ದೇಶದಲ್ಲಿ ಪ್ರಸಿದ್ಧ ವಾಹನ, ಕಾರು ಬ್ರ್ಯಾಂಡ್ ಆದ ಮಾರುತಿ ಸುಜುಕಿ ತನ್ನ ಎಲ್ಲ ಮಾಡೆಲ್‌ಗಳ ದರವನ್ನು ಹೆಚ್ಚಳ ಮಾಡಿದೆ. ಈ ಹಿಂದೆಯೇ ಹೊಸ ವರ್ಷದಲ್ಲಿ ದರ ಏರಿಕೆ ಮಾಡುವ ಬಗ್ಗೆ ಸುದ್ದಿಯಾಗಿತ್ತು. ಸೋಮವಾರ ಸಂಸ್ಥೆಯು ಈ ಬಗ್ಗೆ ಘೋಷಿಸಿದೆ.
ಹಣಕಾಸು ವರ್ಷ 2022ರಲ್ಲಿ ಮಾರುತಿ ಸುಜುಕಿ ಎರಡನೇ ಬಾರಿಗೆ ದರ ಏರಿಕೆಯನ್ನು ಮಾಡುತ್ತಿದೆ. ಕಳೆದ ಬಾರಿ 2022ರ ಏಪ್ರಿಲ್‌ನಲ್ಲಿ ಸಂಸ್ಥೆಯು ತನ್ನ ಕಾರುಗಳ ದರವನ್ನು ಹೆಚ್ಚಿಸಿತ್ತು. ಈಗ 2023ರ ಜನವರಿಯಲ್ಲಿ ತನ್ನ ಎಲ್ಲ ಮಾಡೆಲ್‌ಗಳ ಬೆಲೆಯನ್ನು ಶೇಕಡ 1.1ರಷ್ಟು ಏರಿಕೆ ಮಾಡಿದೆ.
2022ರ ಡಿಸೆಂಬರ್‌ನಲ್ಲೇ ಈ ಬಗ್ಗೆ ಸಂಸ್ಥೆಯು ಮಾಹಿತಿ ನೀಡಿತ್ತು. "ಕಾರು ತಯಾರಿಕ ವೆಚ್ಚವು ಅಧಿಕವಾಗುತ್ತಿದೆ. ಹಾಗೆಯೇ ಮಾಡೆಲ್‌ಗಳನ್ನು ಅಪ್‌ಡೇಟ್ ಮಾಡುವಂತಹ ಕೇಂದ್ರ ಸರ್ಕಾರದ ನಿಯಮವು ಕೂಡ ಸಂಸ್ಥೆಗೆ ಪರಿಣಾಮ ಬೀರಿದೆ. ಈ ನಿಯಮವು 2023ರ ಏಪ್ರಿಲ್‌ನಿಂದ ಜಾರಿಗೆ ಬರಲಿದೆ. ಇದರಿಂದಾಗಿ ದರವನ್ನು ಹೊಸ ವರ್ಷದಲ್ಲಿ ಏರಿಸಲಾಗುವುದು," ಎಂದು ತಿಳಿಸಿತ್ತು.

ಸಂಸ್ಥೆ ಈಗ ಬೆಲೆ ಏರಿಕೆ ಬಗ್ಗೆ ಏನು ಹೇಳಿದೆ?
"ಮಾರುತಿ ಸುಜುಕಿ ಎಲ್ಲ ಮಾಡೆಲ್‌ಗಳ ಮೇಲೆ ಶೇಕಡ 1.1ರಷ್ಟು ಏರಿಸಿದೆ. ದೆಹಲಿಯ ಈ ಹಿಂದಿನ ಶೋ ರೂಮ್‌ನಲ್ಲಿನ ದರವನ್ನು ಲೆಕ್ಕಾಚಾರ ಹಾಕಿಕೊಂಡು ಎಲ್ಲ ಮಾಡೆಲ್‌ಗಳ ದರವನ್ನು ನಿರ್ಧಾರ ಮಾಡಲಾಗುತ್ತದೆ. ಈ ಹೊಸ ಪರಿಷ್ಕೃತ ದರವು 2023ರ ಜನವರಿ 16ರಿಂದಲೇ ಜಾರಿಗೆ ಬರಲಿದೆ," ಎಂದು ಮಾರುತಿ ಸುಜುಕಿ ತನ್ನ ರೆಗ್ಯೂಲೇಟರಿ ಫೈಲಿಂಗ್‌ನಲ್ಲಿ ಹೇಳಿದೆ.
ಯಾವೆಲ್ಲ ಮಾಡೆಲ್‌ಗಳ ದರ ಏರಿಕೆ, ಎಷ್ಟು ಏರಿಕೆ?
ಸಂಸ್ಥೆಯು ಹಲವಾರು ರೇಂಜ್‌ನ ವಾಹನಗಳನ್ನು ಹೊಂದಿದೆ. ಆಲ್ಟೋದಿಂದ ಎಸ್‌ಯುವಿ ಗ್ರ್ಯಾಂಡ್ ವಿಟಾರಾದವರೆಗೆ ಕಾರುಗಳು ಇದೆ. 3.39 ಲಕ್ಷ ರೂಪಾಯಿಯಿಂದ 19.49 ಲಕ್ಷ ರೂಪಾಯಿವರೆಗಿನ ರೇಂಜ್‌ನ ವಾಹನಗಳನ್ನು ಹೊಂದಿದೆ. ಇನ್ನು ದರ ಏರಿಕೆಯಾದ ಬಳಿಕ 3.39 ಲಕ್ಷ ರೂಪಾಯಿಯಿಂದ ಶೇಕಡ 1.1ರಷ್ಟು ದರ ಹೆಚ್ಚಾಗಿ ನೀವು ನೀಡಬೇಕಾಗುತ್ತದೆ. ಹಾಗೆಯೇ 19.49 ಲಕ್ಷ ರೂಪಾಯಿ ಕಾರು ಖರೀದಿ ಮಾಡುವುದಾದರೆ ಹೆಚ್ಚುವರಿ ಶೇಕಡ 1.1ರಷ್ಟು ಬೆಲೆ ನೀಡಬೇಕಾಗುತ್ತದೆ.
ಮಾಹಿತಿ ಪ್ರಕಾರ ಭಾರತದಲ್ಲಿ ಆಲ್ಟೋ, ವಾಗೋನ್ R, ಸೆಲೆರಿಯೋ, ಇರ್ಟಿಗಾ, ಬ್ರೆಝಾ ಮೊದಲಾದ ದರ ಹೆಚ್ಚಾಗಲಿದೆ. ಆಲ್ಟೋ K10, ಬಲೇನೋ, ಸಿಯಾಸ್, ಡಿಸೈರ್, Eeco, ಗ್ರ್ಯಾಂಡ್ ವಿಟಾರಾ, ಇಗ್ನೀಸ್, ಎಸ್-ಪ್ರೆಸ್ಸೋ, ಸ್ವಿಫ್ಟ್, ಮತ್ತು XL6 ಬೆಲೆಯು ಕೂಡಾ ಹೆಚ್ಚಾಗಲಿದೆ.


Click it and Unblock the Notifications