ದೇಶದಲ್ಲಿ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು ಪರಿಷ್ಕರಣೆ ಮಾಡಿದೆ. ಕೆಲವು ಅವಧಿಯ ಎಂಸಿಎಲ್‌ಆರ್ ಅನ್ನು ಎಚ್‌ಡಿಎಫ್‌ಸಿ ಬ್ಯಾಂಕ್ 85 ಬೇಸಿಸ್ ಪಾಯಿಂಟ್‌ಗೆ (ಬಿಪಿಎಸ್) ಇಳಿಸಲಾಗಿದೆ. (ಇಲ್ಲಿ ಒಂದು ಬಿಪಿಎಸ್ ಅಂದರೆ ಶೇಕಡ 0.01 ಆಗಿದೆ). ಈ ಪರಿಷ್ಕೃತ ಬಡ್ಡಿದರವನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ. ಈ ನೂತನ ಬಡ್ಡಿದರವು ಏಪ್ರಿಲ್ 10, 2023ರಿಂದ ಜಾರಿಗೆ ಬರುತ್ತದೆ.
ಈ ದರ ಕಡಿತದ ಬಳಿಕ ಓವರ್‌ನೈಟ್ ಎಂಸಿಎಲ್‌ಆರ್ 85 ಮೂಲಾಂಕ ಇಳಿಕೆಯಾಗಿದ್ದು, ಶೇಕಡ 8.65ರಿಂದ ಶೇಕಡ 7.80ಕ್ಕೆ ತಲುಪಿದೆ. ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ ಒಂದು ತಿಂಗಳ ಎಂಸಿಎಲ್‌ಆರ್ ಅನ್ನು 70 ಬಿಪಿಎಸ್ ಇಳಿಸಲಾಗಿದ್ದು, ಎಂಸಿಎಲ್‌ಆರ್ ಶೇಕಡ 8.65ರಿಂದ ಶೇಕಡ 7.95ಕ್ಕೆ ತಲುಪಿದೆ. ಇನ್ನು ಇದೇ ಸಂದರ್ಭದಲ್ಲಿ 3 ತಿಂಗಳ ಎಂಸಿಎಲ್‌ಆರ್ ಅನ್ನು 40 ಬಿಪಿಎಸ್ ಕಡಿತಗೊಳಿಸಲಾಗಿದ್ದು ದರ ಶೇಕಡ 8.7ರಿಂದ ಶೇಕಡ 8.30ಕ್ಕೆ ತಲುಪಿದೆ.

6 ತಿಂಗಳ ಎಂಸಿಎಲ್‌ಆರ್ 10 ಮೂಲಾಂಕ ಇಳಿಕೆ ಮಾಡಲಾಗಿದೆ. ಅದರಿಂದಾಗಿ ಎಂಸಿಎಲ್‌ಆರ್ ದರವು ಶೇಕಡ 8.80ರಿಂದ ಶೇಕಡ 8.7ಕ್ಕೆ ತಲುಪಿದೆ. ಏಪ್ರಿಲ್ 10, 2023ರಿಂದ ಜಾರಿಗೆ ಬರಲಿರುವ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ಸ್ (ಎಂಸಿಎಲ್‌ಆರ್) ಅನ್ನು ನಾವು ಈ ಕೆಳಗೆ ನೀಡಿದ್ದೇವೆ.
ಎಚ್‌ಡಿಎಫ್‌ಸಿ ಬ್ಯಾಂಕ್ ನೂತನ ಎಂಸಿಎಲ್‌ಆರ್
ಓವರ್‌ನೈಟ್: ಶೇಕಡ 7.80
1 ತಿಂಗಳು: ಶೇಕಡ 7.95
3 ತಿಂಗಳು: ಶೇಕಡ 8.30
6 ತಿಂಗಳು: ಶೇಕಡ 8.70
1 ವರ್ಷ: ಶೇಕಡ 8.95
2 ವರ್ಷ: ಶೇಕಡ 9.05
3 ವರ್ಷ: ಶೇಕಡ 9.15
2016ರ ಏಪ್ರಿಲ್ ಬಳಿಕ ಎಲ್ಲ ಪ್ಲೋಟಿಂಗ್ ದರವು ಎಂಸಿಎಲ್‌ಆರ್ ಆಧಾರಿತವಾಗಿದೆ. ನಿಗದಿತ ಸಾಲಕ್ಕೆ ಹಣಕಾಸು ಸಂಸ್ಥೆ, ಬ್ಯಾಂಕುಗಳು ನೀಡುವ ಬಡ್ಡಿದರವೇ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ದರ (ಎಂಸಿಎಲ್‌ಆರ್) ಆಗಿದೆ. ಒಂದು ಸಾಲಕ್ಕೆ ಎಷ್ಟು ಕನಿಷ್ಠ ಬಡ್ಡಿದರವಿದೆ ಎಂಬುವುದನ್ನು ಎಂಸಿಎಲ್ಆರ್ ನಿರ್ಧಾರ ಮಾಡುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದರದ ಆಧಾರದಲ್ಲಿ ಬಡ್ಡಿದರವನ್ನು ನಿಗದಿ ಮಾಡಲಾಗುತ್ತದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಹೇಳಿಕೊಂಡಿದೆ.
ಸಾಲವನ್ನು ನೀಡುವ ಸಂದರ್ಭದಲ್ಲಿ ಬ್ಯಾಂಕ್ ಆ ದಿನದ ಎಂಸಿಎಲ್‌ಆರ್ ಅನ್ನು ನೋಡಿಕೊಂಡು ಬಡ್ಡಿದರವನ್ನು ನಿರ್ಧಾರ ಮಾಡಲಾಗುತ್ತದೆ. ಇತ್ತೀಚೆಗೆ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿಸಿದೆ. ಬಹುತೇಕ ಎಲ್ಲ ತಜ್ಞರುಗಳು ಆರ್‌ಬಿಐ ಏಪ್ರಿಲ್‌ನ ಎಂಪಿಸಿ ಸಭೆಯ ಬಳಿಕ ರೆಪೋ ದರವನ್ನು ಏರಿಕೆ ಮಾಡಲಿದೆ ಎಂಬ ಅಭಿಪ್ರಾಯವನ್ನು ಹೊಂದಿದ್ದರು. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಆಶ್ಚರ್ಯಕರ ನಿರ್ಧಾರವನ್ನು ಕೈಗೊಂಡಿದೆ. ಆರ್‌ಬಿಐ ರೆಪೋ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು ದರ ಶೇಕಡ 6.50 ಆಗಿದೆ.
ಮೇ ತಿಂಗಳಿನಿಂದ ಈವರೆಗೆ ರೆಪೋ ದರ ಏರಿಕೆ ಟೈಮ್‌ಲೈನ್
* 4, ಮೇ 2022: ಎಂಪಿಸಿಯ ಅನಿಗದಿತ ಸಭೆಯ ಬಳಿಕ ಆರ್‌ಬಿಐ 40 ಮೂಲಾಂಕ ದರ ಏರಿಕೆ ಮಾಡಿದೆ. ಏಪ್ರಿಲ್‌ವರೆಗೆ ಸತತ 10 ಬಾರಿ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಿತ್ತು. ಈ ಪರಿಷ್ಕರಣೆಯ ಬಳಿಕ ಶೇಕಡ 3.35ರಷ್ಟಿದ್ದ ರೆಪೋ ದರ ಶೇಕಡ 4.40ಕ್ಕೆ ಏರಿಕೆಯಾಗಿದೆ.
* 8, ಜೂನ್ 2022: ಮೇ ತಿಂಗಳಲ್ಲಿ ಅನಿಗದಿತ ಸಭೆಯನ್ನು ನಡೆಸಿ ಆರ್‌ಬಿಐ 40 ಬಿಪಿಎಸ್ ರೆಪೋ ದರ ಏರಿಕೆ ಮಾಡಿದ ಬಳಿಕ ಜೂನ್‌ನಲ್ಲಿಯೂ ಮತ್ತೆ ದರ ಹೆಚ್ಚಿಸಿದೆ. ಜೂನ್ ತಿಂಗಳಿನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಿಸಲಾಗಿದ್ದು ದರ ಶೇಕಡ 4.9ಕ್ಕೆ ತಲುಪಿದೆ.
* 5, ಆಗಸ್ಟ್ 2022: ಇದಾದ ಬಳಿಕ ನಂತರ ಆಗಸ್ಟ್‌ನಲ್ಲಿ ಎಂಪಿಸಿ ಸಭೆಯು ನಡೆದಿದೆ. ಈ ಸಭೆಯ ಬಳಿಕ ಆರ್‌ಬಿಐ ರೆಪೋ ದರವನ್ನು 50 ಬಿಪಿಎಸ್ ಹೆಚ್ಚಿಸಿದ್ದು, ದರ ಶೇಕಡ 5.4ಕ್ಕೆ ಏರಿಕೆಯಾಗಿದೆ.
* 30, ಸೆಪ್ಟೆಂಬರ್ 2022: ಸೆಪ್ಟೆಂಬರ್‌ನಲ್ಲಿ ಮತ್ತೆ ರೆಪೋ ದರವನ್ನು ಆರ್‌ಬಿಐ 50 ಬಿಪಿಎಸ್ ಹೆಚ್ಚಿಸಿದ್ದು ದರವು ಶೇಕಡ 5.9ಕ್ಕೆ ತಲುಪಿದೆ.
* 7, ಡಿಸೆಂಬರ್ 2022: ಸತತವಾಗಿ 50 ಮೂಲಾಂಕ ರೆಪೋ ದರ ಏರಿಕೆ ಮಾಡಿದ ಬಳಿಕ ಆರ್‌ಬಿಐ ಡಿಸೆಂಬರ್‌ನಲ್ಲಿ ದರ ಏರಿಕೆ ಕೊಂಚ ಕಡಿಮೆ ಮಾಡಿದೆ. ಡಿಸೆಂಬರ್‌ನಲ್ಲಿ ನಡೆದ ಎಂಪಿಸಿ ಸಭೆಯ ಬಳಿಕ ಆರ್‌ಬಿಐ 35 ಬಿಪಿಎಸ್ ದರ ಹೆಚ್ಚಿಸಿದ್ದು ರೆಪೋ ದರ ಶೇಕಡ 6.25ಕ್ಕೆ ತಲುಪಿದೆ.
* 8, ಫೆಬ್ರವರಿ 2023: ಫೆಬ್ರವರಿಯಲ್ಲಿ ಮತ್ತಷ್ಟು ಕಡಿಮೆ ದರ ಏರಿಕೆಯನ್ನು ಆರ್‌ಬಿಐ ಮಾಡಿದೆ. ಕೇಂದ್ರ ಬ್ಯಾಂಕ್ 25 ಬಿಪಿಎಸ್ ದರ ಹೆಚ್ಚಿಸಿದ್ದು, ರೆಪೋ ದರ ಶೇಕಡ 6.50ಕ್ಕೆ ತಲುಪಿದೆ.
* 6, ಏಪ್ರಿಲ್ 2023: ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿಸಿದ್ದು, ರೆಪೋ ದರ ಶೇಕಡ 6.50ಕ್ಕೆ ಆಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್‌ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್‌ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್‌ಬಿಐ ನಿರ್ಧಾರದ ಅಸಲಿ ಸತ್ಯ

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications