For Quick Alerts
ALLOW NOTIFICATIONS  
For Daily Alerts

ಸಣ್ಣ ಉಳಿತಾಯ ದರಗಳ ಬಡ್ಡಿಯಲ್ಲಿ ಬದಲಾವಣೆ ಇಲ್ಲ: ಯಾವುದಕ್ಕೆ ಎಷ್ಟು ದರ?

|

ನಿಶ್ಚಿತವಾದ ಆದಾಯಕ್ಕಾಗಿ ಹೂಡಿಕೆ ಮಾಡುವವರಿಗೆ ಶುಭ ಸುದ್ದಿ ಇದು. ಸಣ್ಣ ಉಳಿತಾಯ ಯೋಜನೆಗಳು ಅಥವಾ ಪೋಸ್ಟ್ ಆಫೀಸ್ ಯೋಜನೆಗಳ ಬಡ್ಡಿ ದರವನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ. 2020- 21ನೇ ಆರ್ಥಿಕ ವರ್ಷದ ಜುಲೈ- ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಇದೇ ಬಡ್ಡಿ ದರ ಇರಲಿದೆ. ಈ ಬಗ್ಗೆ ಜುಲೈ 1, 2020ರಂದು ಅಧಿಸೂಚನೆ ಹೊರಡಿಸಿದೆ.

ಸರ್ಕಾರದಿಂದ ಬದಲಾಗುವ ಬಡ್ಡಿ ದರದ ಬಾಂಡ್; ಇಲ್ಲಿದೆ ಪೂರ್ಣ ಮಾಹಿತಿಸರ್ಕಾರದಿಂದ ಬದಲಾಗುವ ಬಡ್ಡಿ ದರದ ಬಾಂಡ್; ಇಲ್ಲಿದೆ ಪೂರ್ಣ ಮಾಹಿತಿ

ಅಧಿಸೂಚನೆ ಪ್ರಕಾರ, ಆರ್ಥಿಕ ವರ್ಷ 2020- 21ನೇ ಆರ್ಥಿಕ ವರ್ಷದ ಜುಲೈ- ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಪಬಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) 7.10 ಪರ್ಸೆಂಟ್ ಇರಲಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು (ಎಸ್ ಸಿಎಸ್ ಎಸ್) 7.4 ಪರ್ಸೆಂಟ್ ಬಡ್ಡಿ ಪಡೆಯಲಿದೆ. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಗೆ 5.5ರಿಂದ 6.7 ಪರ್ಸೆಂಟ್ ಬಡ್ಡಿ ದೊರೆಯಲಿದೆ.

ಸಣ್ಣ ಉಳಿತಾಯ ದರಗಳ ಬಡ್ಡಿಯಲ್ಲಿ ಬದಲಾವಣೆ ಇಲ್ಲ: ಯಾವುದಕ್ಕೆ ಎಷ್ಟು ದರ

ಜುಲೈ 1, 2020ರಿಂದ ಸೆಪ್ಟೆಂಬರ್ 30, 2020ರ ಮಧ್ಯೆ ಇದೇ ಬಡ್ಡಿ ದರ ಮುಂದುವರಿಯಲಿದೆ. ಉಳಿತಾಯ ಯೋಜನೆಗಳ ಬಡ್ಡಿ ದರದ ಮಾಹಿತಿ ಹೀಗಿದೆ:

ಉಳಿತಾಯ ಡೆಪಾಸಿಟ್ 4% (ವಾರ್ಷಿಕ ಬಡ್ಡಿ ಸೇರ್ಪಡೆ)

ಒಂದು ವರ್ಷದ ಟೈಮ್ ಡೆಪಾಸಿಟ್ 5.5% (ತ್ರೈಮಾಸಿಕ ಬಡ್ಡಿ ಸೇರ್ಪಡೆ)

ಎರಡು ವರ್ಷದ ಟೈಮ್ ಡೆಪಾಸಿಟ್ 5.5% (ತ್ರೈಮಾಸಿಕ ಬಡ್ಡಿ ಸೇರ್ಪಡೆ)

ಮೂರು ವರ್ಷದ ಟೈಮ್ ಡೆಪಾಸಿಟ್ 5.5% (ತ್ರೈಮಾಸಿಕ ಬಡ್ಡಿ ಸೇರ್ಪಡೆ)

ಐದು ವರ್ಷದ ಟೈಮ್ ಡೆಪಾಸಿಟ್ 6.7% (ತ್ರೈಮಾಸಿಕ ಬಡ್ಡಿ ಸೇರ್ಪಡೆ)

ಐದು ವರ್ಷದ ರೆಕರಿಂಗ್ ಡೆಪಾಸಿಟ್ 5.8% (ತ್ರೈಮಾಸಿಕ ಬಡ್ಡಿ ಸೇರ್ಪಡೆ)

ಐದು ವರ್ಷದ ಹಿರಿಯ ನಾಗರಿಕರ ಉಳಿತಾಯ ಯೋಜನೆ 7.4% (ತ್ರೈಮಾಸಿಕ ಮತ್ತು ಬಡ್ಡಿ ಪಾವತಿ)

ಐದು ವರ್ಷದ ತಿಂಗಳ ಆದಾಯ ಖಾತೆ 6.6% (ಮಾಸಿಕ ಮತ್ತು ಪಾವತಿ)

ಐದು ವರ್ಷದ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ 6.8% (ವಾರ್ಷಿಕ)

ಪಬ್ಲಿಕ್ ಪ್ರಾವಿಡೆಂಟ್ ಫಂಡ್ 7.1% (ವಾರ್ಷಿಕ)

ಕಿಸಾನ್ ವಿಕಾಸ್ ಪತ್ರ 6.9% (124 ತಿಂಗಳಿಗೆ ಮೆಚ್ಯೂರ್ ಆಗುತ್ತದೆ) (ವಾರ್ಷಿಕ)

ಸುಕನ್ಯಾ ಸಮೃದ್ಧಿ ಯೋಜನಾ 7.6% (ವಾರ್ಷಿಕ)
(ಮೂಲ: ಅಂಚೆ ಇಲಾಖೆ ಸುತ್ತೋಲೆ)

English summary

No Change in Small Savings Rates for July-Sept Quarter

Government decided to not change small savings scheme interest rate. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X