For Quick Alerts
ALLOW NOTIFICATIONS  
For Daily Alerts

ನಗರದಲ್ಲಿದ್ದುಕೊಂಡೇ ಕೃಷಿ ಮಾಡಬಯಸುವವರಿಗೆ ಇಲ್ಲಿದೆ ಸದಾವಕಾಶ: ಅರ್ಬನ್ ಫಾರ್ಮರ್ಸ್‌ ಕಂಪನಿ

|

ಕೃಷಿ ಮಾಡಬೇಕು, ಆದರೆ ನಗರದಲ್ಲಿದ್ದುಕೊಂಡು ಅದರ ನಿರ್ವಹಣೆ ಮಾಡಲು ಸಾಧ್ಯವಾಗದು ಎಂದು ತಮ್ಮ ಕನಸುಗಳನ್ನು ಮನಸ್ಸಿನಲ್ಲೇ ಬಚ್ಚಿಟ್ಟುಕೊಂಡಿರುವವರಿಗೆ ಅರ್ಬನ್ ಫಾರ್ಮಸ್ ಕಂಪನಿ ಸುವರ್ಣಾವಕಾಶವನ್ನ ನೀಡಿದೆ. ಪಟ್ಟಣದಲ್ಲಿದ್ದುಕೊಂಡೇ ಒಂದು ಸುಂದರ ಜಾಗದಲ್ಲಿ ಕೃಷಿ ಮಾಡುವ ಅವಕಾಶವನ್ನ ಅರ್ಬನ್ ಫಾರ್ಮಸ್ ಕಂಪನಿ ಆಸಕ್ತರಿಗೆ ಒದಗಿಸಲು ಮುಂದಾಗಿದೆ.

ಹೌದು, ಮ್ಯಾನೆಜ್ಡ್‌ ಫಾರ್ಮ್‌ ಲ್ಯಾಂಡ್ಸ್‌ ಎಂದೇ ಕರೆಯಲ್ಪಡುವ ಈ ಕೃಷಿ ಭೂಮಿಗಳಲ್ಲಿ ನೀವು ನಿಮ್ಮ ಇಷ್ಟದ ಮನೆ ಜೊತೆಗೆ ಕೃಷಿ ಮಾಡುವ ಅವಕಾಶವಿದೆ. ಅದು ಕೂಡ ನೀವು ವಾರ್ಷಿಕವಾಗಿ ಒಂದಿಷ್ಟು ಹಣವನ್ನು ಪಾವತಿಸಿದ್ರೆ ಸಾಕು ನಿಮ್ಮ ಕೆಲಸವನ್ನು ಈ ಕಂಪನಿ ನಿರ್ವಹಿಸುತ್ತದೆ. ಅದು ಹೇಗೆ ಸಾಧ್ಯ? ನಗರದಲ್ಲಿದ್ದುಕೊಂಡೇ ಕೃಷಿ ಮಾಡೋಕೆ ಸಾಧ್ಯನಾ ಎಂಬುದಕ್ಕೆ ಉತ್ತರ ಈ ಕೆಳಗಿದೆ.

ಏನಿದು ಅರ್ಬನ್ ಫಾರ್ಮಸ್ ಕಂಪನಿ?

ಏನಿದು ಅರ್ಬನ್ ಫಾರ್ಮಸ್ ಕಂಪನಿ?

10 ವರ್ಷಗಳ ರಿಯಲ್ ಎಸ್ಟೇಟ್ ಬಿಜಿನೆಸ್ ಅನುಭವ ಹೊಂದಿರುವ ಚಿಕ್ಕಮಗಳೂರಿನ ಕೊಪ್ಪದ ಅನೂಪ್ ಹೆಗ್ಗಾರ್ ಹಾಗೂ ಶಿವಮೊಗ್ಗದ ತೀರ್ಥಹಳ್ಳಿಯ ಲಕ್ಷಿತ್ ಎಚ್.ಎಂ, ಶ್ರೇಯಸ್ ಕಡಿದಾಳ್ ಎಂಬ ಮೂವರ ಸ್ನೇಹಿತರ ಸಹಭಾಗಿತ್ವದಲ್ಲಿ ಹುಟ್ಟುಕೊಂಡ ಕಂಪನಿಯೇ ಅರ್ಬನ್ ಫಾರ್ಮಸ್ ಕಂಪನಿ ಆಗಿದೆ.

