ಪ್ರಸ್ತುತ ದೇಶದಲ್ಲಿ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅತೀ ಪ್ರಮುಖವಾದ ದಾಖಲೆಯಾಗಿದೆ. ಯಾವುದೇ ಹಣಕಾಸು ವಹಿವಾಟಿಗಾಗಲಿ ಅಥವಾ ಯಾವುದೇ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ನಾವು ಪಡೆಯುವಾಗ ಆಗಲಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಹೊಂದಿರುವುದು ಅತೀ ಮುಖ್ಯವಾಗುತ್ತದೆ.
ಮಾರ್ಚ್ 31 ರಿಂದ ಜೂನ್ 30, 2023 ರವರೆಗೆ ಆಧಾರ್-ಪ್ಯಾನ್ ಲಿಂಕ್ ಮಾಡುವ ಗಡುವನ್ನು ಸರ್ಕಾರವು ಮೂರು ತಿಂಗಳ ಕಾಲ ವಿಸ್ತರಣೆ ಮಾಡಿದೆ. ಜುಲೈ 1, 2023 ರಿಂದ, ಯಾವೆಲ್ಲ ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲಾಗಿರುವುದಿಲ್ಲವೋ ಆ ಪ್ಯಾನ್ ಕಾರ್ಡ್‌ಗಳನ್ನು ನಿಷ್ಕ್ರೀಯಗೊಳಿಸಲಾಗುತ್ತದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಎಂದು ಹೇಳಿದೆ.

ಆದಾಯ ತೆರಿಗೆ ಇಲಾಖೆಯ ಪ್ರಕಾರ, "ತೆರಿಗೆದಾರರಿಗೆ ಇನ್ನೂ ಸ್ವಲ್ಪ ಸಮಯವನ್ನು ಒದಗಿಸುವ ಸಲುವಾಗಿ, ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ದಿನಾಂಕವನ್ನು 30 ಜೂನ್ 2023ರವರೆಗೆ ವಿಸ್ತರಣೆ ಮಾಡಲಾಗಿದೆ. ಆ ಮೂಲಕ ಜನರು ಯಾವುದೇ ಪರಿಣಾಮವನ್ನು ಎದುರಿಸದಿರಲು ತಮ್ಮ ಆಧಾರ್ ಅನ್ನು ಪ್ಯಾನ್ ಲಿಂಕ್ ಮಾಡಬೇಕಾಗುತ್ತದೆ."
ಪ್ಯಾನ್- ಆಧಾರ್ ಕಾರ್ಡ್ ಲಿಂಕ್ ಮಾಡಿದಿದ್ದರೆ ಏನಾಗುತ್ತದೆ?
ನಾಗರಿಕರು ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ಅವರ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಸಿಬಿಡಿಟಿ ನಿಯಮದ ಪ್ರಕಾರ, "ಆದಾಯ ತೆರಿಗೆ ನಿಯಮದ 114AAA ಪ್ರಕಾರ ಒಬ್ಬ ವ್ಯಕ್ತಿಯ ಪ್ಯಾನ್ ನಿಷ್ಕ್ರಿಯಗೊಂಡರೆ, ಪ್ಯಾನ್ ಕಾರ್ಡ್ ಅನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಪರಿಣಾಮಗಳಿಗೆ ಅವರೆ ಜವಾಬ್ದಾರಿಯಾಗಿರುತ್ತಾರೆ," ಎಂದು ಉಲ್ಲೇಖಿಸಲಾಗಿದೆ.
ಆಧಾರ್ - ಪ್ಯಾನ್ ಲಿಂಕ್ ಮಾಡಲು ಎಷ್ಟು ಶುಲ್ಕ?
ಮಾರ್ಚ್ 31, 2023ಕ್ಕೂ ಮುನ್ನ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿದವರಿಗೆ ಉಚಿತವಾಗಿಯೇ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿದ್ದಾರೆ. ಆದರೆ ಅದಾದ ಬಳಿಕ ಪ್ಯಾನ್ ಕಾರ್ಡ್ ಲಿಂಕ್ ಮಾಡದವರಿಗೆ 1000 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ. ಜೂನ್ 30ರ ಒಳಗಾಗಿ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.
ಪ್ಯಾನ್-ಆಧಾರ್ ಹೀಗೆ ಲಿಂಕ್ ಮಾಡಿ
ಹಂತ 1: ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ - https://incometaxindiaefiling.gov.in/
ಹಂತ 2: ನಿಮ್ಮ ವಿವರ ಹಾಕಿ, ಪ್ಯಾನ್ ಬಳಕೆದಾರರ ಐಡಿ ಆಗಿರುತ್ತದೆ
ಹಂತ 3: ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕ ಬಳಸಿ ಲಾಗಿನ್ ಮಾಡಿ
ಹಂತ 4: ಪಾಪ್-ಅಪ್ ವಿಂಡೋದಲ್ಲಿ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಯ್ಕೆ ಇರುತ್ತದೆ
ಹಂತ 5: ವಿಂಡೋ ಕಾಣಿಸದಿದ್ದರೆ, ಮೆನು ಬಾರ್‌ನಲ್ಲಿ 'Profile Settings' ಗೆ ಹೋಗಿ, 'Link Aadhaar' ಕ್ಲಿಕ್ ಮಾಡಿ
ಹಂತ 6: ಆಧಾರ್‌ನಲ್ಲಿರುವ ಪ್ಯಾನ್ ವಿವರ ಪರಿಶೀಲಿಸಿ, link now ಬಟನ್ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣ
ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಚೆಕ್ ಮಾಡಿಕೊಳ್ಳಿ
ಹಂತ 1: ಆಧಾಯ ತೆರಿಗೆ ಇಲಾಖೆ ಇ-ಪೋರ್ಟಲ್‌ಗೆ ಭೇಟಿ ನೀಡಿ https://www.incometax.gov.in/iec/foportal/
ಹಂತ 2: ಎಡ ಭಾಗದಲ್ಲಿ ಕಾಣುವ Quick Linksನಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ 10 ಡಿಜಿಟ್‌ನ ಪ್ಯಾನ್ ಸಂಖ್ಯೆಯನ್ನು ನಮೂದಿಸಿ
ಹಂತ 4: ನಿಮ್ಮ 12 ಡಿಜಿಟ್‌ನ ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 5: View Link Aadhaar Status ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಎಂದು ತಿಳಿಯಲಿದೆ.
ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಈಗಾಗಲೇ ಲಿಂಕ್ ಆಗಿದ್ದರೆ ಸ್ಕ್ರೀನ್‌ನಲ್ಲಿ Your PAN xxxxxxxxxx is already linked to given Aadhaar xxxxxxxxxxxx (ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಈಗಾಗಲೇ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗಿದೆ) ಎಂದು ಕಾಣಲಿದೆ. ಒಂದು ವೇಳೆ ಪ್ಯಾನ್‌ಗೆ ಆಧಾರ್ ಲಿಂಕ್ ಆಗದಿದ್ದರೆ ನೀವು ಮುಂದಿನ ಹಂತವನ್ನು ಪಾಲಿಸಿ ಪ್ಯಾನ್ ಲಿಂಕ್ ಮಾಡಬೇಕಾಗುತ್ತದೆ.


Click it and Unblock the Notifications