ಮಂಗಳೂರು, ಡಿಸೆಂಬರ್ 26: ಬಹುನಿರೀಕ್ಷಿತ ಮಂಗಳೂರು ಸೆಂಟ್ರಲ್-ಮಡಂಗಾವ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಪ್ರಾಯೋಗಿಕ ಓಡಾಟ ನಡೆಸಿದೆ. ಮಂಗಳವಾರ ಬೆಳಗ್ಗೆ 8.30 ರ ವೇಳೆಗೆ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ ದಿಂದ ಹೊರಟ ರೈಲು ಮಧ್ಯಾಹ್ನ 1.45ಕ್ಕೆ ಮಡಂಗಾವ್ ತಲುಪುವ ನಿರೀಕ್ಷೆಗಳಿವೆ. ರೈಲು ಹೊರಡುವ ಸಮಯದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದು ಅಧಿಕಾರ ಗಳಿಂದ ಮಾಹಿತಿ ಪಡೆದು ಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 30 ರಂದು ಚಾಲನೆ ನೀಡುವ ಐದು ವಂದೇ ಭಾರತ್ ರೈಲುಗಳಲ್ಲಿ ಒಂದಾದ ಮಂಗಳೂರು-ಮಡಂಗಾವ್ ರೈಲು ತನ್ನ ಪ್ರಾಯೋಗಿಕ ಪರೀಕ್ಷೆ ನಡೆಸಿದೆ. ಮಂಗಳೂರು ಸೆಂಟ್ರಲ್‌ನ ಪ್ಲಾಟ್ ಫಾರಂ ಒಂದರಲ್ಲಿ ಈ ಹೊಸ ರೈಲು ಓಡಾಟ ಮಾಡಿದೆ. ಸುಮಾರು 370 ಕೀಲೋ ಮೀಟರ್ ಅಂತರದ ಮಂಗಳೂರು-ಮಡಂಗಾವ್ ದೂರವನ್ನು 4 ರಿಂದ 5ಗಂಟೆಗಳಲ್ಲಿ ತಲುಪುವ ಬಹು ನಿರೀಕ್ಷೆಯನ್ನು ವಂದೇ ಭಾರತ್ ರೈಲು ಹೊಂದಿದೆ.

ಈ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಕೇವಲ ಮೂರು ನಿಲುಗಡೆಯನ್ನು ಮಾತ್ರ ಹೊಂದಿದೆ. ಮಂಗಳೂರು ಸೆಂಟ್ರಲ್‌ನಿಂದ ಉಡುಪಿ, ಕಾರವಾರ ಬಳಿಕ ಮಡಂಗಾವ್‌ನಲ್ಲಿ ಮಾತ್ರ ನಿಲುಗಡೆಯಾಗಲಿದೆ. ರೈಲಿನಲ್ಲಿ ಸದ್ಯ ಕುಳಿತು ಪ್ರಯಾಣಿಸುವ ಆಸನದ ವ್ಯವಸ್ಥೆ ಮಾತ್ರ ಇದೆ.
ಈ ರೈಲಿನ ತಾತ್ಕಾಲಿಕ ವೇಳಾ ಪಟ್ಟಿಯ ಪ್ರಕಾರ ಮಂಗಳೂರು ಸೆಂಟ್ರಲ್ ನಿಂದ ಬೆಳಗ್ಗೆ 8.30ರ ವೇಳೆಗೆ ಹೊರಟರೆ ಮಧ್ಯಾಹ್ನ 1.05 ನಿಮಿಷಕ್ಕೆ ಮಡಂಗಾವ್ ತಲುಪಲಿದೆ. ಸಂಜೆ 6.10 ಕ್ಕೆ ಮಡಂಗಾವ್ ನಿಂದ ಹೊರಟರೆ ರಾತ್ರಿ 10.45ರ ವೇಳೆಗೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ದೇಶವಿಡೀ ವಂದೇ ಭಾರತ್ ಓಡಾಟ ನಡೆಸಿದರೂ ಮಂಗಳೂರಿಗೆ ವಂದೇ ಭಾರತ್ ಭಾಗ್ಯವನ್ನು ಕೇಂದ್ರ ಸರ್ಕಾರ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿಯಾಗಿ ವಂದೇ ಭಾರತ್ ಸೇವೆಗಳ ಆರಂಭಕ್ಕಾಗಿ ಮನವಿ ಮಾಡಿದ್ದರು.


Click it and Unblock the Notifications