ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮ್ಯಾನೇಜರ್ ಸಿವಿಲ್ (ಸಿಎಸ್‌ಡಬ್ಲ್ಯೂ), ಮ್ಯಾನೇಜರ್ (ಪಿ-ವೇ) ಮತ್ತು ಮ್ಯಾನೇಜರ್ (ಕಾರ್ಯಾಚರಣೆಗಳು) ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು, ಆನ್‌ಲೈನ್ ಅರ್ಜಿಗಳನ್ನು ಹಾಕಲು ಆಸಕ್ತಿಯಿರುವ ಅಭ್ಯರ್ಥಿಗಳಿಗೆ ತಿಳಿಸಿದೆ.
ಬಿಎಂಆರ್‌ಸಿ ನೇಮಕಾತಿ 2023 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಈ 6 ಹುದ್ದಗಳಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 75000 ರೂಪಾಯಿ ವೇತನವನ್ನು ನೀಡಲಾಗುತ್ತದೆ. 3 ವರ್ಷಗಳ ಅವಧಿಗೆ ಒಪ್ಪಂದದ ಆಧಾರದ ಮೇಲೆ ಈ ನೇಮಕಾತಿಯನ್ನು ಮಾಡಲಾಗುತ್ತದೆ. ಯಾರೆಲ್ಲ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು, ವಯೋಮಿತಿ, ಹೇಗೆ ಅರ್ಜಿ ಸಲ್ಲಿಸುವುದು ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ....

ಹುದ್ದೆಯ ಹೆಸರು, ಹುದ್ದೆಗಳು, ವಯೋಮಿತಿ ಇತರೆ ಮಾಹಿತಿ
ಹುದ್ದೆಯ ಮಾಹಿತಿ: ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮ್ಯಾನೇಜರ್ ಸಿವಿಲ್ (ಸಿಎಸ್‌ಡಬ್ಲ್ಯೂ), ಮ್ಯಾನೇಜರ್ (ಪಿ-ವೇ) ಮತ್ತು ಮ್ಯಾನೇಜರ್ (ಕಾರ್ಯಾಚರಣೆಗಳು) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಹುಡುಕುತ್ತಿದೆ. ಬಿಎಂಆರ್‌ಸಿಎಲ್‌ನ ನೇಮಕಾತಿ 2023ರ ಪ್ರಕಾರ ಒಟ್ಟಾಗಿ ಆರು ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ.
Job Alert: ಐಡಿಬಿಐ ಬ್ಯಾಂಕ್‌ನಲ್ಲಿ 2100 ಹುದ್ದೆ ಖಾಲಿ, ಈಗಲೇ ಅರ್ಜಿ ಸಲ್ಲಿಸಿ
ವಯೋಮಿತಿ, ಸಂಬಳ, ಅವಧಿ: ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 40 ವರ್ಷಗಳು ಆಗಿದೆ. ಬಿಎಂಆರ್‌ಸಿ ನೇಮಕಾತಿ 2023ಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 75000 ರೂಪಾಯಿ ವೇತನವನ್ನು ನೀಡಲಾಗುತ್ತದೆ. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ. 3 ವರ್ಷಗಳ ಒಪ್ಪಂದವಿರುತ್ತದೆ.
ಅರ್ಹತೆ, ಅನುಭವದ ವಿವರ
ಸಿವಿಲ್ ಮ್ಯಾನೇಜರ್ (ಸಿಎಸ್‌ಡಬ್ಲ್ಯೂ): ಅರ್ಜಿದಾರರು ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು. ರೈಲ್ವೇ/ ಮೆಟ್ರೋ ರೈಲ್ವೇ/ರೈಲ್ವೆ ಪಿಎಸ್‌ಯುನಲ್ಲಿ "ಶಾಶ್ವತ ಮಾರ್ಗ / ಟ್ರ್ಯಾಕ್ ನಿರ್ವಹಣೆ / ಸಿವಿಲ್ ನಿರ್ಮಾಣ ಮತ್ತು ನಿರ್ವಹಣೆ" ಯಲ್ಲಿ ಕಾರ್ಯನಿರ್ವಹಿಸಿದ 10 ವರ್ಷಗಳ ಅನುಭವವನ್ನು ಹೊಂದಿರಬೇಕು.
ಪಿ-ವೇ ಮ್ಯಾನೇಜರ್: ಅರ್ಜಿದಾರರು ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಹೊಂದಿರಬೇಕು. ರೈಲ್ವೇ/ ಮೆಟ್ರೋ/ರೈಲ್ವೆ ಪಿಎಸ್‌ಯುನಲ್ಲಿ ಶಾಶ್ವತ ಮಾರ್ಗ / ಟ್ರ್ಯಾಕ್ ನಿರ್ವಹಣೆ / ನಿರ್ಮಾಣದಲ್ಲಿ ಕಾರ್ಯನಿರ್ವಹಿಸಿ 10 ವರ್ಷಗಳ ಅನುಭವವನ್ನು ಹೊಂದಿರಬೇಕು.
ಮ್ಯಾನೇಜರ್ (ಕಾರ್ಯಾಚರಣೆಗಳು): ಅರ್ಜಿದಾರರು ಎಲೆಕ್ಟ್ರಿಕಲ್ / ಮೆಕ್ಯಾನಿಕಲ್ / ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ / ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಹೊಂದಿರಬೇಕು. ರೈಲ್ವೇ / ಮಾಡರ್ನ್ ಮೆಟ್ರೋ ಸಿಸ್ಟಮ್‌ಗಳಲ್ಲಿ ನಿರ್ವಹಣೆ / ಯೋಜನೆ / ಕಾರ್ಯಾಚರಣೆಯಲ್ಲಿ 10 ವರ್ಷಗಳ ಅನುಭವವನ್ನು ಹೊಂದಿರಬೇಕು. ಅರ್ಜಿದಾರರು ಎಲೆಕ್ಟ್ರಿಕ್ ಲೊಕೊ / ಇಎಂಯು / ಮಾಡರ್ನ್ ಮೆಟ್ರೋ ಕಾರ್ಯಾಚರಣೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವವನ್ನು ಹೊಂದಿರಬೇಕು.
ಆಯ್ಕೆ, ಕೊನೆಯ ದಿನಾಂಕ
ಇಂಟರ್‌ವೀವ್ ಅಥವಾ ಸಂದರ್ಶನ ನಡೆಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಹಾಜರಾಗಲು ಇಮೇಲ್/ ಎಸ್‌ಎಂಎಸ್ ಮೂಲಕ ತಿಳಿಸಲಾಗುವುದು. ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 22.12.2023 ಮತ್ತು ಅರ್ಜಿಯ ಸಹಿ ಮಾಡಿದ ಪ್ರಿಂಟ್‌ಔಟ್‌ನ ರಸೀದಿಯನ್ನು ಸಲ್ಲಿಸಲು ಕೊನೆಯ ದಿನಾಂಕ 27.12.2023 ಆಗಿದೆ.
ಹೇಗೆ ಅರ್ಜಿ ಸಲ್ಲಿಸುವುದು ತಿಳಿಯಿರಿ
ಅರ್ಹತೆ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಬಿಎಂಆರ್‌ಸಿಎಲ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸರಿಯಾಗಿ ಭರ್ತಿ ಮಾಡಿದ ಆನ್‌ಲೈನ್ ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಂಡು ಲಕೋಟೆಯನ್ನು APPLICATION FOR THE POST OF _________________" ಎಂದು ಬರೆದು ಜನರಲ್ ಮ್ಯಾನೇಜರ್ (ಎಚ್‌ಆರ್) ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, III ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆಎಚ್ ರೋಡ್, ಶಾಂತಿನಗರ, ಬೆಂಗಳೂರು 560027 ಕ್ಕೆ ಕೊನೆಯ ದಿನಾಂಕಕ್ಕೂ ಮೊದಲು ಸಲ್ಲಿಸಬೇಕು. ಬೇರೆ ಯಾವುದೇ ವಿಧಾನದ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.


Click it and Unblock the Notifications