ಸಿಲಿಕಾನ್ ಸಿಟಿ ಎಂದೇ ಪ್ರಸಿದ್ಧವಾದ ಬೆಂಗಳೂರು ಸಾರ್ವಜನಿಕ ಸಾರಿಗೆಗೆ ಅತೀ ಜನಪ್ರಿಯವಾಗಿದೆ. ಅದರಲ್ಲೂ ಮುಖ್ಯವಾಗಿ ನಮ್ಮ ಮೆಟ್ರೋ ಬೆಂಗಳೂರಿಗರ ಜೀವನದ ಒಂದು ಭಾಗವಾಗಿದೆ. ಪ್ರಸ್ತುತ ಪರ್ಪಲ್ ಮತ್ತು ಗ್ರೀನ್ ಲೇನ್‌ಗಳು ಇದ್ದು, ಇನ್ನು ಹೊಸದಾಗಿ ಬ್ಲ್ಯೂ ಲೇನ್ ಅಥವಾ ನೀಲಿ ಲೇನ್ ಆರಂಭವಾಗಲಿದೆ. ಈಗಾಗಲೇ ಹಳದಿ ಲೇನ್ ನಿರ್ಮಾಣ ಕಾರ್ಯ ನಡೆಯುತ್ತಿದೆ.
ನಮ್ಮ ಮೆಟ್ರೋ ನೀಲಿ ಲೇನ್ ಎರಡು ಹಂತಗಳಲ್ಲಿ ಹಂತ ಒಂದಾದ 2ಎ ಮತ್ತು ಹಂತ ಎರಡಾದ 2ಬಿ ಸೇರಿದೆ. 2ಎ ಸೆಂಟ್ರಲ್ ಸಿಲ್ಟ್ ಬೋರ್ಡ್‌ನಿಂದ ಕೆಆರ್ ಪುರಂವರೆಗೆ 13 ಮೆಟ್ರೋ ಸ್ಟೇಷನ್‌ಗಳನ್ನು ಹೊಂದಿದೆ. 2ಬಿ ಕೆಆರ್ ಪುರಂನಿಂದ ಕೆಂಪೆಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ವರೆಗೆ 17 ಸ್ಟೇಷನ್‌ಗಳನ್ನು ಹೊಂದಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಪೇಸ್ 2ಎ ಬೆಂಗಳೂರು ಏರ್‌ಪೋರ್ಟ್ ಮೆಟ್ರೋ
* ರಾಜ್ಯ ಸಚಿವಾಲಯವು ಪೇಸ್ 2ಎ ಅನ್ನು ಮಾರ್ಚ್ 1, 2017ರಂದು ಅನುಮೋದಿಸಿದೆ.
* ಡಿಸೆಂಬರ್ 2019ರಲ್ಲಿ 5994 ಕೋಟಿ ರೂಪಾಯಿಗಳ ಟೆಂಡರ್ ಅನ್ನು ಕರೆಯಲಾಗಿದೆ. 2020ರಲ್ಲಿ ಹಲವಾರು ಸಂಸ್ಥೆಗಳು ಬಿಡ್ ಸಲ್ಲಿಸಿದೆ.
* ಯೋಜನೆ ಎರಡು ಪ್ಯಾಕೇಜ್‌ಗಳನ್ನು ಹೊಂದಿದೆ. ಮೊದಲ ಪ್ಯಾಕೇಜ್ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ 2.84 ಕಿಲೋ ಮೀಟರ್ ಮತ್ತು 9.859 ಕಿಲೋ ಮೀಟರ್‌ನ ಆರು ಸ್ಟೇಷನ್‌ಗಳು
* ಎರಡನೇ ಪ್ಯಾಕೇಜ್ 8.377 ಕಿಲೋ ಮೀಟರ್‌ನ 7 ಸ್ಟೇಷನ್‌ಗಳು ಆಗಿದೆ. ಇದು 1.097 ಕಿಲೋ ಮೀಟರ್ ಲೇನ್ ಒಳಗೊಂಡಿದೆ.
* ಕೇಂದ್ರ ಸರ್ಕಾರದಿಂದ 2021ರಲ್ಲಿ ಅನುಮೋದನೆ ಲಭ್ಯವಾಗಿದೆ. 2021ರ ಮೇಯಲ್ಲಿ ಟೆಂಡರ್ ಲಭಿಸಿದೆ. ಆಗಸ್ಟ್‌ನಲ್ಲಿ 2ಎ ಪೇಸ್ ಆರಂಭವಾಗಿದೆ.
ಎಷ್ಟು ಕೆಲಸ ಪೂರ್ಣ?
* ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂವರೆಗಿನ ಈ ಮೆಟ್ರೋ ಯೋಜನೆ ಕೆಂಪೆಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ನೇರ ಲಿಂಕ್ ಇರಲಿದೆ.
* ಡಿಸೆಂಬರ್ 2023 ರಲ್ಲಿ ಬ್ಲ್ಯೂ ಲೇನ್ ಪೇಸ್ 2ಎ ಶೇಕಡ 39 ರಷ್ಟು ಪೂರ್ಣಗೊಂಡಿದೆ.
* ದೇವರಬೀಸನಹಳ್ಳಿ ಫ್ಲೈ ಓವರ್ ಕೂಡಾ ಪ್ರಗತಿಯಲ್ಲಿದೆ.
* ನಮ್ಮ ಮೆಟ್ರೋ ನೆಟ್‌ವರ್ಕ್ ಯೋಜನೆಯು 72.1 ಕಿಲೋ ಮೀಟರ್‌ನ ಹೊಸ ಲೇನ್ ಅನ್ನು ವಿಸ್ತರಿಸಲಿದೆ.
* ನಮ್ಮ ಮೆಟ್ರೋದ ಪೇಸ್ 2ಎ ಯೋಜನೆಯು 56000 ಕೋಟಿ ರೂಪಾಯಿಯದ್ದಾಗಿದೆ.
* 2026ರ ವೇಳೆಗೆ ಈ ಯೋಜನೆಯು ಪೂರ್ಣವಾಗುವ ನಿರೀಕ್ಷೆಯಿದೆ.
ಪೇಸ್ 2ಎ ಸ್ಟೇಷನ್‌ಗಳು
1. ಸೆಂಟ್ರಲ್ ಸಿಲ್ಕ್ ಬೋರ್ಡ್
2. ಎಚ್‌ಎಸ್‌ಆರ್ ಲೇಔಟ್
3. ಅಗರ
4. ಇಬ್ಬಲೂರು
5. ಬೆಳ್ಳಂದೂರು
6. ಕಾಡುಬೀಸನಹಳ್ಳಿ
7. ಕೋಡಿಬೀಸನಹಳ್ಳಿ
8. ಮಾರತಹಳ್ಳಿ
9. ಇಸ್ರೋ
10. ದೊಡ್ಡನೆಕ್ಕುಂಡಿ
11. ಡಿಆರ್‌ಡಿಒ ಸ್ಪೋರ್ಟ್ ಕಾಂಪ್ಲೆಕ್ಸ್
12. ಸರಸ್ವತಿ ನಗರ
13. ಕೆಆರ್ ಪುರಂ
ಪೇಸ್ 2ಬಿ ಸ್ಟೇಷನ್‌ಗಳು
1. ಕಸ್ತೂರಿನಗರ
2. ಹೊರಮಾವು
3. ಎಚ್‌ಆರ್‌ಬಿಆರ್ ಲೇಔಟ್
4. ಕಲ್ಯಾಣ ನಗರ
5. ಎಚ್‌ಬಿಆರ್ ಲೇಔಟ್
6. ನಾಗವರ
7. ವೀರಣ್ಣಪಲ್ಯ
8. ಕೆಂಪಪುರ
9. ಹೆಬ್ಬಾಳ
10. ಕೊಡಿಗೆಹಳ್ಳಿ
11. ಜಕ್ಕರು ಕ್ರಾಸ್
12. ಜಕ್ಕರು ಪ್ಲಾಂಟೇಷನ್
13. ಯಲಹಂಕ
14. ಬಗಲೂರು ಕ್ರಾಸ್
15. ಬೆಟ್ಟಹಲಸೂರು
16. ಚಿಕ್ಕಜಲ
17. ದೊಡ್ಡಜಲ
18. ಏರ್‌ಪೋರ್ಟ್ ಸಿಟಿ
19. ಕೆಐಎಎಲ್ ಟರ್ಮಿನಲ್


Click it and Unblock the Notifications