ಈ ಕಂಪನಿಯು ಕನಕಪುರ ಮತ್ತು ಸಕಲೇಶಪುರದ ಹಾನುಬಾಳದಲ್ಲಿ ಎರಡು ವಿಶೇಷ ಪ್ರಾಜೆಕ್ಟ್ ಹೊಂದಿದ್ದು, ಗ್ರಾಹಕರು ಖರೀದಿಸಿದ ಜಮೀನನ್ನು ನಿರ್ವಹಣೆ ಮಾಡುವುದು ಇದರ ಕೆಲಸವಾಗಿದೆ. ಕೇವಲ ಕೃಷಿ ಅಷ್ಟೇ ಅಲ್ಲದೆ ಇಕೋ ಫ್ರೆಂಡ್ಲಿ ಕಾಟೇಜ್ ಕೂಡ ಕಟ್ಟಿಕೊಡಲಾಗುವುದು. ಸ್ಬಿಮ್ಮಿಂಗ್ ಪೂಲ್ ಸೇರಿದಂತೆ ಕಮರ್ಶಿಯಲ್ ಜಾಗ ನಿರ್ವಹಣೆ ಕೂಡ ಇಲ್ಲಿರಲಿದೆ.

 

ಕನಕಪುರದ ಬರ್ಡ್‌ಬೆರಿ ಪ್ರಾಜೆಕ್ಟ್‌

ಕನಕಪುರದ ಬರ್ಡ್‌ಬೆರಿ ಪ್ರಾಜೆಕ್ಟ್‌

ಕನಕಪುರದಲ್ಲಿ 50 ಎಕರೆ ವಿಸ್ತೀರ್ಣದ ಪ್ರಾಜೆಕ್ಟ್ ಬರ್ಡ್‌ಬೆರಿ ಆಗಿದೆ. ಇಲ್ಲಿ ಪ್ರತಿ ಕಾಲು ಎಕರೆ ಜಮೀನನ್ನು ಖರೀದಿಸುವ ಮಾಲೀಕರ ಜಮೀನಿನ ಶೇಕಡಾ 90ರಷ್ಟು ಭಾಗವನ್ನು ಆರ್ಗ್ಯಾನಿಕ್ ಕೃಷಿ ಮಾಡಲಾಗುಉವದು ಉಳಿದ ಶೇಕಡಾ 10ರಷ್ಟು ಭಾಗವನ್ನು ಕಾಟೇಜ್ ಕಟ್ಟಲು ಬಿಡುವ ಯೋಜನೆ ಇದೆ.

ಹಳ್ಳಿ ತರಹ ಅನುಭವ ನೀಡುವ ಹಾಗೂ ರೆಸಾರ್ಟ್‌ ರೀತಿಯ ನೋಟವನ್ನು ಹೊಂದಿರುವ ಈ ಜಮೀನುಗಳಲ್ಲಿ ಕಂಪನಿಯೇ ನಿರ್ವಹಣೆ ಮಾಡುತ್ತದೆ. ಮೊದಲ ವರ್ಷ ಉಚಿತ ನಿರ್ವಹಣೆ ಇರಲಿದ್ದು, ನಂತರ ಪ್ರತಿ ವರ್ಷಕ್ಕೆ 25,000 ರೂಪಾಯಿ ಪಾವತಿ ಮಾಡಿದರೆ ಸಾಕು.

 

ಜಮೀನು ಖರೀದಿಗೆ ಎಷ್ಟು ಹಣ ನೀಡಬೇಕು?

ಜಮೀನು ಖರೀದಿಗೆ ಎಷ್ಟು ಹಣ ನೀಡಬೇಕು?

ಬರ್ಡ್‌ಬೆರಿ 50 ಎಕರೆ ಡೆವಲಪ್ ಪ್ರಾಜೆಕ್ಟ್‌ನಲ್ಲಿ ಖರೀದಿಸುವವರಿಗೆ ಪರ್ ಸ್ಕವೇರ್‌ ಫೀಟ್ 250 ರೂಪಾಯಿಯಂತೆ ಕಾಲು ಎಕರೆ ನೀಡಲಾಗುವುದು. ಸುಮಾರು 25-30 ಲಕ್ಷ ರೂಪಾಯಿ ವೆಚ್ಚ ತಗುಲಬಹುದಾಗಿದೆ.

ಆರ್ಗ್ಯಾನಿಕ್ ಕೃಷಿ ಇರಲಿದೆ

ಆರ್ಗ್ಯಾನಿಕ್ ಕೃಷಿ ಇರಲಿದೆ

ನೀವು ಖರೀದಿಸಿದ ಜಮೀನಿನಲ್ಲಿ ಪೂರ್ತಿ ಆರ್ಗ್ಯಾನಿಕ್ ಕೃಷಿ ಮಾಡಲಾಗುವುದು. ಶೇಕಡಾ 65 ರಿಂದ 70 ಭಾಗದಲ್ಲಿ ಟಿಂಬರ್ಸ್‌ ವುಡ್‌ ಇರಲಿದೆ. ಉದಾಹರಣೆಗೆ ವೆರೈಟಿ ನೇರಳೆ, ಹಲಸು, ಹೊಂಗೆ ಮರ, ಸೀಗೆಕಾಯಿ ರೀತಿಯ ಮರಗಳನ್ನ ಬೆಳೆಯಲಾಗುವುದು.

ಉಳಿದ ಶೇಕಡಾ 30 ರಿಂದ 40ರಷ್ಟು ಭಾಗದಲ್ಲಿ ಐದು ತೆಂಗಿನ ಮರ, ಮಾವಿನ ಮರ, ಸೀಬೆ ಮರ, ನಿಂಬೆಹಣ್ಣು, ಸೇರಿದಂತೆ ಕೆಲವು ತರಕಾರಿಗಳು ಬೆಳೆಯಲಾಗುತ್ತದೆ. ಇನ್ನು ಎಲ್ಲಾ ಜಮೀನಿಗೂ ಹನಿ ನೀರಾವರಿಯನ್ನು ಅಳವಡಿಸಲಾಗುತ್ತಿದ್ದು, ನಿಮ್ಮ ಜಮೀನಿನ ಮಧ್ಯದಲ್ಲಿ ಫಾರ್ಮ್ ಹೌಸ್‌ ಕಟ್ಟೋಕೆ ಜಾಗ ಬಿಡಗಲಾಗುತ್ತದೆ.

 

ಇಕೋ ಫ್ರೆಂಡ್ಲಿ ಕಾಟೇಜ್

ಇಕೋ ಫ್ರೆಂಡ್ಲಿ ಕಾಟೇಜ್

ಈ ಮೇಲೆ ತಿಳಿಸಿದಂತೆ ನಿಮ್ಮ ಜಮೀನಿನ ನಿರ್ವಹಣೆ ಜೊತೆಗೆ ಕಂಪನಿಯು ಕಾಟೇಜ್ ಕೂಡ ಕಟ್ಟಿಕೊಡುವುದು. 5 ಲಕ್ಷದಿಂದ 12 ಲಕ್ಷ ರೂಪಾಯಿವರೆಗೆ ಕಾಟೇಜ್ ಕಟ್ಟಿಕೊಡಲಾಗುವುದು. ಬೇಡ ಎಂದರೆ ಜಾಗವನ್ನು ಹಾಗೆ ಬಿಡಲಾಗುವುದು. ಇನ್ನು ಇದರ ಜೊತೆಗೆ ನಿಮ್ಮ ಕಾಟೇಜ್ ಅನ್ನು ಕಮರ್ಶಿಯಲ್ ಉದ್ದೇಶಕ್ಕೂ ಕಂಪನಿಗೆ ನೀಡಿದರೆ ಕೃಷಿಯಿಂದ ಬರುವ ಆದಾಯ ಜೊತೆಗೆ ಕಾಟೇಜ್ ಬುಕ್ಕಿಂಗ್‌ನಿಂದ ಸಿಗುವ ಆದಾಯವು ನಿಮ್ಮ ಕೈ ಸೇರಲಿದೆ.

ಪ್ರವಾಸಿ ತಾಣಗಳು ಸಮೀಪದಲ್ಲಿದೆ

ಪ್ರವಾಸಿ ತಾಣಗಳು ಸಮೀಪದಲ್ಲಿದೆ

ಕನಕಪುರದ ಬರ್ಡ್‌ಬೆರಿ ಪ್ರಾಜೆಕ್ಟ್ ಸಮೀಪದಲ್ಲೇ ಕೆಲವು ಪ್ರವಾಸಿ ತಾಣಗಳನ್ನು ಕಾಣಬಹುದು. ನಿಮ್ಮ ಜಮೀನಿನ ಸುತ್ತದಲ್ಲಿ ಗುಡ್ಡ, ಬೆಟ್ಟಗಳನ್ನು ಕಾಣುವುದರ ಜೊತೆಗೆ 15-20 ಕಿ.ಮಿ ದೂರದಲ್ಲಿ ಪ್ರಸಿದ್ಧ ದಬ್ಗುಳಿ, ಮೇಕೆದಾಟು, ಚುಂಚಿ ಫಾಲ್ಸ್‌ ಪ್ರವಾಸಿ ತಾಣಗಳಿವೆ.

ಸಕಲೇಶಪುರದಲ್ಲಿ ಮಿಸ್ಟಿ ವಾಟರ್ಸ್ ಪ್ರಾಜೆಕ್ಟ್‌

ಸಕಲೇಶಪುರದಲ್ಲಿ ಮಿಸ್ಟಿ ವಾಟರ್ಸ್ ಪ್ರಾಜೆಕ್ಟ್‌

ಸಕಲೇಶಪುರದ ಹಾನುಬಾಳದ ಸಮೀಪ ಸುಮಾರು 52 ಎಕರೆಯ ಮಿಸ್ಟಿ ವಾಟರ್ಸ್ ಹೆಸರಿನ ಪ್ರಾಜೆಕ್ಟ್ ಈಗಾಗಲೇ ಆರಂಭವಗಿದೆ. ಇಲ್ಲಿ ಒಂದು ಎಕರೆಯನ್ನು ಒಂದು ಯುನಿಟ್‌ನಂತೆ ಮಾರಲಾಗುವುದು. ಇಲ್ಲಿ ಕಾಫಿ ತೋಟ ಇರಲಿದ್ದು, ಮೆಣಸು ಕೂಡ ಬೆಳೆಯಲಾಗುತ್ತದೆ.

ಈ ತೋಟವನ್ನು ಜೊತೆಗೆ ಕಾಟೇಜ್ ಬಯಸುವವರು ಸುಮಾರು 33 ಲಕ್ಷ ರೂಪಾಯಿ ಪಾವತಿಸಿದರೆ ಸಾಕು ಸ್ವಂತ ಜಮೀನಿನ ಜೊತೆಗೆ ವೀಕೆಂಡ್‌ನಲ್ಲಿ ನಿಮಗೆ ಆರಾಮವಾಗಿ ಕಳೆಯುವ ರೆಸಾರ್ಟ್‌ ನಿಮ್ಮದಾಗಿರಲಿದೆ.

 

ಜನರು ಏಕೆ ಖರೀದಿಸಬೇಕು ?

ಜನರು ಏಕೆ ಖರೀದಿಸಬೇಕು ?

ನಗರದಲ್ಲಿದ್ಡುಕೊಂಡೇ ಕೃಷಿಯನ್ನು ಮಾಡಬೇಕೆಂದು ಆಸೆ ಪಡುವವರಿಗೆ ಈ ಪ್ರಾಜೆಕ್ಟ್‌ನಿಂದ ನೆರವಾಗಲಿದೆ. ಕೃಷಿ ಜೊತೆಗೆ ಪ್ರಕೃತಿಯ ಸೌಂದರ್ಯ ಸವಿಯಬಹುದಾಗಿದೆ. ಸುತ್ತ-ಮುತ್ತ 15-20 ಕಿ.ಮೀನಲ್ಲಿ ಟೂರಿಸ್ಟ್ ಸ್ಪಾಟ್‌ಗಳಿವೆ

ಜೊತೆಗೆ ರೆಸಾರ್ಟ್ ರೀತಿಯ ಅನುಭವ, ತೊಂದರೆ ಇಲ್ಲದ ನಿರ್ವಹಣೆ, ತೆರಿಗೆ ಇಲ್ಲದ ಆದಾಯ, ವೀಕೆಂಡ್‌ನಲ್ಲಿ ಆರಾಮವಾಗಿ ಸಮಯ ಕಳೆಯಲು ಜಾಗ, ದಿನದ 24 ಗಂಟೆ ಸೆಕ್ಯುರಿಟಿ ಕೂಡ ಇಲ್ಲಿರಲಿದೆ. ಹೀಗಾಗಿ ಆಸಕ್ತರು ಎಲ್ಲವನ್ನೂ ಪರಿಶೀಲಿಸಿದ ನಂತರ ಈ ಜಮೀನುಗಳ ಖರೀದಿಗೆ ಮುಂದಾಗಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9980808080

 

English summary

Opportunity for People do Farming While Being There at City

The Urban Farms Company has provided the golden opportunity for those who have to cultivate, but keep in mind, their dreams while in the city. Know more
Story first published: Thursday, September 9, 2021, 10:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X