For Quick Alerts
ALLOW NOTIFICATIONS  
For Daily Alerts

ಬಡ್ಡಿ ಮನ್ನಾದ ಹಣ ಬ್ಯಾಂಕ್ ಖಾತೆಗೆ ವಾಪಸ್ ಬಂತಾ? ಪರೀಕ್ಷಿಸಲು ಹೀಗೆ ಮಾಡಿ

|

ಎಲ್ಲ ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು ಅರ್ಹ ಸಾಲಗಾರರಿಗೆ 'ಬಡ್ಡಿ ಮೇಲಿನ ಬಡ್ಡಿ' ಅಥವಾ ಚಕ್ರಬಡ್ಡಿಯನ್ನು ಹಿಂತಿರುಗಿಸಲು ಆರಂಭಿಸಿವೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಸಾಲ ಮರುಪಾವತಿಯಿಂದ ವಿನಾಯಿತಿ ಘೋಷಿಸಿದ ಅವಧಿಯಲ್ಲಿ ಬಡ್ಡಿಯ ಮೇಲೆ ಹಾಕಿದ್ದ ಬಡ್ಡಿಯನ್ನು ಸರ್ಕಾರದ ಸೂಚನೆಯಂತೆ ಅರ್ಹರಿಗೆ ಹಿಂತಿರುಗಿಸಲು ಬ್ಯಾಂಕ್ ಗಳು ಮುಂದಾಗಿವೆ.

ಸಾಮಾನ್ಯ ಬಡ್ಡಿ ಹಾಗೂ ಚಕ್ರ ಬಡ್ಡಿ ಮಧ್ಯದ ವ್ಯತ್ಯಾಸದ ಮೊತ್ತವನ್ನು ನವೆಂಬರ್ ಐದು ಅಥವಾ ಅದಕ್ಕಿಂತ ಮುಂಚಿತವಾಗಿ ಪಾವತಿಸುವಂತೆ ಸರ್ಕಾರ ಹೇಳಿತ್ತು. ಆದ್ದರಿಂದ ಎಲ್ಲ ಬ್ಯಾಂಕ್, ಹಣಕಾಸು ಸಂಸ್ಥೆಗಳು ಗುರುವಾರದ ದಿನದ ಕೊನೆಗೆ ಸಾಲಗಾರರ ಖಾತೆಗೆ ಜಮೆ ಆಗುವ ನಿರೀಕ್ಷೆ ಇದೆ.

ಬಡ್ಡಿ ಮನ್ನಾದ ಹಣ ಖಾತೆಗೆ ಜಮೆ ಮಾಡಲು ಆರಂಭಿಸಿದ ಬ್ಯಾಂಕ್ ಗಳುಬಡ್ಡಿ ಮನ್ನಾದ ಹಣ ಖಾತೆಗೆ ಜಮೆ ಮಾಡಲು ಆರಂಭಿಸಿದ ಬ್ಯಾಂಕ್ ಗಳು

ವೈಯಕ್ತಿಕ ಸಾಲಗಾರರು ಮತ್ತು ಎರಡು ಕೋಟಿ ರುಪಾಯಿ ತನಕ ಸಾಲ ಪಡೆದಂಥ ವರ್ತಕರು, ಉದ್ಯಮಿಗಳು ರೀಫಂಡ್ ಅಥವಾ ಕ್ಯಾಶ್ ಬ್ಯಾಕ್ ಗೆ ಅರ್ಹರು. ಯಾರು ಸಾಲ ವಿನಾಯಿತಿಯನ್ನು ಆಯ್ಕೆ ಮಾಡಿಕೊಂಡಿರಲಿಲ್ಲವೋ ಅಂಥವರು ಅರ್ಹತಾ ಮಾನದಂಡಗಳನ್ನು ಮುಟ್ಟಿದಲ್ಲಿ ಅವರಿಗೆ ರೀಫಂಡ್ ಮಾಡಲಾಗುತ್ತದೆ.

ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆಗೆ ಬ್ಯಾಂಕ್ ಗಳಿಂದ ಸಂದೇಶ

ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆಗೆ ಬ್ಯಾಂಕ್ ಗಳಿಂದ ಸಂದೇಶ

ಸದ್ಯಕ್ಕೆ ಸಾಲ ವಿನಾಯಿತಿ ಪ್ರಕರಣವು ಸುಪ್ರೀಂ ಕೋರ್ಟ್ ನಲ್ಲಿದೆ. ನವೆಂಬರ್ ಐದನೇ ತಾರೀಕಿನೊಳಗೆ ಹಣ ಹಿಂತಿರುಗಿಸುವ ಮಾತು ನೀಡಿತ್ತು ಸರ್ಕಾರ. ಹಾಗಿದ್ದಲ್ಲಿ ಗ್ರಾಹಕರ ಖಾತೆಗೆ ಕ್ಯಾಶ್ ಬ್ಯಾಕ್ ಅಥವಾ ರೀಫಂಡ್ ಬಂದರೆ ಹೇಗೆ ಗೊತ್ತಾಗುತ್ತದೆ? ಆಯಾ ಖಾತೆದಾರರ ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆಗೆ ಬ್ಯಾಂಕ್ ಗಳಿಂದ ಸಂದೇಶ ಬರುತ್ತದೆ.

ಅರ್ಹರ ಖಾತೆಗೆ ಹಣ ಜಮೆ ಮಾಡಲು ಆರಂಭ

ಅರ್ಹರ ಖಾತೆಗೆ ಹಣ ಜಮೆ ಮಾಡಲು ಆರಂಭ

ಆ ಸಂದೇಶದಲ್ಲಿ ನಿರ್ದಿಷ್ಟವಾಗಿ ಎಷ್ಟು ಮೊತ್ತದ ಕ್ಯಾಶ್ ಬ್ಯಾಕ್ ಅಥವಾ ರೀಫಂಡ್ ಎಂಬ ಮಾಹಿತಿ ಇರುತ್ತದೆ. ಕೆಲವು ಬ್ಯಾಂಕ್ ಗಳು ಈಗಾಗಲೇ, ನವೆಂಬರ್ ಮೂರನೇ ತಾರೀಕಿನಿಂದಲೇ ಅರ್ಹರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಆರಂಭ ಮಾಡಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಯಾವ ಸಾಲಗಳಿಗೆ ಇದು ಅನ್ವಯ?

ಯಾವ ಸಾಲಗಳಿಗೆ ಇದು ಅನ್ವಯ?

ಎಂಎಸ್ ಎಂಇ ಸಾಲಗಳು, ಶಿಕ್ಷಣ ಸಾಲ, ಹೌಸಿಂಗ್ ಲೋನ್, ಗೃಹಪಯೋಗಿ ವಸ್ತುಗಳಿಗಾಗಿ ಪಡೆದ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ ಸಾಲ, ವೈಯಕ್ತಿಕ ಹಾಗೂ ವೃತ್ತಿಪರರು ತೆಗೆದುಕೊಂಡ ಸಾಲ, ಕನ್ಸಮ್ಷನ್ ಸಾಲ ಹೀಗೆ ಎಂಟು ವಿಭಾಗಗಳನ್ನು ಮಾಡಿ, ಬಡ್ಡಿ ಮನ್ನಾ ಘೋಷಿಸಲಾಗಿದೆ. ಎರಡು ಕೋಟಿ ರುಪಾಯಿಯೊಳಗೆ ಪಡೆದುಕೊಂಡ ಸಾಲಕ್ಕೆ ಇದು ಅನ್ವಯ ಆಗುತ್ತದೆ.

ಸರ್ಕಾರದಿಂದ ಬ್ಯಾಂಕ್ ಗಳಿಗೆ ಹಣ

ಸರ್ಕಾರದಿಂದ ಬ್ಯಾಂಕ್ ಗಳಿಗೆ ಹಣ

ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಮೇಲೆ, ಅಂದರೆ ಖಾತೆದಾರರಿಗೆ ಬಡ್ಡಿ ಮನ್ನಾ ಮೊತ್ತವನ್ನು ಜಮೆ ಮಾಡಿದ ಮೇಲೆ ಸರ್ಕಾರದಿಂದ ಬ್ಯಾಂಕ್ ಗಳು ಕ್ಲೇಮ್ ಮಾಡುತ್ತವೆ. ಡಿಸೆಂಬರ್ ಹದಿನೈದನೇ ತಾರೀಕಿನೊಳಗೆ ಆ ಮೊತ್ತ ವಾಪಸಾಗಬಹುದು.

English summary

Loan Moratorium: How To Find Out If Bank Has Credited Interest On Interest Refund

Banks and non banking financial institutions started crediting interest on interest amount to eligible borrowers. How to know amount credited to bank account? Details here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X