ಮಕ್ಕಳಿಗೆ ಹೆಚ್ಚು ಪಾಕೆಟ್ ಮನಿ ನೀಡುವುದು ಯಾರು? ತಾಯಿಯ ಅಥವಾ ತಂದೆಯಾ? ಎಂಬುವುದನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಪೋಷಕರ ಅಭಿಪ್ರಾಯವನ್ನು ಪಡೆದು ಈ ಅಧ್ಯಯನ ನಡೆಸಲಾಗಿದ್ದು, ಮಕ್ಕಳಿಗೆ ಅಧಿಕ ಪಾಕೆಟ್ ಮನಿ ನೀಡುವುದು ಯಾರು, ತಾಯಿಯ ಅಥವಾ ತಂದೆಯ ಎಂಬುವುದು ತಿಳಿದು ಬಂದಿದೆ.
ಒಂದು ಲಕ್ಷಕ್ಕೂ ಹೆಚ್ಚು ಪೋಷಕರ ಅಧ್ಯಯನದ ಪ್ರಕಾರ, ತಾಯಂದಿರು ಮಕ್ಕಳಿಗೆ ತಂದೆಗಿಂತ ಹೆಚ್ಚು ಪಾಕೆಟ್ ಮನಿ ನೀಡುತ್ತಾರೆ. ಜುನಿಯೊ ಎಂಬ ಸಂಸ್ಥೆ ಈ ಅಧ್ಯಯನವನ್ನು ನಡೆಸಿದೆ. ಅಧ್ಯಯನವು ಮಕ್ಕಳು ತಾಯಂದಿರಿಂದ ಸರಾಸರಿ 1500 ರೂಪಾಯಿಗಳನ್ನು ಪಾಕೆಟ್ ಮನಿಯಾಗಿ ಪಡೆಯುತ್ತಾರೆ ಎಂದು ಉಲ್ಲೇಖ ಮಾಡಿದೆ. ಆದರೆ ಆದರೆ ಅಪ್ಪಂದಿರು ಕಡಿಮೆ ಪಾಕೆಟ್ ಮನಿ ನೀಡುತ್ತಾರೆ. ಹೆಚ್ಚೆಂದರೆ 1100 ರೂಪಾಯಿ ಪಾಕೆಟ್ ಮನಿಯನ್ನು ತಂದೆಯರು ನೀಡುತ್ತಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಪಾಕೆಟ್ ಮನಿ ಪಡೆಯುವ 50 ಪ್ರತಿಶತದಷ್ಟು ಮಕ್ಕಳು ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್, ಪುಣೆ, ಚಂಡೀಗಢ ಮತ್ತು ಲಕ್ನೋದವರು ಆಗಿದ್ದಾರೆ. ಅಂದರೆ ದೇಶದಲ್ಲಿ ಹೆಚ್ಚಾಗಿ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್, ಪುಣೆ, ಚಂಡೀಗಢ ಮತ್ತು ಲಕ್ನೋದ ಮಕ್ಕಳು ಮಾಸಿಕ ಪಾಕೆಟ್ ಮನಿಯನ್ನು ಪಡೆಯುತ್ತಾರೆ. ಇತರೆ ನಗರಗಳಿಗಿಂತ ಅಧಿಕವಾಗಿ ಮಾಸಿಕ ಭತ್ಯೆ ಈ ನಗರಗಳ ಜನರಿಗೆ ಲಭ್ಯವಾಗುತ್ತದೆ ಎಂದು ಅಧ್ಯಯನವು ತೋರಿಸಿದೆ.
ಮಕ್ಕಳಿಗೆ ಹಣದ ನಿರ್ವಹಣೆ ಪಾಠ ಕಲಿಸುವ ತಾಯಂದಿರು
ಮಕ್ಕಳಿಗೆ ಹಣ ನಿರ್ವಹಣೆಯ ಪಾಠಗಳನ್ನು ಕಲಿಸುವಲ್ಲಿ ಮತ್ತು ಅವರಿಗೆ ದೃಢವಾದ ಆರ್ಥಿಕ ಅಡಿಪಾಯವನ್ನು ಸ್ಥಾಪಿಸುವಲ್ಲಿ ತಾಯಂದಿರು ಪ್ರಮುಖ ಪಾತ್ರ ವಹಿಸುತ್ತಾರೆ. ತಾಯಂದಿರು ತಮ್ಮ ಮಕ್ಕಳಿಗೆ ಮಾಸಿಕ ಬಜೆಟ್ ನಿರ್ವಹಣೆ ಬಗ್ಗೆ ತಿಳಿಸುವುದು, ಖರ್ಚುಗಳನ್ನು ನಿಯಂತ್ರಿಸುವುದು, ಉಳಿತಾಯ ಮತ್ತು ಅವರ ಎಲ್ಲಾ ವಹಿವಾಟುಗಳ ಬಗ್ಗೆ ನಿಗಾ ಇಡುವಂತಹ ಕಾರ್ಯವನ್ನು ಮಾಡುತ್ತಾರೆ. ಮಕ್ಕಳಿಗೆ ಹೆಚ್ಚಾಗಿ ಹಣಕಾಸಿನ ನಿರ್ವಹಣೆ ಕಲಿಸುವವರು ತಾಯಂದಿರು ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.
ಮಕ್ಕಳು ತಮ್ಮ ಪಾಕೆಟ್ ಮನಿಯಿಂದ ಏನು ಮಾಡುತ್ತಾರೆ?
ಮಕ್ಕಳು ಹೆಚ್ಚಾಗಿ ತಮ್ಮ ಪಾಕೆಟ್ ಮನಿಯಲ್ಲಿ ಮೊಬೈಲ್ ರೀಚಾರ್ಜ್, ತಮ್ಮ ಬೈಕ್ ಅಥವಾ ಸ್ಕೂಟರ್‌ಗೆ ಪೆಟ್ರೋಲ್ ಹಾಕಲು, ಕ್ಯಾಬ್ ರೈಡ್‌ಗಳು, ಆಹಾರಕ್ಕಾಗಿ ಖರ್ಚು ಮಾಡುತ್ತಾರೆ ಎಂದು ಅಧ್ಯಯನವು ತೋರಿಸುತ್ತದೆ. ಇದನ್ನು ಹೊರತುಪಡಿಸಿ ಮಕ್ಕಳು ಹೆಚ್ಚಾಗಿ ಹಣವನ್ನು ಖರ್ಚು ಮಾಡುವುದು ಜೊಮಾಟೊ, ಸ್ವಿಗ್ಗಿ, ಜೆಪ್ಟೊ, ಪೇಟಿಎಂ, ಫೋನ್‌ಪೇ, ಬ್ಲಿಂಕಿಟ್, ಫ್ಲಿಫ್‌ಕಾರ್ಟ್ ಹಾಗೂ ಅಮೆಜಾನ್‌ನಲ್ಲಿ ಎಂದು ಅಧ್ಯಯನವು ಹೇಳಿದೆ.
ಮಕ್ಕಳಿಗೆ ಆರ್ಥಿಕ ಶಿಸ್ತು ಕಲಿಸುವ ತಾಯಂದಿರು
ಅಧ್ಯಯನದ ಆವಿಷ್ಕಾರಗಳ ಕುರಿತು ಪ್ರತಿಕ್ರಿಯಿಸಿದ ಜುನಿಯೊದ ಸಹ-ಸಂಸ್ಥಾಪಕ ಅಂಕಿತ್ ಗೆರಾ, "ಮಕ್ಕಳಿಗೆ ಆರ್ಥಿಕ ಶಿಸ್ತನ್ನು ಕಲಿಸುವಲ್ಲಿ ತಾಯಂದಿರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆರ್ಥಿಕವಾಗಿ ಸಾಕ್ಷರ ಮಕ್ಕಳನ್ನು ಬೆಳೆಸುವುದಕ್ಕೆ ತಾಯಂದಿರು ಶ್ರಮಿಸುತ್ತಾರೆ. ಮಕ್ಕಳಿಗೆ ಆರೋಗ್ಯಕರ ಖರ್ಚಿನ ಬಗ್ಗೆಯೂ ತಾಯಂದಿರು ತಿಳಿಸುತ್ತಾರೆ. ಉಳಿತಾಯ ಮಾಡಬೇಕು ಎಂಬುವುದನ್ನು ಕೂಡಾ ಮಕ್ಕಳಿಗೆ ತಾಯಂದಿರು ಹೇಳಿಕೊಡುತ್ತಾರೆ," ಎಂದು ತಿಳಿಸಿದ್ದಾರೆ.
ಹಣದ ಮೌಲ್ಯ ತಿಳಿಸುವ ಅಮ್ಮ
"ಕಷ್ಟದ ದಿನಕ್ಕಾಗಿ ಉಳಿತಾಯವು ಪೋಷಕರ ಅತ್ಯಗತ್ಯ ಭಾಗವಾಗಿದೆ. ಪೋಷಕರು ಮುಂದಿನ ಪೀಳಿಗೆಗೆ ಚಿಕ್ಕ ವಯಸ್ಸಿನಲ್ಲೇ ಹಣದ ಮೌಲ್ಯವನ್ನು ಕಲಿಸುವ ಮೂಲಕ ಸಬಲರಾಗಬಹುದು. ಇಂದಿನ ಮಕ್ಕಳು ಯಾವುದೇ ವಿಚಾರವನ್ನು ಶೀಘ್ರವಾಗಿ ಕಲಿಯುತ್ತಾರೆ. ತಂತ್ರಜ್ಞಾನದ ಬಗ್ಗೆ ತಿಳಿವಳಿಕೆ ಇಂದಿನ ಮಕ್ಕಳಿಗೆ ಇದೆ. ಆದ್ದರಿಂದ ಪೋಷಕರು ಅವರಿಗೆ ಆರ್ಥಿಕ ಶಿಸ್ತು, ಬಜೆಟ್ ಮತ್ತು ಉಳಿತಾಯ ಅಭ್ಯಾಸಗಳನ್ನು ಕಲಿಸುವುದು ಸುಲಭವಾಗಿದೆ," ಎಂದು ಕೂಡಾ ಅಧ್ಯಯನದ ಆವಿಷ್ಕಾರಗಳ ಕುರಿತು ಪ್ರತಿಕ್ರಿಯಿಸಿದ ಜುನಿಯೊದ ಸಹ-ಸಂಸ್ಥಾಪಕ ಅಂಕಿತ್ ಗೆರಾ ಹೇಳಿದ್ದಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications