ಸಾಮಾನ್ಯ ಜನರಿಗೆ ನೀಡುವ ಯೋಜನೆಗಳಿಗಿಂತ ಕೊಂಚ ಅಧಿಕ ಪ್ರಯೋಜನವನ್ನು ನೀಡುವ ಯೋಜನೆಗಳನ್ನು ಮಹಿಳೆಯರಿಗೆ ನೀಡಲಾಗುತ್ತದೆ. ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳು ಮಹಿಳೆಯರಿಗೆ ಸಬಲೀಕರಣವನ್ನು ಉತ್ತೇಜನ ಮಾಡುವ ಉದ್ದೇಶದಿಂದ ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ಒದಗಿಸುತ್ತದೆ. ಈ ಯೋಜನೆಗಳು ಮಹಿಳಾ ಸಾಲಗಾರರಿಗೆ ಹಲವಾರು ಪ್ರಯೋಜನಗಳು ನೀಡುತ್ತದೆ.
ಬ್ಯಾಂಕ್‌ಗಳ ಈ ಯೋಜನೆಯು ಮಹಿಳೆಯರ ಗುರಿ ಮತ್ತು ಆಕಾಂಕ್ಷೆಗಳನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಮಹಿಳೆಯರಿಗಾಗಿ ಹಲವಾರು ಯೋಜನೆಗಳು ಇದ್ದರೂ ಕೂಡಾ ವಿಶ್ವಬ್ಯಾಂಕ್‌ನ ಇಂಟರ್‌ನ್ಯಾಶನಲ್ ಫೈನಾನ್ಸ್ ಕಾರ್ಪೊರೇಶನ್‌ನ 2020 ರ ವರದಿಯ ಪ್ರಕಾರ ಭಾರತದಲ್ಲಿ ಕೇವಲ ಶೇಕಡ 17ರಷ್ಟು ಮಹಿಳೆಯರಿಗೆ ಮಾತ್ರ ಈ ಆರ್ಥಿಕ ಪ್ರಯೋಜನಗಳ ಬಗ್ಗೆ ತಿಳಿದಿದೆ.

ಈ ಸಂದರ್ಭದಲ್ಲಿ, ಮಹಿಳೆಯರು ತಾವು ಪಡೆಯಬಹುದಾದ ಆರ್ಥಿಕ ಪ್ರಯೋಜನಗಳ ಬಗ್ಗೆ ತಿಳಿಯುವುದು ಅತೀ ಮುಖ್ಯವಾಗುತ್ತದೆ. ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಮಹಿಳೆಯರಿಗೆ ನೀಡುವ ಕೆಲವು ಯೋಜನೆಗಳ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ. ಮುಂದೆ ಓದಿ...
ಮಹಿಳೆಯರಿಗಾಗಿ ಸಾಲದ ಮೇಲೆ ಕಡಿಮೆ ಬಡ್ಡಿದರ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್‌ನಂತಹ ಪ್ರಮುಖ ಬ್ಯಾಂಕ್‌ಗಳು ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ಹೊಂದಿದೆ. ವಿಶೇಷ ಯೋಜನೆಗಳ ಭಾಗವಾಗಿ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಈ ಬ್ಯಾಂಕುಗಳು ಸಾಲವನ್ನು ನೀಡುತ್ತದೆ. ಉದಾಹರಣೆಗೆ, ಕೆನರಾ ಬ್ಯಾಂಕ್‌ನಿಂದ ಸಾಲ ಪಡೆಯುವ ಮಹಿಳೆಯರಿಗೆ ಶೇಕಡ 8.85 ಬಡ್ಡಿದರಕ್ಕೆ ಗೃಹ ಸಾಲವನ್ನು ನೀಡುತ್ತದೆ. ಆದರೆ ಸಾಮಾನ್ಯ ಜನರಿಗೆ ಈ ಬ್ಯಾಂಕ್‌ಗಳಲ್ಲಿ ಗೃಹ ಸಾಲಕ್ಕೆ ಶೇಕಡ 9.25ರಷ್ಟು ಬಡ್ಡಿದರ ನೀಡಲಾಗುತ್ತದೆ.
