ಹೆಚ್ಚಿನ ದಾಖಲಾತಿಗಳ ಅಗತ್ಯ ಇಲ್ಲದೆ, ಅಲೆದಾಟ ಅಗತ್ಯ ಇಲ್ಲದೆ ಹಾಗೂ ಏನನ್ನೂ ಅಡಮಾನ ಮಾಡುವುದು ಬೇಕಿಲ್ಲದೆ ದೊರೆಯುವ ಸಾಲವೆಂದರೆ ಪರ್ಸನಲ್ ಲೋನ್. ಆದರೆ ಈ ಸಾಲದ ಬಡ್ಡಿ ದರವು ಉಳಿದ ಲೋನ್ ಗಿಂತ ಸ್ವಲ್ಪವಾದರೂ ಹೆಚ್ಚು. ಸದ್ಯಕ್ಕಂತೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪರ್ಸನಲ್ ಲೋನ್ ಅನ್ನು ವಾರ್ಷಿಕ 7.50% ನಿಂದ ಆರಂಭವಾಗುವಂತೆ ನೀಡಲಾಗುತ್ತಿದೆ.
ಏನನ್ನೂ ಅಡಮಾನ ಮಾಡುವ ಅಗತ್ಯ ಇಲ್ಲದೆ, ಹೆಚ್ಚಿನ ದಾಖಲೆಗಳನ್ನು ಕೇಳದೆ, ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ದೊರೆಯುವುದಾದರೆ ಹಣದ ಅಗತ್ಯ ಕಂಡುಬಂದಾಗ ಇದನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ 750ಕ್ಕಿಂತ ಕಡಿಮೆ ಇದ್ದಲ್ಲಿ ಪರ್ಸನಲ್ ಪಡೆಯಲು ಅರ್ಹರಾಗದಿರಬಹುದು. ಅಂಥವರಿಗೆ ಬಡ್ಡಿ ದರ ಹೆಚ್ಚಾಗುತ್ತದೆ.
ಇನ್ನು ಕ್ರೆಡಿಟ್ ಸ್ಕೋರ್ 750ರಿಂದ 800 ಪಾಯಿಂಟ್ ಇದ್ದಲ್ಲಿ ಪರ್ಸನಲ್ ಬಡ್ಡಿ ದರ ಕಡಿಮೆ ಆಗುತ್ತದೆ. ಎಸ್ ಬಿಐ, ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಪ್ರಮುಖ ಬ್ಯಾಂಕ್ ಗಳಲ್ಲಿ ಎಷ್ಟು ಬಡ್ಡಿ ದರ ಎಂಬುದನ್ನು ತಿಳಿಸಲಾಗಿದೆ.

ಯೂನಿಯನ್ ಬ್ಯಾಂಕ್ 8.90- 12.00%
ಪಂಜಾಬ್ ನ್ಯಾಷನಲ್ ಬ್ಯಾಂಕ್ 8.95- 11.80%
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 9.60- 13.85%
ಬ್ಯಾಂಕ್ ಆಫ್ ಬರೋಡಾ 10.10- 15.45%
ಎಚ್ ಡಿಎಫ್ ಸಿ ಬ್ಯಾಂಕ್ 10.75- 21.30%
ಕೊಟಕ್ ಮಹೀಂದ್ರಾ ಬ್ಯಾಂಕ್ >= 10.75%
ಐಸಿಐಸಿಐ ಬ್ಯಾಂಕ್ 11.25- 21%
ಕೆನರಾ ಬ್ಯಾಂಕ್ 11.25- 13.90%
ಬ್ಯಾಂಕ್ ಆಫ್ ಇಂಡಿಯಾ 11.35- 12.35%
ಆಕ್ಸಿಸ್ ಬ್ಯಾಂಕ್ 12- 24%


Click it and Unblock the Notifications