ಉದ್ಯಮ ಅಭಿವೃದ್ದಿ ಪಡಿಸಬೇಕೇ?, ಇಲ್ಲಿದೆ ಪ್ರಮುಖ ಸಲಹೆಗಳು

ಉತ್ತಮ ಉದ್ಯಮಿ ಆಗಿರಲು ನಾವು ಅಂದುಕೊಂಡದ್ದಕ್ಕಿಂತ ಮಾನಸಿಕ ಹಾಗೂ ದೈಹಿಕವಾಗಿ ಬಹಳ ಶ್ರಮದ ಅಗತ್ಯ ಇರುತ್ತದೆ. ಹಾಗೆಯೇ ಉದ್ಯಮಿಗಳಿಗೆ ಈ ಕಾಲದಲ್ಲಿ ಅಧಿಕ ಬೇಡಿಕೆಯಿದೆ. ಹೆಚ್ಚಿನ ಉದ್ಯಮಿಗಳು ವಾರಕ್ಕೆ 40 ಗಂಟೆಗಿಂತ ಅಧಿಕ ಕಾಲ ಕೆಲಸ ಮಾಡುತ್ತಾರೆ. ಆದರೆ ಹಲವಾರು ಮಂದಿ ತಾವು ಇತರೆ ಕಡೆಗಳಲ್ಲಿ ಕೆಲಸ ಮಾಡಿದರೆ ದೊರಕವಷ್ಟು ಸಂಬಳವನ್ನು ಕೂಡಾ ದುಡಿಯಲು ಸಾಧ್ಯವಾಗುವುದಿಲ್ಲ. ಇತರೆ ಕಡೆಗಳಲ್ಲಿ ನಾವು ಕಾರ್ಯ ನಿರ್ವಹಿಸುವಾಗ ನಮ್ಮ ದುಡಿಮೆಗೆ ಸಂಸ್ಥೆಯು ಸಂಬಳವನ್ನು ನೀಡುತ್ತದೆ. ಆದರೆ ಸ್ವತಃ ಉದ್ಯಮಿಯಾಗಿರುವಾಗ ನಾವಾಗಿಯೇ ಸಂಪಾದನೆ ಮಾಡಬೇಕಾಗುತ್ತದೆ.

ಉದ್ಯಮಿಗಳು ತಮ್ಮ ಎಲ್ಲಾ ಆರ್ಥಿಕ ಪರಿಸ್ಥಿತಿಗೆ ತಾವೇ ಜವಾಬ್ದಾರರಾಗಿರುತ್ತಾರೆ. ವಿಮೆ, ಉಳಿತಾಯ, ನಿವೃತ್ತಿ ಇವೆಲ್ಲವೂ ಸ್ವಯಂ ಉದ್ಯೋಗಿಗಳಿಗೆ ತಾವೇ ಜವಾಬ್ದಾರಿ ತೆಗೆದುಕೊಳ್ಳಬೇಕಾದ ವಿಚಾರ. ನಾವು ಉದ್ಯಮಿಗಳು ಆಗಿರುವ ಸಂದರ್ಭದಲ್ಲಿ ನಮ್ಮ ಉದ್ಯಮವನ್ನು ನೋಡಿಕೊಳ್ಳಲು ಉದ್ಯೋಗಿಗಳಿಗೆ ಜವಾಬ್ದಾರಿ ವಹಿಸಿ ನಾವು ಅಧಿಕ ತಲೆ ಕೆಡಿಸಿಕೊಳ್ಳದೆ ಇರಬಹುದು ಎಂದು ಕೆಲವರು ಅಂದುಕೊಳ್ಳುತ್ತಾರೆ. ಆದರೆ ನಾವು ಉದ್ಯಮಿಗಳು ಆಗಿರುವ ಪ್ರತಿ ಹೆಜ್ಜೆಯನ್ನು ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ. ಭವಿಷ್ಯದ ಬಗ್ಗೆ ಲೆಕ್ಕಾಚಾರ ಮಾಡಿಕೊಂಡು ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ.

ಇನ್ನು ನೀವು ಉದ್ಯಮಿಗಳು ಆಗಿರುವಾಗಲೇ ಎಲ್ಲಾ ಭವಿಷ್ಯದ ಸಿದ್ದತೆಗಳನ್ನು ಮಾಡಿಕೊಳ್ಳದಿದ್ದರೆ, ನೀವು ನಿವೃತ್ತರಾಗುವ ಸಂದರ್ಭದಲ್ಲಿ ದಿಕ್ಕುತೋಚದ ಪರಿಸ್ಥಿತಿ ಉಂಟಾಗಬಹುದು. ನೀವು ಉದ್ಯಮವನ್ನು ಮಾಡುತ್ತಿರುವ ಸಂದರ್ಭದಲ್ಲೂ ಕೂಡಾ ಕೆಲವೊಂದು ಅನಿರೀಕ್ಷಿತ ಸನ್ನಿವೇಶಗಳು ಎದುರಾಗಬಹುದು. ಇವೆಲ್ಲವುದಕ್ಕೆ ನೀವು ಮೊದಲೇ ಸಿದ್ದರಾಗಿರುವುದು ಅತೀ ಅಗತ್ಯ. ಹಾಗೆಯೇ ಎಲ್ಲಾ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಮೊದಲೇ ಸಿದ್ದರಾಗಿರುವುದು ಒಂದು ಉತ್ತಮ ಕೆಲಸ. ಉತ್ತಮವಾಗಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವುದು ಲಾಭದಾಯಕವಾಗಬಹುದು. ಹಾಗೆಯೇ ಈ ಕಾರ್ಯವು ಅತ್ಯಂತ ಒತ್ತಡ ಮತ್ತು ಸವಾಲುಗಳಿಂದ ಕೂಡಿದೆ. ಹಾಗಿರುವಾಗ ನೀವು ನಿಮ್ಮ ಉದ್ಯಮವನ್ನು ಅಭಿವೃದ್ದಿ ಪಡಿಸುವುದು ಹೇಗೆ? ಇಲ್ಲಿವೆ ಕೆಲವು ವೈಯಕ್ತಿಕ ಹಣಕಾಸು ಸಲಹೆಗಳು, ಮುಂದೆ ಓದಿ...

 ವೈಯಕ್ತಿಕ ಮಾಸಿಕ ಲೆಕ್ಕಾಚಾರ ಮೊದಲೇ ಮಾಡಿಕೊಳ್ಳಿ

ವೈಯಕ್ತಿಕ ಮಾಸಿಕ ಲೆಕ್ಕಾಚಾರ ಮೊದಲೇ ಮಾಡಿಕೊಳ್ಳಿ

ನಮ್ಮ ಹಣಕಾಸು ವಿಚಾರಕ್ಕೆ ಬಂದಾಗ ನಾವು ಯಾವಾಗಲೂ ಬಹಳ ಎಚ್ಚರಿಕೆಯಿಂದ ಇರಬೇಕು. ಮುಖ್ಯವಾಗಿ ನಾವು ಉದ್ಯಮವನ್ನು ಆರಂಭ ಮಾಡುವ ಸಂದರ್ಭದಲ್ಲಿ ಹಣಕಾಸು ವಿಚಾರದಲ್ಲಿ ಎಲ್ಲಾ ಲೆಕ್ಕಾಚಾರವನ್ನು ಮೊದಲೇ ಮಾಡಿಕೊಂಡಿಬೇಕು. ನೀವೆಷ್ಟು ಸರಳ, ಸರಾಗವಾಗಿ ನಿಮ್ಮ ಉದ್ಯಮವನ್ನು ಹಾಗೂ ನಿಮ್ಮ ವೈಯಕ್ತಿಕ ಜೀವನವನ್ನು ನಿರ್ವಹಣೆ ಮಾಡುತ್ತೀರೋ ಅಷ್ಟು ಹೆಚ್ಚು ಹಣವನ್ನು ನೀವು ಲಾಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ ನಿಮ್ಮ ಎಲ್ಲಾ ಸರಿಯಾದ ಲೆಕ್ಕಾಚಾರದಿಂದಾಗಿ ನಿಮ್ಮ ಉದ್ಯಮದ ಹಾಗೂ ವೈಯಕ್ತಿಕ ಬೆಳವಣಿಗೆಯೂ ಸಾಧ್ಯವಾಗುತ್ತದೆ.

