ಕೇಂದ್ರ ಸರ್ಕಾರವು ಹಲವಾರು ಸಣ್ಣ ಉಳಿತಾಯ ಯೋಜನೆಗಳನ್ನು ಹೊಂದಿದೆ. ಸಮಾಜದ ಎಲ್ಲ ಸೆಕ್ಷನ್ ಅಡಿಯಲ್ಲಿನ ಜನರಿಗೆ ಹಲವಾರು ಉಳಿತಾಯ ಹೂಡಿಕೆ ಯೋಜನೆಗಳನ್ನು ಸರ್ಕಾರವು ಜಾರಿ ಮಾಡಿದೆ. ಇಂತಹ ಯೋಜನೆಗಳಲ್ಲಿ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (ಎನ್‌ಎಸ್‌ಸಿ) ಯೋಜನೆಯು ನಿಮಗೆ ಉತ್ತಮ ರಿಟರ್ನ್ ಅನ್ನು ಪಡೆಯಲು ಸಹಾಯಕವಾಗಿದೆ. ಹಾಗೆಯೇ ಈ ಯೋಜನೆಯಲ್ಲಿ ತೆರಿಗೆ ವಿನಾಯಿತಿಗೂ ಕೂಡಾ ಇದೆ.
ಎನ್‌ಎಸ್‌ಇ ಯೋಜನೆಯನ್ನು ನಾವು ಯಾವುದೇ ಅಂಚೆ ಕಚೇರಿಯಲ್ಲಿ ಖರರೀದಿ ಮಾಡಲು ಸಾಧ್ಯವಾಗುತ್ತದೆ. ದೇಶದ ಯಾವುದೇ ಅಂಚೆ ಕಚೇರಿಯಲ್ಲಿ ಖರೀದಿಸಬಹುದಾಗಿದೆ. ಸರ್ಕಾರವು ಇತ್ತೀಚೆಗೆ ಎನ್‌ಎಸ್‌ಸಿ ಬಡ್ಡಿದರವನ್ನು ಏರಿಸಿದೆ. ಎನ್ಎಸ್‌ಸಿ ಬಡ್ಡಿದರವನ್ನು ಡಿಸೆಂಬರ್ 2022ರ ಕೊನೆಯಲ್ಲಿ ಶೇಕಡ 6.8ರಿಂದ ಶೇಕಡ 7ಕ್ಕೆ ಏರಿಸಿದೆ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೂಡಿಕೆ ಮಾಡಿ, ಅಧಿಕ ರಿಟರ್ನ್ ಪಡೆಯಬೇಕಾದರೆ, ಎನ್‌ಎಸ್‌ಇ ಅತೀ ಉತ್ತಮ ಆಯ್ಕೆಯಾಗಿದೆ.

ಪ್ಲ್ಯಾನ್ ಮಾಡಲು ಈ ತಿಂಗಳೇ ಕೊನೆ
ಎನ್‌ಎಸ್‌ಸಿಯಲ್ಲಿ ಉತ್ತಮ ರಿಟರ್ನ್ ಲಭ್ಯವಾಗುವುದು ಮಾತ್ರವಲ್ಲದೆ, ತೆರಿಗೆ ಉಳಿತಾಯ ಪ್ರಯೋಜನವನ್ನು ಎನ್‌ಎಸ್‌ಸಿ ನೀಡುತ್ತದೆ. ಹಣಕಾಸು ವರ್ಷ 2022-23 ಕೊನೆಯಾದ ಮಾರ್ಚ್ ತಿಂಗಳು ಇದಾದ ಕಾರಣ ನೀವು ಈ ತೆರಿಗೆ ಉಳಿತಾಯದ ಎನ್‌ಎಸ್‌ಇ ಯೋಜನೆಯಲ್ಲಿ ಹೂಡಿಕೆ ಮಾಡುವ ನಿರ್ಧಾರವನ್ನು ಮಾಡಲು ಕೊನೆಯ ಅವಕಾಶವಾಗಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ಹೂಡಿಕೆದಾರರು 1.5 ಲಕ್ಷ ರೂಪಾಯಿ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿದೆ.
ನೀವು ಎನ್‌ಎಸ್‌ಇಯಲ್ಲಿ ಬರೀ 1 ಸಾವಿರ ರೂಪಾಯಿ ಕನಿಷ್ಠ ಹೂಡಿಕೆ ಮಾಡಬಹುದು. ಆದರೆ ಈ ಯೋಜನೆಯಲ್ಲಿ ಯಾವುದೇ ಗರಿಷ್ಠ ಮೊತ್ತದ ಮಿತಿಯಿಲ್ಲ. ಫಿಕ್ಸಿಡ್ ಡೆಪಾಸಿಟ್ ಬದಲಾಗಿ ಎನ್‌ಎಸ್‌ಇ ಯೋಜನೆಯನ್ನು ಆಯ್ಕೆ ಮಾಡುವವರು ಉತ್ತಮ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಯ ಮೆಚ್ಯೂರಿಟಿ ಅವಧಿಯು 5 ವರ್ಷವಾಗಿದೆ. ನೀವು ಯಾವುದೇ ಅಂಚೆ ಕಚೇರಿಯಲ್ಲಿ ಎನ್‌ಎಸ್‌ಇ ಯೋಜನೆಯನ್ನು ಖರೀದಿ ಮಾಡಬಹುದು.
ಎನ್‌ಎಸ್‌ಸಿಯಲ್ಲಿ ಮೂರು ರೀತಿಯ ಹೂಡಿಕೆ ಆಯ್ಕೆಯಿದೆ. ಸಿಂಗಲ್ (ಏಕ), ಜಾಯಿಂಟ್ (ಜಂಠಿ) ಮತ್ತು ಜಾಯಿಂಟ್ ವಿತ್ ಸರ್ವವೈರ್‌ಶಿಪ್ (ಬದುಕುಳಿದವರೊಂದಿಗೆ ಜಂಠಿ ಖಾತೆ) ಎಂಬುವುದು ಮೂರು ಆಯ್ಕೆಯಾಗಿದೆ. ಏಕ ಹೂಡಿಕೆ ಎಂದರೆ ಓರ್ವ ವ್ಯಕ್ತಿಯು ಯೋಜನೆಯಲ್ಲಿ ಹೂಡಿಕೆ ಮಾಡುವುದಾಗಿದೆ. ಇಬ್ಬರು ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಅದು ಜಾಯಿಂಟ್ ಯೋಜನೆಯಾಗಿದೆ. ಜಾಯಿಂಟ್ ವಿತ್ ಸರ್ವವೈರ್‌ಶಿಪ್‌ನಲ್ಲಿ ಇಬ್ಬರು ಜೊತೆಯಾಗಿ ಹೂಡಿಕೆ ಮಾಡುತ್ತಾರೆ. ಆದರೆ ಒಬ್ಬರಿಗೆ ಮೆಚ್ಯೂರಿಟಿ ಮೊತ್ತ ಲಭ್ಯವಾಗಲಿದೆ.


Click it and Unblock the Notifications