ಇಂದಿನ ಸಾಮಾಜಿಕ ಆರ್ಥಿಕ ಸ್ಥಿತಿಯಲ್ಲಿ, ನಮಗೆ ಸೂಕ್ತವಾದ ಮತ್ತು ಉತ್ತಮ ವೇತನವನ್ನು ನೀಡುವ ಉದ್ಯೋಗಗಳನ್ನು ಹುಡುಕುವುದು ಕಷ್ಟ. ಶಾಲೆಯಲ್ಲಿರುವ ವಿದ್ಯಾರ್ಥಿಗಳು ಯಾವ ಉದ್ಯೋಗಕ್ಕೆ ಬೇಡಿಕೆಯಿದೆ, ಉತ್ತಮ ಸಂಬಳವಿದೆ ಎಂದು ಚಿಂತನೆ ನಡೆಸಿ ವಿದ್ಯಾಭ್ಯಾಸ ಮುಂದುವರಿಸುವ ಕಾಲವಿದು.
ನಿಮ್ಮ ಶೈಕ್ಷಣಿಕ ಅರ್ಹತೆ, ಅನುಭವ ಮತ್ತು ಸ್ಥಳಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವೃತ್ತಿಯಲ್ಲಿನ ವೇತನವು ಬದಲಾವಣೆಯಾಗಬಹುದು. ನೀವು ಉತ್ತಮವಾಗಿ ಕೆಲಸ ಮಾಡಿದರೆ, ಭಾರತದ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಗಳಲ್ಲಿ ಒಂದನ್ನು ಪಡೆದುಕೊಳ್ಳಬಹುದು. ಹಾಗೆಯೇ ಈ ಉದ್ಯೋಗಗಳಿಗೆ ಬೆಂಗಳೂರಿನಲ್ಲಿ ಅಧಿಕ ಬೇಡಿಕೆಯಿದೆ. ಭಾರತದಲ್ಲಿ ಅತೀ ಅಧಿಕ ವೇತನ ನೀಡುವ ಟಾಪ್ 10 ಉದ್ಯೋಗಗಳಿವು ಮುಂದೆ ಓದಿ...

1. ಉತ್ಪನ್ನದ ನಿರ್ವಾಹಕ (Product Manager)
ಉತ್ಪನ್ನದ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ವಹಣೆಯು ಭಾರತೀಯ ವ್ಯಾಪಾರದ ಅತೀ ಮುಂಚೂಣಿಯಲ್ಲಿದೆ. ಉತ್ಪನ್ನದ ನಿರ್ವಾಹಕ (Product Manager) ಕೆಲಸಕ್ಕೆ ಬೇಡಿಕೆಯೂ ಅಧಿಕವಾಗಿದೆ. ಈ ವೃತ್ತಿಪರರು ಕಾರ್ಯತಂತ್ರ, ಮಾರ್ಕೆಟಿಂಗ್, ಮೊದಲಾದವುಗಳ ಜವಾಬ್ದಾರಿ ಹೊಂದಿರುತ್ತಾರೆ.
ಶೈಕ್ಷಣಿಕ ಅರ್ಹತೆ: ಬಿಟೆಕ್/ಕಂಪ್ಯೂಟರ್ ಸೈನ್ಸ್ ಪದವಿ, ಎಂಬಿಎ, ಉತ್ಪನ್ನ ನಿರ್ವಹಣೆಯ ಪ್ರಮಾಣಪತ್ರ
ಸರಾಸರಿ ವೇತನ ಶ್ರೇಣಿ: ವಾರ್ಷಿಕವಾಗಿ 7-26 ಲಕ್ಷ ರೂಪಾಯಿ
ಉನ್ನತ ನೇಮಕಾತಿ ಕಂಪನಿಗಳು: ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್, ಫ್ಲಿಪ್‌ಕಾರ್ಟ್, ಸೇಲ್ಸ್‌ಫೋರ್ಸ್, ಉಬರ್
2. ವೈದ್ಯಕೀಯ ವೃತ್ತಿಪರರು
ವೈದ್ಯಕೀಯ ವೃತ್ತಿಯು ಅತೀ ಉನ್ನತ ಹುದ್ದೆಗಳಲ್ಲಿ ಒಂದಾಗಿದೆ. ಸಾಂಕ್ರಾಮಿಕ ರೋಗದ ನಡುವೆ, ಈ ವೃತ್ತಿಯು ನಮ್ಮ ಸಮಾಜದ ಪ್ರಮುಖ ವೃತ್ತಿಗಳಲ್ಲಿ ಒಂದಾಗಿದೆ.