ಹೆಚ್ಚಿನ ಉದ್ಯಮಿಗಳು ತಾವು ಉದ್ಯಮದಲ್ಲಿ ಹಾಗೂ ಜೀವನದಲ್ಲಿ ಯಶಸ್ಸು ಕಾಣುವ ಬದಲು ಹೊರ ಜಗತ್ತಿನ ನೋಟಕ್ಕೆ ತಮ್ಮ ಯಶಸ್ಸನ್ನು ಸೀಮಿತಗೊಳಿಸಲು ಯತ್ನಿಸುತ್ತಾರೆ. ಅಂದರೆ ಹೊರ ಜಗತ್ತಿಗೆ ತಾವು ಯಶಸ್ವಿಯಾಗಿದ್ದೇವೆ ಎಂದು ಕಾಣಿಸಿಕೊಳ್ಳಲು ಬಹಳ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ನಾವು ನಮ್ಮ ಲೆಕ್ಕಾಚಾರವನ್ನು ಸರಿದೂಗಿಸಿ ಭವಿಷ್ಯದ ಕಷ್ಟ ಕಾಲಕ್ಕೆ ಉಳಿತಾಯವನ್ನು ಮಾಡಬೇಕಾದರೆ ಅತೀ ದೊಡ್ಡ ಮನೆ, ಫ್ಯಾನ್ಸಿ ಕಾರುಗಳು, ದುಬಾರಿ ಭೋಜನ ಹಾಗೂ ಅನಗತ್ಯ ಖರ್ಚುಗಳನ್ನು ಮಾಡುವುದನ್ನು ಸ್ಥಗಿತಗೊಳಿಸಬೇಕು. ನಾವೆಷ್ಟು ಸರಳವಾಗಿ ಇರುತ್ತೇವೆಯೋ ಅಷ್ಟು ಹೆಚ್ಚು ನಮ್ಮ ಉದ್ಯಮ ಬೆಳೆಯುತ್ತದೆ.

ಪ್ರತಿ ತಿಂಗಳು ನೀವು ನಿಮ್ಮ ವೈಯಕ್ತಿಕ ಹಣಕಾಸು ಲೆಕ್ಕಾಚಾರವನ್ನು ಮಾಡಿಕೊಳ್ಳಬೇಕು. ನಿಮ್ಮ ಮನೆಯ ಖರ್ಚು, ನಿಮ್ಮ ವೈಯಕ್ತಿಕ ಖರ್ಚು ಎಲ್ಲದರ ಲೆಕ್ಕಾಚಾರವನ್ನು ಮಾಡಿಕೊಂಡು ಹಣವನ್ನು ಖರ್ಚು ಮಾಡಬೇಕು. ಹಾಗೆಯೇ ನೀವು ಈ ಸಂದರ್ಭದಲ್ಲಿ ತೀರಾ ಜಿಪುಣ ವರ್ತನೆ ತೋರುವುದು ಕೂಡಾ ಸರಿಯಲ್ಲ. ನಿಮ್ಮ ಮಾನಸಿಕ ನೆಮ್ಮದಿಗಾಗಿ ಸಣ್ಣ ಪ್ರವಾಸವನ್ನು ಕೂಡಾ ಮಾಡುವುದು ಉತ್ತಮ. ಹಾಗೆಯೇ ನೀವು ಎಲ್ಲಾ ಹಣಕಾಸು ಲೆಕ್ಕಾಚಾರ ಮಾಡಿಕೊಂಡ ಬಳಿಕ ಅದೇ ಲೆಕ್ಕಾಚಾರವನ್ನು ಪಾಲನೆ ಮಾಡಬೇಕು. ಇದರಿಂದಾಗಿ ನಿಮ್ಮ ವೈಯಕ್ತಿಕ ಜೀವನ ಮಾತ್ರವಲ್ಲದೇ ನಿಮ್ಮ ಉದ್ಯಮವೂ ಪ್ರಗತಿಯಾಗಲು ಸಾಧ್ಯ.

