ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2023ರಂದು ಹಣಕಾಸು ವರ್ಷ 2023-24ರ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಈ ಯೋಜನೆಗಳನ್ನು ಮಾಡುವಾಗ ಸಚಿವೆ ಮಹಿಳಾ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಕೂಡಾ ಘೋಷಣೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಈ ಸಣ್ಣ ಉಳಿತಾಯ ಯೋಜನೆಯಾದ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು 2023, ಏಪ್ರಿಲ್ 2023ರಿಂದ ಜಾರಿಗೆ ಬರುತ್ತದೆ. ಅಂಚೆ ಕಚೇರಿಗಳಲ್ಲಿ ಈ ಯೋಜನೆಯು ಲಭ್ಯವಿರುತ್ತದೆ. ಮಹಿಳೆಯರಿಗಾಗಿ ಇರುವ ಈ ಯೋಜನೆಯಲ್ಲಿ ಶೇಕಡ 7.5ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯನ್ನು ಅಧಿಕೃತವಾಗಿ ಏಪ್ರಿಲ್ 1ರಂದು ಜಾರಿ ಮಾಡಲಾಗಿದ್ದು, 1.59 ಲಕ್ಷ ಅಂಚೆ ಕಚೇರಿಗಳಲ್ಲಿ ಈ ಯೋಜನೆ ಲಭ್ಯಿವಿದೆ. ಆದರೆ ಇದು ತೆರಿಗೆ ಮುಕ್ತವೇ?

ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಖಾತೆ ತೆರೆಯುವುದು ಹೇಗೆ?
ಹಂತ 1: ಸಮೀಪದ ಅಂಚೆ ಕಚೇರಿ ಬ್ರ್ಯಾಂಚ್‌ಗೆ ಭೇಟಿ ನೀಡಿ, ಫಾರ್ಮ್ ಅನ್ನು ಪಡೆದುಕೊಳ್ಳಿ
ಹಂತ 2: ಫಾರ್ಮ್ ಅನ್ನು ಭರ್ತಿ ಮಾಡಿ, ಅಂಚೆ ಕಚೇರಿಯಲ್ಲಿ ಸಲ್ಲಿಸಿ
ಹಂತ 3: ಕೆವೈಸಿ ದಾಖಲೆ ಪ್ರತಿ (ಆಧಾರ್ ಮತ್ತು ಪ್ಯಾನ್ ಕಾರ್ಡ್), ಹೊಸ ಖಾತೆದಾರರಿಗೆ ಕೆವೈಸಿ ಫಾರ್ಮ್, ಪೇ ಸ್ಲಿ, ಚೆಕ್ ಅಥವಾ ಮೊತ್ತವನ್ನು ಫಾರ್ಮ್‌ನೊಂದಿಗೆ ನೀಡಿ
ಮಹಿಳಾ ಸಮ್ಮಾನ ಪ್ರಮಾಣಪತ್ರ ತೆರಿಗೆ ಮುಕ್ತವೇ?
ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರದ ಯೋಜನೆಯಡಿಯಲ್ಲಿ ಮಾಡಿದ ಹೂಡಿಕೆಯು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯುವುದಿಲ್ಲ. ಆದರೆ ಯೋಜನೆಯ ಮೂಲಕ ಪಡೆದ ಬಡ್ಡಿದರಕ್ಕೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ನಿಮಗೆ ಫಿಕ್ಸಿಡ್ ಡೆಪಾಸಿಟ್‌ನಲ್ಲಿ ತೆರಿಗೆ ಪ್ರಯೋಜನ ಲಭ್ಯವಾಗುವಂತೆ ಈ ಯೋಜನೆಯಲ್ಲಿ ತೆರಿಗೆ ಪ್ರಯೋಜನ ಲಭ್ಯವಾಗುವುದಿಲ್ಲ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಅಡಿಯಲ್ಲಿ ನಾವು ಮಾಡಿದ ಹೂಡಿಕೆಗೆ ಪಡೆಯುವ ಬಡ್ಡಿದರವು ತೆರಿಗೆ ಮುಕ್ತವಾಗಿರುವುದಿಲ್ಲ, ಅದು ತೆರಿಗೆಗೆ ಒಳಪಡುತ್ತದೆ. ನೀವು ಮಾಡಿದ ಹೂಡಿಕೆಗೆ ಸಂಪೂರ್ಣವಾಗಿ ಎಷ್ಟು ಬಡ್ಡಿದರ ಲಭ್ಯವಾಗಿದೆ ಎಂಬ ಲೆಕ್ಕಾಚಾರವನ್ನು ನೋಡಿಕೊಂಡು ನಿಮ್ಮ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಖಾತೆಯಿಂದ ತೆರಿಗೆಯನ್ನು ಕಡಿತ ಮಾಡಲಾಗುತ್ತದೆ.
ಅರ್ಹತೆ, ಗರಿಷ್ಠ ಹಾಗೂ ಕನಿಷ್ಠ ಹೂಡಿಕೆ ಮೊತ್ತ
ಅರ್ಹತೆ: ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ ಮಾತ್ರ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಖಾತೆಯನ್ನು ತೆರೆಯುವ ಅವಕಾಶವಿದೆ. ಇಲ್ಲಿ ಯಾವುದೇ ವಯೋಮಿತಿಗಳು ಇಲ್ಲ. ಹೆಣ್ಣಾಗಿದ್ದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಅನ್ನು ಪಡೆಯುವ ಅವಕಾಶವಿದೆ.
ನೀವು ಕನಿಷ್ಠವಾಗಿ 100 ರೂಪಾಯಿಯಂತೆ 1000 ರೂಪಾಯಿಯನ್ನು ಕನಿಷ್ಠವಾಗಿ ಹೂಡಿಕೆ ಮಾಡಬಹುದಾಗಿದೆ. ಇನ್ನು ಓರ್ವ ವ್ಯಕ್ತಿಯ ಖಾತೆಗೆ ಗರಿಷ್ಠ ಮೊತ್ತದ ಮಿತಿಯು 2 ಲಕ್ಷ ರೂಪಾಯಿ ಆಗಿದೆ. ಒಂದು ಖಾತೆಯನ್ನು ತೆರೆದ ಬಳಿಕ ನೀವು ಇನ್ನೊಂದು ಖಾತೆಯನ್ನು ತೆರೆಯಲು ಬಯಸಿದರೆ, ಎರಡು ಖಾತೆ ಆರಂಭದ ದಿನದಲ್ಲಿ ಮೂರು ತಿಂಗಳುಗಳ ಕಾಲಾವಧಿ ಇರಬೇಕು.
ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಏನು?
ಬಜೆಟ್ 2023ರಲ್ಲಿ ಜಾರಿ ಮಾಡಲಾದ ಭಾರತ ಸರ್ಕಾರದ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯು ಹೊಸ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಒಂದು ಸಮಯ ಯೋಜನೆಯಾಗಿದೆ. ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯು ಮಾರ್ಚ್ 2025ರವರೆಗಿನ ಅಂದರೆ 2 ವರ್ಷದ ಅವಧಿಯ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಮಹಿಳೆ ಅಥವಾ ಹುಡುಗಿಯ ಹೆಸರಿನಲ್ಲಿ ಸುಮಾರು 2 ಲಕ್ಷ ರೂಪಾಯಿ ಮೊತ್ತವನ್ನು 2 ವರ್ಷದವರೆಗೆ ಡೆಪಾಸಿಟ್ ಮಾಡಬಹುದಾಗಿದೆ.


Click it and Unblock the Notifications