For Quick Alerts
ALLOW NOTIFICATIONS  
For Daily Alerts

ಚಕ್ರಬಡ್ಡಿ ಮನ್ನಾ ಯಾರಿಗೆ ಅನ್ವಯ, ಏನಿದರ ಲಾಭ?

|

ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ ಬ್ಯಾಂಕ್ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ ಮಾಡಲು ಕೇಂದ್ರ ಸರ್ಕಾರ ಸೂಚಿಸಿರುವುದು ತಿಳಿದಿರಬಹುದು. ಅಂದರೆ ಮೊರಾಟೋರಿಯಮ್ ಅವಧಿಯ ಸಾಲದ ಮೇಲಿನ ಚಕ್ರಬಡ್ಡಿ ಮೊತ್ತ 7,500 ಕೋಟಿ ರೂ ಹೊರೆಯನ್ನು ಸರ್ಕಾರವೇ ಹೊರುತ್ತಿದೆ. ಆದರೆ, ಈ ಅವಧಿಯ ಬಡ್ಡಿ ಮನ್ನಾ ಯಾರಿಗೆ ಅನ್ವಯ? ಯಾವೆಲ್ಲ ಸಾಲಕ್ಕೆ ಮನ್ನಾ ಜಾರಿಯಾಗಲಿದೆ? ಏನಿದರ ಲಾಭ? ಎಂಬ ವಿವರ ಇಲ್ಲಿದೆ..

ಯಾರಿಗೆ ಅನ್ವಯ?: ಬ್ಯಾಂಕ್, ಸಹಕಾರಿ ಬ್ಯಾಂಕ್ , ಹಣಕಾಸು ಸಂಸ್ಥೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಪಡೆದ 2ಕೋಟಿ ರು ತನಕ ಸಾಲ ಪಡೆದವರಿಗೆ ಇದು ಅನ್ವಯವಾಗಲಿದೆ. ಕೊವಿಡ್ 19 ಸಂದರ್ಭದಲ್ಲಿ ನಿಗದಿ ಅವಧಿಯಲ್ಲಿ ಪೇಮೆಂಟ್ ಮಾಡಿದವರಿಗೂ ಕ್ರೆಡಿಟ್ ಸಿಗಲಿದೆ.

2020ರ ಮಾರ್ಚ್ 1 ರಿಂದ ಆಗಸ್ಟ್ 31 ರ ಅವಧಿಯ ಬಡ್ಡಿ ಮೇಲಿನ ಬಡ್ಡಿ ಮನ್ನಾ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ಆದೇಶ(ಅಕ್ಟೋಬರ್ 14)ದ ಅನ್ವಯ ಸರ್ಕಾರ ಈ ವೆಚ್ಚವನ್ನು ಭರಿಸಲಿದೆ.

ಯಾವ ರೀತಿ ಸಾಲ?

ಯಾವ ರೀತಿ ಸಾಲ?

ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಅನುಭೋಗಿ ಸಾಲ, ಕ್ರೆಡಿಟ್ ಕಾರ್ಡ್ ಸಾಲ, ಶಿಕ್ಷಣ ಸಾಲ, ಗೃಹಪಯೋಗಿ ವಸ್ತುಗಳ ಮೇಲಿನ ಸಾಲ, ತುರ್ತು ಅಗತ್ಯ ಸಾಲ, ಎಂಎಸ್ಎಂಇ ಸಾಲ..ಇತ್ಯಾದಿಗೆ ಅನ್ವಯವಾಗಲಿದೆ.

ಯಾರಿಗೆ ಅನ್ವಯವಾಗುವುದಿಲ್ಲ?
ಆದರೆ, ಸಾಲದ ಮೊತ್ತ 2 ಕೋಟಿ ರು ಮೀರಿದಿದ್ದರೆ ಈ ಲಾಭ ಸಿಗುವುದಿಲ್ಲ. ಜೊತೆಗೆ ಕೆಟ್ಟ ಸಾಲ(ಎನ್ ಪಿಎ)ಗೆ ಬಡ್ಡಿ ಮನ್ನಾ ಸಿಗಲ್ಲ.

ಮೊರಾಟೋರಿಯಮ್ ಅವಧಿಯಲ್ಲಿ ಬಡ್ಡಿ ಕಟ್ಟದಿದ್ದರೆ?

ಮೊರಾಟೋರಿಯಮ್ ಅವಧಿಯಲ್ಲಿ ಬಡ್ಡಿ ಕಟ್ಟದಿದ್ದರೆ?

ಒಂದು ವೇಳೆ ಮೊರಟೋರಿಯಂ ಪೂರ್ಣ, ಭಾಗಶಃ ಪಡೆದಿರಲಿ, ಪಡೆಯದಿರಲಿ, ಬಡ್ಡಿ ಕಟ್ಟಿರಲಿ, ಕಟ್ಟಿರದೇ ಇರಲಿ ಎಕ್ಸ್ ಗ್ರೇಷಿಯ ಅನುಮತಿ ಇದ್ದು, ಬಡ್ಡಿಮನ್ನಾ ಪ್ರಯೋಜನ ಪಡೆಯಬಹುದು.

ಈ ಪ್ರಯೋಜನ ಯಾವಾಗ ಸಿಗಲಿದೆ?
ನವೆಂಬರ್ 5, 2020ರೊಳಗೆ ಸಾಲಗಾರರ ಖಾತೆಗೆ ಕ್ರೆಡಿಟ್ ಮಾಡಲು ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಕ್ರೆಡಿಟ್ ಕಾರ್ಡ್ ಸಾಲ

ಕ್ರೆಡಿಟ್ ಕಾರ್ಡ್ ಸಾಲ

ಕ್ರೆಡಿಟ್ ಕಾರ್ಡ್ ಸಾಲದ ವಿಷಯಕ್ಕೆ ಬಂದರೆ weighted average lending rate ಶುಲ್ಕ ಮನ್ನಾ ಆಗಲಿದೆ. ಅವಧಿ ಮುಗಿದ ಬಳಿಕ ಕಟ್ಟುವ ದಂಡ ಶುಲ್ಕ ಮರು ಪಾವತಿ ಇಲ್ಲ. ಕ್ರೆಡಿಟ್ ಕಾರ್ಡ್ ಸಾಲಗಾರರು ಯಾವುದೇ ಅರ್ಜಿ ಸಲ್ಲಿಸದಿದ್ದರೂ ಮೊತ್ತ ಖಾತೆಗೆ ಕ್ರೆಡಿಟ್ ಆಗಲಿದೆ.

ಏನಿದರ ಲಾಭ?

ಏನಿದರ ಲಾಭ?

ಚಕ್ರಬಡ್ಡಿ ಮನ್ನಾ ಪ್ರಕ್ರಿಯೆ, ರೀಪೇಮೆಂಟ್ ಪ್ರಕ್ರಿಯೆ ಮುಗಿದ ಬಳಿಕ ಸಾಲಗಾರರಿಗೆ ಬಾಕಿ ಮೊತ್ತದ ಚಿತ್ರಣ ಸಿಗಲಿದೆ. ಇದರಿಂದ ಇಎಂಐ ಉಳಿದ ಅವಧಿಗೆ ಕಡಿಮೆಯಾಗಲಿದೆ. ಜೊತೆಗೆ ಭವಿಷ್ಯದಲ್ಲಿ ರೀಪೇಮೆಂಟ್ ಕಿರಿಕಿರಿ ಇರುವುದಿಲ್ಲ.

English summary

Loan moratorium: Banks to repay interest even if borrowers have not applied for moratorium

Loan moratorium: Banks to repay interest even if borrowers have not applied for moratorium. borrowers who have been making timely payment pre-COVID-19 are eligible for this credit.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X