ದೇಶದಲ್ಲಿ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಯವಾಗಿದೆ. ಈ ಎರಡು ದಾಖಲೆಗಳನ್ನು ಲಿಂಕ್ ಮಾಡಲು ಈ ಹಿಂದೆ ಹಲವಾರು ಬಾರಿ ಗಡುವು ವಿಸ್ತರಣೆ ಮಾಡುವ ಅವಕಾಶ ನೀಡಲಾಗಿದೆ. ಈಗ ನೂತನವಾಗಿ ಜೂನ್ 30ರವರೆಗೆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಗಡುವು ಇದೆ. ಆದರೆ ಫಾರ್ಮ್‌ನಲ್ಲಿ ಬದಲಾವಣೆ ಮಾಡಲಾಗಿದೆ.
ಪ್ರಸ್ತುತ ಪ್ಯಾನ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕಾದರೆ ನಾವು ಒಂದು ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಇದಕ್ಕೂ ಮುನ್ನ 500 ರೂಪಾಯಿ ದಂಡ ಪಾವತಿಸಬೇಕಾಗಿತ್ತು. ಆದಾಯ ತೆರಿಗೆ ಇಲಾಖೆ 500 ರೂಪಾಯಿ ದಂಡ ವಿಧಿಸುವುದಕ್ಕೂ ಮುನ್ನ ಯಾವುದೇ ದಂಡವನ್ನು ಪಾವತಿ ಮಾಡದೆಯೇ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡುವ ಅವಕಾಶವನ್ನು ನೀಡಲಾಗಿತ್ತು.

ಈಗ ನೀವು ದೇಶದಲ್ಲಿ ಎಲ್ಲ ಕಾರ್ಯಗಳಿಗೆ ಅಗತ್ಯವಾಗಿ ಬೇಕಾದ ಈ ಎರಡು ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡಿಸಲು ಒಂದು ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗಿದೆ. ನೀವು ಈ ದಂಡವನ್ನು ಪಾವತಿ ಮಾಡುವಾಗ, ನೀವು ಮೌಲ್ಯಮಾಪನ ವರ್ಷವನ್ನು (AY) ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯು ಈ ಮೌಲ್ಯಮಾಪನ ವರ್ಷದ ಆಯ್ಕೆಯನ್ನು ಅಪ್‌ಡೇಟ್ ಮಾಡಿದೆ.
ಪ್ಯಾನ್ ಆಧಾರ್ ಕಾರ್ಡ್ ಲಿಂಕಿಂಗ್ ಅಪ್‌ಡೇಟ್
ಆದಾಯ ತೆರಿಗೆ ಇಲಾಖೆಯು ಪ್ರಸ್ತುತ ಮೌಲ್ಯಮಾಪನ ವರ್ಷವನ್ನು ಗುರುತಿಸುವ ಆಯ್ಕೆಯಲ್ಲಿ ಬದಲಾವಣೆಯನ್ನು ಮಾಡಿದೆ. ಒಂದು ಸಾವಿರ ರೂಪಾಯಿ ತಡವಾದ ಶುಲ್ಕ ಪಾವತಿಗೆ ಈಗ ನೀವು AY 24-25 ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಪಾವತಿ ವಿಧಾನವನ್ನು Other Receipts (500) ಎಂದು ಆಯ್ಕೆ ಮಾಡಬೇಕಾಗುತ್ತದೆ. ಇದಕ್ಕೂ ಮುನ್ನ ಮಾರ್ಚ್ 31, 2023ರವರೆಗೆ ಶುಲ್ಕ ಪಾವತಿಗೆ AY 23-24 ಆಯ್ಕೆ ಮಾಡಬೇಕಾಗಿತ್ತು.
ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಚೆಕ್ ಮಾಡಿಕೊಳ್ಳಿ
ಹಂತ 1: ಆಧಾಯ ತೆರಿಗೆ ಇಲಾಖೆ ಇ-ಪೋರ್ಟಲ್‌ಗೆ ಭೇಟಿ ನೀಡಿ https://www.incometax.gov.in/iec/foportal/
ಹಂತ 2: ಎಡ ಭಾಗದಲ್ಲಿ ಕಾಣುವ Quick Linksನಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ 10 ಡಿಜಿಟ್‌ನ ಪ್ಯಾನ್ ಸಂಖ್ಯೆಯನ್ನು ನಮೂದಿಸಿ
ಹಂತ 4: ನಿಮ್ಮ 12 ಡಿಜಿಟ್‌ನ ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 5: View Link Aadhaar Status ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಎಂದು ತಿಳಿಯಲಿದೆ.
ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಈಗಾಗಲೇ ಲಿಂಕ್ ಆಗಿದ್ದರೆ ಸ್ಕ್ರೀನ್‌ನಲ್ಲಿ Your PAN xxxxxxxxxx is already linked to given Aadhaar xxxxxxxxxxxx (ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಈಗಾಗಲೇ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗಿದೆ) ಎಂದು ಕಾಣಲಿದೆ. ಒಂದು ವೇಳೆ ಪ್ಯಾನ್‌ಗೆ ಆಧಾರ್ ಲಿಂಕ್ ಆಗದಿದ್ದರೆ ನೀವು ಮುಂದಿನ ಹಂತವನ್ನು ಪಾಲಿಸಿ ಪ್ಯಾನ್ ಲಿಂಕ್ ಮಾಡಬೇಕಾಗುತ್ತದೆ.
ಆಧಾರ್ ಪ್ಯಾನ್ ಲಿಂಕ್ ಆಗದಿದ್ದರೆ ಏನಾಗುತ್ತದೆ?
1. ಗಡುವಿಗೂ ಮುನ್ನ ಪ್ಯಾನ್ ಆಧಾರ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.
2. ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾದ ಬಳಿಕ ನೀವು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಸಾಧ್ಯವಾಗುವುದಿಲ್ಲ.
3. ಬಾಕಿಯುಳಿದ ತೆರಿಗೆ ರಿಟರ್ನ್ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಾಗುವುದಿಲ್ಲ
4. ಪ್ಯಾನ್ ನಿಷ್ಕ್ರೀಯವಾದರೆ ಬಾಕಿಯುಳಿದ ತೆರಿಗೆ ರಿಫಂಡ್ ಅನ್ನು ಮಾಡಲಾಗುವುದಿಲ್ಲ.
5. ರಿಟರ್ನ್ ಸಲ್ಲಿಸುವಾಗ ಆದ ತಪ್ಪನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ.
6. ಪ್ಯಾನ್ ನಿಷ್ಕ್ರೀಯವಾದರೆ ಅಧಿಕ ತೆರಿಗೆಯನ್ನು ನೀವು ಪಾವತಿಸಬೇಕಾಗುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications