ಸಂಬಳ ಪಡೆಯುವ ಉದ್ಯೋಗಿಗಳು ಸಾಮಾನ್ಯವಾಗಿ ನಿವೃತ್ತಿ ಯೋಜನೆ ಬಗ್ಗೆ ಚಿಂತೆ ಹೊಂದಿರುತ್ತಾರೆ. ನೀವು ಒಂದು ನಿರ್ದಿಷ್ಠ ವಯಸ್ಸಿನವರೆಗೆ ಮಾತ್ರ ಕೆಲಸ ಮಾಡಬಹುದು. ಇದಾದ ನಂತರ ನಿವೃತ್ತಿ ತೆಗೆದುಕೊಳ್ಳಬೇಕಾಗುತ್ತದೆ. ನಿವೃತ್ತಿಯ ನಂತರ ಖರ್ಚಿಗೆ ಹಣದ ಕೊರತೆಯಾಗದಂತೆ ನೋಡಿಕೊಳ್ಳಲು ನಿಯಮಿತ ಪಿಂಚಣಿ ಅಗತ್ಯ.
ಇದಕ್ಕಾಗಿ, ಎಲ್ಐಸಿಯ ಪಿಂಚಣಿ ಯೋಜನೆ ಉತ್ತಮ ಆಯ್ಕೆಯಾಗಿದೆ. ಎಲ್‌ಐಸಿ ತನ್ನ ಗ್ರಾಹಕರಿಗೆ ಅನೇಕ ಪಿಂಚಣಿ ಯೋಜನೆಗಳನ್ನು ನೀಡುತ್ತದೆ. ಇವುಗಳಲ್ಲಿ ಒಂದು ಎಲ್ಐಸಿ ಸರಳ ಪಿಂಚಣಿ ಯೋಜನೆ ಆಗಿದೆ. ಇದು ನಾನ್‌ಲಿಂಕ್ಡ್, ಸಿಂಗಲ್ ಪ್ರೀಮಿಯಂ, ವರ್ಷಾಶನ ಯೋಜನೆಯಾಗಿದೆ. ಇಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಪಿಂಚಣಿ ಪಡೆಯಬಹುದು.

ಪ್ರೀಮಿಯಂ ಅನ್ನು ಒಮ್ಮೆ ಮಾತ್ರ ಪಾವತಿಸಿ
ಎಲ್ಐಸಿಯ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆಯನ್ನು ಒಮ್ಮೆ ಮಾತ್ರ ಮಾಡಬೇಕು. ಹೂಡಿಕೆದಾರರು ಎಲ್ಐಸಿ ಸರಳ ಪಿಂಚಣಿ ಯೋಜನೆಯನ್ನು ಒಂಟಿಯಾಗಿ ಅಥವಾ ಅವರ ಸಂಗಾತಿಯೊಂದಿಗೆ ಜಂಠಿಯಾಗಿ ಮಾಡುವ ಆಯ್ಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ ವಯಸ್ಸು 40 ವರ್ಷ ಆಗಿದೆ. ಗರಿಷ್ಠ ವಯಸ್ಸು 80 ವರ್ಷ ಆಗಿದೆ. ಒಟ್ಟು ಮೊತ್ತದ ಹೂಡಿಕೆಯ ನಂತರ ನೀವು ಪಿಂಚಣಿ ಪಡೆಯಬಹುದು.
ಯೋಜನೆಯನ್ನು ತೆಗೆದುಕೊಳ್ಳುವ ಸಮಯದಲ್ಲಿ ಹೂಡಿಕೆದಾರರು ಒಂದು ದೊಡ್ಡ ಮೊತ್ತದ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ಯೋಜನೆಯ ವಿಶೇಷತೆಯೆಂದರೆ, ಒಬ್ಬ ವ್ಯಕ್ತಿಯು ಎಷ್ಟು ಪಿಂಚಣಿಯನ್ನು ಆರಂಭದಲ್ಲಿ ಪಡೆಯುತ್ತಾರೋ, ಅದೇ ಮೊತ್ತದ ಪಿಂಚಣಿಯು ಜೀವನದುದ್ದಕ್ಕೂ ಪಡೆಯುತ್ತದೆ. ಪ್ರಾರಂಭವಾದ 6 ತಿಂಗಳ ನಂತರ ಯಾವುದೇ ಸಮಯದಲ್ಲಿ ಈ ಪಾಲಿಸಿಯನ್ನು ಸರೆಂಡರ್ ಮಾಡಬಹುದು.
ಈ ಆಯ್ಕೆಗಳು ಯೋಜನೆಯಲ್ಲಿವೆ ನೋಡಿ
ಈ ಯೋಜನೆಯಲ್ಲಿ ನೀವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಿಂಚಣಿ ಪಡೆಯಬಹುದು. ಮಾಸಿಕ ಪಿಂಚಣಿ ಕನಿಷ್ಠ ಒಂದು ಸಾವಿರ ರೂಪಾಯಿ, ತ್ರೈಮಾಸಿಕ ಪಿಂಚಣಿ ಕನಿಷ್ಠ 3,000 ರೂಪಾಯಿ, ಅರ್ಧ ವಾರ್ಷಿಕ ಪಿಂಚಣಿ ಕನಿಷ್ಠ 6,000 ರೂಪಾಯಿ ಮತ್ತು ವಾರ್ಷಿಕ ಪಿಂಚಣಿ ಕನಿಷ್ಠ 12,000 ರೂಪಾಯಿ ಆಗಿದೆ.
ಈ ಯೋಜನೆಯಲ್ಲಿ ಗರಿಷ್ಠ ಪಿಂಚಣಿ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ನೀವು 42 ವರ್ಷ ವಯಸ್ಸಿನವರಾಗಿದ್ದರೆ ಮತ್ತು ನೀವು 30 ಲಕ್ಷ ರೂಪಾಯಿ ವರ್ಷಾಶನವನ್ನು ಖರೀದಿಸುತ್ತಿದ್ದರೆ, ನಿಮಗೆ ಮಾಸಿಕ 12,388 ರೂಪಾಯಿ ಪಿಂಚಣಿ ಸಿಗುತ್ತದೆ. ಈಗ ನೀವು ಪಿಂಚಣಿಯಲ್ಲಿ ಹೆಚ್ಚಿನ ಮೊತ್ತವನ್ನು ಪಡೆಯಲು ಬಯಸಿದರೆ, ಪ್ರೀಮಿಯಂ ಅಧಿಕ ಪಾವತಿ ಮಾಡಬೇಕಾಗುತ್ತದೆ.
ಸಾಲವೂ ಲಭ್ಯವಾಗುತ್ತೆ!
ನೀವು ಎಲ್‌ಐಸಿಯ ಸರಳ ಪಿಂಚಣಿ ಯೋಜನೆಯಡಿಯಲ್ಲಿಯೂ ಸಾಲವನ್ನು ತೆಗೆದುಕೊಳ್ಳಬಹುದು. ಯೋಜನೆ ಪ್ರಾರಂಭವಾದ ಆರು ತಿಂಗಳ ನಂತರ ಹೂಡಿಕೆದಾರರು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಯಾವುದೇ ಕಾಯಿಲೆಯ ಚಿಕಿತ್ಸೆಗೆ ಹಣದ ಅಗತ್ಯವಿದ್ದರೆ, ನೀವು ಪಾಲಿಸಿಯಲ್ಲಿ ಡೆಪಾಸಿಟ್ ಮಾಡಿದ ಹಣವನ್ನು ಸಹ ಹಿಂಪಡೆಯಬಹುದು. ಪಾಲಿಸಿಯನ್ನು ಸರೆಂಡರ್ ಮಾಡಿದಾಗ, ಗ್ರಾಹಕರು ಮೂಲ ಬೆಲೆಯ ಶೇಕಡ 95 ರಷ್ಟು ಮೊತ್ತ ಪಡೆಯಬಹುದು.


Click it and Unblock the Notifications