ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಿಂದ (ಎನ್‌ಪಿಎಸ್) ನಿರ್ಗಮಿಸಿದ ನಂತರ ವರ್ಷಾಶನ ಪಾವತಿಗಳನ್ನು ಪಡೆಯಲು ಮತ್ತು ಸರಳಗೊಳಿಸುವ ಸಲುವಾಗಿ ಏಪ್ರಿಲ್ 1, 2023 ರಂತೆ ಚಂದಾದಾರರು ಕೆಲವು ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕೆಂದು ಕಡ್ಡಾಯಗೊಳಿಸಿದೆ.
"ಚಂದಾದಾರರ ಹಿತಾಸಕ್ತಿ ಮತ್ತು ವರ್ಷಾಶನ ಆದಾಯದ ಸಕಾಲಿಕ ಪಾವತಿಯೊಂದಿಗೆ ಅವರಿಗೆ ಪ್ರಯೋಜನವಾಗಲು, ದಾಖಲೆಗಳ ಅಪ್‌ಲೋಡ್ 1ನೇ ಏಪ್ರಿಲ್ 2023 ರಿಂದ ಕಡ್ಡಾಯವಾಗಿರುತ್ತದೆ," ಎಂದು ಭಾರತದಲ್ಲಿ ಪಿಂಚಣಿಗಳ ಒಟ್ಟಾರೆ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕಾಗಿ ಇರುವ ಸಂಸ್ಥೆಯಾದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಹೇಳಿದೆ.

ಎನ್‌ಪಿಎಸ್ ಚಂದಾದಾರರಿಗೆ ಹೊಸ ಬದಲಾವಣೆಗಳು ಯಾವುವು?
ಎನ್‌ಪಿಎಸ್ ಚಂದಾದಾರರು ಈಗ ಕೆಲವೊಂದು ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. ಎನ್‌ಪಿಎಸ್ ಯೋಜನೆ ಅಂತ್ಯ ಮತ್ತು ವರ್ಷಾಶನದ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯಬೇಕಾದರೆ, ಈ ದಾಖಲೆಗಳನ್ನು ಅಪ್‌ಲೋಡ್ ಮಾಡುವುದನ್ನು ಎನ್‌ಪಿಎಸ್ ಚಂದಾದಾರರಿಗೆ ಕಡ್ಡಾಯಗೊಳಿಸಲಾಗಿದೆ. ಕೆಲವು ಕೆವೈಸಿ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಆ ದಾಖಲೆಗಳ ಪಟ್ಟಿ ಹೀಗಿದೆ:
* ಎನ್‌ಪಿಎಸ್ ವಿತ್‌ಡ್ರಾ/ ಎಕ್ಸಿಟ್ ಫಾರ್ಮ್
* ಹಿಂತೆಗೆದುಕೊಳ್ಳುವ ನಮೂನೆಯಲ್ಲಿ ಉಲ್ಲೇಖಿಸಿದಂತೆ ಗುರುತು ಮತ್ತು ವಿಳಾಸದ ಪುರಾವೆ
* ನಿಮ್ಮ ಬ್ಯಾಂಕ್ ಖಾತೆಯ ಪುರಾವೆ
* ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ (PRAN) ಕಾರ್ಡ್ ಪ್ರತಿ
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ: ಕ್ಯಾಲ್ಕುಲೇಟರ್
ನಿಮ್ಮ ಮಾಸಿಕ ಕೊಡುಗೆ 3000 ರೂಪಾಯಿ ಆಗಿದ್ದರೆ, ನೀವು 34 ವರ್ಷ ವಯಸ್ಸಿನವರಾಗಿದ್ದರೆ ಪಿಂಚಣಿ ಖಾತೆ ಪಾವತಿಗಳನ್ನು ಮಾಡಲು ನಿಮಗೆ ಇನ್ನೂ 26 ವರ್ಷಗಳಿವೆ. ನೀವು ಶೇಕಡ 10ರಷ್ಟು ವಾರ್ಷಿಕ ಆರ್‌ಒಐ ಅಥವಾ ಬಡ್ಡಿ ದರವನ್ನು ನೀವು ಪಡೆಯಬಹುದಾಗಿದೆ. ಎನ್‌ಪಿಎಸ್‌ನಲ್ಲಿ 9.36 ಲಕ್ಷ ರೂಪಾಯಿಯ ಮೂಲ ಹೂಡಿಕೆಯೊಂದಿಗೆ ಎನ್‌ಪಿಎಸ್ ಲೆಕ್ಕಾಚಾರಗಳ ಪ್ರಕಾರ ನೀವು ಮೆಚ್ಯೂರಿಟಿ ಸಂದರ್ಭದಲ್ಲಿ 44.35 ಲಕ್ಷ ರೂಪಾಯಿಯನ್ನು ಪಡೆಯಬಹುದಾಗಿದೆ.