 

 ಉತ್ತಮವಾದ ವಿಮೆ ಸುರಕ್ಷತೆಯೂ ಅಗತ್ಯ ನಿಮ್ಮ ಉದ್ಯಮಕ್ಕೆ

ಉತ್ತಮವಾದ ವಿಮೆ ಸುರಕ್ಷತೆಯೂ ಅಗತ್ಯ ನಿಮ್ಮ ಉದ್ಯಮಕ್ಕೆ

ನೀವು ಸಂಸ್ಥೆಯ ಮಾಲೀಕರಾಗಿರುವಾಗ ನಿಮಗೆ ಅಧಿಕ ಜವಾಬ್ದಾರಿ ಇರುತ್ತದೆ. ಸಂಸ್ಥೆಯ ಎಲ್ಲಾ ಜವಾಬ್ದಾರಿಗಳು ನಿಮ್ಮ ಹೆಗಲ ಮೇಲೆ ಇರುತ್ತದೆ. ಈ ಸಂದರ್ಭದಲ್ಲಿ ವಿಮೆಯ ಜವಾಬ್ದಾರಿಯೂ ಕೂಡಾ ನಿಮ್ಮದೇ ಆಗಿದೆ. ನೀವು ನಿಮ್ಮ ವೈಯಕ್ತಿಕ ಜೀವನ ಹಾಗೂ ಉದ್ಯಮವನ್ನು ಭದ್ರ ಪಡಿಸುವ ಸಂದರ್ಭದಲ್ಲಿ ಎಂದಿಗೂ ಕೂಡಾ ಸುಲಭದ ಹಾಗೂ ಕಡಿಮೆ ವೆಚ್ಚದ ಕಡೆ ವಾಲಬೇಡಿ. ನೀವು ಉದ್ಯಮಿಯಾಗಿರಲಿ ಅಥವಾ ಯಾರೇ ಆಗಿರಲಿ ವಿಮೆ ಮಾಡಿಕೊಳ್ಳುವುದು ಒಂದು ಸುರಕ್ಷೆ. ಅದರಲ್ಲೂ ಉದ್ಯಮಿ ಆಗಿರುವಾಗ ವಿಮೆ ಮಾಡಿಕೊಳ್ಳುವುದು ಅತ್ಯಗತ್ಯ. ಈ ವಿಮೆ ಮಾಡುವ ಸಂದರ್ಭದಲ್ಲಿ ನೀವು ಉತ್ತಮ ವಿಮೆಯನ್ನು ಆಯ್ಕೆ ಮಾಡಿಕೊಳ್ಳುವುದು ಅತೀ ಮುಖ್ಯ. ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ರಕ್ಷಣೆ ಮಾಡಲು ಈ ವಿಮೆಗಳು ಅತ್ಯಗತ್ಯ. ನೀವು ಸ್ಪಲ್ಪ ಹಣವನ್ನು ಉಳಿತಾಯ ಮಾಡುವ ಯತ್ನ ಮಾಡುವುದಕ್ಕಿಂತ ಈ ವಿಮೆ ಮಾಡಿಕೊಳ್ಳುವುದು ಸುರಕ್ಷೆ. ಯಾಕೆಂದರೆ ಯಾವುದೇ ಕಷ್ಟದ ಸಂದರ್ಭದಲ್ಲೂ ಇದು ನಮ್ಮ ಕೈ ಹಿಡಿಯುತ್ತದೆ.

ಎಲ್ಲಾ ಉದ್ಯಮಿಗಳು ಮುಖ್ಯವಾಗಿ ಮಾಡಬೇಕಾದುದ್ದು ವಾಣಿಜ್ಯ ವಿಮೆ. ನೀವು ಸಾವಿರಾರು ಉದ್ಯೋಗಿಗಳನ್ನು ಹೊಂದಿರುವ ವಿಶ್ವ ಪ್ರಸಿದ್ದ ಉದ್ಯಮವನ್ನು ನಡೆಸುವವರಾದರೂ, ನಿಮ್ಮ ಬಳಿ ಕೋಟ್ಯಾಂತರ ರೂಪಾಯಿ ಹಣ ಇದೆ ಎಂದಾದರೂ, ನೀವು ಮಿಲಿಯನ್‌ಗಟ್ಟಲೆ ವಸ್ತುಗಳನ್ನು ದೈನಂದಿನ ಮಾರಾಟ ಮಾಡುತ್ತಿದ್ದೀರಿ ಎಂದಾದರೂ, ನೀವು ಒಬ್ಬರೇ ಈ ಉದ್ಯಮವನ್ನು ನಡೆಸುವುದಾದರೂ, ನೀವು ವಾಣಿಜ್ಯ ವಿಮೆ ಮಾಡಿಕೊಳ್ಳುವುದು ಅತೀ ಮುಖ್ಯ. ನಿಮ್ಮನ್ನು ನೀವು ವಾಣಿಜ್ಯ ವಿಮೆ ಮೂಲಕ ಸುರಕ್ಷಿತರಾಗಿರಿಕೊಳ್ಳಿ. ನಿಮ್ಮ ವ್ಯಾಪಾರ, ಉದ್ಯಮದಲ್ಲಿ ಯಾವುದೇ ತೊಂದರೆಗಳು ಉಂಟಾದರೂ ಈ ವಿಮೆಯು ನಿಮಗೆ ಸಹಕಾರಿಯಾಗಲಿದೆ.

