ದೇಶದಲ್ಲಿ ಪ್ರಸ್ತುತ ಎರಡು ಕಾರ್ಡ್‌ಗಳು ಅತೀ ಮುಖ್ಯವಾಗಿದೆ, ಅದುವೇ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಆಗಿದೆ. ಆಧಾರ್ ಹಾಗೂ ಪ್ಯಾನ್ ಕಾರ್ಡ್ ಎರಡನ್ನು ಕೂಡಾ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ಎರಡು ದಾಖಲೆಗಳನ್ನು ಲಿಂಕ್ ಮಾಡಲು ಕೊನೆಯ ದಿನಾಂಕ ಇನ್ನು ಕೆಲವೇ ದಿನಗಳಿದೆ. ಲಿಂಕ್ ಮಾಡದಿದ್ದರೆ ನಿಷ್ಕ್ರೀಯವಾಗಲಿದೆ.
ಪ್ಯಾನ್ ಕಾರ್ಡ್ ಎಂದರೆ ಪರ್ಮನೆಂಟ್ ಅಕೌಂಟ್ ನಂಬರ್ ಕಾರ್ಡ್ ಆಗಿದ್ದು ಇದು ವಿಶಿಷ್ಟ 10 ಸಂಖ್ಯೆ ಅಂಕಿಗಳಾಗಿದೆ. ಭಾರತೀಯ ಆದಾಯ ತೆರಿಗೆ ಇಲಾಖೆಯು ಈ ಪ್ಯಾನ್ ಕಾರ್ಡ್ ಅನ್ನು ಜನರಿಗೆ, ಸಂಸ್ಥೆಗಳಿಗೆ ಜಾರಿ ಮಾಡುತ್ತದೆ. ಇದು ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಬ್ಯಾಂಕ್ ಖಾತೆ ತೆರೆಯುವುದು, ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಮತ್ತು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಂತಹ ವಿವಿಧ ಹಣಕಾಸು ವಹಿವಾಟುಗಳಿಗೆ ಕಡ್ಡಾಯವಾಗಿದೆ.

ಪ್ಯಾನ್ ಕಾರ್ಡ್ ವ್ಯಕ್ತಿಯ ಹೆಸರು, ಹುಟ್ಟಿದ ದಿನಾಂಕ ಮತ್ತು ಛಾಯಾಚಿತ್ರದಂತಹ ವಿವರಗಳನ್ನು ಹೊಂದಿರುತ್ತದೆ. ಪ್ಯಾನ್ ಕಾರ್ಡ್ ಅನ್ನು ಸಾಮಾನ್ಯವಾಗಿ ಸೂಕ್ಷ್ಮ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪ್ಯಾನ್ ಕಾರ್ಡ್ ಅನ್ನು ಸುರಕ್ಷಿತವಾಗಿರಿಸುವುದು ಮುಖ್ಯವಾಗಿದೆ. ಆದರೆ ನೀವು ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಗಡುವಿಗೂ ಮುನ್ನ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರೀಯವಾಗಲಿದೆ.
ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವುದು
ಆದಾಯ ತೆರಿಗೆ ಕಾಯಿದೆ, 1961 ರಲ್ಲಿನ ಸೆಕ್ಷನ್ 139AA ಪ್ರಕಾರ, ಆಧಾರ್ ಕಾರ್ಡ್ ಅನ್ನು ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಜುಲೈ 1, 2017 ರಿಂದ ಜಾರಿಗೆ ಬರುವಂತೆ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಅಥವಾ ಆದಾಯದ ರಿಟರ್ನ್ ಅನ್ನು ಫೈಲ್ ಮಾಡುವಾಗ ತನ್ನ ಆಧಾರ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ.
ಆಧಾರ್ - ಪ್ಯಾನ್ ಲಿಂಕಿಂಗ್ ಕೊನೆಯ ದಿನಾಂಕ: ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕ ಜೂನ್ 30 ಆಗಿದೆ.
ಆಧಾರ್ - ಪ್ಯಾನ್ ಲಿಂಕ್ ಮಾಡುವುದು ಹೇಗೆ?
