ಎಸ್‌ಬಿಐ ಕಾರ್ಡ್ ಎಲೈಟ್ ಇ-ಗಿಫ್ಟ್ ವೋಚರ್‌ಗಳು, ಚಲನಚಿತ್ರ ಟಿಕೆಟ್‌ಗಳು ಮತ್ತು ಡಿಪಾರ್ಟ್‌ಮೆಂಟ್ ಸ್ಟೋರ್, ಡೈನಿಂಗ್ ಮತ್ತು ದಿನಸಿ ಖರ್ಚುಗಳ ಮೇಲೆ ವಿಶೇಷ ಬಹುಮಾನಗಳನ್ನು ಒದಗಿಸುತ್ತದೆ. ಕಾರ್ಡ್ ಕಡಿಮೆ ಫಾರೆಕ್ಸ್ ಮಾರ್ಕ್ಅಪ್ ಶುಲ್ಕಗಳು ಮತ್ತು ಅಂತರಾಷ್ಟ್ರೀಯ ಮತ್ತು ದೇಶೀಯ ವಿಮಾನ ನಿಲ್ದಾಣದ ಲೌಂಜ್‌ಗೆ ಪ್ರವೇಶ ಅವಕಾಶ ನೀಡುತ್ತದೆ.
10. ಕ್ಲಬ್ ವಿಸ್ತಾರಾ ಐಡಿಎಫ್‌ಸಿ ಫಸ್ಟ್ ಕ್ರೆಡಿಟ್ ಕಾರ್ಡ್
ಈ ಕ್ರೆಡಿಟ್ ಕಾರ್ಡ್ ಪ್ರೀಮಿಯಂ ಎಕಾನಮಿ ಟಿಕೆಟ್ ವೋಚರ್‌ಗಳು ಮತ್ತು ಗಾಲ್ಫ್ ರೌಂಡ್‌ಗಳಿಗೆ ಲಾಂಜ್ ಪ್ರವೇಶ ಮತ್ತು ಟ್ರಿಪ್ ರದ್ದತಿ ವಿಮೆಯ ಪ್ರಯೋಜನ ನೀಡುತ್ತದೆ. ಆಕರ್ಷಕ ವೆಲ್‌ಕಮ್ ಪ್ರಯೋಜನಗಳು ನೀಡುತ್ತದೆ. ಕ್ಲಬ್ ವಿಸ್ತಾರಾ ಐಡಿಎಫ್‌ಸಿ ಫಸ್ಟ್ ಕ್ರೆಡಿಟ್ ಕಾರ್ಡ್ ಆಗಾಗ ಪ್ರಯಾಣಿಸುವವರಿಗೆ ಒಂದು ಸಮಗ್ರ ಪ್ಯಾಕೇಜ್ ಆಗಿದೆ.


Click it and Unblock the Notifications