ಶೈಕ್ಷಣಿಕ ಅರ್ಹತೆ: ಎಂಡಿ/ ಎಂಬಿಬಿಎಸ್/ ಎನ್‌ಇಇಟಿ ವಿದ್ಯಾರ್ಹತೆ
ಸರಾಸರಿ ವೇತನ ಶ್ರೇಣಿ: ವಾರ್ಷಿಕವಾಗಿ 7-20+ ಲಕ್ಷ ರೂಪಾಯಿ
ಉನ್ನತ ನೇಮಕಾತಿ ಕಂಪನಿಗಳು: ಎಮ್ಸ್ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ), ಫೋರ್ಟಿಸ್, ಅಪೊಲೊ, ಮ್ಯಾಕ್ಸ್ ಮತ್ತು ಕೊಲಂಬಿಯಾ ಏಷ್ಯಾ
ಉನ್ನತ ಉದ್ಯೋಗ ಸ್ಥಳಗಳು: ಭಾರತದಾದ್ಯಂತ
3. ಬ್ಲಾಕ್‌ಚೈನ್ ಡೆವಲಪರ್‌ಗಳು
ಬ್ಲಾಕ್‌ಚೈನ್ ಡೆವಲಪರ್‌ಗಳು ಅತೀ ಅಧಿಕ ಬೇಡಿಕೆಯ ಹಾಗೂ ಅಧಿಕ ವೇತನವನ್ನು ನೀಡುವ ಉದ್ಯೋಗಗಳಲ್ಲಿ ಒಂದಾಗಿದೆ.
ಶೈಕ್ಷಣಿಕ ಅರ್ಹತೆ: ಬಿ.ಟೆಕ್/ ಕಂಪ್ಯೂಟರ್ ಸೈನ್ಸ್ ಪದವಿ
ಸರಾಸರಿ ವೇತನ ಶ್ರೇಣಿ: ವಾರ್ಷಿಕವಾಗಿ 8-45 ಲಕ್ಷ ರೂಪಾಯಿ
ಉನ್ನತ ನೇಮಕಾತಿ ಕಂಪನಿಗಳು: ಆಕ್ಸೆಸಿಸ್, ಕಾಗ್ನಿಜೆಂಟ್, ಎನ್‌ಟಿಟಿ ಡೇಟಾ, ಕ್ಯಾಪ್ಜೆಮಿನಿ ಮತ್ತು ಹಿಟಾಚಿ
ಉನ್ನತ ಉದ್ಯೋಗ ಸ್ಥಳಗಳು: ನವದೆಹಲಿ, ಬೆಂಗಳೂರು, ಮುಂಬೈ, ಪುಣೆ
4. ಡೇಟಾ ಸೈಂಟಿಸ್ಟ್
ಡೇಟಾ ಸೈಂಟಿಸ್ಟ್ ವೃತ್ತಿಜೀವನದ ಆಯ್ಕೆಯು 2020 ರಿಂದ ಅತ್ಯಂತ ಜನಪ್ರಿಯ ವೃತ್ತಿಜೀವನದ ಆಯ್ಕೆಗಳಲ್ಲಿ ಒಂದಾಗಿದೆ. ಲಿಂಕ್ಡ್‌ಇನ್‌ನಿಂದ "ಅತ್ಯಂತ ಭರವಸೆಯ ವೃತ್ತಿ" ಎಂದು ಕರೆಯಲ್ಪಡುವ ಡೇಟಾ ಸೈಂಟಿಸ್ಟ್, ಸಂಸ್ಥೆಯಲ್ಲಿ ಬೃಹತ್ ಪ್ರಮಾಣದ ಡೇಟಾವನ್ನು ಸಂಗ್ರಹಿಸುವ, ವಿಶ್ಲೇಷಿಸುವ ವೃತ್ತಿಯಾಗಿದೆ.
