ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಅತೀ ಮುಖ್ಯವಾಗಿದೆ. ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಮತ್ತು ಆಧಾರ್ ಕಾರ್ಡ್ ನಮ್ಮ ದೇಶದಲ್ಲಿನ ಅತೀ ಮುಖ್ಯವಾದ ಕಾರ್ಡ್‌ಗಳಾಗಿದೆ. ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ಭಾರತ ಸರ್ಕಾರವು ಕಡ್ಡಾಯಗೊಳಿಸಿದೆ. ಪ್ಯಾನ್- ಆಧಾರ್ ಲಿಂಕ್‌ಗೆ ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಅದಕ್ಕೂ ಮುನ್ನ ಲಿಂಕ್ ಮಾಡಬೇಕಾಗುತ್ತದೆ. ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ಪ್ಯಾನ್ ಕಾರ್ಡ್ ಎಲ್ಲ ಕಾರ್ಯಕ್ಕೂ ಮುಖ್ಯವಾದ ಕಾರಣ ಶೀಘ್ರವೇ ಲಿಂಕ್ ಮಾಡಿಕೊಂಡುಬಿಡಿ.
ಸರ್ಕಾರದ ಯಾವುದೇ ಒಂದು ಯೋಜನೆಯ ಲಾಭವನ್ನು ನಾವು ಪಡೆಯಬೇಕಾದರೆ, ಹಾಗೆಯೇ ಬ್ಯಾಂಕಿಂಗ್, ಹಣಕಾಸು ಸಂಬಂಧಿತ ಯಾವುದೇ ಕಾರ್ಯವನ್ನು ನಾವು ಮಾಡಬೇಕಾದರೆ ಪ್ಯಾನ್ ಕಾರ್ಡ್ ಅನ್ನು ಹೊಂದಿರುವುದು ಅತೀ ಮುಖ್ಯವಾಗುತ್ತದೆ. ಏಪ್ರಿಲ್ 1, 2023ರಿಂದ ನಿಮ್ಮ ಪ್ಯಾನ್ ಕಾರ್ಡ್ ಸಂಪೂರ್ಣವಾಗಿ ನಿಷ್ಕ್ರೀಯವಾಗಲಿದೆ. 10 ಅಂಕಿ ಸಂಖ್ಯೆಯ ವಿಶಿಷ್ಠ ಸಂಖ್ಯೆಯನ್ನು ಹೊಂದಿರುವ ಕಾರ್ಡ್ ಪ್ಯಾನ್ ಕಾರ್ಡ್ ಆಗಿದೆ. ಇದು ಎಲ್ಲ ಹಣಕಾಸು ಕಾರ್ಯಗಳಿಗೆ ಅತೀ ಮುಖ್ಯವಾದ ಕಾರ್ಡ್ ಆಗಿದೆ.

"ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಅದಕ್ಕಾಗಿ ವಿಳಂಬ ಮಾಡದಿರಿ, ಇಂದೇ ಎರಡು ಕಾರ್ಡ್‌ಗಳನ್ನು ಲಿಂಕ್ ಮಾಡಿಬಿಡಿ. ಐಟಿ ಕಾಯ್ದೆಯ ಪ್ರಕಾರ ಪ್ಯಾನ್ ಕಾರ್ಡ್ ಹೊಂದಿರುವವರು ವಿನಾಯಿತಿಗಳನ್ನು ಪಡೆಯಬೇಕಾದರೆ, ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಮಾರ್ಚ್ 31, 2023ಕ್ಕೂ ಮುನ್ನ ಲಿಂಕ್ ಮಾಡಿ. ಲಿಂಕ್ ಮಾಡಿದ್ದರೆ ಏಪ್ರಿಲ್ 1, 2023ರಿಂದ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ," ಎಂದು ಐಟಿ ಇಲಾಖೆಯು ತಿಳಿಸಿದೆ.
ಪ್ಯಾನ್-ಆಧಾರ್ ಹೀಗೆ ಲಿಂಕ್ ಮಾಡಿ
ಹಂತ 1: ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ - https://incometaxindiaefiling.gov.in/
ಹಂತ 2: ನಿಮ್ಮ ವಿವರ ಹಾಕಿ, ಪ್ಯಾನ್ ಬಳಕೆದಾರರ ಐಡಿ ಆಗಿರುತ್ತದೆ
ಹಂತ 3: ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕ ಬಳಸಿ ಲಾಗಿನ್ ಮಾಡಿ
ಹಂತ 4: ಪಾಪ್-ಅಪ್ ವಿಂಡೋದಲ್ಲಿ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಯ್ಕೆ ಇರುತ್ತದೆ
ಹಂತ 5: ವಿಂಡೋ ಕಾಣಿಸದಿದ್ದರೆ, ಮೆನು ಬಾರ್‌ನಲ್ಲಿ 'Profile Settings' ಗೆ ಹೋಗಿ, 'Link Aadhaar' ಕ್ಲಿಕ್ ಮಾಡಿ
ಹಂತ 6: ಆಧಾರ್‌ನಲ್ಲಿರುವ ಪ್ಯಾನ್ ವಿವರ ಪರಿಶೀಲಿಸಿ, link now ಬಟನ್ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣ
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟಾಕ್ಸಸ್ (ಸಿಬಿಡಿಟಿ) ಪ್ರಕಾರ ಮಾರ್ಚ್ 31, 2024ಕ್ಕೂ ಮುನ್ನವೇ ಪ್ಯಾನ್ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ನೀವು ಮಾರ್ಚ್ 31ರವರೆಗೆ 1000 ರೂಪಾಯಿ ದಂಡವನ್ನು ಪಾವತಿಸಿ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡಬಹುದು. ಇದಕ್ಕೂ ಮುನ್ನ 500 ರೂಪಾಯಿ ದಂಡವಾಗಿತ್ತು. ಅದಕ್ಕೂ ಮುನ್ನ ಪ್ಯಾನ್ ಆಧಾರ್ ಲಿಂಕ್ ಮಾಡಲು ಯಾವುದೇ ಶುಲ್ಕ ಇರಲಿಲ್ಲ.
ಮಾರ್ಚ್ 31ಕ್ಕೂ ಮುನ್ನ ಪ್ಯಾನ್ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ, ನಿಮಗೆ ಯಾವುದೇ ಹಣಕಾಸು ಕಾರ್ಯ ನಡೆಸಲು ತೊಂದರೆಯಾಗಲಿದೆ. ಆಧಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಲು ಸಾಧ್ಯವಾಗದು. ಯಾರು ಡೆಡ್‌ಲೈನ್‌ಗೂ ಮುನ್ನ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿದಿದ್ದರೆ, 10 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ.


Click it and Unblock the Notifications