ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗುರುವಾರ ಕರಡಿ ಕುಣಿತ ಕಾಣಿಸಿಕೊಂಡಿದೆ. ಎರಡು ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿಯು ಇಂಟ್ರಾಡೇ ವಹಿವಾಟಿನಲ್ಲಿ ಕೆಂಪು ಬಣ್ಣಕ್ಕೆ ತಿರುಗಿದೆ. ಷೇರು ಪೇಟೆಯಲ್ಲಿ ಸೆನ್ಸೆಕ್ಸ್, ನಿಫ್ಟಿ ಶೇಕಡ 1 ಕ್ಕಿಂತ ಅಧಿಕ ಕುಸಿದಿದೆ.
ಇಂದು ಬೆಳಗ್ಗೆ 11:54 ಗಂಟೆಗೆ ಸೆನ್ಸೆಕ್ಸ್ ಶೇಕಡ 1.24 ರಷ್ಟು ಇಳಿಕೆಯಾಗಿ 63,254.73 ಅಂಕಗಳಿಗೆ ತಲುಪಿದೆ. ನಿಫ್ಟಿ ಶೇಕಡ 1.28 ರಷ್ಟು ಕುಸಿದು 18,877.60 ಅಂಕಗಳಿಗೆ ತಲುಪಿದೆ. ಈ ಸಮಯಕ್ಕೆ 60 ಸ್ಟಾಕ್‌ಗಳು ತಮ್ಮ 52 ವಾರಗಳ ಕನಿಷ್ಠ ಮಟ್ಟವನ್ನು ತಲುಪಿದೆ.

12 ಷೇರುಗಳು ತಮ್ಮ 52 ವಾರಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದರೆ, 325 ಸ್ಟಾಕ್‌ಗಳು ಏರಿಕೆಯನ್ನು ಕಂಡಿದೆ. 1,954 ಷೇರುಗಳು ಕುಸಿತವನ್ನು ಕಂಡಿದೆ. ಭಾರತೀಯ ಷೇರುಗಳ ಇಂದು ಒಂದು ದಿನದಲ್ಲೇ 5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆದಾರರ ಸಂಪತ್ತನ್ನು ಕಳೆದುಕೊಂಡಿದೆ.
ಎಲ್ಲಾ-ಬಿಎಸ್‌ಇಯ ಸ್ಟಾಕ್‌ಗಳ ಮಾರುಕಟ್ಟೆ ಸಂಪತ್ತಿನ ಪ್ರಕಾರ ಹೂಡಿಕೆದಾರರು ತಿಂಗಳಲ್ಲಿ 9.8 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಕಂಡಿದ್ದಾರೆ. ಇಸ್ರೇಲ್ ಹಮಾಸ್ ಯುದ್ಧವು ಷೇರು ಮಾರುಕಟ್ಟೆಯ ಮೇಲೆ ಭಾರೀ ಪ್ರಭಾವ ಉಂಟು ಮಾಡಿದೆ. ವಾಲ್ ಸ್ಟ್ರೀಟ್‌ನಲ್ಲಿ ರಾತ್ರಿಯ ವಹಿವಾಟಿನಲ್ಲಿ, ಮೂರು ಪ್ರಮುಖ ಸೂಚ್ಯಂಕಗಳು ನಷ್ಟವನ್ನು ಕಂಡಿದೆ.
ಕಳೆದ ರಾತ್ರಿ ನಾಸ್ಡಾಕ್ ಶೇಕಡ 2.4 ರಷ್ಟು ಕುಸಿತಗೊಂಡು ವಹಿವಾಟು ಕೊನೆಗೊಳಿಸಿದರೆ, ಜಪಾನ್‌ನ ನಿಕ್ಕಿ ಕೂಡ ಶೇಕಡ 2 ರಷ್ಟು ಕಡಿಮೆ ವಹಿವಾಟು ನಡೆಸುತ್ತಿದೆ. ಚೀನಾದ ಹ್ಯಾಂಗ್ ಸೆಂಗ್ ಶೇಕಡ 0.75 ರಷ್ಟು ಕಡಿಮೆಯಾಗಿದೆ. S&P 500 ಶೇಕಡ 1.43 ರಷ್ಟು ಕುಸಿದು 4,186.77 ಕ್ಕೆ ತಲುಪಿತು. ಟೆಕ್-ಹೆವಿ ನಾಸ್ಡಾಕ್ ಕಾಂಪೋಸಿಟ್ ಶೇಕಡ 2.43 ರಷ್ಟು ನಷ್ಟ ಕಂಡಿದೆ. ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ ಶೇಕಡ 0.32 ರಷ್ಟು ಕುಸಿದು 33,035.93 ಕ್ಕೆ ತಲುಪಿದೆ.
ಕಳೆದ 10 ವರ್ಷಗಳಲ್ಲಿ ಅಕ್ಟೋಬರ್ ತಿಂಗಳು ನಿಫ್ಟಿಗೆ ಉತ್ತಮ ತಿಂಗಳುಗಳಲ್ಲಿ ಒಂದಾಗಿದೆ. ಬೆಂಚ್‌ಮಾರ್ಕ್ ಸೂಚ್ಯಂಕವು 10 ರ ಪೈಕಿ 9 ರಲ್ಲಿ ಉತ್ತಮ ಮಾಸಿಕ ಆದಾಯ ಲಭ್ಯವಾಗಿದೆ. ಸರಾಸರಿ ಆದಾಯವು ಶೇಕಡ 2.9 ಆಗಿದೆ. ನಿಫ್ಟಿ 50 ರಲ್ಲಿ, ಆಕ್ಸಿಸ್ ಬ್ಯಾಂಕ್ ಏಕೈಕ ಲಾಭ ಪಡೆದ ಸ್ಟಾಕ್ ಆಗಿದೆ.
ಮಹೀಂದ್ರಾ ಆಂಡ್ ಮಹೀಂದ್ರಾ ಲಿಮಿಟೆಡ್ ಶೇಕಡ 3.18 ರಷ್ಟು, ಟೆಕ್ ಮಹೀಂದ್ರಾ ಶೇಕಡ 2.89 ರಷ್ಟು ಇಳಿಕೆ, ಅಪೊಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿಮಿಟೆಡ್ ಶೇಕಡ 2.68 ರಷ್ಟು ಕುಸಿತ, ಬಜಾಜ್ ಫೈನಾನ್ಸ್ ಶೇಕಡ 2.64 ರಷ್ಟು ಇಳಿಕೆಯನ್ನು ಕಂಡಿದೆ.


Click it and Unblock the Notifications