ಶೈಕ್ಷಣಿಕ ಅರ್ಹತೆ: ಬಿ.ಟೆಕ್/ ಕಂಪ್ಯೂಟರ್ ಸೈನ್ಸ್ ಪದವಿ
ಸರಾಸರಿ ವೇತನ ಶ್ರೇಣಿ: ವಾರ್ಷಿಕವಾಗಿ 10-25 ಲಕ್ಷ ರೂಪಾಯಿ
ಉನ್ನತ ನೇಮಕಾತಿ ಕಂಪನಿಗಳು: ಅಮೆಜಾನ್, ಪ್ರಾಕ್ಟರ್ & ಗ್ಯಾಂಬಲ್ ಮತ್ತು ವಾಲ್ಮಾರ್ಟ್ ಲ್ಯಾಬ್ಸ್
ಉನ್ನತ ಉದ್ಯೋಗ ಸ್ಥಳಗಳು: ನವದೆಹಲಿ, ಬೆಂಗಳೂರು, ಮುಂಬೈ, ಪುಣೆ
5. ಸಾಫ್ಟ್‌ವೇರ್ ಡೆವಲಪರ್
ಫುಲ್ ಸ್ಟಾಕ್ ಸಾಫ್ಟ್‌ವೇರ್ ಡೆವಲಪರ್‌ಗಳು ಸೇರಿದಂತೆ ಸಾಫ್ಟ್‌ವೇರ್ ಡೆವಲಪರ್‌ಗಳು ಹೆಚ್ಚಿನ ಬೇಡಿಕೆಯನ್ನು ಹೊಂದಿರುವ ಉದ್ಯೋಗವಾಗಿದೆ. ಇದು ಭಾರತದಲ್ಲಿ ಹೆಚ್ಚು ವೇತನವನ್ನು ಪಡೆಯಬಹುದಾದ ಉದ್ಯೋಗವಾಗಿದೆ.
ಶೈಕ್ಷಣಿಕ ಅರ್ಹತೆ: ಬಿ.ಟೆಕ್/ ಕಂಪ್ಯೂಟರ್ ಸೈನ್ಸ್ ಪದವಿ
ಸರಾಸರಿ ವೇತನ ಶ್ರೇಣಿ: ವಾರ್ಷಿಕವಾಗಿ 9+ ಲಕ್ಷ ರೂಪಾಯಿ
ಉನ್ನತ ನೇಮಕಾತಿ ಕಂಪನಿಗಳು: ಬಾರ್ಕ್ಲೇಸ್, ಡೆಲ್, ಐಬಿಎಂ, ಸೀಮೆನ್ಸ್, ಬಿಎನ್‌ವೈ ಮೆಲನ್
ಉನ್ನತ ಉದ್ಯೋಗ ಸ್ಥಳಗಳು: ನವದೆಹಲಿ, ಬೆಂಗಳೂರು, ಮುಂಬೈ, ಪುಣೆ
6. ಮೆಷಿನ್ ಲರ್ನಿಂಗ್ ಇಂಜಿನಿಯರ್
ಮೆಷಿನ್ ಲರ್ನಿಂಗ್ ಇಂಜಿನಿಯರ್ ಎಂಬುವುದು ಕೃತಕ ಬುದ್ಧಿಮತ್ತೆಯ (ಎಐ) ಉಪವಿಭಾಗವಾಗಿದ್ದು ಅದು ಕೈಗಾರಿಕೆಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಮೆಷಿನ್ ಲರ್ನಿಂಗ್ ವೃತ್ತಿಪರರು ಸಂಖ್ಯಾಶಾಸ್ತ್ರೀಯ ಅಧ್ಯಯನಗಳನ್ನು ನಡೆಸುತ್ತಾರೆ. ವ್ಯಾಪಾರ ಉದ್ದೇಶಗಳಿಗಾಗಿ ಬಳಸಬಹುದಾದ ಅಲ್ಗಾರಿದಮ್‌ಗಳನ್ನು ರಚಿಸುತ್ತಾರೆ.