 

 ಪ್ರತಿ ತಿಂಗಳು ತುರ್ತು ನಿಧಿಗೂ ನಿಗದಿ ಮಾಡಿ ಹಣ

ಪ್ರತಿ ತಿಂಗಳು ತುರ್ತು ನಿಧಿಗೂ ನಿಗದಿ ಮಾಡಿ ಹಣ

ಹಲವು ಉದ್ಯಮಿಗಳು ತಮಗೆ ಯಾವ ಲಾಭವಿಲ್ಲದೆಯೇ ಹಲವಾರು ತಿಂಗಳುಗಳ ಕಾಲ ಕಾರ್ಯನಿರ್ವಹಿಸುತ್ತಾರೆ. ಬಳಿಕ ವ್ಯಾಪಾರ ಹೆಚ್ಚಾಗುತ್ತಾ ಹೋಗುತ್ತದೆ ಎಂಬ ನಿರೀಕ್ಷೆಯನ್ನು ಹೊಂದಿರುತ್ತಾರೆ. ಆದರೆ ಈ ಕೊರೊನಾ ವೈರಸ್‌ ಸೋಂಕು ಹಿನ್ನೆಲೆ ಮಾಡಲಾದ ಲಾಕ್‌ಡೌನ್‌ ಹಲವಾರು ಜನರಿಗೆ ಭಾರೀ ನಷ್ಟವನ್ನು ಉಂಟು ಮಾಡಿದೆ. ಹೀಗೆ ಅನಿರೀಕ್ಷಿತ ಸಂದರ್ಭಗಳು ನಮ್ಮ ಜೀವನದಲ್ಲಿ ಯಾವ ಸಂದರ್ಭದಲ್ಲಿ ಬೇಕಾದರೂ ಎದುರಾಗಬಹುದು. ಹೀಗಿರುವಾಗ ನಾವು ಉಳಿತಾಯವನ್ನು ಮಾಡಿಕೊಳ್ಳುವುದು ಅತ್ಯಗತ್ಯ. ನಾವು ಪ್ರತಿ ತಿಂಗಳು ತಪ್ಪದಂತೆ ನಮ್ಮ ವಾಣಿಜ್ಯ ವ್ಯವಹಾರಕ್ಕೆ ತೆರೆಯಲಾದ ಬ್ಯಾಂಕ್‌ ಖಾತೆಗೆ ಸ್ವಲ್ಪ ಹಣವನ್ನು ಜಮೆ ಮಾಡಬೇಕು. ನೀವು ಈ ಹಣವನ್ನು ಯಾವುದೇ ಅತೀ ಅಗತ್ಯ ಕಾರಣವಿಲ್ಲದೇ ತೆಗೆಯಬಾರದು. ತಿಂಗಳುಗಳು ಕಳೆದಂತೆ ನಿಮ್ಮ ಉಳಿತಾಯವು ಕೂಡಾ ಅಧಿಕವಾಗುತ್ತದೆ. ಭವಿಷ್ಯದಲ್ಲಿ ನಿಮಗೆ ಯಾವುದಾದರೂ ಕಷ್ಟದ ಪರಿಸ್ಥಿತಿ ಎದುರಾಗಬಹುದು. ಈ ಸಂದರ್ಭದಲ್ಲಿ ಈ ಹಣವು ನಿಮ್ಮ ಉಪಯೋಗಕ್ಕೆ ಬರುತ್ತದೆ.

 ವೈಯಕ್ತಿಕ ಸಾಲದಿಂದ ದೂರ ಉಳಿಯಿರಿ

ವೈಯಕ್ತಿಕ ಸಾಲದಿಂದ ದೂರ ಉಳಿಯಿರಿ

ನೀವು ನಿಮ್ಮ ವೈಯಕ್ತಿಕ ವ್ಯಕ್ತಿತ್ವವನ್ನು ಉಳಿಸಿಕೊಳ್ಳಲು ಹಾಗೂ ಯಶಸ್ವಿ ಉದ್ಯಮ ನಡೆಸಲು ನಿಮ್ಮ ಜೀವನದಲ್ಲಿ ಬರುವ ಎಲ್ಲಾ ಅನಗತ್ಯ ಒತ್ತಡದ ಪರಿಸ್ಥಿತಿಯನ್ನು ನಿಮ್ಮಿಂದ ಸಾಧ್ಯ ಆದಷ್ಟು ನೀವು ದೂರಬೇಕು. ಇದರಿಂದಾಗಿ ನೀವು ಹೆಚ್ಚಾಗಿ ಉದ್ಯಮದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಪ್ರಸ್ತುತ ಅಧಿಕ ಮಂದಿಗೆ ಇರುವ ಅಧಿ ದೊಡ್ಡ ಒತ್ತಡ ವೈಯಕ್ತಿಕ ಸಾಲ. ಬೆಟ್ಟದಷ್ಟು ವೈಯಕ್ತಿಕ ಸಾಲವನ್ನು ಮಾಡಿಕೊಂಡಿರುವವರು ಮತ್ತೆ ಆ ಸಾಲವನ್ನು ತೀರಿಸಲು ಒತ್ತಡವನ್ನು ಅನುಭವಿಸುತ್ತಾರೆ. ನಿಮ್ಮ ಕ್ರೆಡಿಕ್‌ ಕಾರ್ಡ್ ಮೂಲಕ ಪಡೆಯುವ ಸಾಲ ಹಾಗೂ ಮನೆಗಾಗಿ ಮಾಡಲಾದ ಸಾಲವು ನಿಮಗೆ ಭವಿಷ್ಯದಲ್ಲಿ ಭಾರೀ ಒತ್ತಡವನ್ನು ಉಂಟು ಮಾಡಬಹುದು. ಇದರಿಂದಾಗಿ ನಿಮ್ಮ ಗಮನವು ಉದ್ಯಮದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗದೆ ಇರಬಹುದು. ಆ ಕಾರಣದಿಂದಾಗಿ ನೀವು ಸಾಧ್ಯವಾದಷ್ಟು ಸಾಲ ಮಾಡುವುದನ್ನು ತಪ್ಪಿಸಿಕೊಳ್ಳಿ, ಸಾಲ ಮಾಡುವುದು ಅನಿವಾರ್ಯವಾದರೆ ಮುಂದಿನ ದಿನಗಳಲ್ಲಿ ನಿಮ್ಮ ವೈಯಕ್ತಿಕ ಖರ್ಚನ್ನು ಕಡಿಮೆ ಮಾಡಿ ಸಾಲವನ್ನು ತೀರಿಸಿ, ನೆಮ್ಮದಿಯ ಜೀವನ ನಡೆಸಿ. ಹಲವಾರು ಉದ್ಯಮಿಗಳು ತಮ್ಮ ಹಾಸಿಗೆಗಿಂತ ಅಧಿಕ ಕಾಲು ಚಾಚುವ ಕಾರ್ಯವನ್ನು ಮಾಡುತ್ತಾರೆ. ಕೊನೆಗೆ ಅದುವೇ ಅವರಿಗೆ ಮುಳುವಾಗುತ್ತದೆ. ಆದ್ದರಿಂದ ನೀವು ಸರಳ ಜೀವನ ನಡೆಸಿ ಯಶಸ್ವಿ ಉದ್ಯಮಿಯಾಗಿ, ಯಶಸ್ವಿ ಉದ್ಯಮಿ ಎಂದು ತೋರಿಸಿಕೊಳ್ಳು ಐಷಾರಾಮಿ ಜೀವನ ನಡೆಸಿ ಕೊನೆಗೆ ಒತ್ತಡಕ್ಕೆ ಒಳಗಾಬೇಡಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+