ಅದೇ ರೀತಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್‌ಬಿಐ) ಗೃಹ ಸಾಲವನ್ನು ಪಡೆಯುವ ಮಹಿಳೆಯರು ತಮ್ಮ ಬಡ್ಡಿದರದಲ್ಲಿ 5 ಬೇಸಿಸ್ ಪಾಯಿಂಟ್‌ಗಳ ರಿಯಾಯಿತಿ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ರೀತಿ ಮಹಿಳೆಯರಿಗೆ ಪ್ರೋತ್ಸಾಹವನ್ನು ನೀಡುವ ಮೂಲಕ ಈ ಬ್ಯಾಂಕುಗಳು ತಮ್ಮ ಆರ್ಥಿಕ ಗುರಿಗಳು ಮತ್ತು ಆಕಾಂಕ್ಷೆಗಳನ್ನು ಮುಂದುವರಿಸಲು ಬಯಸುವ ಮಹಿಳೆಯರಿಗೆ ಬೆಂಬಲ, ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ.
ಎಚ್‌ಡಿಎಫ್‌ಸಿ ಮಹಿಳೆಯರಿಗೆ ಗೃಹ ಸಾಲದ ಮೇಲೆ 5 ಬೇಸಿಸ್ ಪಾಯಿಂಟ್‌ಗಳ ರಿಯಾಯಿತಿಯನ್ನು ಸಹ ನೀಡುತ್ತದೆ. ಬಡ್ಡಿಯು ಸಾಲದ ಮೊತ್ತ ಮತ್ತು ಕ್ರೆಡಿಟ್ ಸ್ಕೋರ್‌ನಂತಹ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವವರು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ.
ಅನೇಕ ಎನ್‌ಬಿಎಫ್‌ಸಿಗಳು ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಗೃಹ ಸಾಲವನ್ನು ನೀಡುತ್ತದೆ. ಬಜಾಜ್ ಫಿನ್‌ಸರ್ವ್ ಮಹಿಳೆಯರಿಗೆ 40 ಲಕ್ಷ ರೂಪಾಯಿಗಳ ಸಾಲವನ್ನು ನೀಡುತ್ತದೆ. ಯಾವುದೇ ಮೇಲಾಧಾರ ಅಗತ್ಯವಿಲ್ಲದೆಯೇ ಸಾಲವನ್ನು ನೀಡಲಾಗುತ್ತದೆ. ಇನ್ನು ಎನ್‌ಬಿಎಫ್‌ಸಿಗಳು ನೀಡುವ ಬಡ್ಡಿದರಗಳು ಸಾಲದ ಅವಧಿ, ಆದಾಯ ಮಟ್ಟ, ಕ್ರೆಡಿಟ್ ಸ್ಕೋರ್, ಸಾಲದ ಮೊತ್ತ ಮತ್ತು ಇತರ ಮಾನದಂಡಗಳ ಆಧಾರದ ಮೇಲೆ ಬದಲಾವಣೆಯಾಗುತ್ತದೆ.
ಕೆಲವು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು ಮಹಿಳಾ ಸಾಲಗಾರರು ಅಥವಾ ಉದ್ಯಮಿಗಳಿಗಾಗಿ ವಿಶೇಷ ಯೋಜನೆಗಳನ್ನು ನೀಡುತ್ತವೆ. ಅದು ಕೂಡಾ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ಸಾಲವನ್ನು ನಿರ್ಧರಿಸುವ ಮೊದಲು ಸಾಲಗಾರರು ವಿವಿಧ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ನೀಡುವ ನಿಯಮಗಳನ್ನು ವಿವರವಾಗಿ ನೋಡಿ ಎಲ್ಲಿ ಸಾಲ ಪಡೆಯುವುದು ಎಂದು ನಿರ್ಧರಿಸುವುದು ಮುಖ್ಯವಾಗುತ್ತದೆ.
ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳ ಹೊರತಾಗಿ, ತೆರಿಗೆ ರಿಯಾಯಿತಿಯ ವಿಷಯದಲ್ಲಿ ಸರ್ಕಾರವು ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ. ಕೆಲವು ರಾಜ್ಯಗಳಲ್ಲಿ, ಉದಾಹರಣೆಗೆ, ಉತ್ತರ ಪ್ರದೇಶ, ಮಹಿಳೆಯರಿಗೆ ಆಸ್ತಿ ನೋಂದಣಿಗೆ ಕಡಿಮೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ರಿಯಾಯಿತಿಯು ಶೇಕಡ 1 ರಿಂದ ಶೇಕಡ 2 ರವರೆಗೆ ಇರುತ್ತದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?



Click it and Unblock the Notifications