ಶೈಕ್ಷಣಿಕ ಅರ್ಹತೆ: ಬಿ.ಟೆಕ್/ ಕಂಪ್ಯೂಟರ್ ಸೈನ್ಸ್ ಪದವಿ
ಸರಾಸರಿ ವೇತನ ಶ್ರೇಣಿ: ವಾರ್ಷಿಕವಾಗಿ 7+ ಲಕ್ಷ ರೂಪಾಯಿ
ಉನ್ನತ ನೇಮಕಾತಿ ಕಂಪನಿಗಳು: ಐಬಿಎ, ಝೈಕಸ್, ಬಾಷ್ ಮತ್ತು ಎಸ್‌ಎಪಿ
ಉನ್ನತ ಉದ್ಯೋಗ ಸ್ಥಳಗಳು: ನವದೆಹಲಿ, ಬೆಂಗಳೂರು, ಮುಂಬೈ, ಪುಣೆ
7. ಚಾರ್ಟರ್ಡ್ ಅಕೌಂಟೆಂಟ್ (ಸಿಎ)
ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪ್ರತಿ ಉದ್ಯಮದ ಪ್ರಮುಖ ಭಾಗವಾಗಿದೆ. ಹಣಕಾಸು ನಿರ್ವಹಣೆಗೆ ಸಿಎಗಳು ಅತೀ ಮುಖ್ಯವಾಗಿರುತ್ತಾರೆ. ಈ ವೃತ್ತಿಪರರು ಹಣಕಾಸು ಸಲಹೆಗಾರರಾಗಿ ಕೆಲಸ ಮಾಡುತ್ತಾರೆ. ತಮ್ಮ ಹಣವನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂಬುದರ ಕುರಿತು ಗ್ರಾಹಕರಿಗೆ ಸಲಹೆ ನೀಡುತ್ತಾರೆ.
ಶೈಕ್ಷಣಿಕ ಅರ್ಹತೆ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಿಂದ ನಿಯಂತ್ರಿಸಲ್ಪಡುವ ಸಿಎ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು.
ಸರಾಸರಿ ವೇತನ ಶ್ರೇಣಿ: ವಾರ್ಷಿಕವಾಗಿ 9-35 ಲಕ್ಷ ರೂಪಾಯಿ
ಉನ್ನತ ನೇಮಕಾತಿ ಕಂಪನಿಗಳು: ಸ್ಟ್ಯಾಂಡರ್ಡ್ ಚಾರ್ಟರ್ಡ್, ಅರ್ನ್ಸ್ಟ್ & ಯಂಗ್, ಡೆಲಾಯ್ಟ್, ಕೆಪಿಎಂಜಿ ಮತ್ತು ಬಿಡಿಒ
ಉನ್ನತ ಉದ್ಯೋಗ ಸ್ಥಳಗಳು: ದೆಹಲಿ ಎನ್‌ಸಿಆರ್, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಪುಣೆ
8. ಮಾರ್ಕೆಟಿಂಗ್ ಮ್ಯಾನೇಜರ್
ಗ್ರಾಹಕರ ಅಗತ್ಯಗಳನ್ನು ಪೂರೈಸಲು ಮತ್ತು ಆದಾಯವನ್ನು ಹೆಚ್ಚಿಸಲು ಮಾರ್ಕೆಟಿಂಗ್ ಮ್ಯಾನೇಜರ್ ಕಂಪನಿಯ ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸುತ್ತಾರೆ. ಎಲ್ಲಾ ಉದ್ಯಮ ಕ್ಷೇತ್ರಗಳಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಅಗತ್ಯವಾಗಿದೆ.
