ದೇಶದಲ್ಲಿ ಪ್ರಮುಖವಾಗಿ ಬಳಕೆ ಮಾಡಲಾಗುವ ಅತೀ ಅಗತ್ಯವಾದ ದಾಖಲೆಗಳುಸ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಆಗಿದೆ. ಈ ಎರಡು ದಾಖಲೆಗಳನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹಲವಾರು ಬಾರಿ ಆದಾಯ ತೆರಿಗೆ ಇಲಾಖೆಯು ಆಧಾರ್ ಪ್ಯಾನ್ ಲಿಂಕ್ ಗಡುವನ್ನು ವಿಸ್ತರಣೆ ಮಾಡಿದೆ. ಆದರೆ ಈ ಎರಡು ದಾಖಲೆಗಳನ್ನು ಲಿಂಕ್ ಮಾಡಲು ಇಂದೇ (ಜೂನ್ 30) ಕೊನೆಯ ದಿನಾಂಕವಾಗಿದೆ.
ಆದರೆ ಹಲವಾರು ಮಂದಿಗೆ ಆಧಾರ್ ಪ್ಯಾನ್ ಲಿಂಕ್ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣವನ್ನು ಕೂಡಾ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯು ನೀಡಿದೆ. ಹೆಸರು ಹೊಂದಾಣಿಕೆ ಆಗದಿರುವುದು, ಜನ್ಮ ದಿನಾಂಕ ಹೊಂದಾಣಿಕೆ ಆಗದಿರುವುದು, ಲಿಂಗ ಹೊಂದಾಣಿಕೆ ಆಗದಿರುವುದರಿಂದಾಗಿ ಆಧಾರ್ ಪ್ಯಾನ್ ಲಿಂಕ್ ಮಾಡಲು ಸಾಧ್ಯವಾಗದಿರುತ್ತದೆ ಎಂದು ತಿಳಿಸಿದೆ. ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನಲ್ಲಿನ ವೈಯಕ್ತಿಕ ಮಾಹಿತಿಯು ಹೊಂದಿಕೆಯಾಗದಿದ್ದಾಗ ಪ್ಯಾನ್ ಮತ್ತು ಆಧಾರ್ ನಡುವೆ ಲಿಂಕ್ ಮಾಡಲು ಸಾಧ್ಯವಾಗುವುದಿಲ್ಲ.

ತಪ್ಪಾದ ಹೆಸರು, ತಪ್ಪಾದ ಜನ್ಮದಿನಾಂಕ ಅಥವಾ ಲಿಂಗ ಬದಲಾವಣೆಯಂತಹ ಹಲವಾರು ಸಂದರ್ಭಗಳಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಈ ರೀತಿ ಆಧಾರ್‌ನಲ್ಲಿ ಒಂದು ಮಾಹಿತಿ ಪ್ಯಾನ್ ಕಾರ್ಡ್‌ನಲ್ಲಿ ಒಂದು ಮಾಹಿತಿ ಇದ್ದಾಗ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭ ಬಂದಾಗ ನೀವು ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಯಾವುದಾದರೂ ಒಂದರಲ್ಲಿ ಮಾಹಿತಿಯನ್ನು ಬದಲಾವಣೆ ಮಾಡಬೇಕಾಗುತ್ತದೆ. ಆದರೆ ಪ್ಯಾನ್, ಆಧಾರ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ, ಎಷ್ಟು ದಂಡವನ್ನು ತೆರಬೇಕಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಪ್ಯಾನ್ ಲಿಂಕ್ ಮಾಡಲು ಎಷ್ಟು ದಂಡ?
ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ಪ್ರಕಾರ, "2022ರ ಮಾರ್ಚ್‌ನಿಂದ 2023ರ ಮಾರ್ಚ್‌ವರೆಗೆ ಸಿಬಿಡಿಟಿ ಮೊದಲ ಬಾರಿಗೆ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಗಡುವನ್ನು ವಿಸ್ತರಣೆ ಮಾಡಿದೆ. ನೀವು ಆಧಾರ್ ಕಾರ್ಡ್ ಲಿಂಕ್ ಮಾಡಲು 31, ಮಾರ್ಚ್ 2023ರವರೆಗೆ ಅವಕಾಶವಿತ್ತು. ಆದರೆ ಜೂನ್ 30, 2022ರಿಂದ 500 ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗಿದೆ. ಅದಾದ ಬಳಿಕ ಜುಲೈ 1, 2022ರಿಂದ ನೀವು 1000 ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗಿದೆ."
ಅಂದರೆ ಇಂದು ಆಧಾರ್ ಪ್ಯಾನ್ ಲಿಂಕ್ ಮಾಡಲು ಕೊನೆಯ ದಿನಾಂಕವಾಗಿದ್ದು, ನೀವು ಒಂದು ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಿ ಈ ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡಬಹುದಾಗಿದೆ. ಆದರೆ ನೀವು ಲಿಂಕ್ ಮಾಡದಿದ್ದರೆ ಜುಲೈ 1ರಿಂದ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ಅದಾದ ಬಳಿಕ ನೀವು ನಿಷ್ಕ್ರೀಯವಾದ ಪ್ಯಾನ್ ಕಾರ್ಡ್ ಬಳಸಿದರೆ 10 ಸಾವಿರ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ!
ದಂಡ ಪಾವತಿಸಿ ಆಧಾರ್ ಲಿಂಕ್ ಮಾಡುವುದು ಹೇಗೆ?
ಹಂತ 1: onlineservices.tin.egov-nsdl.com/etaxnew/tdsnontds.jsp ವೆಬ್‌ಸೈಟ್‌ಗೆ ಭೇಟಿ ನೀಡಿ CHALLAN NO./ITNS 280 ಸೆಕ್ಷನ್ ಅಡಿ Proceed ಕ್ಲಿಕ್ ಮಾಡಿ
ಹಂತ 2: Corporation Tax (Companies) ಅಥವಾ Income Tax (Other than Companies) ಆಯ್ಕೆ ಮಾಡಿ
ಹಂತ 3: Type of Payment ಅಡಿಯಲ್ಲಿ Other Receipts ಕ್ಲಿಕ್ ಮಾಡಿ, net banking or debit card ಯಾವ ರೀತಿಯ ಪಾವತಿ ಮಾಡಲು ಬಯಸುತ್ತೀರಿ ಆಯ್ಕೆ ಮಾಡಿ
ಹಂತ 4: ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ನಮೂದಿಸಿ, ವಿಳಾಸ ನಮೂದಿಸಿ
ಹಂತ 5: ಕ್ಯಾಪ್ಚಾ ಹಾಕಿ Proceed ಕ್ಲಿಕ್ ಮಾಡಿ
ಹಂತ 6: 4-5 ದಿನಗಳ ನಂತರ ಎನ್‌ಎಸ್‌ಡಿಎಲ್ ಪೋರ್ಟಲ್‌ನಲ್ಲಿ ಶುಲ್ಕ ಪಾವತಿ ಮಾಡಿದ ನಂತರ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪ್ಯಾನ್-ಆಧಾರ್ ಲಿಂಕ್ ವಿನಂತಿಯನ್ನು ಸಲ್ಲಿಸಬಹುದು.
ಆದಾಯ ತೆರಿಗೆ ವೆಬ್‌ಸೈಟ್‌ನಲ್ಲೇ ತೆರಿಗೆ ಪಾವತಿ
onlineservices.tin.egov-nsdl.com/etaxnew/tdsnontds.jsp ಗೆ ಭೇಟಿ ನೀಡಿದಾಗ ಕೆಲವೊಮ್ಮೆ https://www.incometax.gov.in/iec/foportal/ ಗೆ ರಿಡೈರೆಕ್ಟ್ ಆಗಬಹುದು. ಆ ಸಂದರ್ಭದಲ್ಲಿ ಲಿಂಕ್ ಆಧಾರ್ ಅನ್ನು ಕ್ಲಿಕ್ ಮಾಡಿ, ಆಧಾರ್ ಪ್ಯಾನ್ ಕಾರ್ಡ್ ನಮೂದಿಸಿ, ಶುಲ್ಕ ಪಾವತಿಯನ್ನು ಅಲ್ಲಿ ನೀಡಿರುವ ಮಾಹಿತಿ ಆಧಾರದಲ್ಲಿ ಮಾಡಬೇಕಾಗುತ್ತದೆ.


Click it and Unblock the Notifications