ಪ್ರತಿ ತಿಂಗಳು ಆರಂಭವಾಗುವಾ ಹಲವಾರು ಬದಲಾವಣೆಗಳು ಆಗುವುದು ಖಚಿತ. ಸಾಮಾನ್ಯವಾಗಿಯೇ ಪ್ರತಿ ತಿಂಗಳ ಮೊದಲ ದಿನವೇ ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಅದರಂತೆ ಇಂದು ವಾಣಿಜ್ಯ ಎಲ್‌ಪಿಜಿ ದರವನ್ನು ಇಳಿಸಲಾಗಿದ್ದು, ಗೃಹ ಬಳಕೆ ಗ್ಯಾಸ್ ದರ ಸ್ಥಿರವಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಆಗಸ್ಟ್ ಒಂದರಿಂದ ಹಲವಾರು ಬದಲಾವಣೆಗಳು ಆಗಲಿದೆ.
ರಾಜ್ಯದಲ್ಲಿ ಇಂದಿನಿಂದ ಹಲವು ಹೊಸ ನಿಯಮಗಳು ಜಾರಿಯಾಗಲಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಲಾದ ನಿಯಮಗಳು ಇಂದಿನಿಂದ ಕಾರ್ಯರೂಪಕ್ಕೆ ಬರಲಿದೆ. ಅವೆಲ್ಲವೂ ಕೂಡಾ ಪ್ರಮುಖವಾಗಿ ನಿಮ್ಮ ಹಣಕಾಸಿನ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಹಾಲಿನ ದರ ಏರಿಕೆಯಾದರೆ, ನೀವು ಪ್ರತಿ ತಿಂಗಳು ಪಾವತಿ ಮಾಡುವ ವಿದ್ಯುತ್ ಈ ತಿಂಗಳಿನಿಂದ ಉಚಿತವಾಗಿದೆ. ಯಾವೆಲ್ಲ ಬದಲಾವಣೆಗಳು ಇಂದಿನಿಂದ ಆಗಲಿದೆ ಎಂದು ತಿಳಿಯಿರಿ ಮುಂದೆ ಓದಿ...

ಉಚಿತ ವಿದ್ಯುತ್ ಆಗಸ್ಟ್ 1ರಿಂದ ಅನ್ವಯ
ರಾಜ್ಯ ಸರ್ಕಾರವು ಸುಮಾರು 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವ ಗೃಹ ಜ್ಯೋತಿ ಯೋಜನೆಯನ್ನು ಪರಿಚಯಿಸಿದ್ದು, ಈ ಯೋಜನೆಯು ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಜೂನ್ 18ರಿಂದ ಜುಲೈ 27 ರವರೆಗೆ ನೋಂದಾಯಿಸಿಕೊಂಡ ಗ್ರಾಹಕರು ಆಗಸ್ಟ್‌ನಿಂದ ಉಚಿತ ವಿದ್ಯುತ್ ಪಡೆಯಬಹುದು.
ಹಾಲಿನ ದರ ಏರಿಕೆ
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಅಥವಾ ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆಎಂಎಫ್) ಜುಲೈ 21ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯರ ಜೊತೆ ಸಭೆ ನಡೆಸಿದ್ದು, ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಒಪ್ಪಿಗೆ ಪಡೆದುಕೊಂಡಿದೆ. ಅದರಂತೆ ನಂದಿನಿ ಹಾಲಿನ ದರವು ಆಗಸ್ಟ್ 1 ರಿಂದ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳವಾಗಲಿದೆ.
ಹೊಟೇಲ್ ಊಟ, ತಿಂಡಿ ದುಬಾರಿ
ಪ್ರಸ್ತುತ ಬಹುತೇಕ ಎಲ್ಲ ಅಗತ್ಯ ವಸ್ತುಗಳ ದರವು ಏರಿಕೆಯಾಗಿದೆ. ಮುಖ್ಯವಾಗಿ ನಾವು ದಿನನಿತ್ಯ ಬಳಕೆ ಮಾಡುವ ಹಾಲು, ಚಹಾ ಪುಡಿ, ಅಕ್ಕಿ, ಬೇಳೆ ದರವು ಭಾರೀ ಪ್ರಮಾಣದಲ್ಲಿ ಜಿಗಿತ ಕಂಡಿದೆ. ಈ ಬೆಲೆ ಏರಿಕೆ ನಡುವೆ ಹೊಟೇಲ್‌ಗಳಲ್ಲಿಯೂ ದರ ಏರಿಕೆ ಮಾಡಲಾಗುತ್ತಿದೆ. ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಹೊಟೇಲ್ ತಿನಿಸುಗಳ ದರವು ಶೇಕಡ 10 ರಷ್ಟು ಹೆಚ್ಚಳವಾಗಲಿದೆ.
