ಕಳೆದ ತಿಂಗಳಿನಿಂದ ಭಾರತದಲ್ಲಿ ಮಾಸಿಕ ದಿನಸಿ ವೆಚ್ಚವು ಅಧಿಕವಾಗುತ್ತಿದೆ. ಜನವರಿಯಿಂದ ಹಲವಾರು ವಸ್ತುಗಳ ದರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದು ಕೋಟ್ಯಾಂತರ ಕುಟುಂಬಗಳ ಮೇಲೆ ಪ್ರಭಾವ ಬೀರಿದೆ. ರಿಟೇಲ್ ಹಣದುಬ್ಬರವು ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಆದರೆ ಜನವರಿ ಹಣದುಬ್ಬರವು ಹೆಚ್ಚಳವಾಗಿದೆ.
ಜನವರಿಯಲ್ಲಿ ರಿಟೇಲ್ ಹಣದುಬ್ಬರವು ಶೇಕಡ 6.5ಕ್ಕೆ ಏರಿಕೆಯಾಗಿದೆ. ಆದರೆ ಮಾಸಿಕ ದಿನಸಿ ವೆಚ್ಚವು ಯಾಕೆ ಹೆಚ್ಚಳವಾಗುತ್ತಿದೆ? ಅದಕ್ಕೆ ಮುಖ್ಯ ಕಾರಣ ಕಳೆದ ಹಲವಾರು ತಿಂಗಳುಗಳಿಂದ ಬೆಲೆ ಏರಿಕೆಯಾಗುತ್ತಿರುವುದು ಆಗಿದೆ.
ಪ್ರಮುಖವಾಗಿ ಹಾಲು, ಅಕ್ಕಿ, ಹಿಟ್ಟು ಹಾಗೂ ಇತರೆ ವಸ್ತುಗಳ ದರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ವೆಚ್ಚ ಹೆಚ್ಚಳ, ಸ್ಥಳೀಯ ಉತ್ಪಾದನೆ ಕುಸಿತ, ರಫ್ತು ಬೇಡಿಕೆ ಹೆಚ್ಚಳ, ಹಣದುಬ್ಬರ ಏರಿಕೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿದೆ ಮುಂದೆ ಓದಿ....
ಹಾಲಿನ ದರ ಹೆಚ್ಚಳ
ಕಳೆದ ಕೆಲವು ತಿಂಗಳುಗಳಲ್ಲಿಯೇ ಹಾಲಿನ ದರವು ಶೇಕಡ 14-15ರಷ್ಟು ಹೆಚ್ಚಳವಾಗಿದೆ. ಹಾಲು ಉತ್ಪಾದನೆ ವೆಚ್ಚ ಏರಿಕೆಯು ಇದಕ್ಕೆ ಪ್ರಮುಖ ಕಾರಣವಾಗಿದೆ. ಗುಜರಾತ್ ಡೈರಿ ಕೋ-ಆಪರೇಟಿವ್‌ನ ಅಮುಲ್ ಹಾಲಿನ ಬೆಲೆಯು ನಿರಂತರವಾಗಿ ಹೆಚ್ಚಳ ಮಾಡಲಾಗುತ್ತಿದೆ. ಇಂದಿನಿಂದ ಜಾರಿಗೆ ಬರುವಂತೆ 3 ರೂಪಾಯಿ ಹೆಚ್ಚಾಗಿದೆ. ಹೀಗೆಯೇ ಹಲವಾರು ಬ್ರ್ಯಾಂಡ್‌ಗಳು ಹಾಲಿನ ದರವನ್ನು ಏರಿಕೆ ಮಾಡುತ್ತಿದೆ. ಕರ್ನಾಟಕದಲ್ಲಿ ನಂದಿನಿ ಕೂಡಾ ತನ್ನ ಹಾಲಿನ ಬೆಲೆಯನ್ನು ಹೆಚ್ಚಿಸಿದೆ. ಇದು ಕೂಡಾ ಮಾಸಿಕ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ.
ಅಕ್ಕಿ ಬೆಲೆ ಏರಿಕೆ
ಒಂದು ತಿಂಗಳಿನಿಂದ ಅಕ್ಕಿ ಬೆಲೆ ಅಧಿಕವಾಗುತ್ತಿದೆ. ಬಾಸ್ಮತಿ ಹಾಗೂ ಬೇರೆ ರೀತಿಯ ಅಕ್ಕಿಯ ಬೆಲೆಯು ಶೇಕಡ 15ರಷ್ಟು ಹೆಚ್ಚಳವಾಗಿದೆ. ಸ್ಥಳೀಯವಾಗಿ ಉತ್ಪಾದನೆ ಕುಸಿತ ಮತ್ತು ರಫ್ತು ಬೇಡಿಕೆ ಅಧಿಕವಾದ ಕಾರಣ ಅಕ್ಕಿ ಬೆಲೆ ಏರಿಸಲಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಡಿಸೆಂಬರ್ 2022ರಲ್ಲಿ ಬಾಸ್ಮತಿ ಅಕ್ಕಿ ದರವು ಪ್ರತಿ ಕೆಜಿಗೆ 90-95 ರೂಪಾಯಿ ಆಗಿತ್ತು. ಆದರೆ ಜನವರಿ 2023ರಲ್ಲಿ ಪ್ರತಿ ಕೆಜಿ ಬಾಸ್ಮತಿ ಅಕ್ಕಿಯ ದರವು 105 ರೂಪಾಯಿ ಆಗಿದೆ. ಇತರೆ ಅಕ್ಕಿಗಳ ದರವು ಕೂಡಾ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದರೆ ಇಳಿಯುವ ನಿರೀಕ್ಷೆಯಿದೆ.
ಹಿಟ್ಟಿನ ಬೆಲೆ ಏರಿಕೆ
ಗೋಧಿ ಉತ್ಪಾದನೆ ಕಡಿಮೆಯಾದಂತೆ ಗೋಧಿ ಹಿಟ್ಟಿನ ಬೆಲೆಯು ಕೂಡಾ ಹೆಚ್ಚಳವಾಗಿದೆ. ಗೋಧಿ ಬೆಲೆಯು ಕೂಡಾ ಅಧಿಕವಾಗಿದೆ. ಅದಕ್ಕಾಗಿ ಹಿಟ್ಟಿನ ಬೆಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಕಡಿಮೆ ಬೆಲೆಗೆ ಜನರಿಗೆ ಗೋಧಿ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರವು ಕ್ರಮಕೈಗೊಂಡಿದೆ. ಹರಾಜಿನ ಮೂಲಕ ಇ-ಹರಾಜನ್ನು ನಡೆಸಿ 3.85 ಲಕ್ಷ ಟನ್ ಗೋಧಿ ಮಾರಾಟ ಮಾಡಿದೆ. ಈ ಮೂಲಕ ಗೋಧಿ, ಗೋಧಿ ಹಿಟ್ಟಿನ ದರ ನಿಯಂತ್ರಣಕ್ಕೆ ಪ್ರಯತ್ನ ಮಾಡಿದೆ. ಮೊಟ್ಟೆ, ಬೇಳೆ ದರವು ಕೂಡಾ ಹೆಚ್ಚಳವಾಗಿದೆ.
ರಿಟೇಲ್ ಹಣದುಬ್ಬರ ಏರಿಕೆ
ಜನವರಿಯಲ್ಲಿ ರಿಟೇಲ್ ಹಣದುಬ್ಬರವು ಶೇಕಡ 6.5ಕ್ಕೆ ಏರಿಕೆಯಾಗಿದೆ. ಡಿಸೆಂಬರ್‌ನಲ್ಲಿ ರಿಟೇಲ್ ಹಣದುಬ್ಬರವು ಶೇಕಡ 5.7ರಷ್ಟು ಆಗಿತ್ತು. ಕಳೆದ ವರ್ಷ ಜನವರಿಯಲ್ಲಿ ರಿಟೇಲ್ ಹಣದುಬ್ಬರವು ಶೇಕಡ 6 ಆಗಿತ್ತು. ಇನ್ನು ಆಹಾರ ದರ ಇಂಡೆಕ್ಸ್ ಜನವರಿಯಲ್ಲಿ ಶೇಕಡ 6 ಆಗಿದೆ. ಆದರೆ ಡಿಸೆಂಬರ್‌ನಲ್ಲಿ ಶೇಕಡ 4.2 ಆಗಿತ್ತು. ಗ್ರಾಮೀಣ ಹಣದುಬ್ಬರವು ಶೇಕಡ 6.9ಕ್ಕೆ ಏರಿಕೆಯಾಗಿದೆ. ಈ ಹಿಂದೆ ಗ್ರಾಮೀಣ ಹಣದುಬ್ಬರವು ಶೇಕಡ 6 ಆಗಿತ್ತು.


Click it and Unblock the Notifications