ಪ್ರತಿ ತಿಂಗಳ ಮೊದಲ ದಿನವೇ ತೈಲ ಹಾಗೂ ಅನಿಲ ಸಂಸ್ಥೆಗಳು ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡುತ್ತದೆ. ಕಳೆದ ಹಲವಾರು ತಿಂಗಳುಗಳಿಂದ ಅಡುಗೆ ಅನಿಲ ದರವನ್ನು ಸ್ಥಿರವಾಗಿರಿಸಲಾಗಿದ್ದು, ಇಂದು ಏರಿಕೆ ಮಾಡಲಾಗಿದೆ. ಮಾರ್ಚ್ 1, 2023ರಿಂದ ಜಾರಿಗೆ ಬರುವಂತೆ ಅಡುಗೆ ಅನಿಲ ದರವನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರಿಗರು ಪ್ರತಿ ಸಿಲಿಂಡರ್ 14.2 ಕೆಜಿ ಎಲ್‌ಪಿಜಿಗೆ 1,105.50 ರೂಪಾಯಿ ಪಾವತಿಸಬೇಕಾಗುತ್ತದೆ.
ಈ ಹಿಂದೆ ಎಲ್‌ಪಿಜಿ ದರವು 1,055.50 ರೂಪಾಯಿ ಆಗಿತ್ತು. ಆದರೆ ಮಾರ್ಚ್ 1ರಂದು 50 ರೂಪಾಯಿ ದರ ಏರಿಕೆ ಮಾಡಿದ ಬಳಿಕ ಎಲ್‌ಪಿಜಿ ದರ ಬೆಂಗಳೂರಿನಲ್ಲಿ 1,105.50 ರೂಪಾಯಿಗೆ ತಲುಪಿದೆ. ಇನ್ನು ಮಂಗಳೂರಿನಲ್ಲಿ ಈ ಹಿಂದೆ 1,053.50 ರೂಪಾಯಿ ಆಗಿದ್ದ ಅಡುಗೆ ಅನಿಲ ದರ ಈಗ 1,053.50 ಆಗಿದ್ದ ಅಡುಗೆ ಅನಿಲ ದರವು ಪ್ರಸ್ತುತ ದರ ಪರಿಷ್ಕರಣೆ ಮಾಡಿದ ಬಳಿಕ 1,103.50 ರೂಪಾಯಿಗೆ ಏರಿಕೆಯಾಗಿದೆ. ಇತರೆ ಪ್ರಮುಖ ನಗರಗಳ ದರ ಪಟ್ಟಿ ಈ ಕೆಳಗಿದೆ.

Rules Changes from March 2023 : ಮಾರ್ಚ್ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
ವಾಣಿಜ್ಯ ಎಲ್‌ಪಿಜಿ ದರ ಏರಿಕೆ
ವಾಣಿಜ್ಯ ಎಲ್‌ಪಿಜಿ ದರವನ್ನು ಕೂಡಾ ಹೆಚ್ಚಳ ಮಾಡಲಾಗಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು 350.50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರವು 2119.50 ರೂಪಾಯಿಗೆ ತಲುಪಿದೆ. ಇದಕ್ಕೂ ಮುನ್ನ ಹಲವಾರು ಬಾರಿ ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಿಸಲಾಗಿದೆ. ಒಟ್ಟಿನಲ್ಲಿ ಕಳೆದ 8 ವರ್ಷಗಳಲ್ಲಿ ಅಡುಗೆ ಅನಿಲ ದರವು ಭಾರೀ ಹೆಚ್ಚಳವಾಗಿದೆ. ನೂತನ ಅಡುಗೆ ಅನಿಲ ದರವು ಈ ಕೂಡಲೇ ಜಾರಿಗೆ ಬರಲಿದೆ.
ಈ ಹಿಂದಿನ ದರ, ನೂತನ ದರ ಹೇಗಿದೆ ನೋಡಿ
ನವದೆಹಲಿ: ಮಾರ್ಚ್ 1,103.00 ರೂ, ಫೆಬ್ರವರಿ 1,053.00 ರೂ
ಕೋಲ್ಕತ್ತಾ: ಮಾರ್ಚ್ 1,129.00 ರೂ, ಫೆಬ್ರವರಿ 1,079.00 ರೂ
ಮುಂಬೈ: ಮಾರ್ಚ್ 1,102.50 ರೂ, ಫೆಬ್ರವರಿ 1,052.50 ರೂ
ಚೆನ್ನೈ: ಮಾರ್ಚ್ 1,118.50 ರೂ, ಫೆಬ್ರವರಿ 1,068.50 ರೂ
ಬೆಂಗಳೂರು: ಮಾರ್ಚ್ 1,105.50 ರೂ, ಫೆಬ್ರವರಿ 1,055.50 ರೂ
ಭುವನೇಶ್ವರ: ಮಾರ್ಚ್ ₹ 1,129.00 ರೂ, ಫೆಬ್ರವರಿ 1,079.00 ರೂ
ಚಂಡೀಗಢ: ಮಾರ್ಚ್ 1,112.50 ರೂ, ಫೆಬ್ರವರಿ 1,062.50 ರೂ
ಹೈದರಾಬಾದ್: ಮಾರ್ಚ್ 1,155.00 ರೂ, ಫೆಬ್ರವರಿ 1,105.00 ರೂ
ಲಕ್ನೋ: ಮಾರ್ಚ್ 1,140.50 ರೂ, ಫೆಬ್ರವರಿ 1,090.50 ರೂ


Click it and Unblock the Notifications