ಮೋಟಾರು ತೆರಿಗೆ ಹೆಚ್ಚಳ
ರಾಜ್ಯ ವಿಧಾನಸಭೆಯಲ್ಲಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕವನ್ನು ಮಂಡನೆ ಮಾಡಲಾಗಿದ್ದು, ಉಭಯ ಸದನದ ಒಪ್ಪಿಗೆ ಪಡೆಯಲಾಗಿದೆ. ರಾಜ್ಯಪಾಲರು ಕೂಡಾ ಸಹಿ ಹಾಕಿದ್ದು, ಆಗಸ್ಟ್‌ನಿಂದ ಈ ನಿಯಮದಂತೆ ಮೋಟಾರು ವಾಹನಗಳ ದರಗಳು ಏರಿಕೆಯಾಗಲಿದೆ. ಮುಖ್ಯವಾಗಿ ಅತಿ ಭಾರದ ಸರಕು ವಾಹನಗಳು, ಮೋಟಾರು ಕ್ಯಾಬ್, ಶಾಲಾ ಕಾಲೇಜು ವಾಹನಗಳ ತೆರಿಗೆ ಅಧಿಕವಾಗಲಿದೆ.
ಮೋಟಾರು ತೆರಿಗೆ ಹೆಚ್ಚಳ
ರಾಜ್ಯ ವಿಧಾನಸಭೆಯಲ್ಲಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕವನ್ನು ಮಂಡನೆ ಮಾಡಲಾಗಿದ್ದು, ಉಭಯ ಸದನದ ಒಪ್ಪಿಗೆ ಪಡೆಯಲಾಗಿದೆ. ರಾಜ್ಯಪಾಲರು ಕೂಡಾ ಸಹಿ ಹಾಕಿದ್ದು, ಆಗಸ್ಟ್‌ನಿಂದ ಈ ನಿಯಮದಂತೆ ಮೋಟಾರು ವಾಹನಗಳ ದರಗಳು ಏರಿಕೆಯಾಗಲಿದೆ. ಮುಖ್ಯವಾಗಿ ಅತಿ ಭಾರದ ಸರಕು ವಾಹನಗಳು, ಮೋಟಾರು ಕ್ಯಾಬ್, ಶಾಲಾ ಕಾಲೇಜು ವಾಹನಗಳ ತೆರಿಗೆ ಅಧಿಕವಾಗಲಿದೆ.
ಎತ್ತರದ ಕಟ್ಟಡಕ್ಕೆ ಶುಲ್ಕ
ಶಾಸನಸಭೆಯು ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ಅಧಿನಿಯಮ 2023ಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಈ ಕಾರಣದಿಂದಾಗಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗುತ್ತದೆ. ಈ ವೇಳೆ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
ಐಟಿಆರ್ ಫೈಲಿಂಗ್ ಗಡುವು ಅಂತ್ಯ
ಆದಾಯ ತೆರಿಗೆ ರಿಟರ್ನ್ ಪೈಲಿಂಗ್ ಮಾಡಲು ಜುಲೈ 31 ಕೊನೆಯ ದಿನಾಂಕವಾಗಿದೆ. ಆಗಸ್ಟ್ 1ರಿಂದ ಡಿಸೆಂಬರ್‌ವರೆಗೂ ನೀವು ತಡವಾಗಿ ಐಟಿಆರ್ ಫೈಲ್ ಮಾಡುವ ಅವಕಾಶವನ್ನು ಹೊಂದಿದ್ದೀರಿ. ಆದರೆ ಇದಕ್ಕೆ ನೀವು ಐದು ಸಾವಿರ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.


Click it and Unblock the Notifications