For Quick Alerts
ALLOW NOTIFICATIONS  
For Daily Alerts

ಎಷ್ಟು ಕಿ.ಮೀ. ಕಾರು ಓಡಿಸುತ್ತೀರೋ ಅಷ್ಟಕ್ಕೆ ಮಾತ್ರ ಕಟ್ಟಿ ಇನ್ಷೂರೆನ್ಸ್ ಪ್ರೀಮಿಯಂ !

|

ನೀವು ಯಾವ ಪ್ರಮಾಣದಲ್ಲಿ ಕಾರು ಬಳಸುತ್ತೀರೋ ಅದಕ್ಕೆ ತಕ್ಕಂತೆ ಇನ್ಷೂರೆನ್ಸ್ ಪ್ರೀಮಿಯಂ ಕಟ್ಟುವ ಯೋಜನೆಯೊಂದು ಬಂದಿದೆ. ಕೆಲವರು ಬಹಳ ಅಪರೂಪಕ್ಕೆ ತಮ್ಮ ಕಾರನ್ನು ಓಡಿಸುತ್ತಾರೆ. ಮತ್ತೂ ಕೆಲವರು ದಿನ ಬಿಟ್ಟು ದಿನ ಕಾರು ರಸ್ತೆಗೆ ಇಳಿಸುತ್ತಾರೆ. ಆದ್ದರಿಂದ ಕಾರು ಎಷ್ಟು ಕಿಲೋಮೀಟರ್ ಓಡಿಸಿದಿರಿ ಎಂಬ ಆಧಾರದ ಮೇಲೆ ಇನ್ಷೂರೆನ್ಸ್ ಪಾವತಿಸಬಹುದು.

 

PolicyBazar.com ಜತೆಗೆ ಸಹಭಾಗಿತ್ವ ವಹಿಸಿರುವ ಭಾರ್ತಿ ಆಕ್ಸಾ ಜನರಲ್ ಇನ್ಷೂರೆನ್ಸ್ ಇದೀಗ "ಬಳಕೆ ಆಧಾರದಲ್ಲಿ ಮೋಟಾರ್ ಇನ್ಷೂರೆನ್ಸ್" ಮಾರಾಟಕ್ಕೆ ಮುಂದಾಗಿದೆ. ಖಾಸಗಿ ಕಾರುಗಳ ಮಾಲೀಕರು ಇದರ ಲಾಭ ಪಡೆಯಬಹುದು. ಈ ಬಳಕೆ ಆಧಾರಿತ ಮೋಟಾರ್ ಇನ್ಷೂರೆನ್ಸ್ ಅನ್ನು "Pay As You Drive" ಎಂದು ಕೂಡ ಕರೆಯಲಾಗುತ್ತದೆ.

ಈ ಪಾಲಿಸಿಯಿಂದ ಯಾರಿಗೆ ಅನುಕೂಲ?

ಈ ಪಾಲಿಸಿಯಿಂದ ಯಾರಿಗೆ ಅನುಕೂಲ?

ಕಾರು ಎಷ್ಟು ಕಿಲೋಮೀಟರ್ ಸಂಚರಿಸಿದೆ ಎಂಬುದರ ಆಧಾರದಲ್ಲಿ ಪಾಲಿಸಿದಾರರು ಕಾರಿನ ಪ್ರೀಮಿಯಂ ಅನ್ನು ಕಟ್ಟುತ್ತಾರೆ. ಒಬ್ಬೊಬ್ಬರ ಬಳಕೆ ಒಂದೊಂದು ರೀತಿಯಲ್ಲಿ ಇರುತ್ತದೆ. ಆದರೆ ಈ ಇನ್ಷೂರೆನ್ಸ್ ಯೋಜನೆಯು ಕಾರನ್ನು ಕಡಿಮೆ ಓಡಿಸುವಂಥವರಿಗೆ ಅನುಕೂಲವಾಗಿ ಇರುತ್ತದೆ. ಮುಂದಿನ ಒಂದು ವರ್ಷದೊಳಗೆ ಕಾರು ಎಷ್ಟು ಕಿ.ಮೀ. ಸಂಚರಿಸಬಹುದು ಎಂದು ಈ ಪ್ರಾಡಕ್ಟ್ ನಲ್ಲಿ ಪಾಲಿಸಿದಾರರು ಮುಂಚಿತವಾಗಿಯೇ ಘೋಷಿಸುತ್ತಾರೆ. ಮುಂಚಿತವಾಗಿ ಘೋಷಣೆ ಮಾಡಿದ ಕಿ.ಮೀ. ಆಧಾರದಲ್ಲಿ ಇನ್ಷೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಲಾಗುತ್ತದೆ. ಪಾಲಿಸಿದಾರರು ಮೂರು ಸ್ಲ್ಯಾಬ್ ನಿಂದ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. 2500, 5000 ಹಾಗೂ 7500. ಹೀಗೆ ಮೂರು ರೀತಿಯ ಬಳಕೆ ಮಾದರಿಗಳಿವೆ.