ಶೈಕ್ಷಣಿಕ ಅರ್ಹತೆ: ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಅಥವಾ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿ, ಎಂಬಿಎ
ಸಂಬಳ ಶ್ರೇಣಿ: ವಾರ್ಷಿಕವಾಗಿ 12+ ಲಕ್ಷ ರೂಪಾಯಿ
ಉನ್ನತ ನೇಮಕಾತಿ ಕಂಪನಿಗಳು: ಐಬಿಎಂ, ಅಮೆಜಾನ್, ಫ್ಲಿಫ್‌ಕಾರ್ಟ್, ಟಿಸಿಎಸ್ ಮತ್ತು ಟಾಟಾ ಮೋಟಾರ್ಸ್
ಉನ್ನತ ಉದ್ಯೋಗ ಸ್ಥಳಗಳು: ದೆಹಲಿ, ಮುಂಬೈ, ಬೆಂಗಳೂರು
9. ಎಐ (ಕೃತಕ ಬುದ್ಧಿಮತ್ತೆ) ಇಂಜಿನಿಯರ್
ಕೃತಕ ಬುದ್ಧಿಮತ್ತೆ (ಎಐ) ಇಂಜಿನಿಯರ್ ಸಾಫ್ಟ್‌ವೇರ್ ಸಿಸ್ಟಮ್‌ಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಮಾಡುವವರಾಗಿದ್ದಾರೆ.
ಶೈಕ್ಷಣಿಕ ಅರ್ಹತೆ: ಬಿ.ಟೆಕ್/ ಕಂಪ್ಯೂಟರ್ ಸೈನ್ಸ್ ಪದವಿ
ಸರಾಸರಿ ವೇತನ ಶ್ರೇಣಿ: ವಾರ್ಷಿಕವಾಗಿ 7-40 ಲಕ್ಷ ರೂಪಾಯಿ
ಉನ್ನತ ನೇಮಕಾತಿ ಕಂಪನಿಗಳು: ಒರಾಕಲ್, ಅಮೆಜಾನ್, ಗೂಗಲ್, ಡೆಲಾಯ್ಟ್, ಐಬಿಎಂ ಮತ್ತು ಇಂಟೆಲ್ ಕಾರ್ಪೊರೇಷನ್
ಉನ್ನತ ಉದ್ಯೋಗ ಸ್ಥಳಗಳು: ನವದೆಹಲಿ, ಬೆಂಗಳೂರು, ಮುಂಬೈ, ಪುಣೆ
10. ವ್ಯಾಪಾರ ವಿಶ್ಲೇಷಕ
ವ್ಯಾಪಾರ ವಿಶ್ಲೇಷಕನು ಅದರ ಕಾರ್ಯಕ್ಷಮತೆಯನ್ನು ನಿರ್ಧರಿಸಲು ಸಂಸ್ಥೆಯ ಪ್ರಕ್ರಿಯೆಗಳು, ವ್ಯವಸ್ಥೆಗಳು ಮತ್ತು ಕಾರ್ಯಾಚರಣೆಯ ಮಾದರಿಗಳನ್ನು ಪರಿಶೀಲಿಸುತ್ತಾರೆ.
ಶೈಕ್ಷಣಿಕ ಅರ್ಹತೆ: ಅರ್ಥಶಾಸ್ತ್ರ, ಹಣಕಾಸು, ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್, ಸ್ಟಾಟಿಸ್ಟಿಕ್ಸ್, ಮಾಹಿತಿ ನಿರ್ವಹಣೆ, ಅಥವಾ ಅಂತಹುದೇ ಕ್ಷೇತ್ರದಲ್ಲಿ ಬ್ಯಾಚುಲರ್ ಪದವಿ
ಸಂಬಳ ಶ್ರೇಣಿ: ವಾರ್ಷಿಕವಾಗಿ 7+ ಲಕ್ಷ ರೂಪಾಯಿ
ಉನ್ನತ ನೇಮಕಾತಿ ಕಂಪನಿಗಳು: ಮೈಕ್ರೋಸಾಫ್ಟ್, ಸಿಟಿ, ಆಕ್ಸೆಂಚರ್, ಮು ಸಿಗ್ಮಾ, ವಿಪ್ರೋ ಮತ್ತು ಅಮೆಜಾನ್
ಉನ್ನತ ಉದ್ಯೋಗ ಸ್ಥಳಗಳು: ನವದೆಹಲಿ, ಬೆಂಗಳೂರು, ಮುಂಬೈ


Click it and Unblock the Notifications