ಎನ್‌ಪಿಎಸ್ ಯೋಜನೆಯ ಪ್ರಯೋಜನಗಳು
1. ಫ್ಲೆಕ್ಸಿಬಿಲಿಟಿ ಇರುವ ಯೋಜನೆ: ಯೋಜನೆಯಲ್ಲಿ ಫ್ಲೆಕ್ಸಿಬಿಲಿಟಿ ಇದೆ. ನೀವು ಎಷ್ಟು ಮೊತ್ತವನ್ನು ಹೂಡಿಕೆ ಮಾಡಲು ಬಯಸುತ್ತೀರಿ ಎಂದು ನೀವೇ ನಿರ್ಧಾರ ಮಾಡಿಕೊಳ್ಳಬಹುದು. ನೀವು ಯಾವುದೇ ಸಂದರ್ಭದಲ್ಲಿ ಹೂಡಿಕೆ ಆಯ್ಕೆಯನ್ನು ಬದಲಾವಣೆ ಮಾಡಬಹುದು.
2. ತೆರಿಗೆ ಪ್ರಯೋಜನ: ನೀವು ಎನ್‌ಪಿಎಸ್‌ನಲ್ಲಿ ಹೂಡಿಕೆಯನ್ನು ಮಾಡಿದರೆ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಆದಾಯ ತೆರೊಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ ಈ ಹೂಡಿಕೆಯಲ್ಲಿ ಪಡೆದ ಬಡ್ಡಿದರವು ತೆರಿಗೆ ಮುಕ್ತವಾಗಿರುತ್ತದೆ.
3. ಸರ್ಕಾರದ ಕೊಡುಗೆ: ನಿಮ್ಮ ಎನ್‌ಪಿಎಸ್ ಖಾತೆಗೆ ಸರ್ಕಾರವು ಕೂಡಾ ನಿರ್ದಿಷ್ಟ ಮೊತ್ತವನ್ನು ಕೊಡುಗೆಯಾಗಿ ನೀಡುತ್ತದೆ. ಈ ಮೊತ್ತವು ಸುಮಾರು ಶೇಕಡ 14ರವರೆಗೆ ಇರಲಿದೆ.
ಎನ್‌ಪಿಎಸ್‌ಗೆ ಯಾರು ಅರ್ಜಿ ಸಲ್ಲಿಸಬಹುದು?
1. 18 ವರ್ಷದಿಂದ 60 ವರ್ಷದವರೆಗಿನ ಭಾರತೀಯ ನಾಗರಿಕರು ಈ ಎನ್‌ಪಿಎಸ್ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರಾಗಿದ್ದಾರೆ.
2. ಸ್ವಯಂ ಉದ್ಯೋಗವನ್ನು ಮಾಡುವವರು, ಉದ್ಯಮವನ್ನು ಹೊಂದಿರುವವರು, ಸಂಬಳವನ್ನು ಪಡೆಯುವ ಉದ್ಯೋಗಿಗಳು, ಎನ್‌ಆರ್‌ಐಗಳು ಎನ್‌ಪಿಎಸ್ ಯೋಜನೆಯಡಿಯಲ್ಲಿ ಖಾತೆಯನ್ನು ತೆರೆಯಬಹುದು.
3. ಸರ್ಕಾರಿ ಉದ್ಯೋಗಿಗಳು ಕೂಡಾ ಎನ್‌ಪಿಎಸ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಆದರೆ ಅವರಿಗೆ ಬೇರೆಯೇ ಪಿಂಚಣಿ ಯೋಜನೆ ಇದೆ. ಅದನ್ನು ಕೇಂದ್ರ ಸರ್ಕಾರ ಉದ್ಯೋಗಿಗಳ ಪಿಂಚಣಿ ಯೋಜನೆ (ಸಿಜಿಇಜಿಐಎಸ್) ಎಂದು ಕರೆಯಲಾಗುತ್ತದೆ.


Click it and Unblock the Notifications