ಇನ್ಷೂರೆನ್ಸ್ ಖರೀದಿ ಮಾಡುವುದು ಹೇಗೆ?

ಇನ್ಷೂರೆನ್ಸ್ ಖರೀದಿ ಮಾಡುವುದು ಹೇಗೆ?

"Pay As You Drive" ಪಾಲಿಸಿಯನ್ನು ಭಾರ್ತಿ ಆಕ್ಸಾ ಜನರಲ್ ಇನ್ಷೂರೆನ್ಸ್ ನಿಂದ ಪಡೆಯಬಹುದು. ಅದನ್ನು Policy Bazarನಿಂದ ಖರೀದಿಸಲು ಮೂರು ಹಂತಗಳಿವೆ:

* ಲಭ್ಯ ಇರುವ ಮೂರು ಬಗೆಯ ಬಳಕೆ ಮಾದರಿಯಲ್ಲಿ ಪಾಲಿಸಿದಾರರು ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.

* ಇನ್ಷೂರೆನ್ಸ್ ಮಾಡಿಸುವ ವಾಹನದ ಓಡೋಮೀಟರ್ ನಲ್ಲಿ ಎಷ್ಟು ಕಿ.ಮೀ. ಓಡಿದೆ ಎಂಬ ಮಾಹಿತಿ, ಕೆವೈಸಿ ವಿವರ ಹಾಗೂ ಗ್ರಾಹಕರ ಒಪ್ಪಿಗೆಯ ಅರ್ಜಿಯನ್ನು ನಿಯಮಾವಳಿ ಅನುಸಾರ ಸಲ್ಲಿಸಬೇಕು.

* Own Damage (OD) ಪ್ರೀಮಿಯಂ ಅನ್ನು ಮುಂಚಿತವಾಗಿ ಘೋಷಣೆ ಮಾಡಿದ ಸ್ಲ್ಯಾಬ್ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಈ ಪಾಲಿಸಿ ಅಡಿಯಲ್ಲಿ ಮುಂದಿನ ವರ್ಷದ ಕಾಲ ಸ್ಟ್ಯಾಂಡರ್ಡ್ ಮೋಟಾರ್ ಓ.ಡಿ. ಕವರೇಜ್ ಎಲ್ಲವೂ ಆಗುತ್ತದೆ.

ಹೆಚ್ಚು ಕಿ.ಮೀ. ಓಡಿಸಿಯೂ ಪ್ರೀಮಿಯಂ ರಿನೀವಲ್ ಮಾಡದಿದ್ದರೆ ಏನಾಗುತ್ತೆ?
 

ಹೆಚ್ಚು ಕಿ.ಮೀ. ಓಡಿಸಿಯೂ ಪ್ರೀಮಿಯಂ ರಿನೀವಲ್ ಮಾಡದಿದ್ದರೆ ಏನಾಗುತ್ತೆ?

ಹೆಚ್ಚಿಗೆ ಪ್ರೀಮಿಯಂ ಆಗಲ್ಲ ಅನ್ನೋದು ಒಂದು ಅನುಕೂಲ ಆಯಿತು. ಜತೆಗೆ ಪಾಲಿಸಿದಾರರು ಬೇಕಿದ್ದಲ್ಲಿ ವರ್ಷದ ಮಧ್ಯದಲ್ಲಿ ಮೇಲಿನ ಸ್ಲ್ಯಾಬ್ ಗೆ ಕೂಡ ಬದಲಿಸಿಕೊಳ್ಳಬಹುದು. ಅಥವಾ ಒಂದು ವೇಳೆ ಮುಂಚೆಯೇ ಘೋಷಣೆ ಮಾಡಿದ್ದಕ್ಕಿಂತ ಹೆಚ್ಚಿನ ಕಿಲೋಮೀಟರ್ ಸಂಚಾರ ಮಾಡಿದ್ದರೆ ಸದ್ಯಕ್ಕೆ ಇರುವ ಸ್ಟ್ಯಾಂಡರ್ಡ್ ಮೋಟಾರ್ ಓನ್ ಡ್ಯಾಮೇಜ್ ಗೂ ಬದಲಿಸಿಕೊಳ್ಳಬಹುದು. ಈ ಎರಡೂ ಸಂದರ್ಭದಲ್ಲಿ ಗ್ರಾಹಕರು ಹೆಚ್ಚುವರಿಯಾಗಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಒಂದು ವೇಳೆ ಘೋಷಣೆ ಮಾಡಿಕೊಂಡಿದ್ದಕ್ಕಿಂತ ಹೆಚ್ಚಿನ ಕಿಲೋಮೀಟರ್ ಓಡಿಸಿಯೂ ನವೀಕರಣ (ರಿನೀವಲ್) ಮಾಡಿಕೊಳ್ಳದಿದ್ದಲ್ಲಿಯೂ ಆ ಇಡೀ ಅವಧಿಗೆ ಪಾಲಿಸಿ ವ್ಯಾಲಿಡಿಟಿ ಹಾಗೇ ಇರುತ್ತದೆ. ಇನ್ನು ಥರ್ಡ್ ಪಾರ್ಟಿ ಕ್ಲೇಮ್ ಸಲ್ಲಿಸಿದರೆ ಆ ಪಾಲಿಸಿ ಅವಧಿಯಲ್ಲಿ ಸದ್ಯಕ್ಕೆ ಇರುವ ಕ್ಲೇಮ್ ನಿಯಮದಂತೆಯೇ ಪರಿಗಣಿಸಲಾಗುತ್ತದೆ.

ಈ ಇನ್ಷೂರೆನ್ಸ್ ಯಾರಿಗೆ ಸೂಕ್ತ?

ಈ ಇನ್ಷೂರೆನ್ಸ್ ಯಾರಿಗೆ ಸೂಕ್ತ?

"Pay As You Drive" ಪಾಲಿಸಿಯು ಯಾರಿಗೆ ಸೂಕ್ತ ಎಮ್ಬ ಪ್ರಶ್ನೆ ಮೂಡುವುದು ಸಹಜ. ಯಾರ ಬಳಿ ಹಲವು ವಾಹನಗಳಿವೆ ಹಾಗೂ ಎಲ್ಲ ವಾಹನಗಳನ್ನು ಬಹಳ ಬಳಸುವುದಿಲ್ಲ ಅಂಥವರು ಹೆಚ್ಚಿನ ಇನ್ಷೂರೆನ್ಸ್ ಪ್ರೀಮಿಯಂ ಪಾವತಿಸುವ ಅಗತ್ಯ ಬರುವುದಿಲ್ಲ. ಮತ್ತು ಯಾರು ಹೆಚ್ಚು ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೋ ಅಥವಾ ಪದೇ ಪದೇ ನಗರದಿಂದ ಹೊರಗೆ ಹೋಗುತ್ತಾರೋ ಮತ್ತು ಅಪರೂಪಕ್ಕೆ ತಮ್ಮ ಪರ್ಸನಲ್ ವಾಹನವನ್ನು ಬಳಸುತ್ತಾರೋ ಅಂಥವರಿಗೆ ಈ ಇನ್ಷೂರೆನ್ಸ್ ಪಾಲಿಸಿಯು ಹೇಳಿ ಮಾಡಿಸಿದಂತೆ ಇರುತ್ತದೆ. ಇದರ ಲಾಭವನ್ನು ಪಡೆಯಬಹುದು ಎನ್ನುತ್ತಾರೆ ತಜ್ಞರು.

English summary

Pay Insurance Premium For How Many KM You Will Drive Car

Bharti Axa General insurance with PolicyBazar.com introduced car insurance policy "Pay As You Drive". Here is the complete details.
Story first published: Wednesday, April 29, 2020, 20:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X