ವರ್ಷದ ಎರಡು ತಿಂಗಳುಗಳು ಈಗಾಗಲೇ ಕಳೆದಿದೆ. ಈಗ ಫೆಬ್ರವರಿ ತಿಂಗಳು ಕೊನೆಯಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೊಸ ತಿಂಗಳ ಸ್ವಾಗತಕ್ಕೆ ನಾವು ಸಿದ್ಧವಾಗಿದ್ದೇವೆ. ಅಂದ ಹಾಗೆ ಈ ತಿಂಗಳು 28 ದಿನಗಳು ಮಾತ್ರ ಇದೆ. ಈ ತಿಂಗಳಲ್ಲಿ ಎಲ್‌ಪಿಜಿ ದರ ಸೇರಿದಂತೆ ಹಲವಾರು ಹಣಕಾಸು ಸಂಬಂಧಿತ ಬದಲಾವಣೆಗಳು ಆಗಲಿದೆ. ಹೊಸ ತಿಂಗಳಿನಲ್ಲಿ ಆಗುವ ಈ ಬದಲಾವಣೆಗಳು ಖಚಿತವಾಗಿಯೂ ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮ ಉಂಟು ಮಾಡಲಿದೆ.
ಪ್ರಮುಖವಾಗಿ ಹೊಸ ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಂಸ್ಥೆಗಳು ಎಲ್‌ಪಿಜಿ ದರ ಪರಿಷ್ಕರಣೆ ಮಾಡಲಿದೆ. ಬ್ಯಾಂಕಿಂಗ್, ಹಣಕಾಸು ಮತ್ತು ಇತರೆ ಸೆಕ್ಟರ್‌ಗಳಲ್ಲಿ ಮಾರ್ಚ್ 1ರಿಂದ ಹಲವಾರು ಬದಲಾವಣೆಗಳು ಆಗಲಿದೆ. ಈ ಹೊಸ ಬದಲಾವಣೆಗಳು ನಮ್ಮ ದಿನನಿತ್ಯದ ವಹಿವಾಟಿನ ಮೇಲೆ ಪ್ರಭಾವ ಬೀರಲಿದೆ. ಎಲ್‌ಪಿಜಿ ದರ ಏರಿಕೆ ಮಾತ್ರವಲ್ಲದೆ ಸಾಲವು ದುಬಾರಿಯಾಗಲಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...
ಇಎಂಐ ದುಬಾರಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ರೆಪೋ ದರವನ್ನು ಏರಿಸಿದೆ. ಸತತ ಆರನೇ ಬಾರಿ ದರ ಹೆಚ್ಚಿಸಲಾಗಿದ್ದು, ಪ್ರಸ್ತುತ ದರ ಶೇಕಡ 6.50ಕ್ಕೆ ತಲುಪಿದೆ. ಇದಾದ ಬಳಿಕ ಹಲವಾರು ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಮಾತ್ರವಲ್ಲದೆ ಎಂಸಿಎಲ್‌ಆರ್ ಅನ್ನು ಕೂಡಾ ಏರಿಕೆ ಮಾಡಿದೆ. ಇದು ನೇರವಾಗಿ ಜನರ ಸಾಲ ಹಾಗೂ ಇಎಂಐ ಮೇಲೆ ಪ್ರಭಾವ ಉಂಟು ಮಾಡಲಿದೆ. ಸಾಲದ ಬಡ್ಡಿದರವು ಏರಿಕೆಯಾಗಲಿದ್ದು, ಇದರಿಂದಾಗಿ ಜನಸಾಮಾನ್ಯರಿಗೆ ಇಎಂಐ ಹೊರೆ ಹೆಚ್ಚಾಗಲಿದೆ.
ಸಿಎನ್‌ಜಿ, ಎಲ್‌ಪಿಜಿ ಸಿಲಿಂಡರ್ ದರ ಏರಿಕೆ
ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ, ಸಿಎನ್‌ಜಿ ಹಾಗೂ ಪಿಎನ್‌ಜಿ ಗ್ಯಾಸ್ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಬೆಲೆ ಏರಿಕೆ ಅಥವಾ ಬೆಲೆ ಇಳಿಕೆ ಮಾಡಲಾಗುತ್ತದೆ ಅಥವಾ ಸ್ಥಿರತೆ ಕಾಯ್ದುಕೊಳ್ಳಲಾಗುತ್ತದೆ. ಕಳೆದ ತಿಂಗಳು ಎಲ್‌ಪಿಜಿ ಸಿಲಿಂಡರ್ ದರವನ್ನು ಏರಿಕೆ ಮಾಡಲಾಗಿಲ್ಲ. ವಾಣಿಜ್ಯ ಸಿಲಿಂಡರ್ ದರವನ್ನು ನಿರಂತರವಾಗಿ ಏರಿಸಲಾಗುತ್ತಿದೆ. ಆದರೆ ಈ ಬಾರಿ ಕೆಲವು ಹಬ್ಬಗಳು ಇರುವ ಕಾರಣದಿಂದಾಗಿ ಎಲ್‌ಪಿಜಿ ದರವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಪ್ಯಾನ್ ಆಧಾರ್ ಲಿಂಕಿಂಗ್ ಗಡುವು
ಆದಾಯ ತೆರಿಗೆ ಇಲಾಖೆಯು ಪ್ಯಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಹೊಂದಿರುವವರಿಗೆ ಇತ್ತೀಚೆಗೆ ಸುತ್ತೋಲೆಯನ್ನು ಜಾರಿ ಮಾಡಿದೆ. ಪ್ಯಾನ್ ಹೊಂದಿರುವವರು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಮುಖ್ಯವಾಗಿದೆ. ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಮಾರ್ಚ್ 31, 2023 ಕೊನೆಯ ದಿನಾಂಕವಾಗಿದೆ. ಅದಕ್ಕೂ ಮುನ್ನ ನೀವು ಪ್ಯಾನ್ ಕಾರ್ಡ್- ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.
More From GoodReturns

ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಉಳಿಸುವುದು ಹೇಗೆ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರಿಗೆ ಈಗ ಯಾವುದು ಬೆಸ್ಟ್?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ, ಈಗ ಎಲ್ಲಿ ಹೂಡಿಕೆ ಮಾಡಬೇಕು?

ಹೂಡಿಕೆದಾರರೇ ಎಚ್ಚರ! ನಿಮ್ಮ ಹಣಕ್ಕೆ ಯಾವುದು ಬೆಸ್ಟ್ ಆಯ್ಕೆ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರಿಗೆ ಈಗ ಅಸಲಿ ಲಾಭ ಎಲ್ಲಿ?

SIP ಹೂಡಿಕೆ ದಾಖಲೆ: ನಿಮ್ಮ ಹಣ ಸುರಕ್ಷಿತವಾಗಿದೆಯೇ?

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಷೇರು ಮಾರುಕಟ್ಟೆ ರಜೆ: ನಿಮ್ಮ ಹೂಡಿಕೆಯನ್ನು ದ್ವಿಗುಣಗೊಳಿಸುವುದು ಹೇಗೆ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

SBI ಕ್ಯಾಶ್ಬ್ಯಾಕ್ ಕಾರ್ಡ್ ಬಳಕೆದಾರರೇ, ನಿಮ್ಮ ಹಣಕ್ಕೆ ಕುತ್ತು ಬಂದಿದೆ!

ಚಿನ್ನದ ಹೂಡಿಕೆ: ಗೊಂದಲ ಬಿಡಿ, ಈ ದಾರಿ ಬೆಸ್ಟ್!



Click it and Unblock the Notifications