ಹಂತ 1: ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ - https://incometaxindiaefiling.gov.in/
ಹಂತ 2: ನಿಮ್ಮ ವಿವರ ಹಾಕಿ, ಪ್ಯಾನ್ ಬಳಕೆದಾರರ ಐಡಿ ಆಗಿರುತ್ತದೆ
ಹಂತ 3: ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕ ಬಳಸಿ ಲಾಗಿನ್ ಮಾಡಿ
ಹಂತ 4: ಪಾಪ್-ಅಪ್ ವಿಂಡೋದಲ್ಲಿ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಯ್ಕೆ ಇರುತ್ತದೆ
ಹಂತ 5: ವಿಂಡೋ ಕಾಣಿಸದಿದ್ದರೆ, ಮೆನು ಬಾರ್‌ನಲ್ಲಿ 'Profile Settings' ಗೆ ಹೋಗಿ, 'Link Aadhaar' ಕ್ಲಿಕ್ ಮಾಡಿ
ಹಂತ 6: ಆಧಾರ್‌ನಲ್ಲಿರುವ ಪ್ಯಾನ್ ವಿವರ ಪರಿಶೀಲಿಸಿ, link now ಬಟನ್ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣ
ಎಸ್‌ಎಂಎಸ್ ಮೂಲಕ ಲಿಂಕ್ ಮಾಡಿ
ಹಂತ 1: ಎಸ್‌ಎಂಎಸ್ ಅನ್ನು ಪಡೆಯಲು 567678 ಅಥವಾ 56161ಗೆ ಡಯಲ್ ಮಾಡಿ. ಫಾರ್ಮೆಟ್ ಯುಐಡಿಪಿಎಎನ್ (10-ಅಂಕಿಯ PAN ಕಾರ್ಡ್ ಸಂಖ್ಯೆ), 12-ಅಂಕಿಯ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಸ್ಪೇಸ್ ಆಗಿರಬೇಕು.
ಹಂತ 2: ಪ್ಯಾನ್ ಆಧಾರ್ ಲಿಂಕೀಂಗ್ ಸ್ಟೇಟಸ್ ಬಗ್ಗೆ ನಿಮಗೆ ಎಸ್ಎಂಎಸ್ ಲಭ್ಯವಾಗಲಿದೆ. ಎರಡು ದಾಖಲೆಗಳಲ್ಲಿ ತೆರಿಗೆದಾರರ ಜನನ ದಿನಾಂಕವು ಒಂದೇ ಆಗಿದ್ದರೆ ಮಾತ್ರ ಆಧಾರ್ ಪ್ಯಾನ್ ಅನ್ನು ಲಿಂಕ್ ಮಾಡಬಹುದಾಗಿದೆ.
ಆಧಾರ್ ಪ್ಯಾನ್ ಲಿಂಕ್ ಆಗದಿದ್ದರೆ ಏನಾಗುತ್ತದೆ?
1. ಗಡುವಿಗೂ ಮುನ್ನ ಪ್ಯಾನ್ ಆಧಾರ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.
2. ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾದ ಬಳಿಕ ನೀವು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಸಾಧ್ಯವಾಗುವುದಿಲ್ಲ.
3. ಬಾಕಿಯುಳಿದ ತೆರಿಗೆ ರಿಟರ್ನ್ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಾಗುವುದಿಲ್ಲ
4. ಪ್ಯಾನ್ ನಿಷ್ಕ್ರೀಯವಾದರೆ ಬಾಕಿಯುಳಿದ ತೆರಿಗೆ ರಿಫಂಡ್ ಅನ್ನು ಮಾಡಲಾಗುವುದಿಲ್ಲ.
5. ರಿಟರ್ನ್ ಸಲ್ಲಿಸುವಾಗ ಆದ ತಪ್ಪನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ.
6. ಪ್ಯಾನ್ ನಿಷ್ಕ್ರೀಯವಾದರೆ ಅಧಿಕ ತೆರಿಗೆಯನ್ನು ನೀವು ಪಾವತಿಸಬೇಕಾಗುತ್ತದೆ.


Click it and Unblock the Notifications